Hardik Pandya: ತಲೆ ಕೆಡಿಸ್ಕೋಬೇಡ..ಹೊಡ್ದೆ ಹೊಡ್ತೀನಿ…ಇದು ಕುಂಗ್ಫು ಪಾಂಡ್ಯ ಆತ್ಮವಿಶ್ವಾಸ..!
Asia Cup 2022: ಈ ಪಂದ್ಯದಲ್ಲಿ 3 ವಿಕೆಟ್ ಹಾಗೂ ಅಜೇಯ 33 ರನ್ ಬಾರಿಸುವ ಮೂಲಕ ಆಲ್ರೌಂಡರ್ ಪ್ರದರ್ಶನ ನೀಡಿದ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಕೂಡ ತಮ್ಮದಾಗಿಸಿಕೊಂಡಿರುವುದು ವಿಶೇಷ.
Asia Cup 2022: ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಭಾರತ-ಪಾಕಿಸ್ತಾನ್ (India vs Pakistan) ನಡುವಣ ರೋಚಕ ಹಣಾಹಣಿಯಲ್ಲಿ ಟೀಮ್ ಇಂಡಿಯಾ (Team India) ಕೊನೆಯ ಓವರ್ನಲ್ಲಿ ಜಯ ಸಾಧಿಸಿತ್ತು. ಅದರಲ್ಲೂ ಪ್ರೇಕ್ಷಕರನ್ನು ತುದಿಗಾಲಲ್ಲಿ ತಂದು ಕೂರಿಸಿದ್ದ ಈ ಪಂದ್ಯದಲ್ಲಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾಗೆ ರೋಚಕ ಜಯ ತಂದುಕೊಟ್ಟಿದ್ದರು. ಈ ವೇಳೆ ಹಾರ್ದಿಕ್ ಪಾಂಡ್ಯ ತೋರಿದ ಆತ್ಮ ವಿಶ್ವಾಸ ಹೇಗಿತ್ತು ಎಂಬುದರ ವಿಡಿಯೋ ಝಲಕ್ ಇದೀಗ ವೈರಲ್ ಆಗಿದೆ.
ಕೊನೆಯ ಓವರ್ನಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 7 ರನ್ಗಳ ಅವಶ್ಯಕತೆಯಿತ್ತು. ನವಾಜ್ ಎಸೆದ ಅಂತಿಮ ಓವರ್ನ ಮೊದಲ ಎಸೆತದಲ್ಲೇ ರವೀಂದ್ರ ಜಡೇಜಾ ಕ್ಲೀನ್ ಬೌಲ್ಡ್ ಆದರು. 2ನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ 1 ರನ್ ತೆಗೆದರು. ಆದರೆ ಹಾರ್ದಿಕ್ ಪಾಂಡ್ಯ ಮುಂದೆ ಸ್ಪಿನ್ ಮೋಡಿ ಮಾಡಿದ ನವಾಜ್ 3ನೇ ಎಸೆತದಲ್ಲಿ ಯಾವುದೇ ರನ್ ನೀಡಿಲ್ಲ. ಈ ವೇಳೆ ಟೀಮ್ ಇಂಡಿಯಾಗೆ 3 ಎಸೆತಗಳಲ್ಲಿ 6 ರನ್ಗಳ ಅವಶ್ಯಕತೆಯಿತ್ತು.
ಇತ್ತ ನಾನ್ ಸ್ಟ್ರೈಕ್ನಲ್ಲಿದ್ದ ದಿನೇಶ್ ಕಾರ್ತಿಕ್ ಪಾಂಡ್ಯಗೆ ಸಲಹೆ ನೀಡುತ್ತಿದ್ದಂತೆ, ಪಾಂಡ್ಯ ತಲೆ ಕೆಡಿಸ್ಕೋಬೇಡ..ಹೊಡ್ದೆ ಹೊಡ್ತೀನಿ ಎಂಬ ಮುಖಭಾವ ತೋರಿಸಿದ್ದರು. ಮರು ಎಸೆತದಲ್ಲೇ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಕುಂಗ್ಫು ಪಾಂಡ್ಯ ತಾನೆಂತಹ ಫಿನಿಶರ್ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದರು.
ಇನ್ನು ಈ ಬಗ್ಗೆ ಪಂದ್ಯ ಮುಗಿದ ಬಳಿಕ ಮಾತನಾಡಿದ ಹಾರ್ದಿಕ್ ಪಾಂಡ್ಯ, 20ನೇ ಓವರ್ ಬೌಲಿಂಗ್ ಮಾಡುವಾಗ ಬೌಲರ್ ಮೇಲೆ ಒತ್ತಡ ಇರುತ್ತದೆ. ಹಾಗಾಗಿ ನನ್ನ ಗರ್ವಕ್ಕಿಂತ ನನ್ನಲ್ಲಿದದ್ದು ಪಂದ್ಯ ಮುಗಿಸುವ ಆತ್ಮ ವಿಶ್ವಾಸ ಎಂದು ತಿಳಿಸಿದ್ದಾರೆ.
The pressure of a last over chase in an ?? vs ?? match.
A crisp shot played straight to the fielder resulting in a dot ball.
6 to win from 3 deliveries
A simple yet positive nod to his partner, @DineshKarthik.
The pure magic of @hardikpandya7 for us. ❤️pic.twitter.com/Wnn9c7UN6l
— North Stand Gang – Wankhede (@NorthStandGang) August 29, 2022
ಇದೀಗ ಒತ್ತಡದ ನಡುವೆಯೂ ನಿರಾಳವಾಗಿ ತನ್ನ ಆತ್ಮ ವಿಶ್ವಾಸವನ್ನು ಪ್ರದರ್ಶಿಸಿರುವ ಹಾರ್ದಿಕ್ ಪಾಂಡ್ಯರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಈ ಪಂದ್ಯದಲ್ಲಿ 3 ವಿಕೆಟ್ ಹಾಗೂ ಅಜೇಯ 33 ರನ್ ಬಾರಿಸುವ ಮೂಲಕ ಆಲ್ರೌಂಡರ್ ಪ್ರದರ್ಶನ ನೀಡಿದ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಕೂಡ ತಮ್ಮದಾಗಿಸಿಕೊಂಡಿರುವುದು ವಿಶೇಷ.