IND vs PAK: ಪಾಂಡ್ಯಗೆ ಕಿಸ್ ಕೊಟ್ಟು ಭಾರತದ ಗೆಲುವನ್ನು ಸಂಭ್ರಮಿಸಿದ ಅಫ್ಘಾನಿಸ್ತಾನಿ ಯುವಕ
Asia Cup 2022: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 19.5 ಓವರ್ಗಳಲ್ಲಿ 147 ರನ್ಗಳಿಗೆ ಆಲೌಟ್ ಆಯಿತು. ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಹಾರ್ದಿಕ್ ಪಾಂಡ್ಯ ಅವರ 17 ಎಸೆತಗಳಲ್ಲಿನ 33 ರನ್ಗಳ ನೆರವಿನಿಂದ 19.4 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ 5 ವಿಕೆಟ್ಗಳ ಜಯ ಸಾಧಿಸಿತು.
Asia Cup 2022: ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯ ಬರೀ ಎರಡು ದೇಶಗಳ ಕ್ರಿಕೆಟ್ ಪ್ರೇಮಿಗಳ ಪ್ರತಿಷ್ಠೆಯಾಗಿ ಮಾತ್ರ ಉಳಿದಿಲ್ಲ. ಪಾಕಿಸ್ತಾನದ ನೆರೆರಾಷ್ಟ್ರ ಅಫ್ಘಾನಿಸ್ತಾನ್ ಕ್ರಿಕೆಟ್ ಪ್ರೇಮಿಗಳಿಗೂ ಭಾರತ-ಪಾಕ್ ಮುಖಾಮುಖಿ ಮಹತ್ವದ ಪಂದ್ಯವಾಗಿ ಮಾರ್ಪಟ್ಟಿದೆ. ಇದೇ ಕಾರಣದಿಂದಾಗಿ ಅಫ್ಘಾನ್ ಕ್ರಿಕೆಟ್ ಪ್ರೇಮಿಗಳು ಬದ್ಧವೈರಿಗಳ ಕದನದ ವೇಳೆ ಟೀಮ್ ಇಂಡಿಯಾಗೆ ಬೆಂಬಲ ಸೂಚಿಸುತ್ತಾರೆ.
ಇದಕ್ಕೆ ಒಂದು ಕಾರಣ ಅಫ್ಘಾನಿಸ್ತಾನದಲ್ಲಿನ ಉಗ್ರ ಚಟುವಟಿಕೆಗಳಿಗೆ ಪಾಕ್ ಪರೋಕ್ಷ ಬೆಂಬಲ ನೀಡುತ್ತಿರುವುದು. ಅಘ್ಘಾನ್ನಲ್ಲಿ ಪಾಕ್ ಪ್ರೇರಿತ ದಬ್ಬಾಳಿಕೆಯನ್ನು ಸಹಿಸದ ಹೊಸ ತಲೆಮಾರಿನ ಯುವಕರು ಭಾರತದ ಮೇಲೆ ವಿಶೇಷ ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ಅದರಲ್ಲೂ ಅಫ್ಘಾನಿಸ್ತಾನಕ್ಕೆ ಭಾರತವು ಸದಾ ಬೆಂಬಲವಾಗಿ ನಿಂತಿದೆ. ಇದೇ ಕಾರಣದಿಂದಾಗಿ ಪಾಕ್-ಭಾರತ ನಡುವಣ ಪಂದ್ಯದ ವೇಳೆ ಬಹುತೇಕ ಅಘ್ಘಾನ್ನರು ಟೀಮ್ ಇಂಡಿಯಾಗೆ ಬೆಂಬಲ ಸೂಚಿಸುತ್ತಾರೆ.
ಇದೀಗ ಇದಕ್ಕೆ ತಾಜಾ ಉದಾಹರಣೆಯಾಗಿ ಅಫ್ಘಾನಿಸ್ತಾನ್ ಕ್ರಿಕೆಟ್ ಪ್ರೇಮಿಯೊಬ್ಬರ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಟೀಮ್ ಇಂಡಿಯಾ ಗೆಲ್ಲುತ್ತಿದ್ದಂತೆ ಅಫ್ಘಾನಿಸ್ತಾನದ ಯುವಕನೊಬ್ಬ ಟಿವಿ ಸ್ಕ್ರೀನ್ ಮೇಲೆ ಹಾರ್ದಿಕ್ ಪಾಂಡ್ಯಗೆ ಮುತ್ತಿಕ್ಕಿರುವುದನ್ನು ಕಾಣಬಹುದು. ಅಲ್ಲದೆ ಟೀಮ್ ಇಂಡಿಯಾ ಗೆಲುವಿಗೆ ಉಳಿದವರು ಚಪ್ಪಾಳೆ ತಟ್ಟುತ್ತಿರುವುದು ಕೂಡ ಕೇಳಬಹುದು.
ಟೀಮ್ ಇಂಡಿಯಾ ಗೆಲುವನ್ನು ಸಂಭ್ರಮಿಸುತ್ತಿರುವ ಅಫ್ಘಾನಿಸ್ತಾನದ ಯುವಕನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದು ಕೂಡ ನಮ್ಮ ಸಹೋದರರಿಗೆ ಗೆಲುವಿನ ಅಭಿನಂದನೆಗಳು. ಭಾರತದ ಈ ಗೆಲುವನ್ನು ಅಫ್ಘಾನಿಸ್ತಾನಿಯರು ಕೂಡ ಸಂಭ್ರಮಿಸುತ್ತಿದ್ದೇವೆ ಎಂದು ಕ್ಯಾಪ್ಶನ್ ನೀಡುವ ಮೂಲಕ ಎಂಬುದು ವಿಶೇಷ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 19.5 ಓವರ್ಗಳಲ್ಲಿ 147 ರನ್ಗಳಿಗೆ ಆಲೌಟ್ ಆಯಿತು. ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಹಾರ್ದಿಕ್ ಪಾಂಡ್ಯ ಅವರ 17 ಎಸೆತಗಳಲ್ಲಿನ 33 ರನ್ಗಳ ನೆರವಿನಿಂದ 19.4 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ 5 ವಿಕೆಟ್ಗಳ ಜಯ ಸಾಧಿಸಿತು.