- Kannada News Sports Cricket news IND vs AUS 1st odi these five players were the heroes of Indias victory
IND vs AUS: ನಾಲ್ಕು ಅರ್ಧಶತಕ, ಐದು ವಿಕೆಟ್; ಟೀಂ ಇಂಡಿಯಾದ ಗೆಲುವಿನಲ್ಲಿ ಈ ಐವರೇ ಹೀರೋಗಳು
IND vs AUS: ವಿಶ್ವಕಪ್‌ಗೂ ಮುನ್ನ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಐದು ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿದೆ. ಈ ಪಂದ್ಯದಲ್ಲಿ ಭಾರತದ ಪರ ನಾಲ್ವರು ಸ್ಟಾರ್ ಆಟಗಾರರು ಅರ್ಧಶತಕ ಬಾರಿಸಿದರೆ, ಮೊಹಮ್ಮದ್ ಶಮಿ ಐದು ವಿಕೆಟ್ ಪಡೆದರು. ಈ ಐವರು ಆಟಗಾರರು ತಂಡದ ಗೆಲುವಿನ ಹೀರೋಗಳು ಎಂಬುದನ್ನು ಸಾಬೀತುಪಡಿಸಿದರು.
Updated on: Sep 23, 2023 | 7:45 AM

ವಿಶ್ವಕಪ್‌ಗೂ ಮುನ್ನ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಐದು ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿದೆ. ಈ ಪಂದ್ಯದಲ್ಲಿ ಭಾರತದ ಪರ ನಾಲ್ವರು ಸ್ಟಾರ್ ಆಟಗಾರರು ಅರ್ಧಶತಕ ಬಾರಿಸಿದರೆ, ಮೊಹಮ್ಮದ್ ಶಮಿ ಐದು ವಿಕೆಟ್ ಪಡೆದರು. ಈ ಐವರು ಆಟಗಾರರು ತಂಡದ ಗೆಲುವಿನ ಹೀರೋಗಳು ಎಂಬುದನ್ನು ಸಾಬೀತುಪಡಿಸಿದರು.

ಇಂದಿನ ಪಂದ್ಯದಲ್ಲಿ ಕೀಪಿಂಗ್ ವಿಷಯದಲ್ಲಿ ಕೆಎಲ್ ರಾಹುಲ್ಗೆ ಇದು ಶುಭ ದಿನವಾಗಿರಲಿಲ್ಲ. ಆದರೆ ಈ ಪಂದ್ಯದಲ್ಲಿ ರಾಹುಲ್ ಅವರ ಬ್ಯಾಟಿಂಗ್ ಸಾಕಷ್ಟು ಪರಿಣಾಮ ಬೀರಿತು. ನಾಯಕನ ಇನಿಂಗ್ಸ್ ಆಡಿದ ಕೆಎಲ್ ರಾಹುಲ್ ಇಶಾನ್ ಮತ್ತು ಸೂರ್ಯ ಜತೆಗೂಡಿ ತಂಡದ ಗೆಲುವನ್ನು ಖಚಿತಪಡಿಸಿದರು. 63 ಎಸೆತಗಳಲ್ಲಿ 58 ರನ್ ಬಾರಿಸಿದ ರಾಹುಲ್ ಸಿಕ್ಸರ್ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸೂರ್ಯಕುಮಾರ್ ಯಾದವ್ ಸುದೀರ್ಘ ಸಮಯದ ನಂತರ ಏಕದಿನ ಮಾದರಿಯಲ್ಲಿ ಅರ್ಧಶತಕ ಬಾರಿಸಿದರು. 49 ಎಸೆತಗಳಲ್ಲಿ 50 ರನ್ ಚಚ್ಚಿದ ಸೂರ್ಯ, ನಾಯಕ ರಾಹುಲ್ ಅವರೊಂದಿಗೆ ಅರ್ಧಶತಕದ ಜೊತೆಯಾಟವನ್ನು ಹಂಚಿಕೊಂಡರು.

ಶುಭ್‌ಮನ್ ಗಿಲ್ ತಮ್ಮ ಅರ್ಧಶತಕದೊಂದಿಗೆ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರೆಸಿದರು. ತವರು ನೆಲದಲ್ಲಿ ಶತಕ ವಂಚಿತರಾದ ಗಿಲ್, 63 ಎಸೆತಗಳಲ್ಲಿ 74 ರನ್ ಗಳಿಸಿ ತಂಡಕ್ಕೆ ಬಲಿಷ್ಠ ಆರಂಭ ನೀಡಿದರು.

Asian Games Mens T20I 2023 India vs Nepal Quarter Final 1 Ruturaj and Jaiswal Good Start for India

ಸಿರಾಜ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಅನುಭವಿ ವೇಗಿ ಮೊಹಮ್ಮದ್ ಶಮಿ, ಐದು ವಿಕೆಟ್ ಕಬಳಿಸಿ ಆಸೀಸ್ ತಂಡವನ್ನು 276 ರನ್ಗಳಿಗೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.



















