T20 Record: ವಿರಾಟ್ ಕೊಹ್ಲಿಯ ವಿಶ್ವ ದಾಖಲೆ ಸರಿಗಟ್ಟಿದ ಜಿಂಬಾಬ್ವೆ ಆಟಗಾರ

| Updated By: ಝಾಹಿರ್ ಯೂಸುಫ್

Updated on: Oct 22, 2022 | 9:24 PM

Sikandar Raza: ಐರ್ಲೆಂಡ್ ವಿರುದ್ಧ ಕೇವಲ 23 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್​ನೊಂದಿಗೆ 40 ರನ್​ ಬಾರಿಸಿದ ಸಿಕಂದರ್ ಗೆಲುವಿನ ರೂವಾರಿಯಾಗಿದ್ದರು.

1 / 5
ಟಿ20 ವಿಶ್ವಕಪ್​ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದ ಜಿಂಬಾಬ್ವೆ ಸ್ಟಾರ್ ಆಟಗಾರ ಸಿಕಂದರ್ ರಾಝ ಇದೀಗ ವಿಶೇಷ ದಾಖಲೆ ಬರೆದಿದ್ದಾರೆ.

2 / 5
ಐರ್ಲೆಂಡ್ ವಿರುದ್ಧ ಕೇವಲ 23 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್​ನೊಂದಿಗೆ 40 ರನ್​ ಬಾರಿಸಿದ ಸಿಕಂದರ್ ಗೆಲುವಿನ ರುವಾರಿಯಾಗಿದ್ದರು. ಈ ಗೆಲುವಿನೊಂದಿಗೆ ಜಿಂಬಾಬ್ವೆ ತಂಡವು ಸೂಪರ್​-12 ಸುತ್ತಿಗೆ ಪ್ರವೇಶಿಸಿತು.

3 / 5
ವಿಶೇಷ ಎಂದರೆ ಈ ಭರ್ಜರಿ ಪ್ರದರ್ಶನ ಫಲವಾಗಿ ಸಿಕಂದರ್​ ರಾಝ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇದರೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಒಂದೇ ವರ್ಷದಲ್ಲಿ ಅತ್ಯಧಿಕ ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ವಿಶ್ವ ದಾಖಲೆಯನ್ನು ಸಿಕಂದರ್ ರಾಝ ಸರಿಗಟ್ಟಿದ್ದಾರೆ.

4 / 5
ಈ ಹಿಂದೆ ಒಂದೇ ವರ್ಷದಲ್ಲಿ ಅತ್ಯಧಿಕ ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ವಿಶ್ವ ದಾಖಲೆ ನಿರ್ಮಿಸಿದ್ದು ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿ 2016 ರಲ್ಲಿ 6 ಬಾರಿ ಮ್ಯಾನ್ ಆಫ್​ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾಗಿದ್ದರು.

5 / 5
ಇದೀಗ 2022 ರಲ್ಲಿ 6 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಜಿಂಬಾಬ್ವೆ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಇನ್ನು ಸೂಪರ್-12 ಪಂದ್ಯಗಳಲ್ಲಿ ಒಂದು ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರೆ, ಸಿಕಂದರ್ ರಾಝ ಹೆಸರಿನಲ್ಲಿದೆ ಹೊಸ ವಿಶ್ವ ದಾಖಲೆ ನಿರ್ಮಾಣವಾಗಲಿದೆ.