IND vs SL: ಹ್ಯಾಟ್ರಿಕ್ ಅರ್ಧಶತಕ ಸಿಡಿಸಿ ಭಾರತದ ಪರ ವಿಶಿಷ್ಠ ದಾಖಲೆ ಬರೆದ ಶ್ರೇಯಸ್ ಅಯ್ಯರ್!

|

Updated on: Feb 28, 2022 | 3:30 PM

Shreyas Iyer: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ T20I ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಅಜೇಯ ಅರ್ಧಶತಕಗಳೊಂದಿಗೆ 204 ರನ್ ಗಳಿಸಿದ್ದಾರೆ.

IND vs SL: ಹ್ಯಾಟ್ರಿಕ್ ಅರ್ಧಶತಕ ಸಿಡಿಸಿ ಭಾರತದ ಪರ ವಿಶಿಷ್ಠ ದಾಖಲೆ ಬರೆದ ಶ್ರೇಯಸ್ ಅಯ್ಯರ್!
ಶ್ರೇಯಸ್
Follow us on

ಭಾರತ ಕ್ರಿಕೆಟ್ ತಂಡ (Indian cricket team)ವು ತವರಿನಲ್ಲಿ ಮತ್ತೊಮ್ಮೆ ತನ್ನ ಪಾರುಪತ್ಯವನ್ನು ಸಾಬೀತುಪಡಿಸಿದೆ. ಮೂರು ಪಂದ್ಯಗಳ T20 ಸರಣಿಯಲ್ಲಿ ಶ್ರೀಲಂಕಾವನ್ನು 3-0 ಅಂತರದಿಂದ ಸೋಲಿಸಿದೆ. ಇಡೀ ಸರಣಿಯಲ್ಲಿ ಶ್ರೀಲಂಕಾ ತಂಡ ಭಾರತದ ವಿರುದ್ಧ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಭಾರತದ ಸರಣಿ ಗೆಲುವಿನಲ್ಲಿ ಅನೇಕ ಯುವ ತಾರೆಗಳು ಮಿಂಚಿದರು, ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ (Shreyas Iyer) ಹೆಚ್ಚು ಮಿಂಚಿದರು. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಮಧ್ಯಮ ಕ್ರಮಾಂಕವನ್ನು ನಿಭಾಯಿಸುವ ಜವಾಬ್ದಾರಿ ಶ್ರೇಯಸ್ ಮೇಲಿತ್ತು ಮತ್ತು ಈ ಬ್ಯಾಟ್ಸ್‌ಮನ್ ಈ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದರು.

ಶ್ರೇಯಸ್ ಎಷ್ಟು ಸಮರ್ಥ ಬ್ಯಾಟ್ಸ್‌ಮನ್ ಎಂಬುದರ ಬಗ್ಗೆ ಎಲ್ಲರಿಗೂ ತಿಳಿದಿದೆ. ಈ ಸರಣಿಯಲ್ಲಿ ಅವರು ಯಾವುದೇ ರೀತಿಯ ಜವಾಬ್ದಾರಿಯನ್ನು ನಿಭಾಯಿಸಲು ಸಮರ್ಥರಾಗಿದ್ದಾರೆ ಎಂಬುದನ್ನು ಸಾಭೀತುಪಡಿಸಿದ್ದಾರೆ. ಜೊತೆಗೆ ಈ ಸರಣಿಯಲ್ಲಿ ಶ್ರೇಯಸ್ ತಮ್ಮ ಬ್ಯಾಟಿಂಗ್ ಮೂಲಕ ಹಲವು ದಾಖಲೆಗಳನ್ನು ಮಾಡಿದ್ದಾರೆ.

ಸರಣಿಯುದ್ದಕ್ಕೂ ಅಜೇಯ
ಈ ಸಂಪೂರ್ಣ ಸರಣಿಯಲ್ಲಿ ಶ್ರೇಯಸ್ ಅಜೇಯರಾಗಿ ಉಳಿದರು, ಯಾವುದೇ ಶ್ರೀಲಂಕಾದ ಬೌಲರ್​ಗೆ ಅವರನ್ನು ಔಟ್ ಮಾಡಲು ಸಾಧ್ಯವಾಗಲಿಲ್ಲ. ಈ ಮೂರು ಪಂದ್ಯಗಳಲ್ಲಿ ಶ್ರೇಯಸ್ ಒಟ್ಟು 204 ರನ್ ಗಳಿಸಿದರು ಮತ್ತು ಇದರೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯ ವಿರುದ್ಧ 199 ರನ್ ಗಳಿಸಿದ್ದ ವಿರಾಟ್ ಕೊಹ್ಲಿಯನ್ನು ಈ ವಿಷಯದಲ್ಲಿ ಹಿಂದಿಕ್ಕಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕೊಹ್ಲಿ 183 ರನ್ ಗಳಿಸಿದ್ದರು. ಕೆಎಲ್ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ T20I ಸರಣಿಯಲ್ಲಿ 164 ರನ್ ಗಳಿಸಿದರು. ರೋಹಿತ್ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ಕ್ರಮವಾಗಿ 162 ಮತ್ತು 159 ರನ್ ಗಳಿಸಿದರು.

ಈ ದಾಖಲೆ ಮಾಡಿದ ನಾಲ್ಕನೇ ಭಾರತೀಯ
ಈ ಸರಣಿಯಲ್ಲಿ ಶ್ರೇಯಸ್ ಹ್ಯಾಟ್ರಿಕ್ ಅರ್ಧ ಶತಕ ಬಾರಿಸಿದ್ದರು. ಮೊದಲ ಪಂದ್ಯದಲ್ಲಿ ಔಟಾಗದೆ 57, ಎರಡನೇ ಪಂದ್ಯದಲ್ಲಿ 74 ಮತ್ತು ಮೂರನೇ ಪಂದ್ಯದಲ್ಲಿ 73 ರನ್ ಗಳಿಸಿದ್ದರು. ಈ ಮೂಲಕ ಟಿ20ಯಲ್ಲಿ ಹ್ಯಾಟ್ರಿಕ್ ಅರ್ಧಶತಕ ಬಾರಿಸಿದ ಭಾರತದ ನಾಲ್ಕನೇ ಆಟಗಾರ ಎನಿಸಿಕೊಂಡರು. ಅವರಿಗಿಂತ ಮೊದಲು, ವಿರಾಟ್ ಕೊಹ್ಲಿ ಮೂರು ಬಾರಿ ಈ ಕೆಲಸವನ್ನು ಮಾಡಿದ್ದಾರೆ ಮತ್ತು ಕೆಎಲ್ ರಾಹುಲ್ ಎರಡು ಬಾರಿ ಹ್ಯಾಟ್ರಿಕ್ ಅರ್ಧಶತಕಗಳನ್ನು ಗಳಿಸಿದ್ದಾರೆ. ಅದೇ ಸಮಯದಲ್ಲಿ, ರೋಹಿತ್ ಶರ್ಮಾ ಒಮ್ಮೆ ಹ್ಯಾಟ್ರಿಕ್ ಅರ್ಧ ಶತಕಗಳನ್ನು ಗಳಿಸಿದ್ದಾರೆ. ಈ ಬಲವಾದ ಪ್ರದರ್ಶನಕ್ಕಾಗಿ, ಶ್ರೇಯಸ್ ಮೂರನೇ ಪಂದ್ಯದಲ್ಲಿ ಪಂದ್ಯದ ಆಟಗಾರ ಮತ್ತು ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು. ಈ ಪ್ರದರ್ಶನದ ನಂತರ, ಶ್ರೇಯಸ್ ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಆಡಲು ಸಿದ್ಧರಾಗಿದ್ದಾರೆ.

ಇದನ್ನೂ ಓದಿ:IND vs SL, 3rd T20, Highlights: ಶ್ರೇಯಸ್ ಅಜೇಯ ಅರ್ಧಶತಕ; ಟಿ20 ಸರಣಿ ಗೆದ್ದು ವಿಶ್ವ ದಾಖಲೆ ಬರೆದ ಭಾರತ