Virat Kohli: ವಿರಾಟ್ ಕೊಹ್ಲಿಯನ್ನು ಭೇಟಿಯಾದ ಈ ಪಾಕಿಸ್ತಾನಿ ಯಾರು ಗೊತ್ತೇ?
India vs Pakistan: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 19.5 ಓವರ್ಗಳಲ್ಲಿ 147 ರನ್ಗಳಿಗೆ ಆಲೌಟ್ ಆಯಿತು. ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಹಾರ್ದಿಕ್ ಪಾಂಡ್ಯ ಅವರ 17 ಎಸೆತಗಳಲ್ಲಿನ 33 ರನ್ಗಳ ನೆರವಿನಿಂದ 19.4 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ 5 ವಿಕೆಟ್ಗಳ ಜಯ ಸಾಧಿಸಿತು.
ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿಯುವ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ನಲ್ಲಿ ಶುಭಾರಂಭ ಮಾಡಿದೆ. ರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಂತಿಮ ಓವರ್ನಲ್ಲಿ ಜಯ ಸಾಧಿಸಿತ್ತು. ಈ ಗೆಲುವಿನ ಬಳಿಕ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನ್ ಕ್ರಿಕೆಟ್ ತಂಡದ ಅಭಿಮಾನಿಯೊಬ್ಬರು ಭೇಟಿಯಾಗಿದ್ದರು. ಈ ಅಭಿಮಾನಿಯ ಜೊತೆ ವಿರಾಟ್ ಕೊಹ್ಲಿ ಕೂಡ ತುಂಬಾ ಆತ್ಮೀಯತೆಯಿಂದ ನಡೆದುಕೊಂಡಿರುವುದು ವಿಶೇಷ.
ಅಷ್ಟಕ್ಕೂ ಆ ಅಭಿಮಾನಿ ಯಾರು ಎಂದು ನೋಡುವುದಾದರೆ, 2019 ರ ಏಕದಿನ ವಿಶ್ವಕಪ್ನತ್ತ ಒಮ್ಮೆ ಕಣ್ಣಾಡಿಸಬೇಕಾಗುತ್ತದೆ. ಟೀಮ್ ಇಂಡಿಯಾ ವಿರುದ್ದ ಅಂದು ಪಾಕಿಸ್ತಾನ್ ತಂಡ ಸೋತಾಗ ಇದೇ ಅಭಿಮಾನಿ ಮುಜೇ ಮಾರೋ ಮುಜೇ ಮಾರೋ…ಎಂದೇಳುತ್ತಾ ಮಾಧ್ಯಮದ ಮುಂದೆ ಕಣ್ಣೀರಿಟಿದ್ದ. ಅಂದಿನಿಂದ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದ ಮೋಮಿನ್ ಸಾಕಿಬ್ ಈ ಬಾರಿ ಸೋಲಿನ ನಡುವೆ ವಿರಾಟ್ ಕೊಹ್ಲಿಯನ್ನು ಭೇಟಿಯಾಗುವ ಅವಕಾಶ ಪಡೆದರು.
ಪಾಕ್ ವಿರುದ್ಧ ಗೆದ್ದ ಖುಷಿಯಲ್ಲಿದ್ದ ಕೊಹ್ಲಿಯನ್ನು ಮೈದಾನದ ಬಳಿ ಭೇಟಿಯಾದ ಸಾಕಿಬ್, ಫಾರ್ಮ್ಗೆ ಮರಳಿರುವುದಕ್ಕೆ ಹಾಗೂ ಟೀಮ್ ಇಂಡಿಯಾ ಗೆದ್ದಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಇದೇ ಪಾಕ್ ತಂಡವು ಸೋತಿರುವುದಕ್ಕೆ ತುಸು ಬೇಸರವಾಗಿದೆ. ಇದಾಗ್ಯೂ ಭಾರತ-ಪಾಕಿಸ್ತಾನ್ ಫೈನಲ್ನಲ್ಲಿ ಮುಖಾಮುಖಿಯಾಗುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
A great sportsman and a humble personality. The one and only @imVkohli ?? Good to see him back in form!
What a game tonight! ?
Shall see you in the Final! ?#AsiaCup2022 #MominSaqib #ViratKohli #Kohli #INDvsPAK2022 #PakvInd #Dubai #UAE @DubaiStadium @ICCAcademy pic.twitter.com/gx8dDalHdv
— Momin Saqib (@mominsaqib) August 28, 2022
ಈ ವಿಡಿಯೋವನ್ನು ಸಾಕಿಬ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಶ್ರೇಷ್ಠ ಕ್ರೀಡಾಪಟು ಮತ್ತು ವಿನಮ್ರ ವ್ಯಕ್ತಿತ್ವ. ನಿಮ್ಮನ್ನು ಮತ್ತೆ ಫಾರ್ಮ್ನಲ್ಲಿ ನೋಡಲು ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿಯನ್ನು ಭೇಟಿಯಾಗಿರುವ ಖುಷಿಯನ್ನು ಮೊಮಿನ್ ಸಾಕಿಬ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 19.5 ಓವರ್ಗಳಲ್ಲಿ 147 ರನ್ಗಳಿಗೆ ಆಲೌಟ್ ಆಯಿತು. ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಹಾರ್ದಿಕ್ ಪಾಂಡ್ಯ ಅವರ 17 ಎಸೆತಗಳಲ್ಲಿನ 33 ರನ್ಗಳ ನೆರವಿನಿಂದ 19.4 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ 5 ವಿಕೆಟ್ಗಳ ಜಯ ಸಾಧಿಸಿತು.