ಔಟಾದ ಸಿಟ್ಟಲ್ಲಿ ತನ್ನದೇ ತಂಡದ ಆಟಗಾರನಿಗೆ ಬೈದಾ ಶ್ರೇಯಸ್ ಅಯ್ಯರ್?: ವಿಡಿಯೋ ವೈರಲ್

|

Updated on: Sep 23, 2023 | 9:07 AM

Shreyas Iyer run out IND vs AUS: ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಎಂಟು ಎಸೆತಗಳಲ್ಲಿ ಕೇವಲ ಮೂರು ರನ್ ಗಳಿಸಿ ರನೌಟ್ ಆದರು. ಸಿಂಗಲ್ ತೆಗೆದುಕೊಳ್ಳುವ ಅವಕಾಶ ಇಲ್ಲದಿದ್ದರೂ ಓಡಿ ಬಂದ ಅಯ್ಯರ್ ನಾನ್​-ಸ್ಟ್ರೈಕರ್​ನಲ್ಲಿದ್ದ ಶುಭ್​ಮನ್ ಗಿಲ್ ಮೇಲೂ ರೇಗಾಡಿದರು. ಇದರ ವಿಡಿಯೋ ವೈರಲ್ ಆಗುತ್ತಿದೆ.

ಔಟಾದ ಸಿಟ್ಟಲ್ಲಿ ತನ್ನದೇ ತಂಡದ ಆಟಗಾರನಿಗೆ ಬೈದಾ ಶ್ರೇಯಸ್ ಅಯ್ಯರ್?: ವಿಡಿಯೋ ವೈರಲ್
Shreyas Iyer and Shubman Gill
Follow us on

ಶ್ರೇಯಸ್ ಅಯ್ಯರ್ (Shreyas Iyer) ದೀರ್ಘ ಕಾಲದ ಇಂಜುರಿಯಿಂದ ಟೀಮ್ ಇಂಡಿಯಾಕ್ಕೆ ಕಮ್​ಬ್ಯಾಕ್ ಮಾಡಿದರೂ ತಂಡಕ್ಕೆ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ. ಏಷ್ಯಾಕಪ್​ನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಬೇಗನೆ ಔಟಾದರೆ, ಬಳಿಕ ಮತ್ತೊಮ್ಮೆ ಗಾಯಕ್ಕೆ ತುತ್ತಾದರು. ಇದೀಗ ಫಿಟ್ ಆಗಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಮೂಲಕ ಪುನಃ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಇಲ್ಲಿಕೂಡ ಅಯ್ಯರ್ ಕಳಪೆ ಆಟ ಮುಂದುವರೆದಿದೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶ್ರೇಯಸ್ ಮತ್ತೊಮ್ಮೆ ಬೇಗನೆ ನಿರ್ಗಮಿಸಿದರು. ಈ ಸಂದರ್ಭ ಅವರು ಸಿಟ್ಟಿಗೆದ್ದ ಘಟನೆ ಕೂಡ ನಡೆಯಿತು.

28ರ ಹರೆಯದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಸತತ ಗಾಯಗಳ ನಂತರ ತಂಡಕ್ಕೆ ಸೇರಿ ಫಾರ್ಮ್ ಕಂಡುಕೊಳ್ಳುವ ಒತ್ತಡದಲ್ಲಿದ್ದಾರೆ. ಆದರೆ, ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಎಂಟು ಎಸೆತಗಳಲ್ಲಿ ಕೇವಲ ಮೂರು ರನ್ ಗಳಿಸಿ ರನೌಟ್ ಆದರು. ಆ್ಯಡಮ್ ಝಂಪಾ ಅವರ ಬೌಲಿಂಗ್​ನಲ್ಲಿ ಕ್ವಿಕ್ ಸಿಂಗಲ್ ತೆಗೆದುಕೊಳ್ಳಲು ಹೋಗಿ ರನೌಟ್​ಗೆ ಬಲಿಯಾದರು. ಸಿಂಗಲ್ ತೆಗೆದುಕೊಳ್ಳುವ ಅವಕಾಶ ಇಲ್ಲದಿದ್ದರೂ ಓಡಿ ಬಂದ ಅಯ್ಯರ್ ನಾನ್​-ಸ್ಟ್ರೈಕರ್​ನಲ್ಲಿದ್ದ ಶುಭ್​ಮನ್ ಗಿಲ್ ಮೇಲೂ ರೇಗಾಡಿದರು.

ಇದನ್ನೂ ಓದಿ
ಟೀಂ ಇಂಡಿಯಾದ ಗೆಲುವಿನಲ್ಲಿ ಈ ಐವರೇ ಹೀರೋಗಳು
ಗೆದ್ದ ಬಳಿಕ ಪ್ರೆಸೆಂಟೇಷನ್ ವೇಳೆ ಕೆಎಲ್ ರಾಹುಲ್ ಆಡಿದ ಮಾತುಗಳೇನು ಕೇಳಿ
ಟಿ20 ವಿಶ್ವಕಪ್​ಗೆ 10 ಸ್ಥಳಗಳನ್ನು ಅಂತಿಮಗೊಳಿಸಿದ ಐಸಿಸಿ
ಟೀಂ ಇಂಡಿಯಾ ನಾಯಕನ ಕಳಪೆ ಕೀಪಿಂಗ್​ಗೆ ಫ್ಯಾನ್ಸ್ ಬೇಸರ

IND vs AUS: 590 ದಿನಗಳ ಬಳಿಕ ಏಕದಿನ ಮಾದರಿಯಲ್ಲಿ ಅರ್ಧಶತಕ ಸಿಡಿಸಿದ ಸೂರ್ಯ..!

ಚೆಂಡು ಅಲ್ಲೇ ಪಕ್ಕದಲ್ಲಿದ್ದರೂ ಅಯ್ಯರ್ ಕ್ರೀಸ್ ಬಿಟ್ಟು ತುಂಬಾ ಮುಂದೆ ಬಂದಿದ್ದರು. ಪುನಃ ಕ್ರೀಸ್​ಗೆ ಮರಳಲು ಸರಿಯಾದ ಸಮಯಕ್ಕೆ ಸಾಧ್ಯವಾಗಲಿಲ್ಲ. ಶ್ರೇಯಸ್ ಫುಲ್ ಸ್ಟ್ರೆಚ್ ಡೈವ್ ಮಾಡಿದರು, ಆದರೆ ಅಷ್ಟೊತ್ತಿಗೆ ಚೆಂಡು ವಿಕೆಟ್ ಕೀಪರ್ ಕೈಗೆ ಸೇರಿ ರನೌಟ್​ಗೆ ಬಲಿಯಾದರು. ಔಟಾಗಿ ಡ್ರೆಸ್ಸಿಂಗ್ ರೂಮ್​ಗೆ ಹಿಂತಿರುಗುವ ಸಂದರ್ಭ ಅಯ್ಯರ್ ಹಾಗೂ ಗಿಲ್ ನಡುವೆ ಮಾತಿನ ಚಕಮಕಿ ನಡೆಯಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಶ್ರೇಯಸ್ ಅಯ್ಯರ್ ರನೌಟ್ ಆದ ವಿಡಿಯೋ ಇಲ್ಲಿದೆ ನೋಡಿ:

 

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್​ಗಳಲ್ಲಿ 276 ರನ್​ಗಳಿಗೆ ಆಲೌಟ್ ಆಯಿತು. ಡೇವಿಡ್ ವಾರ್ನರ್ 53 ಎಸೆತಗಳಲ್ಲಿ 51 ರನ್ ಸಿಡಿಸಿದರೆ, ಜೋಶ್ ಇಂಗ್ಲಿಸ್ 41, ಸ್ಟೀವ್ ಸ್ಮಿತ್ 41 ರನ್ ಗಳಿಸಿದರು. ಭಾರತ ಪರ ಮೊಹಮ್ಮದ್ ಶಮಿ 5 ವಿಕೆಟ್ ಕಿತ್ತು ಮಿಂಚಿದರು. ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ 48.4 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 281 ರನ್ ಸಿಡಿಸಿ ಭರ್ಜರಿ ಜಯ ಕಂಡಿತು. ಭಾರತ ಪರ ಗಿಲ್ 74, ಗಾಯಕ್ವಾಡ್ 71, ಕೆಎಲ್ ರಾಹುಲ್ ಅಜೇಯ 58 ಹಾಗೂ ಸೂರ್ಯಕುಮಾರ್ ಯಾದವ್ 50 ರನ್ ಬಾರಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ