IND vs SA: ಶ್ರೇಯಸ್ ಅಯ್ಯರ್ ಮಾಡಿದ ತಪ್ಪಿಗೆ ಸೋಲಿನ ಬೆಲೆ ತೆತ್ತ ಟೀಂ ಇಂಡಿಯಾ..!

|

Updated on: Jun 10, 2022 | 12:23 PM

Shreyas Iyer: ಈ ವೇಳೆ ದುಸೇನ್ 29 ರನ್ ಗಳಿಸಿದ್ದರು. ಇದಾದ ಬಳಿಕ ಮುಂದಿನ 16 ಎಸೆತಗಳಲ್ಲಿ 46 ರನ್ ಗಳಿಸಿ ಭಾರತದ ಸೋಲಿಗೆ ಕಾರಣರಾದರು. ಅಯ್ಯರ್ ಈ ಕ್ಯಾಚ್ ಹಿಡಿದಿದ್ದರೆ ಪಂದ್ಯ ಬದಲಾಗಬಹುದಿತ್ತು.

IND vs SA: ಶ್ರೇಯಸ್ ಅಯ್ಯರ್ ಮಾಡಿದ ತಪ್ಪಿಗೆ ಸೋಲಿನ ಬೆಲೆ ತೆತ್ತ ಟೀಂ ಇಂಡಿಯಾ..!
ಶ್ರೇಯಸ್ ಅಯ್ಯರ್
Follow us on

ಭಾರತ ಮತ್ತು ದಕ್ಷಿಣ ಆಫ್ರಿಕಾ (INS vs SA) ನಡುವಿನ ಐದು ಪಂದ್ಯಗಳ T20 ಸರಣಿಯು ಪ್ರಾರಂಭವಾದಾಗ, ಟೀಮ್ ಇಂಡಿಯಾ ಮೇಲುಗೈ ಸಾಧಿಸುತ್ತದೆ ಎಂದು ನಂಬಲಾಗಿತ್ತು. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ (Arun Jaitley Stadium in Delhi)ದಲ್ಲಿ ಮೊದಲ ಪಂದ್ಯ ನಡೆದಿದ್ದು, ಮೊದಲು ಬ್ಯಾಟ್ ಮಾಡಿದ ಭಾರತ 211 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಈ ಸ್ಕೋರ್ ನೋಡಿದರೆ ಭಾರತ ಈ ಪಂದ್ಯವನ್ನು ಸುಲಭವಾಗಿ ಗೆಲ್ಲುತ್ತದೆ ಎಂದು ಅನಿಸಿತು, ಆದರೆ ಇದಕ್ಕೆ ವ್ಯತಿರಿಕ್ತವಾದ ಪಲಿತಾಂಶ ಹೊರಬಿತ್ತು. ಭಾರತ ಹೀನಾಯ ಸೋಲು ಕಂಡಿತು. ಡೇವಿಡ್ ಮಿಲ್ಲರ್ ಮತ್ತು ರಾಸಿ ವ್ಯಾನ್ ಡೆರ್ ದುಸೇನ್ (David Miller and Rasi van der Dussen) ಅವರ ಬಿರುಸಿನ ಇನ್ನಿಂಗ್ಸ್ ಭಾರತಕ್ಕೆ ಸೋಲು ನೀಡಿತು. ಈ ಸೋಲಿಗೆ ಭಾರತ ತಂಡ ಮಾಡಿದ ಹಲವು ತಪ್ಪುಗಳು ಕಾರಣವಾಗಿವೆ. ದುಸೇನ್ ಅವರ ಕ್ಯಾಚ್‌ ಅನ್ನು ಶ್ರೇಯಸ್‌ ಅಯ್ಯರ್‌ (Shreyas Iyer) ಕೈಬಿಡುವುದು ಅದರಲ್ಲಿ ಒಂದು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 211 ರನ್ ಗಳಿಸಿತ್ತು. ದಕ್ಷಿಣ ಆಫ್ರಿಕಾ ಐದು ಎಸೆತಗಳು ಬಾಕಿ ಇರುವಂತೆಯೇ ಈ ಗುರಿಯನ್ನು ಸಾಧಿಸಿತು. ಆಫ್ರಿಕಾ ಪರ ರಾಸಿ ವಾನ್ ಡೆರ್ ದುಸೇನ್ ಅಜೇಯ 75 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ, ಈ ಬ್ಯಾಟ್ಸ್‌ಮನ್ 46 ಎಸೆತಗಳನ್ನು ಎದುರಿಸಿ ಏಳು ಬೌಂಡರಿಗಳ ಜೊತೆಗೆ ಐದು ಸಿಕ್ಸರ್‌ಗಳನ್ನು ಹೊಡೆದರು. ಇವರ ಹೊರತಾಗಿ ಡೇವಿಡ್ ಮಿಲ್ಲರ್ 31 ಎಸೆತಗಳಲ್ಲಿ 64 ರನ್ ಗಳಿಸಿ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನಲ್ಲಿ ಮಿಲ್ಲರ್ ನಾಲ್ಕು ಬೌಂಡರಿಗಳ ಜೊತೆಗೆ ಐದು ಸಿಕ್ಸರ್‌ಗಳನ್ನು ಬಾರಿಸಿದರು.

ಇದನ್ನೂ ಓದಿ:IND vs SA: ಐಪಿಎಲ್​ನಲ್ಲಿ ಮಿಂಚಿ ಟೀಂ ಇಂಡಿಯಾಗೆ ಎಂಟ್ರಿಕೊಡುತ್ತಿರುವ ಯುವ ಹಾಗೂ ಹಿರಿಯ ಆಟಗಾರರಿವರು

ಇದನ್ನೂ ಓದಿ
Rishabh Pant: ರಿಷಭ್ ಪಂತ್ ಸೋಲಿಗೆ ದೂರಿದ್ದು ಬೌಲರ್​ಗಳನ್ನಲ್ಲ: ಪಂದ್ಯದ ಬಳಿಕ ಏನಂದ್ರು ನೋಡಿ
Dinesh Karthik: ಮೊದಲ ಟಿ20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್​ಗೆ ಅವಮಾನ: ಅದು ಭಾರತೀಯ ಪ್ಲೇಯರ್​ನಿಂದಲೆ
Exclusive: ಇದು ಭಾರತೀಯ ಕ್ರಿಕೆಟ್ ತಲೆತಗ್ಗಿಸುವಂತಹ ಸುದ್ದಿ: ಇಲ್ಲಿದೆ ಉತ್ತರಖಂಡ ಕ್ರಿಕೆಟ್​ನ ಕರ್ಮಕಾಂಡ

ದುಸೇನ್ ಕ್ಯಾಚ್ ಬಿಟ್ಟ ಅಯ್ಯರ್

ದಕ್ಷಿಣ ಆಫ್ರಿಕಾ ತಂಡ ಸಂಕಷ್ಟದ ಸ್ಥಿತಿಯಲ್ಲಿತ್ತು. ಪ್ರವಾಸಿ ತಂಡಕ್ಕೆ ಐದು ಓವರ್‌ಗಳಲ್ಲಿ 63 ರನ್‌ಗಳ ಅಗತ್ಯವಿತ್ತು. ಮಿಲ್ಲರ್ ಮತ್ತು ದುಸ್ಸೇನ್ ಮೈದಾನದಲ್ಲಿದ್ದರು, ಇಬ್ಬರೂ ಉಳಿದರೆ ಪಂದ್ಯ ಕೈ ತಪ್ಪುತ್ತದೆ ಎಂದು ಟೀಂ ಇಂಡಿಯಾ ಅರಿತಿತ್ತು. 16ನೇ ಓವರ್‌ ಎಸೆಯಲು ಅವೇಶ್ ಖಾನ್ ಬಂದರು. ಅವೇಶ್ ಚೆಂಡನ್ನು ನಿಧಾನವಾಗಿ ಬೌಲ್ಡ್ ಮಾಡಿದರು, ದುಸೇನ್ ಅದನ್ನು ಡೀಪ್ ಮಿಡ್ವಿಕೆಟ್ ಕಡೆಗೆ ಆಡಿದರು. ಅಲ್ಲಿ ಶ್ರೇಯಸ್ ಅಯ್ಯರ್ ನಿಂತಿದ್ದರು. ಅಯ್ಯರ್‌ಗೆ ಕ್ಯಾಚ್ ಹಿಡಿಯುವ ಅವಕಾಶವಿತ್ತು, ಆದರೆ ಅತ್ಯುತ್ತಮ ಫೀಲ್ಡಿಂಗ್‌ಗೆ ಹೆಸರಾದ ಅಯ್ಯರ್ ನಿರ್ಣಾಯಕ ಸಮಯದಲ್ಲಿ ಈ ಮಹತ್ವದ ಕ್ಯಾಚ್ ಅನ್ನು ಕೈಬಿಟ್ಟರು. ಈ ವೇಳೆ ದುಸೇನ್ 29 ರನ್ ಗಳಿಸಿದ್ದರು. ಇದಾದ ಬಳಿಕ ಮುಂದಿನ 16 ಎಸೆತಗಳಲ್ಲಿ 46 ರನ್ ಗಳಿಸಿ ಭಾರತದ ಸೋಲಿಗೆ ಕಾರಣರಾದರು. ಅಯ್ಯರ್ ಈ ಕ್ಯಾಚ್ ಹಿಡಿದಿದ್ದರೆ ಪಂದ್ಯ ಬದಲಾಗಬಹುದಿತ್ತು.

ಭಾರತದ ಅದ್ಭುತ ಬ್ಯಾಟಿಂಗ್

ಅಯ್ಯರ್ ಅವರ ಈ ಕ್ಯಾಚ್ ಅವರ ಬ್ಯಾಟ್‌ನ ಶ್ರಮವನ್ನೂ ಹಾಳು ಮಾಡಿತು. ಅಯ್ಯರ್ ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 27 ಎಸೆತಗಳಲ್ಲಿ ಒಂದು ಬೌಂಡರಿ, ಮೂರು ಸಿಕ್ಸರ್‌ಗಳ ಸಹಾಯದಿಂದ 36 ರನ್ ಗಳಿಸಿದರು. ಈ ಪಂದ್ಯದಲ್ಲಿ ಭಾರತದ ಪರ ಆರಂಭಿಕ ಆಟಗಾರ ಇಶಾನ್ ಕಿಶನ್ ಅತಿ ಹೆಚ್ಚು ರನ್ ಗಳಿಸಿದರು. ಯುವ ಎಡಗೈ ಬ್ಯಾಟ್ಸ್‌ಮನ್ 48 ಎಸೆತಗಳನ್ನು ಎದುರಿಸಿ 11 ಬೌಂಡರಿ, ಮೂರು ಸಿಕ್ಸರ್‌ಗಳೊಂದಿಗೆ 76 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ ಕೊನೆಯ ಹಂತದಲ್ಲಿ 12 ಎಸೆತಗಳನ್ನು ಎದುರಿಸಿ 31 ರನ್ ಗಳಿಸಿದರು. ಈ ಸಮಯದಲ್ಲಿ, ಅವರು ತಮ್ಮ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಹೊಡೆದರು.