ಅಪ್ಪ ಯಾವತ್ತಿದ್ದರೂ ಅಪ್ಪನೇ…ಪಾಕ್ ವಿರುದ್ದದ ಪಂದ್ಯದ ಬಳಿಕ ಮತ್ತೆ ವೈರಲ್ ಆದ ಹಳೆಯ ಡೈಲಾಗ್
Asia Cup 2022: ಇಂತಹದೊಂದು ಕ್ಯಾಚಿ ಡೈಲಾಗ್ ನೀಡಿದ್ದು ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಎಂಬುದು ವಿಶೇಷ. ಪಾಕ್ ವಿರುದ್ದದ ಪಂದ್ಯದ ವೇಳೆ ಶೊಯೇಬ್ ಅಖ್ತರ್ ಸ್ಟ್ರೈಕ್ನಲ್ಲಿದ್ದ ಸೆಹ್ವಾಗ್ ಅವರನ್ನು ಕೆಣಕ್ಕಿದ್ದರು.
Asia Cup 2022: ಏಷ್ಯಾಕಪ್ನ 2ನೇ ಪಂದ್ಯದಲ್ಲಿ ಬದ್ಧ ವೈರಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿಯುವ ಮೂಲಕ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ದುಬೈ ಇಂಟರ್ನ್ಯಾಷನಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕ್ ತಂಡವು 147 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 2 ಬಾಲ್ಗಳು ಬಾಕಿಯಿರುವಂತೆಯೇ ಗೆದ್ದು ಬೀಗಿತು. ಈ ರೋಚಕ ಗೆಲುವಿನ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಬಾಪ್ ಬಾಪ್ ಹೋತಾ ಹೈ (ಅಪ್ಪ ಯಾವತ್ತಿದ್ದರೂ ಅಪ್ಪನೇ) ಹ್ಯಾಶ್ಟ್ಯಾಗ್ ಟ್ರೆಂಡ್ ಆಗಿರುವುದು ವಿಶೇಷ.
ಅಂದರೆ 1947ರಲ್ಲಿ ಅಖಂಡ ಭಾರತದಿಂದ ಬೇರ್ಪಟ್ಟ ಪಾಕಿಸ್ತಾನವನ್ನು ಭಾರತದ ಕೂಸು ಎಂದು ಪರಿಗಣಿಸಲಾಗುತ್ತದೆ. ಇದೇ ಕಾರಣದಿಂದಾಗಿ ಪ್ರತಿ ಬಾರಿಯೂ ಪಾಕ್ ವಿರುದ್ದ ಭಾರತ ಮೇಲುಗೈ ಸಾಧಿಸಿದಾಗೆಲ್ಲಾ ಬಾಪ್ ಬಾಪ್ ಹೋತಾ ಹೈ ಎಂಬ ಡೈಲಾಗ್ ಕೇಳಿ ಬರುತ್ತದೆ. ಈ ಬಾರಿ ಪಾಕ್ ವಿರುದ್ದ ಟೀಮ್ ಇಂಡಿಯಾ ಗೆಲ್ಲುತ್ತಿದ್ದಂತೆ ಮತ್ತೊಮ್ಮೆ ‘Baap Baap Hota Hai’ ಹ್ಯಾಶ್ ಟ್ಯಾಗ್ಗಳು ಸೋಷಿಯಲ್ ಮೀಡಿಯಾದಲ್ಲಿ ರಾರಾಜಿಸಿದೆ.
ಭಾರತವು ಗೆಲುವನ್ನು ಸಂಭ್ರಮಿಸುತ್ತಿರುವ ಅನೇಕ ವಿಡಿಯೋಗಳನ್ನು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋಗೆ ಬಾಪ್ ಬಾಪ್ ಹೋತಾ ಹೈ, ಬೇಟ ಬೇಟಾ ಹೋತಾ ಹೈ..ಎಂಬ ಶೀರ್ಷಿಕೆಗಳನ್ನು ಬರೆಯಲಾಗಿದೆ. ಅಂದರೆ ಅಪ್ಪ ಯಾವತ್ತಿದ್ದರೂ ಅಪ್ಪನೇ…ಕೂಸು ಯಾವತ್ತಿದ್ದರೂ ಕೂಸುವೇ ಎಂಬಾರ್ಥದಲ್ಲಿ ಪಾಕಿಸ್ತಾನವನ್ನು ಟ್ರೋಲ್ ಮಾಡಲಾಗುತ್ತಿದೆ.
Baap baap hota hai Indian player’s right now:??#INDvsPAK#ViratKohli? pic.twitter.com/S13uSUJQDP
— Anuj Saharan (@saharan_anuj_) August 28, 2022
ಅಂದಹಾಗೆ ಇಂತಹದೊಂದು ಕ್ಯಾಚಿ ಡೈಲಾಗ್ ನೀಡಿದ್ದು ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಎಂಬುದು ವಿಶೇಷ. ಪಾಕ್ ವಿರುದ್ದದ ಪಂದ್ಯದ ವೇಳೆ ಶೊಯೇಬ್ ಅಖ್ತರ್ ಸ್ಟ್ರೈಕ್ನಲ್ಲಿದ್ದ ಸೆಹ್ವಾಗ್ ಅವರನ್ನು ಕೆಣಕ್ಕಿದ್ದರು. ಅಲ್ಲದೆ ಈ ವೇಳೆ ಸೆಹ್ವಾಗ್ 200 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಹೀಗಾಗಿಯೇ ನಿರಾಸೆಗೊಂಡಿದ್ದ ಅಖ್ತರ್ ಬೌನ್ಸರ್ ಎಸೆದು, ಹುಕ್ ಶಾಟ್ ಹೊಡೆದು ತೋರಿಸುವಂತೆ ಸವಾಲು ಹಾಕುತ್ತಿದ್ದರು.
#ViratKohli? Video of Jammu & Kashmir after India won #INDvsPAK #ViratKohli? #PKMKBForever #AsiaCup2022 Baap Baap Hota Hai Beta Beta Hota Hai ❤️❤️ India Forever for giving these precious proud moment ?? pic.twitter.com/Mf28bXjgbE
— Subhash Suman (@Subha7Suman) August 28, 2022
ಇದೇ ವೇಳೆ ನಾನ್ ಸ್ಟ್ರೈಕ್ನಲ್ಲಿದ್ದ ಸಚಿನ್ ಅವರನ್ನು ತೋರಿಸಿ ಅಲ್ಲಿ ನಿನ್ನ ಅಪ್ಪ ನಿಂತಿದ್ದಾರೆ. ಇದನ್ನು ಅವರಿಗೆ ಹೇಳು ನೋಡೋಣ ಎಂದು ಸೆಹ್ವಾಗ್ ಮರುತ್ತರ ನೀಡಿದ್ದರು. ಮುಂದಿನ ಓವರ್ನಲ್ಲಿ ಅಖ್ತರ್ ಸಚಿನ್ ತೆಂಡೂಲ್ಕರ್ಗೆ ಬೌನ್ಸರ್ ಎಸೆದರು. ಸಚಿನ್ ನಿರಾಯಾಸವಾಗಿ ಭರ್ಜರಿ ಸಿಕ್ಸ್ ಸಿಡಿಸಿದರು. ಈ ವೇಳೆ ನಾನು ಅಖ್ತರ್ಗೆ…ಬೇಟ ಬೇಟ ಹೋತಾ ಹೈ..ಬಾಪ್ ಬಾಪ್ ಹೋತಾ ಹೈ ಎಂದಿದ್ದೆ ಎಂದು ಸೆಹ್ವಾಗ್ ಈ ಹಿಂದೊಮ್ಮೆ ತಿಳಿಸಿದ್ದರು. ಇದೀಗ ಇದೇ ಬಾಪ್ ಡೈಲಾಗ್ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ತರಂಗ ಸೃಷ್ಟಿಸಿದೆ.