AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ನಾಯಕನ ಆಯ್ಕೆಗೆ RCB ವಿಳಂಬ ಮಾಡುತ್ತಿರುವುದೇಕೆ..?

IPL 2022 Rcb Captain: ಆರ್​ಸಿಬಿ ಮುಂದೆ ಸಾಕಷ್ಟು ಆಯ್ಕೆಗಳಿವೆ. ಎಲ್ಲರೂ ಸಮರ್ಥ ನಾಯಕರು. ದಿನೇಶ್‌ ಕಾರ್ತಿಕ್​ಗೆ ವಿರಾಟ್ ಕೊಹ್ಲಿ ತುಂಬಾ ಹತ್ತಿರದಿಂದ ಗೊತ್ತು. ಹಾಗೆಯೇ ಈ ಹಿಂದೆ ಆರ್‌ಸಿಬಿ ಪರ ಆಡಿದ್ದರು.

IPL 2022: ನಾಯಕನ ಆಯ್ಕೆಗೆ RCB ವಿಳಂಬ ಮಾಡುತ್ತಿರುವುದೇಕೆ..?
RCB
TV9 Web
| Edited By: |

Updated on: Feb 28, 2022 | 3:54 PM

Share

ಐಪಿಎಲ್ ಸೀಸನ್ 15 ಗಾಗಿ (IPL 2022) 9 ತಂಡಗಳು ಈಗಾಗಲೇ ನಾಯಕರುಗಳನ್ನು ಘೋಷಿಸಿದೆ. ಇದಾಗ್ಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಇನ್ನೂ ಕೂಡ ತನ್ನ ನಾಯಕನ ಆಯ್ಕೆ ಮಾಡಿಲ್ಲ. ಇತ್ತ ಐಪಿಎಲ್ (Ipl 2022 Schedule) ದಿನಾಂಕ ಘೋಷಣೆಯಾಗಿ, ಪ್ರತಿ ತಂಡಗಳು ಅಭ್ಯಾಸ ಶಿಬಿರದ ಸಿದ್ದತೆಯಲ್ಲಿದ್ದರೂ ಆರ್​ಸಿಬಿ (IPL 2022 RCB Captain) ಮಾತ್ರ ಇನ್ನೂ ಯಾಕೆ ನಾಯಕನನ್ನು ಆಯ್ಕೆ ಮಾಡಿಲ್ಲ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇದಕ್ಕೆ ಸದ್ಯ ಸಿಗುತ್ತಿರುವ ಉತ್ತರ, ಯಾರನ್ನು ನಾಯಕರನ್ನಾಗಿ ಮಾಡಬೇಕೆಂಬ ಗೊಂದಲ. ಏಕೆಂದರೆ ಆರ್​ಸಿಬಿ ಫ್ರಾಂಚೈಸಿಯ ಹಿಟ್​ ಲೀಸ್ಟ್​ನಲ್ಲಿ ಮೂವರು ಆಟಗಾರರ ಹೆಸರಿದೆ. ಅದರಂತೆ ಇಬ್ಬರು ವಿದೇಶಿ ಆಟಗಾರರು ಹಾಗೂ ಒಬ್ಬ ಭಾರತೀಯ ಆಟಗಾರರ ಆರ್​ಸಿಬಿ ಕ್ಯಾಪ್ಟನ್ ಪಟ್ಟಿಯಲ್ಲಿದ್ದಾರೆ. ಈ ಮೂವರು ಈಗಾಗಲೇ ತಂಡಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಹೀಗಾಗಿ ಇವರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬ ಚರ್ಚೆ ಮುಂದುವರೆದಿದೆ.

ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ (Faf du Plessis) ಮುಂಚೂಣಿಯಲ್ಲಿದ್ದಾರೆ. ಇದಾಗ್ಯೂ ಮೆಲ್ಬೋರ್ನ್ ಸ್ಟಾರ್ಸ್​ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಕೂಡ ಈ ಪಟ್ಟಿಯಲ್ಲಿದ್ದಾರೆ. ಇಲ್ಲಿ ಮ್ಯಾಕ್ಸ್​ವೆಲ್ ಅವರನ್ನು ಆರ್​ಸಿಬಿ ಈ ಬಾರಿ ಕಡಿಮೆ ಮೊತ್ತಕ್ಕೆ ರಿಟೈನ್ ಮಾಡಿಕೊಂಡಿತ್ತು ಎಂಬುದು ಉಲ್ಲೇಖಾರ್ಹ. ಇನ್ನು ತಮಿಳುನಾಡು ಹಾಗೂ ಕೆಕೆಆರ್ ತಂಡವನ್ನು ಮುನ್ನಡೆಸಿದ ದಿನೇಶ್ ಕಾರ್ತಿಕ್ (Dinesh Karthik) ಕೂಡ ಈ ಪಟ್ಟಿಯಲ್ಲಿದ್ದಾರೆ.

ಇಲ್ಲಿ ಮೂವರು ಕೂಡ ಅನುಭವಿ ನಾಯಕರುಗಳೇ ಎಂದೇ ಹೇಳಬಹುದು. ಅದರಲ್ಲೂ ವಿದೇಶಿ ಆಟಗಾರರನ್ನು ನಾಯಕರಾಗಿ ಆಯ್ಕೆ ಮಾಡಿದರೆ ಸಮಸ್ಯೆ ಎದುರಿಸಬಹುದೇ ಎಂಬ ಪ್ರಶ್ನೆಗಳು ಆರ್​ಸಿಬಿ ಫ್ರಾಂಚೈಸಿ ಮುಂದಿದೆ. ಏಕೆಂದರೆ ಫಾಫ್ ಡುಪ್ಲೆಸಿಸ್​ ಆರ್​ಸಿಬಿ ತಂಡಕ್ಕೆ ಹೊಸ ಆಟಗಾರ. ಇನ್ನು ಗ್ಲೆನ್ ಮ್ಯಾಕ್ಸ್​ವೆಲ್​ ಅವರಿಗೆ ನಾಯಕತ್ವ ನೀಡಿ ಅವರ ಮೇಲೆ ಒತ್ತಡ ಹಾಕುವುದರಿಂದ ಫಾರ್ಮ್​ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿಯೇ ತಂಡದ ಹೊಸ ನಾಯಕನ ಆಯ್ಕೆ ಬಗ್ಗೆ ಎಚ್ಚರವಹಿಸಲು ಆರ್​ಸಿಬಿ ಮುಂದಾಗಿದೆ.

“ಆರ್​ಸಿಬಿ ಮುಂದೆ ಸಾಕಷ್ಟು ಆಯ್ಕೆಗಳಿವೆ. ಎಲ್ಲರೂ ಸಮರ್ಥ ನಾಯಕರು. ದಿನೇಶ್‌ ಕಾರ್ತಿಕ್​ಗೆ ವಿರಾಟ್ ಕೊಹ್ಲಿ ತುಂಬಾ ಹತ್ತಿರದಿಂದ ಗೊತ್ತು. ಹಾಗೆಯೇ ಈ ಹಿಂದೆ ಆರ್‌ಸಿಬಿ ಪರ ಆಡಿದ್ದರು. ಇನ್ನು ಗ್ಲೆನ್ ಮ್ಯಾಕ್ಸ್​ವೆಲ್ ಈಗ ಒಂದು ವರ್ಷದಿಂದ ನಮ್ಮೊಂದಿಗೆ ಇದ್ದಾರೆ. ಹಾಗೆಯೇ ಫಾಫ್ ದಕ್ಷಿಣ ಆಫ್ರಿಕಾದ ಅದ್ಭುತ ನಾಯಕರಾಗಿದ್ದರು. ಆದರೆ ನಮಗೆ ಯಾರು ಉತ್ತಮ ಎಂಬುದನ್ನು ನಾವು ನಿರ್ಧರಿಸಬೇಕು. ಹೀಗಾಗಿ ಮೂವರಲ್ಲಿ ಒಬ್ಬರನ್ನು ಆಯ್ಕೆ ಮಾಡಲು ವಿಳಂಬವಾಗಿದೆ ಎಂದು ಆರ್‌ಸಿಬಿ ಮೂಲಗಳು ತಿಳಿಸಿವೆ.

ಈ ಬಗ್ಗೆ ಆರ್​ಸಿಬಿ ಮಾಲೀಕರು, ಕೋಚ್ ಸಂಜಯ್ ಬಂಗಾರ್ ಹಾಗೂ ನಿರ್ದೇಶಕ ಮೈಕ್ ಹೆಸನ್ ಅವರು ನಡೆಸಿದ್ದು, ಶ್ರೀಘ್ರದಲ್ಲೇ ತಂಡದ ಹೊಸ ಸಾರಥಿಯನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಆರ್​ಸಿಬಿಯ ವಿಳಂಬ ಇದೀಗ ವಿರಾಟ್ ಕೊಹ್ಲಿಯ ಉತ್ತರಾಧಿಕಾರಿ ಯಾರು ಎಂಬ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(IPL 2022: Why is RCB Taking Their Time in Announcing New Captain?)

ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ