ರಾತ್ರಿಯಿಡೀ ಪಾರ್ಟಿ, ಬೆಳಿಗ್ಗೆ ನೋ ಡ್ಯೂಟಿ: ಪೃಥ್ವಿ ಶಾ ಮೋಜು ಮಸ್ತಿ ವಿಚಾರ ಬಹಿರಂಗ
Prithvi Shaw: 25 ವರ್ಷದ ಪೃಥ್ವಿ ಶಾ ಟೀಮ್ ಇಂಡಿಯಾ ಪರ 5 ಟೆಸ್ಟ್, 6 ಏಕದಿನ ಹಾಗೂ 1 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 528 ರನ್ಗಳನ್ನು ಕಲೆಹಾಕಿದ್ದಾರೆ. ಹಾಗೆಯೇ ಐಪಿಎಲ್ನಲ್ಲಿ 79 ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಪೃಥ್ವಿ ಶಾ ಅವರನ್ನು ಈ ಬಾರಿ ಯಾವುದೇ ಫ್ರಾಂಚೈಸಿ ಖರೀದಿಸಿಲ್ಲ ಎಂಬುದು ವಿಶೇಷ.
ವಿಜಯ ಹಝಾರೆ ಟೂರ್ನಿನಿಂದ ಪೃಥ್ವಿ ಶಾ ಅವರನ್ನು ಕೈ ಬಿಡಲಾಗಿದೆ. ಇತ್ತೀಚೆಗೆ ಪ್ರಕಟಿಸಲಾದ 16 ಸದಸ್ಯರ ಮುಂಬೈ ತಂಡದಲ್ಲಿ ಪೃಥ್ವಿಗೆ ಚಾನ್ಸ್ ನೀಡಲಾಗಿಲ್ಲ. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಯುವ ದಾಂಡಿಗ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದರು. ಪೃಥ್ವಿ ಶಾ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ತಿರುಗೇಟು ನೀಡಿದೆ. ಅಲ್ಲದೆ ಯುವ ಬ್ಯಾಟರ್ನನ್ನು ಕೈ ಬಿಡಲು ಮುಖ್ಯ ಕಾರಣವೇನು ಎಂಬುದನ್ನು ಸಹ ಬಹಿರಂಗಪಡಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಪೃಥ್ವಿ ಶಾ ಮುಂಬೈ ತಂಡದ ಭಾಗವಾಗಿದ್ದರು. ಆದರೆ ಅವರ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ. ಇದಕ್ಕೆ ಒಂದು ಕಾರಣ ಯುವ ಆಟಗಾರನ ಲೇಟ್ ನೈಟ್ ಮೋಜು ಮಸ್ತಿ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಬಹಿರಂಗಪಡಿಸಿದೆ.
ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿ ವೇಳೆ ಪೃಥ್ವಿ ಶಾ ನಿರಂತರವಾಗಿ ಅಭ್ಯಾಸಕ್ಕೆ ಗೈರಾಗುತ್ತಿದ್ದ. ರಾತ್ರಿಯೆಲ್ಲಾ ಪಾರ್ಟ್ ಮಾಡಿ, ಬೆಳಿಗ್ಗೆ 6 ಗಂಟೆಗೆ ಅವರು ರೂಮ್ಗೆ ಬರುತ್ತಿದ್ದ. ಅವನನ್ನು ನಾವು ಮಗು ತರ ಮುದ್ದು ಮಾಡೋಕೆ ಸಾಧ್ಯವಿಲ್ಲ. ಆತನ ಅಶಿಸ್ತೇ ಆತನ ದೊಡ್ಡ ಶತ್ರುವಾಗಿ ಪರಿಣಮಿಸಿದೆ. ಹೀಗಾಗಿಯೇ ಈ ಬಾರಿ ವಿಜಯ ಹಝಾರೆ ಟೂರ್ನಿಯಿಂದ ಪೃಥ್ವಿ ಶಾ ಅವರನ್ನು ಕೈ ಬಿಡಲು ನಿರ್ಧರಿಸಿದೆವು ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ನ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಇದರೊಂದಿಗೆ ತಂಡದಲ್ಲಿದ್ದಾಗಲೂ ಪೃಥ್ವಿ ಶಾ ನಿಯಮಗಳನ್ನು ಪಾಲಿಸದೇ ಮೋಜು ಮಸ್ತಿಯಲ್ಲಿ ತೊಡಗಿಸಿಕೊಳ್ಳುತ್ತಿರುವ ವಿಚಾರಗಳು ಬಹಿರಂಗವಾಗಿದೆ. ಈ ಅಶಿಸ್ತಿನ ಬಗ್ಗೆ ಹಲವರು ಎಚ್ಚರಿಸಿದರೂ ಯುವ ಆಟಗಾರ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿಯೇ ಇದೀಗ ದೇಶೀಯ ಟೂರ್ನಿಯಿಂದ ಪೃಥ್ವಿ ಶಾ ಅವರನ್ನು ಕೈ ಬಿಡಲಾಗಿದೆ.
ಇದನ್ನೂ ಓದಿ: ಒಂದೇ ವರ್ಷ ಟೀಮ್ ಇಂಡಿಯಾದ 11 ಆಟಗಾರರು ನಿವೃತ್ತಿ..!
ಹಾಗೆಯೇ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಕೇವಲ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಪೃಥ್ವಿ ಶಾ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಮುಂದಾಗಿರಲಿಲ್ಲ. ಇದಾಗ್ಯೂ ಯುವ ಆಟಗಾರನಿಗೆ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಚಾನ್ಸ್ ನೀಡಲಾಗಿತ್ತು. ಇದೀಗ ಆ ಟೂರ್ನಿಯ ವೇಳೆಯೂ ನಿಯಮ ಪಾಲಿಸದೇ ಮೋಜು ಮಸ್ತಿಯಲ್ಲಿ ಕಾಲ ಕಳೆದಿರುವ ಗಂಭೀರ ಆರೋಪ ಕೇಳಿ ಬಂದಿರುವುದು ಮಾತ್ರ ವಿಪರ್ಯಾಸ.