BAN vs AFG: ಏಷ್ಯಾಕಪ್​ನಲ್ಲಿಂದು ಬಾಂಗ್ಲಾದೇಶ- ಅಫ್ಘಾನಿಸ್ತಾನ ಮುಖಾಮುಖಿ: ಅಫ್ಘಾನ್ ಗೆದ್ದರೆ ಸೂಪರ್ 4ಗೆ ಲಗ್ಗೆ

Asia Cup 2022: ಅಫ್ಘಾನಿಸ್ತಾನ ತಂಡ ಬ್ಯಾಟಿಂಗ್ - ಬೌಲಿಂಗ್​ನಲ್ಲಿ ಭರ್ಜರಿ ಫಾರ್ಮ್​ನಲ್ಲಿದೆ. ಕಳೆದ ಪಂದ್ಯದಲ್ಲಿ ಹಜರತುಲ್ಲಾ ಝಜೈ ಹಾಗೂ ರಹಮಾನುಲ್ಲಾ ಗುರ್ಬಾಜ್ ಸ್ಫೋಟಕ ಬ್ಯಾಟಿಂಗ್ ನಡೆಸಿ 10 ಓವರ್​ಗಳಲ್ಲೇ ಪಂದ್ಯ ಮುಗಿಸಿದ್ದರು.

BAN vs AFG: ಏಷ್ಯಾಕಪ್​ನಲ್ಲಿಂದು ಬಾಂಗ್ಲಾದೇಶ- ಅಫ್ಘಾನಿಸ್ತಾನ ಮುಖಾಮುಖಿ: ಅಫ್ಘಾನ್ ಗೆದ್ದರೆ ಸೂಪರ್ 4ಗೆ ಲಗ್ಗೆ
BAN vs AFG
Follow us
TV9 Web
| Updated By: Vinay Bhat

Updated on:Aug 30, 2022 | 8:05 AM

ಏಷ್ಯಾಕಪ್ 2022 ರಲ್ಲಿಂದು (Asia Cup 2022) ಶಕಿಬ್ ಅಲ್ ಹಸನ್ ನಾಯಕತ್ವದ ಬಾಂಗ್ಲಾದೇಶ ಮತ್ತು ಮೊಹಮ್ಮದ್ ನಬಿ ನೇತೃತ್ವದ ಅಫ್ಘಾನಿಸ್ತಾನ ತಂಡ (Bangladesh vs Afghanistan) ಸೆಣೆಸಾಟ ನಡೆಸಲಿದೆ. ಅಫ್ಘಾನ್​ಗೆ ಇದು ದ್ವಿತೀಯ ಪಂದ್ಯ. ಇದಕ್ಕೂ ಮುನ್ನ ನಡೆದ ಉದ್ಘಾಟನಾ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಶ್ರೀಲಂಕಾವನ್ನು ಬಗ್ಗುಬಡಿದು 8 ವಿಕೆಟ್​ಗಳ ಅಮೋಘ ಗೆಲುವು ಕಂಡಿತ್ತು. ಹೀಗಾಗಿ ಇಂದಿನ ಪಂದ್ಯಕೂಡ ಗೆದ್ದರೆ ಸೂಪರ್ 4 ಹಂತಕ್ಕೆ ಲಗ್ಗೆಯಿಡಲಿದೆ. ಇತ್ತ ಶಕಿಬ್ (Shakib Al Hasan) ಪಡೆ ಶುಭಾರಂಭ ಮಾಡಲು ಎದುರು ನೋಡುತ್ತಿದೆ. ಶಾರ್ಜಾದ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.

ಅಫ್ಘಾನಿಸ್ತಾನ ತಂಡ ಬ್ಯಾಟಿಂಗ್ ಬೌಲಿಂಗ್​ನಲ್ಲಿ ಭರ್ಜರಿ ಫಾರ್ಮ್​ನಲ್ಲಿದೆ. ಕಳೆದ ಪಂದ್ಯದಲ್ಲಿ ಹಜರತುಲ್ಲಾ ಝಜೈ ಹಾಗೂ ರಹಮಾನುಲ್ಲಾ ಗುರ್ಬಾಜ್ ಸ್ಫೋಟಕ ಬ್ಯಾಟಿಂಗ್ ನಡೆಸಿ 10 ಓವರ್​ಗಳಲ್ಲೇ ಪಂದ್ಯ ಮುಗಿಸಿದ್ದರು. ಟಿ20 ಲೀಗ್‌ಗಳಲ್ಲಿ ತನ್ನ ಶಕ್ತಿ ಪ್ರದರ್ಶನ ತೋರುತ್ತಿರುವ ಅಫ್ಘಾನ್ ತಂಡದ ಮಧ್ಯಮ ಕ್ರಮಾಂಕ ಕೂಡ ಬಲಿಷ್ಠವಾಗಿದೆ. ಮೊಹಮ್ಮದ್‌ ನಬಿ, ರಶೀದ್‌ ಖಾನ್‌ ಕೂಡ ಮ್ಯಾಚ್‌ ವಿನ್ನರ್‌ಗಳಾಗಿದ್ದಾರೆ. ಫಜಲ್ಲಖ್ ಫಾರುಖ್ ಲಂಕಾ ವಿರುದ್ಧ 3.4 ಓವರ್ ಬೌಲಿಂಗ್ ಮಾಡಿ ಕವಲ 11 ರನ್ ನೀಡಿ 3 ವಿಕೆಟ್ ಕಿತ್ತಿದ್ದರು. ನವೀನ್ ಉಲ್ ಹಕ್, ಮುಜೀಬ್, ರಶೀದ್ ಅಪಾಯಕಾರಿ ಬೌಲರ್​ಗಳಾಗಿದ್ದಾರೆ.

ಇತ್ತ ಬಾಂಗ್ಲಾದೇಶ ತಂಡವನ್ನು ಕೂಡ ಕಡೆಗಣಿಸುವಂತಿಲ್ಲ. ಅನುಭವಿ ಮುಸ್ತಫಿಜುರ್ ರೆಹಮಾನ್, ನಸುಮ್ ಅಹ್ಮದ್, ಮೊಹಮ್ಮದ್ ಸೈಫುದ್ದಿನ್, ಮಹೇದಿ ಹಸನ್ ಬಲ ಒಂದುಕಡೆಯಾದರೆ, ನಾಯಕ ಶಕಿಬ್, ಮುಶ್ಫಿಕರ್ ರಹೀಮ್ , ಮೊಹಮ್ಮದ್ ನೈಮ್ ಬ್ಯಾಟಿಂಗ್​ನಲ್ಲಿ ಕೊಡುಗೆ ನೀಡಲಿದ್ದಾರೆ. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಸಂಜೆ 7:30ಕ್ಕೆ ಶುರುವಾಗಲಿದೆ. ಸ್ಟಾರ್‌ ಸ್ಪೋರ್ಟ್ಸ್‌ ಮತ್ತು ಹಾಟ್‌ ಸ್ಟಾರ್‌ನಲ್ಲಿ ನೇರ ಪ್ರಸಾರವಾಗಲಿದೆ.

ಇದನ್ನೂ ಓದಿ
Image
IND vs PAK: ಪಾಂಡ್ಯಗೆ ಕಿಸ್​ ಕೊಟ್ಟು ಭಾರತದ ಗೆಲುವನ್ನು ಸಂಭ್ರಮಿಸಿದ ಅಫ್ಘಾನಿಸ್ತಾನಿ ಯುವಕ
Image
ಕ್ರಿಕೆಟ್​ಗೆ ವಿದಾಯ ಹೇಳಿದ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಟೀಮ್ ಇಂಡಿಯಾ ಆಟಗಾರ..!
Image
Virat Kohli: ವಿರಾಟ್ ಕೊಹ್ಲಿಯನ್ನು ಭೇಟಿಯಾದ ಈ ಪಾಕಿಸ್ತಾನಿ ಯಾರು ಗೊತ್ತೇ?
Image
Rohit Sharma: ಕಿಂಗ್ ಕೊಹ್ಲಿ, ಧೋನಿಯ ದಾಖಲೆ ಸರಿಗಟ್ಟಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ..!

ಸಂಭಾವ್ಯ ಪ್ಲೇಯಿಂಗ್ XI:

ಅಫ್ಘಾನಿಸ್ತಾನ: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ನಜೀಬುಲ್ಲಾ ಝದ್ರಾನ್, ಕರೀಮ್ ಜನತ್, ಮೊಹಮ್ಮದ್ ನಬಿ (ನಾಯಕ), ರಶೀದ್ ಖಾನ್, ಅಜ್ಮತುಲ್ಲಾ ಒಮರ್ಝೈ, ನವೀನ್ಉಲ್ಹಕ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ.

ಬಾಂಗ್ಲಾದೇಶ: ಮೊಹಮ್ಮದ್ ನಯಿಮ್, ಅನಾಮುಲ್ ಹಕ್, ಶಕಿಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಸಬ್ಬೀರ್ ರೆಹಮಾನ್, ಮಹೇದಿ ಹಸನ್, ಮೊಹಮ್ಮದ್ ಸೈಫುದ್ದೀನ್, ನಸುಮ್ ಅಹ್ಮದ್, ಮುಸ್ತಫಿಜುರ್ ರೆಹಮಾನ್.

Published On - 8:05 am, Tue, 30 August 22

ನಾವು ಅಧಿಕೃತವಾಗಿ ಸಭೆ ನಡೆಬೇಕೆಂದುಕೊಂಡಿದ್ದೆವು, ಮುಚ್ಚುಮರೆ ಇಲ್ಲ: ಖರ್ಗೆ
ನಾವು ಅಧಿಕೃತವಾಗಿ ಸಭೆ ನಡೆಬೇಕೆಂದುಕೊಂಡಿದ್ದೆವು, ಮುಚ್ಚುಮರೆ ಇಲ್ಲ: ಖರ್ಗೆ
ಪೊಲೀಸರು ಬಂಧಿಸಿರುವ ದುಷ್ಟವ್ಯಕ್ತಿ ಮಾನಸಿಕ ಅಸ್ವಸ್ಥನಲ್ಲ: ಕರ್ಣ
ಪೊಲೀಸರು ಬಂಧಿಸಿರುವ ದುಷ್ಟವ್ಯಕ್ತಿ ಮಾನಸಿಕ ಅಸ್ವಸ್ಥನಲ್ಲ: ಕರ್ಣ
ಕಾಶ್ಮೀರದಲ್ಲಿಂದು ಝಡ್​-ಮೋಡ್​ ಸುರಂಗ ಮಾರ್ಗ​ ಉದ್ಘಾಟಿಸಲಿದ್ದಾರೆ ಮೋದಿ
ಕಾಶ್ಮೀರದಲ್ಲಿಂದು ಝಡ್​-ಮೋಡ್​ ಸುರಂಗ ಮಾರ್ಗ​ ಉದ್ಘಾಟಿಸಲಿದ್ದಾರೆ ಮೋದಿ
ಚನ್ನಪಟ್ಟಣದದಲ್ಲಿ ನಿಖಿಲ್ ಸೋಲಿನಿಂದ ವಿಚಲಿತರಾಗಿರುವ ಜೆಡಿಎಸ್ ನಾಯಕರು
ಚನ್ನಪಟ್ಟಣದದಲ್ಲಿ ನಿಖಿಲ್ ಸೋಲಿನಿಂದ ವಿಚಲಿತರಾಗಿರುವ ಜೆಡಿಎಸ್ ನಾಯಕರು
ಕಿರುತೆರೆಯಲ್ಲಿ ಹಲವಾರು ಧಾರಾವಹಿಗಳನ್ನು ನಿರ್ದೇಶಿಸಿರುವ ಸರಿಗಮವಿಜಿ
ಕಿರುತೆರೆಯಲ್ಲಿ ಹಲವಾರು ಧಾರಾವಹಿಗಳನ್ನು ನಿರ್ದೇಶಿಸಿರುವ ಸರಿಗಮವಿಜಿ
ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು 7 ಮಂದಿಗೆ ಗಂಭೀರ ಗಾಯ
ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು 7 ಮಂದಿಗೆ ಗಂಭೀರ ಗಾಯ
ಮಿಡ್ ವೀಕ್ ಬಗ್ಗೆ ಘೋಷಣೆ ಮಾಡಿದ ಬಿಗ್ ಬಾಸ್; ರಜತ್​ಗೆ ಸ್ಕೆಚ್ ಇಟ್ಟ ಭವ್ಯಾ
ಮಿಡ್ ವೀಕ್ ಬಗ್ಗೆ ಘೋಷಣೆ ಮಾಡಿದ ಬಿಗ್ ಬಾಸ್; ರಜತ್​ಗೆ ಸ್ಕೆಚ್ ಇಟ್ಟ ಭವ್ಯಾ
ಬಸ್​ನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಥಳಿಸಿದ ಬಸ್ ಕಂಡಕ್ಟರ್​
ಬಸ್​ನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಥಳಿಸಿದ ಬಸ್ ಕಂಡಕ್ಟರ್​
ಬಿಗ್ ಶೋ ಬಿಗ್ಗೆಸ್ಟ್ ಸಿಕ್ಸ್: ರಾಕೆಟ್ ಸಿಕ್ಸ್ ಸಿಡಿಸಿದ ಮ್ಯಾಕ್ಸ್​ವೆಲ್
ಬಿಗ್ ಶೋ ಬಿಗ್ಗೆಸ್ಟ್ ಸಿಕ್ಸ್: ರಾಕೆಟ್ ಸಿಕ್ಸ್ ಸಿಡಿಸಿದ ಮ್ಯಾಕ್ಸ್​ವೆಲ್
Daily Devotional: ಹಣೆ ಬರಹ ಬದಲಿಸಲು ಸಾಧ್ಯವೆ? ಇಲ್ಲಿದೆ ಉತ್ತರ
Daily Devotional: ಹಣೆ ಬರಹ ಬದಲಿಸಲು ಸಾಧ್ಯವೆ? ಇಲ್ಲಿದೆ ಉತ್ತರ