ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ವುಮೆನ್ಸ್ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಣಕ್ಕಿಳಿಯುವ ಮೂಲಕ ಕನ್ನಡತಿ ಶ್ರೇಯಾಂಕಾ ಪಾಟೀಲ್ ಸಂಚಲನ ಸೃಷ್ಟಿಸಿದ್ದಾರೆ. ಈ ಟೂರ್ನಿಯಲ್ಲಿ ಕಣಕ್ಕಿಳಿದ ಮೊದಲ ಭಾರತೀಯ ಆಟಗಾರ್ತಿ ಎನಿಸಿಕೊಂಡಿದ್ದ ಶ್ರೇಯಾಂಕಾ ಇದೀಗ ತಮ್ಮ ಸ್ಪಿನ್ ಮೋಡಿ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಗಯಾನಾ ಅಮೆಜಾನ್ ವಾರಿಯರ್ಸ್ ತಂಡದ ಪರ ಕಣಕ್ಕಿಳಿಯುತ್ತಿರುವ 21 ವರ್ಷದ ಶ್ರೇಯಾಂಕಾ ಈ ಹಿಂದೆ ನಡೆದ ಎಮರ್ಜಿಂಗ್ ಏಷ್ಯಾ ಕಪ್ನಲ್ಲಿ ತಮ್ಮ ಛಾಪು ಮೂಡಿಸಿದ್ದರು. ಇದೀಗ ಸಿಪಿಎಲ್ ನಲ್ಲೂ ಆಲ್ರೌಂಡರ್ ಪ್ರದರ್ಶನ ನೀಡುತ್ತಿದ್ದಾರೆ.
ಟ್ರಿನ್‌ಬಾಗೊ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಗಯಾನಾ ಪರ ಕಣಕ್ಕಿಳಿದ ಶ್ರೇಯಾಂಕಾ 4 ಓವರ್ ಗಳಲ್ಲಿ 15 ರನ್ ನೀಡಿ 2 ವಿಕೆಟ್ ಪಡೆದರು. ಅಲ್ಲದೆ ಈ ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ತಂಡ 21 ರನ್‌ಗಳಿಂದ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಅದರಲ್ಲೂ ಶ್ರೇಯಾಂಕಾ ಎಸೆದ 16ನೇ ಓವರ್ನಲ್ಲಿ ಬ್ರಿಟಾನಿ ಕೂಪರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದರು. ಆಫ್ ಸ್ಟಂಪ್ ಹೊರಗೆ ಚೆಂಡನ್ನು ಎಸೆದು ಬೌಲ್ಡ್ ಮಾಡಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
What a cracker of a delivery by Shreyanka Patil. pic.twitter.com/EpfVMHIp8c
— Mufaddal Vohra (@mufaddal_vohra) September 6, 2023
ವುಮೆನ್ಸ್ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇದುವರೆಗೆ 3 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಶ್ರೇಯಾಂಕಾ ಒಟ್ಟು 6 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಪ್ರಸ್ತುತ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ.
ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಶ್ರೇಯಾಂಕಾ ಪಾಟೀಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದಾರೆ. ತಮ್ಮ ಚೊಚ್ಚಲ ಟೂರ್ನಿಯಲ್ಲೇ ಭರವಸೆ ಮೂಡಿಸಿದ್ದ ಯುವ ಆಟಗಾರ್ತಿ ಇದೀಗ ವಿದೇಶಿ ಲೀಗ್ನಲ್ಲೂ ಮಿಂಚಿರುತ್ತಿರುವುದು ವಿಶೇಷ.
ಗಯಾನಾ ಅಮೆಜಾನ್ ವಾರಿಯರ್ಸ್ ಪ್ಲೇಯಿಂಗ್ XI: ಸ್ಟೆಫನಿ ಟೇಲರ್ (ನಾಯಕಿ) ಸೋಫಿ ಡಿವೈನ್, ಸುಜಿ ಬೇಟ್ಸ್, ಶೆಮೈನ್ ಕ್ಯಾಂಪ್ಬೆಲ್ (ವಿಕೆಟ್ ಕೀಪರ್), ನತಾಶಾ ಮೆಕ್ಲೀನ್, ಶಬಿಕಾ ಘಜನ್ಬಿ, ಶ್ರೇಯಾಂಕಾ ಪಾಟೀಲ್, ಶೆನೆಟಾ ಗ್ರಿಮ್ಮಂಡ್, ಕರಿಷ್ಮಾ ರಾಮ್ಹರಕ್, ಶಬ್ನೀಮ್ ಇಸ್ಮಾಯಿಲ್ ಮತ್ತು ಶಕೇರಾ ಸೆಲ್ಮನ್.
ಟ್ರಿನ್‌ಬಾಗೊ ನೈಟ್ ರೈಡರ್ಸ್ ಪ್ಲೇಯಿಂಗ್ XI: ಡಿಯಾಂಡ್ರಾ ಡಾಟಿನ್ (ನಾಯಕಿ), ಮೇರಿ ಕೆಲ್ಲಿ, ಲೀ-ಆನ್ ಕಿರ್ಬಿ, ಕಿಸಿಯಾ ನೈಟ್ (ವಿಕೆಟ್ ಕೀಪರ್), ಮಿಗ್ನಾನ್ ಡು ಪ್ರೀಜ್, ಕಿಶೋನಾ ನೈಟ್, ಬ್ರಿಟಾನಿ ಕೂಪರ್, ಜೈದಾ ಜೇಮ್ಸ್, ಅನೀಸ್ ಮೊಹಮ್ಮದ್, ಶಾಮಿಲಿಯಾ ಕಾನೆಲ್ ಮತ್ತು ಫ್ರಾನ್ ಜೋನಾಸ್.
Published On - 9:32 pm, Wed, 6 September 23