Kargil Vijay Diwas 2022: ಭಾರತದ ವಿರುದ್ದ ಯುದ್ಧಕ್ಕೆ ಹೊರಟಿದ್ದ ಶೊಯೇಬ್ ಅಖ್ತರ್

| Updated By: ಝಾಹಿರ್ ಯೂಸುಫ್

Updated on: Jul 26, 2022 | 10:54 AM

Shoaib Akhtar: ಶೊಯೇಬ್ ಅಖ್ತರ್ ಹಾಗೂ ಸಚಿನ್ ತೆಂಡೂಲ್ಕರ್ ನಡುವಣ ಕ್ರಿಕೆಟ್ ಕದನ ಶುರುವಾಗಿದ್ದು. ಆದರೆ ಇಲ್ಲೂ ಮೇಲುಗೈ ಸಾಧಿಸಿದ್ದು ಭಾರತೀಯ ಆಟಗಾರ ಎಂಬುದು ವಿಶೇಷ.

Kargil Vijay Diwas 2022: ಭಾರತದ ವಿರುದ್ದ ಯುದ್ಧಕ್ಕೆ ಹೊರಟಿದ್ದ ಶೊಯೇಬ್ ಅಖ್ತರ್
Shoaib Akhtar
Follow us on

ಭಾರತದ ಕಾರ್ಗಿಲ್ ವಿಜಯೋತ್ಸವಕ್ಕೆ (Kargil Vijay Diwas 2022) ಇಂದು 23 ವರ್ಷಗಳು. 1999 ರಲ್ಲಿ ನಡೆದ ಭಾರತ – ಪಾಕಿಸ್ತಾನ್ ನಡುವಣ ಯುದ್ಧದಲ್ಲಿ ಭಾರತೀಯ ಸೇನೆಯು ಜೀವದ ಹಂಗು ತೊರೆದು ಪಾಕ್ ಪಡೆಗೆ ಮಣ್ಣು ಮುಕ್ಕಿಸಿದ್ದರು. ಭಾರತೀಯ ಸೈನಿಕರ ಈ ಅಸೀಮ ಹೋರಾಟವನ್ನು ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯೋತ್ಸವವಾಗಿ ನೆನಪಿಸಿಕೊಳ್ಳಲಾಗುತ್ತದೆ. ಅಲ್ಲದೆ ಈ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರಿಗೆ ನಮನ ಸಲ್ಲಿಸಲಾಗುತ್ತದೆ. ಹಲವು ಸಾವು-ನೋವುಗಳಿಗೆ ಕಾರಣವಾಗಿದ್ದ ಈ ಯುದ್ಧವು ಭಾರತ-ಪಾಕ್ ನಡುವಣ ಕ್ರೀಡೆಯ ಮೇಲೂ ಪರಿಣಾಮ ಬೀರಿತ್ತು. ಅದರಲ್ಲೂ ಕ್ರಿಕೆಟ್ ಮೇಲೆ ನೇರ ಪರಿಣಾಮ ಉಂಟು ಮಾಡಿತ್ತು.

ವಿಶೇಷ ಎಂದರೆ ಈ ಯುದ್ಧದ ಬಳಿಕ ಭಾರತ-ಪಾಕಿಸ್ತಾನ್ ನಡುವಣ ಪಂದ್ಯಗಳು ಕೂಡ ಕದನದ ರೂಪ ಪಡೆದುಕೊಂಡವು. ಇತ್ತ ಕಡೆ ಸಚಿನ್ ಭಾರತ ಪಡೆಯನ್ನು ಮುನ್ನಡೆಸಿದರೆ, ಅತ್ತ ಕಡೆ ಶೊಯೇಬ್ ಅಖ್ತರ್ ಪಾಕ್ ಪಡೆಯ ಟ್ರಂಪ್ ಕಾರ್ಡ್ ಆಗಿ ಕಾಣಿಸಿಕೊಂಡಿದ್ದರು. ವಿಶೇಷ ಎಂದರೆ ಕಾರ್ಗಿಲ್​ನಂತೆ, ಭಾರತ ತಂಡವು ಮೈದಾನದಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿಯುತ್ತಾ ಸಾಗಿತು.

ಆದರೆ ಇಲ್ಲಿ ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನದ ವೇಗದ ಬೌಲರ್ ಶೋಯೆಬ್ ಅಖ್ತರ್ ಕೂಡ ರಣರಂಗಕ್ಕೆ ಧುಮುಕಲು ಮುಂದಾಗಿದ್ದರು. ಅಷ್ಟೇ ಅಲ್ಲದೆ ದೇಶ ಸೇವೆಗಾಗಿ ಕೋಟ್ಯಾಂತರ ರೂ. ಅನ್ನು ತ್ಯಾಗ ಮಾಡಿದ್ದರು.

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಈ ಬಗ್ಗೆ ಪಾಕಿಸ್ತಾನದ ಸುದ್ದಿ ವಾಹಿನಿ ಜೊತೆ ಮಾತನಾಡಿದ್ದ ಶೋಯೆಬ್ ಅಖ್ತರ್, “ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ನನಗೆ  ಇಂಗ್ಲೆಂಡ್‌ನ ಕೌಂಟಿ ತಂಡ ನಾಟಿಂಗ್‌ಹ್ಯಾಮ್‌ಶೈರ್​ನಿಂದ 1 ಕೋಟಿ 16 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಆಫರ್ ಬಂದಿತ್ತು. ಆದರೆ ನಾನು ಆ ಆಫರ್​ ಅನ್ನು ತಿರಸ್ಕರಿಸಿದ್ದೆ. ನನ್ನ ದೇಶದ ಸೈನಿಕರು ರಣರಂಗದಲ್ಲಿರುವಾಗ ನಾನು ಕೂಡ ಸೇನೆಯ ಭಾಗವಾಗಲು ಬಯಸಿದ್ದೆ. ಈ ಬಗ್ಗೆ ಪಾಕಿಸ್ತಾನದ ಜನರಲ್ ಜೊತೆಯೂ ಮಾತನಾಡಿದ್ದೆ. ಅಲ್ಲಿ ನಿವೇನು ಮಾಡುತ್ತೀರಿ ಎಂದು ಪ್ರಶ್ನಿಸಿದ್ದರು. ಅಲ್ಲದೆ ಯುದ್ಧದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿರಲಿಲ್ಲ ಎಂದು ಅಖ್ತರ್ ಹೇಳಿದ್ದಾರೆ.

ಇದಾದ ಬಳಿಕವಷ್ಟೇ ಶೊಯೇಬ್ ಅಖ್ತರ್ ಹಾಗೂ ಸಚಿನ್ ತೆಂಡೂಲ್ಕರ್ ನಡುವಣ ಕ್ರಿಕೆಟ್ ಕದನ ಶುರುವಾಗಿದ್ದು. ಆದರೆ ಇಲ್ಲೂ ಮೇಲುಗೈ ಸಾಧಿಸಿದ್ದು ಭಾರತೀಯ ಆಟಗಾರ ಎಂಬುದು ವಿಶೇಷ. ಏಕೆಂದರೆ ಶೊಯೇಬ್ ಅಖ್ತರ್ ಟೀಮ್ ಇಂಡಿಯಾ ವಿರುದ್ದ 10 ಟೆಸ್ಟ್ ಹಾಗೂ 28 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 69 ವಿಕೆಟ್ ಪಡೆದಿದ್ದಾರೆ. ಆದ್ರೆ ಸಚಿನ್ ತೆಂಡೂಲ್ಕರ್ ಅವರನ್ನು ಔಟ್ ಮಾಡಿದ್ದು ಕೇವಲ 8 ಬಾರಿ ಮಾತ್ರ. ಇದಾಗ್ಯೂ ಟೆಸ್ಟ್​ ಕ್ರಿಕೆಟ್​ನಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಮೊದಲ ಎಸೆತದಲ್ಲೇ ಬೌಲ್ಡ್ ಮಾಡಿದ ಹಿರಿಮೆ ಶೊಯೇಬ್ ಅಖ್ತರ್​ಗೆ ಸಲ್ಲುತ್ತದೆ.