ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲೇ ಶ್ರೇಯಸ್ ಅಯ್ಯರ್ ಸ್ಪೋಟಕ ಸೆಂಚುರಿ ಸಿಡಿಸಿದ್ದಾರೆ. ಅಹದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನ ಬಿ ಗ್ರೌಂಡ್ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಮುಂಬೈ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.
ಆರಂಭಿಕನಾಗಿ ಕಣಕ್ಕಿಳಿದ ಅಂಗ್ಕ್ರಿಶ್ ರಘುವಂಶಿ ಕೇವಲ 6 ರನ್ಗಳಿಸಿ ವಿದ್ಯಾಧರ್ ಪಾಟೀಲ್ಗೆ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ಜೊತೆಗೂಡಿ ಆಯುಷ್ ಮ್ಹಾತ್ರೆ (78) ಹಾಗೂ ಹಾರ್ದಿಕ್ ತಮೋರ್ (84) 2ನೇ ವಿಕೆಟ್ಗೆ 141 ರನ್ಗಳ ಜೊತೆಯಾಟವಾಡಿದರು.
ಅಯ್ಯರ್ ಅಬ್ಬರ ಸಿಡಿಲಬ್ಬರ:
ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಶ್ರೇಯಸ್ ಅಯ್ಯರ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ್ದ ಅಯ್ಯರ್ ಕರ್ನಾಟಕ ಬೌಲರ್ಗಳನ್ನು ಹಿಗ್ಗಮುಗ್ಗಾ ದಂಡಿಸಿದರು. ಪರಿಣಾಮ ಶ್ರೇಯಸ್ ಬ್ಯಾಟ್ನಿಂದ 10 ಭರ್ಜರಿ ಸಿಕ್ಸ್ಗಳು ಮೂಡಿಬಂದವು.
ಈ ಸಿಡಿಲಬ್ಬರದೊಂದಿಗೆ ಶ್ರೇಯಸ್ ಅಯ್ಯರ್ ಕೇವಲ 51 ಎಸೆತಗಳಲ್ಲಿ ಶತಕ ಪೂರೈಸಿದರು. ಇನ್ನು ಶತಕದ ಬಳಿಕ ಕೂಡ ಅಬ್ಬರ ಮುಂದುವರೆಸಿದ ಅಯ್ಯರ್ 55 ಎಸೆತಗಳಲ್ಲಿ 5 ಫೋರ್ ಹಾಗೂ 10 ಸಿಕ್ಸ್ಗಳೊಂದಿಗೆ ಅಜೇಯ 114 ರನ್ ಬಾರಿಸಿದರು. ಈ ಭರ್ಜರಿ ಶತಕದ ನೆರವಿನೊಂದಿಗೆ ಮುಂಬೈ ತಂಡವು 50 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 382 ರನ್ ಕಲೆಹಾಕಿದೆ.
ಈ ಪಂದ್ಯವನ್ನು ಗೆಲ್ಲಲು ಕರ್ನಾಟಕ ತಂಡವು 50 ಓವರ್ಗಳಲ್ಲಿ 382 ರನ್ ಕಲೆಹಾಕಬೇಕಿದೆ. ಈ ಮೊತ್ತವನ್ನು ಚೇಸ್ ಮಾಡಿದರೆ ಕರ್ನಾಟಕ ತಂಡದ ಹೆಸರಿಗೆ ಹೊಸ ದಾಖಲೆ ಸೇರ್ಪಡೆಯಾಗಲಿದೆ.
ಮುಂಬೈ ಪ್ಲೇಯಿಂಗ್ 11: ಅಂಗ್ಕ್ರಿಶ್ ರಘುವಂಶಿ , ಆಯುಷ್ ಮ್ಹಾತ್ರೆ , ಶ್ರೇಯಸ್ ಅಯ್ಯರ್ (ನಾಯಕ) , ಸೂರ್ಯಕುಮಾರ್ ಯಾದವ್ , ಹಾರ್ದಿಕ್ ತಮೋರೆ (ವಿಕೆಟ್ ಕೀಪರ್) , ಶಿವಂ ದುಬೆ , ಸೂರ್ಯಾಂಶ್ ಶೆಡ್ಗೆ , ಅಥರ್ವ ಅಂಕೋಲೇಕರ್ , ತನುಷ್ ಕೋಟ್ಯಾನ್ , ಶಾರ್ದೂಲ್ ಠಾಕೂರ್ , ಜುನೇದ್ ಖಾನ್.
ಇದನ್ನೂ ಓದಿ: ಒಂದೇ ವರ್ಷ ಟೀಮ್ ಇಂಡಿಯಾದ 11 ಆಟಗಾರರು ನಿವೃತ್ತಿ..!
ಕರ್ನಾಟಕ ಪ್ಲೇಯಿಂಗ್ 11: ಮಯಾಂಕ್ ಅಗರವಾಲ್ (ನಾಯಕ) , ಅನೀಶ್ ಕೆವಿ , ನಿಕಿನ್ ಜೋಸ್ , ಸ್ಮರಣ್ ರವಿಚಂದ್ರನ್ , ಅಭಿನವ್ ಮನೋಹರ್ , ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್) , ಶ್ರೇಯಸ್ ಗೋಪಾಲ್ , ವೈಶಾಕ್ ವಿಜಯಕುಮಾರ್ , ಪ್ರವೀಣ್ ದುಬೆ , ವಾಸುಕಿ ಕೌಶಿಕ್ , ವಿದ್ಯಾಧರ್ ಪಾಟೀಲ್.