IND vs HK: ನಾಳೆ ಭಾರತ- ಹಾಂಗ್ ಕಾಂಗ್ ಪಂದ್ಯ: ಕೊನೆಯ ಬಾರಿ ಮುಖಾಮುಖಿ ಆಗಿದ್ದು ಯಾವಾಗ?

Asia Cup 2022: ಮೊದಲ ಪಂದ್ಯದ ಗೆಲುವಿನ ಆತ್ಮವಿಶ್ವಾಸದಲ್ಲಿರುವ ಟೀಮ್ ಇಂಡಿಯಾ ಇದೀಗ ದ್ವಿತೀಯ ಕದನಕ್ಕೆ ಸಜ್ಜಾಗುತ್ತಿದೆ. ನಾಳೆ (ಆ. 31) ಭಾರತ ಹಾಗೂ ಹಾಂಗ್ ಕಾಂಗ್ (India vs Hong Kong) ನಡುವೆ ಏಷ್ಯಾಕಪ್​ನ ನಾಲ್ಕನೇ ಪಂದ್ಯ ನಡೆಯಲಿದೆ.

IND vs HK: ನಾಳೆ ಭಾರತ- ಹಾಂಗ್ ಕಾಂಗ್ ಪಂದ್ಯ: ಕೊನೆಯ ಬಾರಿ ಮುಖಾಮುಖಿ ಆಗಿದ್ದು ಯಾವಾಗ?
India vs Hong Kong
Follow us
| Updated By: Vinay Bhat

Updated on:Aug 30, 2022 | 10:36 AM

ಏಷ್ಯಾಕಪ್ 2022 ರಲ್ಲಿ (Asia Cup 2022) ಭಾರತ ಕ್ರಿಕೆಟ್ ತಂಡ ಭರ್ಜರಿ ಶುಭಾರಂಭ ಮಾಡಿದೆ. ಬದ್ದವೈರಿ ಪಾಕಿಸ್ತಾನ ವಿರುದ್ಧ 5 ವಿಕೆಟ್​ಗಳ ಅಮೋಘ ಗೆಲುವು ಕಂಡ ಟೀಮ್ ಇಂಡಿಯಾ (Team India) ಪರ ಹಾರ್ದಿಕ್ ಪಾಂಡ್ಯ ಮಿಂಚಿದರು. ಬೌಲಿಂಗ್​ನಲ್ಲಿ ಪಾಂಡ್ಯ 3 ವಿಕೆಟ್ ಕಿತ್ತರೆ, ಬ್ಯಾಟಿಂಗ್​ನಲ್ಲಿ ಕೇವಲ 17 ಎಸೆತಗಳಲ್ಲಿ ಅಜೇಯ 33 ರನ್ ಸಿಡಿಸಿದರು. ಅದರಲ್ಲೂ ಕೊನೆಯ ಓವರ್​ನಲ್ಲಿ ಒತ್ತಡದ ನಡುವೆಯೂ ಸಿಕ್ಸ್ ಸಿಡಿಸಿ ಗೆಲುವು ತಂದುಕೊಟ್ಟರು. ಮೊದಲ ಪಂದ್ಯದ ಗೆಲುವಿನ ಆತ್ಮವಿಶ್ವಾಸದಲ್ಲಿರುವ ಟೀಮ್ ಇಂಡಿಯಾ ಇದೀಗ ದ್ವಿತೀಯ ಕದನಕ್ಕೆ ಸಜ್ಜಾಗುತ್ತಿದೆ. ನಾಳೆ (. 31) ಭಾರತ ಹಾಗೂ ಹಾಂಗ್ ಕಾಂಗ್ (India vs Hong Kong) ನಡುವೆ ಏಷ್ಯಾಕಪ್​ನ ನಾಲ್ಕನೇ ಪಂದ್ಯ ನಡೆಯಲಿದೆ.

ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ರೋಹಿತ್ ಪಡೆ ಹಾಂಗ್ ಕಾಂಗ್ ಅನ್ನು ಎದುರಿಸುತ್ತಿದ್ದು ಇಲ್ಲಿ ಗೆದ್ದರೆ ಸೂಪರ್ 4 ಹಂತಕ್ಕೇರಲಿದೆ. ಅರ್ಹತಾ ಸುತ್ತಿನ ಪಂದ್ಯದಲ್ಲಿ ಯುಎಇ ಅನ್ನು ಸೋಲಿಸಿ  ಏಷ್ಯಾಕಪ್​ಗೆ ಲಗ್ಗೆಯಿಟ್ಟಿರುವ ಹಾಂಗ್ ಕಾಂಗ್ ಅನ್ನು ಕಡೆಗಣಿಸುವಂತಿಲ್ಲ. ವಿಶೇಷ ಎಂದರೆ ಹಾಂಗ್ ಕಾಂಗ್ ಏಷ್ಯಾಕಪ್‌ಗೆ ಆಯ್ಕೆ ಮಾಡಿರುವ 17 ಸದಸ್ಯರ ತಂಡದಲ್ಲಿ, ಒಬ್ಬ ಆಟಗಾರನೂ ಹಾಂಗ್ ಕಾಂಗ್​ನವರಲ್ಲ. ಈ ತಂಡದಲ್ಲಿ ಭಾರತ, ಪಾಕಿಸ್ತಾನ, ಬ್ರಿಟಿಷ್ ಮೂಲದ ಕ್ರಿಕೆಟಿಗರಿದ್ದಾರೆ.

ಭಾರತ ಹಾಗೂ ಹಾಂಗ್ ಕಾಂಗ್ ನಡುವೆ ಈವರೆಗೆ ಎರಡು ಅಂತರರಾಷ್ಟ್ರೀಯ ಪಂದ್ಯಗಳು ನಡೆದಿವೆಯಷ್ಟೆ. ಎರಡೂ ಪಂದ್ಯ ಏಷ್ಯಾಕಪ್​ನಲ್ಲೇ ಆಗಿದ್ದು, ಇದು 2008 ಮತ್ತು 2018ರ ಆವೃತ್ತಿಯಲ್ಲಾಗಿದೆ. ಈ ಎರಡೂ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ಆದರೆ, ಇದೇ ಮೊದಲ ಬಾರಿ ಟಿ20 ಮಾದರಿಯ ಕ್ರಿಕೆಟ್​ನಲ್ಲಿ ಮುಖಾಮುಖಿ ಆಗುತ್ತಿದೆ.

ಇದನ್ನೂ ಓದಿ
Image
IND vs PAK: ಭಾರತ- ಪಾಕಿಸ್ತಾನ ನಡುವಣ ಪಂದ್ಯದ ಕೆಲ ರೋಚಕ ಕ್ಷಣಗಳು ಇಲ್ಲಿದೆ ನೋಡಿ
Image
BAN vs AFG: ಏಷ್ಯಾಕಪ್​ನಲ್ಲಿಂದು ಬಾಂಗ್ಲಾದೇಶ- ಅಫ್ಘಾನಿಸ್ತಾನ ಮುಖಾಮುಖಿ: ಅಫ್ಘಾನ್ ಗೆದ್ದರೆ ಸೂಪರ್ 4ಗೆ ಲಗ್ಗೆ
Image
IND vs PAK: ಪಾಂಡ್ಯಗೆ ಕಿಸ್​ ಕೊಟ್ಟು ಭಾರತದ ಗೆಲುವನ್ನು ಸಂಭ್ರಮಿಸಿದ ಅಫ್ಘಾನಿಸ್ತಾನಿ ಯುವಕ
Image
ಕ್ರಿಕೆಟ್​ಗೆ ವಿದಾಯ ಹೇಳಿದ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಟೀಮ್ ಇಂಡಿಯಾ ಆಟಗಾರ..!

2018 ರಲ್ಲಿ ನಡೆದ ಏಷ್ಯಾಕಪ್​ನ ನಾಲ್ಕನೇ ಪಂದ್ಯದಲ್ಲಿ ಹಾಂಗ್ ಕಾಂಗ್ ತಂಡ ಭಾರತಕ್ಕೆ ಕಠಿಣ ಪೈಪೋಟಿ ನೀಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 50 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 285 ರನ್ ಕಲೆಹಾಕಿತು. ಶಿಖರ್ ಧವನ್ 120 ಎಸೆತಗಳಲ್ಲಿ 127 ರನ್ ಸಿಡಿಸಿದ್ದರು. ಅಂಬಟಿ ರಾಯುಡು 60 ಹಾಗೂ ದಿನೇಶ್ ಕಾರ್ತಿಕ್ 33 ರನ್ ಗಳಿಸಿದರು. ಟಾರ್ಗೆಟ್ ಬೆನ್ನಟ್ಟಿದ ಹಾಂಗ್ ಕಾಂಗ್ ಗೆಲುವಿಗೆ ಹೋರಾಟ ನಡೆಸಿ ಕೊನೆಗೆ 50 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 259 ರನ್ ಗಳಿಸಿ ಸೋಲು ಕಂಡಿತು.

ಇನ್ನು 2008 ರಲ್ಲಿ ನಡೆದ ಏಷ್ಯಾಕಪ್​ನ 4ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 374 ರನ್ ಕಲೆಹಾಕಿತ್ತು. ತಂಡದ ಪರ ಎಂಎಸ್ ಧೋನಿ ಅಜೇಯ 109 ಹಾಗೂ ಸುರೇಶ್ ರೈನಾ 101 ರನ್ ಗಳಿಸಿದ್ದರು. ಜೊತೆಗೆ ವಿರೇಂದ್ರ ಸೆಹ್ವಾಗ್ 78 ಹಾಗೂ ಗೌತಮ್ ಗಂಭೀರ್ 51 ರನ್​ಗಳ ಕೊಡುಗೆ ನೀಡಿದ್ದರು. ಹಾಂಗ್ ಕಾಂಗ್ ತಂಡಕ್ಕೆ ಭಾರತದ ಟಾರ್ಗೆಟ್ ಹತ್ತಿರ ಕೂಡ ಸುಳಿಯಲು ಸಾಧ್ಯವಾಗಲಿಲ್ಲ. ಕೇವಲ 118 ರನ್​ಗೆ ಆಲೌಟ್ ಆಯಿತು. ಭಾರತ ಪರ ಪಿಯೂಶ್ ಚಾವ್ಲಾ 4 ವಿಕೆಟ್ ಕಿತ್ತು ಮಿಂಚಿದ್ದರು.

Published On - 10:36 am, Tue, 30 August 22