IND Squad for IRE T20Is: ಕಣಕ್ಕಿಳಿಯಲು ಇನ್ನೂ ಸಿದ್ಧರಾಗಿಲ್ಲ: ಐರ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗದ ರಾಹುಲ್, ಅಯ್ಯರ್
India vs Ireland T20I: ಭಾರತ ಹಾಗೂ ವೆಸ್ಟ್ ಇಂಡೀಸ್ ಸರಣಿಯ ಮುಕ್ತಾಯದ ನಂತರ, ಜಸ್ಪ್ರೀತ್ ಬುಮ್ರಾ ನೇತೃತ್ವದ ಭಾರತ ಕ್ರಿಕೆಟ್ ತಂಡ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲು ಐರ್ಲೆಂಡ್‌ಗೆ ಪ್ರಯಾಣಿಸಲಿದೆ.ಆದರೆ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಈ ಸರಣಿಯಿಂದ ಕೂಡ ಹೊರಗುಳಿಯಲಿದ್ದಾರೆ.
ಭಾರತ ಕ್ರಿಕೆಟ್ ತಂಡ ಸದ್ಯ ಕೆರಿಬಿನ್ ಪ್ರವಾಸದಲ್ಲಿದೆ. ಇದಾದ ಬಳಿಕ ಐರ್ಲೆಂಡ್‌ಗೆ (India vs Ireland) ತೆರಳಲಿದೆ. ಇದರ ನಡುವೆ ಮುಂಬರುವ ಭಾರತ ಹಾಗೂ ಐರ್ಲೆಂಡ್ ನಡುವಣ ಸರಣಿಗೆ ಟೀಮ್ ಇಂಡಿಯಾವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿದೆ. ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ತಂಡಕ್ಕೆ ಮರಳಿದ್ದು ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಆದರೆ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ (KL Rahul) ಈ ಸರಣಿಯಿಂದ ಕೂಡ ಹೊರಗುಳಿಯಲಿದ್ದಾರೆ. ಇವರಿಬ್ಬರು ಇನ್ನೂ ಕ್ರಿಕೆಟ್ ಆಡಲು ಸಾಕಷ್ಟು ಫಿಟ್ ಆಗಿಲ್ಲ ಎಂದು ವರದಿ ಆಗಿದೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ಸರಣಿಯ ಮುಕ್ತಾಯದ ನಂತರ, ಜಸ್ಪ್ರೀತ್ ಬುಮ್ರಾ ನೇತೃತ್ವದ ಭಾರತ ಕ್ರಿಕೆಟ್ ತಂಡ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲು ಐರ್ಲೆಂಡ್‌ಗೆ ಪ್ರಯಾಣಿಸಲಿದೆ. ಈ ಪಂದ್ಯಾವಳಿಗೆ ಬಿಸಿಸಿಐ ಹೆಚ್ಚು ಯುವ ಆಟಗಾರರನ್ನೇ ಆಯ್ಕೆ ಮಾಡಿದ್ದು, ರುತುರಾಜ್ ಗಾಯಕ್ವಾಡ್ಗೆ ಉಪ ನಾಯಕನ ಪಟ್ಟ ನೀಡಲಾಗಿದೆ. ಇದು ಮುಂಬರುವ ಏಷ್ಯಾಕಪ್ ಮತ್ತು ಐಸಿಸಿ ಏಕದಿನ ವಿಶ್ವಕಪ್‌ಗೆ ತಂಡವನ್ನು ರಚಿಸಲು ಸಹಾಯ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ.
Virat Kohli: ಮೂರನೇ ಏಕದಿನ ಪಂದ್ಯಕ್ಕೂ ವಿರಾಟ್ ಕೊಹ್ಲಿ ಡೌಟ್..!
ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಇಬ್ಬರೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಬ್ಯಾಟಿಂಗ್ ಅಭ್ಯಾಸವನ್ನು ಪುನರಾರಂಭಿಸಿದ್ದಾರೆ. ಆದರೆ, ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲು ಸಂಪೂರ್ಣ ಫಿಟ್ ಆಗಿಲ್ಲವಂತೆ. ಆದಾಗ್ಯೂ, ಇವರಿಬ್ಬರು ಏಷ್ಯಾಕಪ್‌ಗೆ ಮರಳುವ ಸಾಧ್ಯತೆಯಿದೆ. ರಾಹುಲ್ ಅವರು ಏಕದಿನದಲ್ಲಿ ಭಾರತದ ಬ್ಯಾಕಪ್ ವಿಕೆಟ್ ಕೀಪರ್ ಆಗಿದ್ದಾರೆ. ಅಯ್ಯರ್ ಏಷ್ಯಾಕಪ್‌ನಲ್ಲಿ ಆಡಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕಿದೆ. ಈ ಮೂಲಕ ಇವರಿಬ್ಬರು ವಿಶ್ವಕಪ್‌ಗೆ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಕಾಯುತ್ತಿದ್ದಾರೆ.
ಇದರ ನಡವೆ ಕೆಎಲ್ ರಾಹುಲ್ ಕೆಲ ದಿನಗಳ ವರೆಗೆ ಎನ್‌ಸಿಎಯಿಂದ ವಿರಾಮ ತೆಗೆದುಕೊಳ್ಳಲಿದ್ದಾರಂತೆ. ಅಯ್ಯರ್ ಅವರು ಬೆಂಗಳೂರಿನಲ್ಲಿ ತಮ್ಮ ಪುನರ್ವಸತಿ ಮುಂದುವರಿಸಿದ್ದಾರೆ. ಕೆಎಲ್ ರಾಹುಲ್ ಐಪಿಎಲ್ 2023 ರ ಸಂದರ್ಭದಲ್ಲಿ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು, ಹೀಗಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಮತ್ತೊಂದೆಡೆ, ಅಯ್ಯರ್ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದರು.
ಭಾರತ-ಐರ್ಲೆಂಡ್ ಸರಣಿ ವೇಳಾಪಟ್ಟಿ:
- ಒಟ್ಟು ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ
- ಆಗಸ್ಟ್ 18 ರಂದು ಮೊದಲ ಟಿ20 ಪಂದ್ಯ
- 2ನೇ ಪಂದ್ಯವು ಆಗಸ್ಟ್ 20 ರಂದು ಜರುಗಲಿದೆ
- 3ನೇ ಪಂದ್ಯ ಆಗಸ್ಟ್ 22 ರಂದು ಆಯೋಜಿಸಲಾಗಿದೆ
- ಈ ಎಲ್ಲಾ ಪಂದ್ಯಗಳಿಗೆ ಡಬ್ಲಿನ್ನ ಮಲಾಹೈಡ್ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ
ಐರ್ಲೆಂಡ್ ಸರಣಿಗೆ ಭಾರತ ಟಿ20 ತಂಡ:
ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ಶಹಬಾಝ್ ಅಹ್ಮದ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ