Naseem Shah: ಭಾರತ ವಿರುದ್ಧ ಸೋಲು: ಮೈದಾನದಿಂದ ಡಗೌಟ್ಗೆ ಕಣ್ಣೀರಿಡುತ್ತಾ ಸಾಗಿದ ಪಾಕಿಸ್ತಾನ ಆಟಗಾರ
IND vs PAK, Asia Cup 2022: ಏಷ್ಯಾಕಪ್ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಸೋಲುತ್ತಿದ್ದಂತೆ ನಸೀಂ ಶಾಗೆ ದುಃಖ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಮೈದಾನದಿಂದ ಡಗೌಟ್ಗೆ ಪ್ರವೇಶಿಸುವಾಗ ಕಣ್ಣೀರಿಡುತ್ತಲೇ ಸಾಗಿದರು.
ಭಾನುವಾರ ರಾತ್ರಿ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ನ (Asia Cup 2022) ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ಪಂದ್ಯ ಎಲ್ಲರನ್ನೂ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಕೊನೆಯ ಓವರ್ ವರೆಗೂ ನಡೆದ ಕಾದಾಟದಲ್ಲಿ ಅಂತಿಮವಾಗಿ ಟೀಮ್ ಇಂಡಿಯಾ 5 ವಿಕೆಟ್ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ಅನೇಕ ಆಟಗಾರರಿಂದ ಅದ್ಭುತ ಪ್ರದರ್ಶನ ಮೂಡಿಬಂತು. ಅದು ಕೇವಲ ಭಾರತೀಯರಿಂದ ಮಾತ್ರವಲ್ಲ, ಪಾಕಿಸ್ತಾನ ಪ್ಲೇಯರ್ಸ್ ಕೂಡ ಉತ್ತಮ ಆಟವಾಡಿದರು. ಅದರಲ್ಲೂ ಪಾಕ್ ಪರ ಪದಾರ್ಪಣೆ ಮಾಡಿದ ನಸೀಂ ಶಾ (Naseem Shah) ಎಲ್ಲರ ಮನಗೆದ್ದರು. ಚೊಚ್ಚಲ ಪಂದ್ಯದಲ್ಲೇ ಸಂಪೂರ್ಣ ನಾಲ್ಕು ಓವರ್ ಬೌಲಿಂಗ್ ಮಾಡಿ ಯಶಸ್ಸು ಕಂಡರು.
ಭಾರತ ಬ್ಯಾಟಿಂಗ್ ಇನ್ನಿಂಗ್ಸ್ನ ಮೊದಲ ಓವರ್ ಬೌಲಿಂಗ್ ಮಾಡಿದ ನಸೀಂ ಕೆಎಲ್ ರಾಹುಲ್ ಅವರನ್ನು ಡಕ್ಗೆ ಔಟ್ ಮಾಡಿ ಪರಾಕ್ರಮ ಮೆರೆದರು. ಡೆತ್ ಓವರ್ನಲ್ಲೂ ಓಡಲಾಗದೆ ಇಂಜುರಿ ಆಗಿದ್ದರೂ ಸಹ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದರು. 19 ವರ್ಷದ ಈ ಯುವ ಆಟಗಾರ ಒಟ್ಟು 4 ಓವರ್ನಲ್ಲಿ ಕೇವಲ 27 ರನ್ ನೀಡಿ 2 ಮುಖ್ಯ ವಿಕೆಟ್ ಕಿತ್ತರು.
ಆದರೆ, ಅಂತಿಮವಾಗಿ ಭಾರತ ಗೆದ್ದು ಬೀಗಿತು. ಪಾಕಿಸ್ತಾನ ಸೋಲುತ್ತಿದ್ದಂತೆ ನಸೀಂ ಶಾಗೆ ದುಃಖ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಮೈದಾನದಿಂದ ಡಗೌಟ್ಗೆ ಪ್ರವೇಶಿಸುವಾಗ ಕಣ್ಣೀರಿಡುತ್ತಲೇ ಸಾಗಿದರು. ನಂತರ ತಂಡದಲ್ಲಿದ್ದ ಇತರೆ ಸದಸ್ಯರು ಅವರನ್ನ ಸಮಾಧಾನ ಪಡಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Naseem Shah going out after his final over. pic.twitter.com/2FMfG2MjAf
— Taimoor Zaman (@taimoorze) August 29, 2022
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಆರಂಭದಲ್ಲೇ ಮುಖ್ಯ ವಿಕೆಟ್ ಕಳೆದುಕೊಂಡಿತು. ನಾಯಕ ಬಾಬರ್ ಅಜಮ್ ಹಾಗೂ ಫಖರ್ ಜಮಾನ್ 10 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ರಿಜ್ವಾನ್ ಮತ್ತು ಇಫ್ತಿಕಾರ್ ನಡುವೆ 45 ರನ್ಗಳ ಜೊತೆಯಾಟ ನಡೆಯಿತು. ಆದರೆ 28 ರನ್ ಗಳಿಸಿದ್ದ ಇಫ್ತಿಕರ್, 43 ರನ್ ಗಳಿಸಿದ್ದ ರಿಜ್ವಾನ್ ಔಟಾಗಿದ್ದು ತಂಡಕ್ಕೆ ಹಿನ್ನಡೆಯಾಯಿತು. ಅಂತಿಮವಾಗಿ ಪಾಕಿಸ್ತಾನ 19.5 ಓವರುಗಳಲ್ಲಿ 147 ರನ್ ಗಳಿಗೆ ಆಲೌಟ್ ಆಯಿತು.
ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಭಾರತ ಮೊದಲ ಓವರ್ನಲ್ಲೇ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ ಆಟ 12 ರನ್ಗೆ ಅಂತ್ಯವಾಯಿತು. ವಿರಾಟ್ ಕೊಹ್ಲಿ 35 ರನ್, ಸೂರ್ಯಕುಮಾರ್ 18 ರನ್ ಗಳಿಗೆ ಆಟ ಮುಗಿಸಿದರು. ಜಡೇಜಾ–ಹಾರ್ದಿಕ್ ಪಾಂಡ್ಯ 29 ಎಸೆತಗಳಲ್ಲಿ 52 ರನ್ ಗಳ ಜೊತೆಯಾಟ ನೀಡಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಪಾಂಡ್ಯ ಕೇವಲ 17 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಿಡಿಸಿ ಅಜೇಯ 33 ರನ್ ಬಾರಿಸಿದರೆ, ಜಡೇಜಾ 35 ರನ್ ಗಳಿಸಿದರು. ಭಾರತ 19.4 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿ 5 ವಿಕೆಟ್ಗಳ ಜಯ ಸಾಧಿಸಿತು.