AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡೇ ಪದದಲ್ಲಿ ಕೊಹ್ಲಿಯನ್ನು ಹೊಗಳಿ ಭಾರತೀಯರ ಹೃದಯ ಗೆದ್ದ ಪಾಕ್ ಕ್ರಿಕೆಟರ್ ಶೋಯೆಬ್ ಅಖ್ತರ್

Shoaib Akhtar: ಕೊಹ್ಲಿಯನ್ನು ಕೈಬಿಡುವಂತೆ ಆಗ್ರಹಿಸುತ್ತಿರುವವರಿಗೆ ತಕ್ಕ ಉತ್ತರ ನೀಡಿದ ಶೋಯೆಬ್, ಕಳೆದ ದಶಕದಲ್ಲಿ ಕೊಹ್ಲಿಯಂತಹ ಬ್ಯಾಟ್ಸ್‌ಮನ್ ಇರಲಿಲ್ಲ. ಅಲ್ಲದೆ ಪ್ರತಿಭೆ ಇಲ್ಲದಿದ್ದರೆ ಸುಮ್ಮನೆ 70 ಶತಕಗಳು ಬರುತ್ತಿರಲಿಲ್ಲ ಎಂದು ಆಖ್ತರ್ ಹೇಳಿಕೊಂಡಿದ್ದಾರೆ.

ಎರಡೇ ಪದದಲ್ಲಿ ಕೊಹ್ಲಿಯನ್ನು ಹೊಗಳಿ ಭಾರತೀಯರ ಹೃದಯ ಗೆದ್ದ ಪಾಕ್ ಕ್ರಿಕೆಟರ್ ಶೋಯೆಬ್ ಅಖ್ತರ್
Shoaib Akhtar praised Kohli
TV9 Web
| Updated By: ಪೃಥ್ವಿಶಂಕರ|

Updated on:Jul 25, 2022 | 10:41 PM

Share

ವಿರಾಟ್ ಕೊಹ್ಲಿ (Virat Kohli) ಬಹಳ ಸಮಯದಿಂದ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ. ಸದ್ಯ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ವಿರಾಟ್ ಈಗ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಇಷ್ಟೆಲ್ಲಾ ಇದ್ದರೂ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗದ ದಿನವೂ ಇಲ್ಲ ಅಥವಾ ಯಾವುದೇ ಕ್ರಿಕೆಟ್ ಪರಿಣಿತರ ಹೇಳಿಕೆಯೂ ಇಲ್ಲ. ಈ ವೇಳೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ (Shoaib Akhta), ಕೊಹ್ಲಿ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಕೇವಲ ಎರಡೇ ಎರಡು ಪದಗಳಲ್ಲಿ ಕೊಹ್ಲಿ ಬಗ್ಗೆ ಹೇಳಿಕೆ ನೀಡಿ ಭಾರತೀಯರ ಹೃದಯ ಗೆದ್ದಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ವಿರಾಟ್ ಕೊಹ್ಲಿ ಬ್ಯಾಟ್ ಶತಕಗಳನ್ನು ಭಾರಿಸುತ್ತಿಲ್ಲ, ಅದು ಈಗ ರನ್‌ಗಳ ಬರಗಾಲಕ್ಕೆ ತಿರುಗಿದೆ. ಹೀಗಿರುವಾಗ ಕೊಹ್ಲಿ ಬಗ್ಗೆ ನಿರಂತರವಾಗಿ ಚರ್ಚೆಗಳು ನಡೆಯುತ್ತಿವೆ. ಕೆಲವರು ಅವರನ್ನು ಕೈಬಿಟ್ಟು ದೇಶೀಯ ಕ್ರಿಕೆಟ್‌ಗೆ ಕಳುಹಿಸುವಂತೆ ಒತ್ತಾಯಿಸುತ್ತಿದ್ದರೆ, ಕೆಲವರು ಸಂಪೂರ್ಣವಾಗಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಕೊಹ್ಲಿಯನ್ನು ಬೆಂಬಲಿಸುತ್ತಿರುವವರಲ್ಲಿ ಪಾಕಿಸ್ತಾನದ ಮಾಜಿ ಅನುಭವಿ ಶೋಯೆಬ್ ಅಖ್ತರ್ ಕೂಡ ಒಬ್ಬರಾಗಿದ್ದಾರೆ.

ಇದನ್ನೂ ಓದಿ
Image
Hardik Pandya: ಟೀಂ ಇಂಡಿಯಾ ವಿಶ್ವಕಪ್ ಸೋಲಲು ಹಾರ್ದಿಕ್ ಪಾಂಡ್ಯ ಕಾರಣ! ರವಿಶಾಸ್ತ್ರಿ ಶಾಕಿಂಗ್ ಹೇಳಿಕೆ
Image
IND vs WI: ಕೆರಿಬಿಯನ್ ದೈತ್ಯರನ್ನು ಮಣಿಸಿ ಸರಣಿ ಗೆದ್ದ ಟೀಂ ಇಂಡಿಯಾಕ್ಕೆ ದಂಡದ ಬರೆ ಎಳೆದ ಐಸಿಸಿ..!
Image
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಸಾವಿರಕ್ಕೂ ಹೆಚ್ಚು ಎಸೆತಗಳನ್ನು ಎಸೆದ ಮೂವರು ದಿಗ್ಗಜ ಬೌಲರ್‌ಗಳು ಯಾರು ಗೊತ್ತಾ?

ಕೇವಲ ಎರಡು ಪದಗಳ ಹೇಳಿಕೆ

ಇತ್ತೀಚಿನ ದಿನಗಳಲ್ಲಿ ಹಲವಾರು ಕ್ರಿಕೆಟ್ ಪಂಡಿತರು ಕೊಹ್ಲಿಯನ್ನು ಗುರಿಯಾಗಿಸಿ ತೆಗಳಲು ಆರಂಭಿಸಿದ್ದಾರೆ. ಆದರೆ ಪಾಕ್ ಕ್ರಿಕೆಟರ್ ಅಖ್ತರ್ ಮಾತ್ರ ಕೊಹ್ಲಿಯನ್ನು ಹೊಗಳಿ ಮಾತನಾಡಿದ್ದಾರೆ. ತನ್ನ ಮುಂಬರುವ ಚಿತ್ರ ‘ರಾವಲ್ಪಿಂಡಿ ಎಕ್ಸ್‌ಪ್ರೆಸ್’ ಬಗ್ಗೆ ಮಾತನಾಡಿದ ನಂತರ, ಅಖ್ತರ್ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ ಸರಣಿಯನ್ನು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ, ಕೆಲವು ಟ್ವಿಟರ್ ಬಳಕೆದಾರರು ಕೇಳಿದರು- ವಿರಾಟ್ ಕೊಹ್ಲಿಗೆ ಒಂದು ಮಾತು. ಎಂಬ ಪ್ರಶ್ನೆಯನ್ನು ಅಖ್ತರ್ ಮುಂದಿಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಅಖ್ತರ್ ಎರಡು ಪದಗಳ ಟ್ವೀಟ್ ಮೂಲಕ ಉತ್ತರಿಸಿದ್ದಾರೆ. ಅಖ್ತರ್ ಅವರ ಈ ಎರಡು ಪದಗಳ ಟ್ವೀಟ್, ಕೊಹ್ಲಿ ಮತ್ತು ಭಾರತೀಯ ಅಭಿಮಾನಿಗಳನ್ನು ಸಂತೋಷಪಡಿಸಿದೆ. ಹಾಗಾದರೆ ಅಖ್ತರ್ ಮಾಡಿದ ಟ್ವೀಟ್ ಏನಪ್ಪಾ ಅಂದರೆ, ಈಗಾಗಲೇ ದಂತಕಥೆ ಎಂದು ಬರೆದುಕೊಂಡಿದ್ದಾರೆ.

ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡರು ಶೋಯೆಬ್ ಕೊಹ್ಲಿಯನ್ನು ಈ ರೀತಿ ಹೊಗಳಿದ್ದು ಇದೇ ಮೊದಲಲ್ಲ. ಈ ಹಿಂದೆ ಹಲವು ಬಾರಿ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಕೊಹ್ಲಿಯನ್ನು ಹೊಗಳಿದ್ದರು. ಇತ್ತೀಚೆಗಷ್ಟೇ ಅವರು ಕೊಹ್ಲಿ ಬಗ್ಗೆ ಮಾತ್ರ ವಿಡಿಯೋ ಮಾಡಿದ್ದು, ಅದರಲ್ಲಿ ಕೊಹ್ಲಿ ಟೀಕಾಕಾರರ ವಿರುದ್ಧ ಶೋಯೆಬ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕೊಹ್ಲಿಯನ್ನು ಕೈಬಿಡುವಂತೆ ಆಗ್ರಹಿಸುತ್ತಿರುವವರಿಗೆ ತಕ್ಕ ಉತ್ತರ ನೀಡಿದ ಶೋಯೆಬ್, ಕಳೆದ ದಶಕದಲ್ಲಿ ಕೊಹ್ಲಿಯಂತಹ ಬ್ಯಾಟ್ಸ್‌ಮನ್ ಇರಲಿಲ್ಲ. ಅಲ್ಲದೆ ಪ್ರತಿಭೆ ಇಲ್ಲದಿದ್ದರೆ ಸುಮ್ಮನೆ 70 ಶತಕಗಳು ಬರುತ್ತಿರಲಿಲ್ಲ ಎಂದು ಆಖ್ತರ್ ಹೇಳಿಕೊಂಡಿದ್ದಾರೆ.

Published On - 10:41 pm, Mon, 25 July 22