Shubman Gill: ಸ್ಟಾರ್ ನಟನ ಮಗಳ ಜೊತೆ ಶುಭ್​ಮನ್ ಗಿಲ್ ಡೇಟಿಂಗ್..?

| Updated By: ಝಾಹಿರ್ ಯೂಸುಫ್

Updated on: Aug 30, 2022 | 11:25 AM

Shubman Gill - Sara Ali Khan: ತ್ತೀಚೆಗೆ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ವಿರುದ್ದ ಅತ್ಯುತ್ತಮ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದ ಶುಭ್​ಮನ್ ಗಿಲ್, ಇದೀಗ ಲವ್ ವಿಷಯದಿಂದ ಸುದ್ದಿಯಾಗುತ್ತಿದ್ದಾರೆ. ಈ ಬಾರಿ ಕೂಡ ಸಾರಾ ಹೆಸರಿನೊಂದಿಗೆ ಎಂಬುದೇ ಇಲ್ಲಿ ವಿಶೇಷ.

Shubman Gill: ಸ್ಟಾರ್ ನಟನ ಮಗಳ ಜೊತೆ ಶುಭ್​ಮನ್ ಗಿಲ್ ಡೇಟಿಂಗ್..?
Shubman Gill - Sara Ali Khan
Follow us on

ಭಾರತದ ಯುವ ಕ್ರಿಕೆಟಿಗ ಶುಭಮನ್ ಗಿಲ್ (Shubman Gill) ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ತಮ್ಮ ಆಕರ್ಷಕ ಬ್ಯಾಟಿಂಗ್​ನಿಂದಲ್ಲ ಎಂಬುದಷ್ಟೇ ವ್ಯತ್ಯಾಸ. ಅಂದರೆ ಈ ಬಾರಿ ಗಿಲ್ ಹೊಸ ಸಂಗಾತಿಯ ವಿಷಯದಿಂದ ಲೈಮ್​ಲೈಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಗಿಲ್ ಹಾಗೂ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಪುತ್ರಿ ಸಾರಾ ತೆಂಡೂಲ್ಕರ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು.

ಆದರೀಗ ಸಾರಾ ಬದಲಾಗಿದ್ದಾರೆ. ಶುಭ್​ಮನ್ ಗಿಲ್ ಜೊತೆ ಈ ಬಾರಿ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ಬಿಟೌನ್​ನ ಖ್ಯಾತ ನಟ ಸೈಫ್ ಅಲಿ ಖಾನ್ ಅವರ ಪುತ್ರಿಯಾಗಿರುವ ಸಾರಾ ಜೊತೆ ಶುಭ್​ಮನ್​ ಗಿಲ್ ರೆಸ್ಟೋರೆಂಟ್​ನಲ್ಲಿನರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಾರಾ ಅಲಿ ಖಾನ್ ಹಾಗೂ ಶುಭ್​ಮನ್ ಗಿಲ್ ಸದ್ಯ ಲಂಡನ್​ನಲ್ಲಿದ್ದು, ಇದೇ ವೇಳೆ ಜೊತೆಯಾಗಿ ರೆಸ್ಟೋರೆಂಟ್​ನಲ್ಲಿ ಕಾಣಿಸಿಕೊಂಡಿದ್ದರು. ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದ್ದು, ಇದರೊಂದಿಗೆ ಬಾಲಿವುಡ್ ನಟಿಯ ಜೊತೆ ಗಿಲ್ ಲವ್ವಲ್ಲಿ ಬಿದ್ದಿದ್ದಾರೆಂಬ ಗುಲ್ಲೆದಿದೆ.

ವಿಶೇಷ ಎಂದರೆ 22 ವರ್ಷದ ಗಿಲ್​ಗಿಂತ ಸಾರಾ ಅಲಿ ಖಾನ್ 5 ವರ್ಷ ದೊಡ್ಡವಳು. ಹೀಗಾಗಿಯೇ 27 ವರ್ಷದ ಬಾಲಿವುಡ್​ ನಟಿಯೊಂದಿಗೆ ಟೀಮ್ ಇಂಡಿಯಾ ಯುವ ಆಟಗಾರ ಡೇಟಿಂಗ್ ಮಾಡುತ್ತಿದ್ದಾರಾ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಇತ್ತೀಚೆಗೆ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ವಿರುದ್ದ ಅತ್ಯುತ್ತಮ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದ ಶುಭ್​ಮನ್ ಗಿಲ್, ಇದೀಗ ಲವ್ ವಿಷಯದಿಂದ ಸುದ್ದಿಯಾಗುತ್ತಿದ್ದಾರೆ. ಈ ಬಾರಿ ಕೂಡ ಸಾರಾ ಹೆಸರಿನೊಂದಿಗೆ ಎಂಬುದೇ ಇಲ್ಲಿ ವಿಶೇಷ.