ಚೇತೇಶ್ವರ ಪೂಜಾರ ಸಹ ಆಟಗಾರ ಈಗ ಟೀಮ್ ಇಂಡಿಯಾ ಕೋಚ್..!

Sitanshu Kotak: ಸಿತಾಂಶು ಕೊಟಕ್ ಸೌರಾಷ್ಟ್ರ ಮೂಲದ ಮಾಜಿ ಕ್ರಿಕೆಟಿಗ. ಈ ಹಿಂದೆ ಭಾರತ ಎ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಅಷ್ಟೇ ಅಲ್ಲದೆ ಎನ್‌ಸಿಎನಲ್ಲಿ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ.

ಚೇತೇಶ್ವರ ಪೂಜಾರ ಸಹ ಆಟಗಾರ ಈಗ ಟೀಮ್ ಇಂಡಿಯಾ ಕೋಚ್..!
Ranji Team
Follow us
| Updated By: ಝಾಹಿರ್ ಯೂಸುಫ್

Updated on: Aug 13, 2023 | 9:03 PM

ಭಾರತ-ಐರ್ಲೆಂಡ್ ನಡುವಣ 3 ಪಂದ್ಯಗಳ ಟಿ20 ಸರಣಿ ಆಗಸ್ಟ್ 18 ರಿಂದ ಶುರುವಾಗಲಿದೆ. ಐರ್ಲೆಂಡ್​ನ ಮಲಾಹೈಡ್​ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆಯಲಿರುವ ಈ ಸರಣಿಗಾಗಿ ಟೀಮ್ ಇಂಡಿಯಾ ಆಗಸ್ಟ್ 15 ರಂದು ಪ್ರಯಾಣ ಬೆಳೆಸಲಿದೆ. ಆದರೆ ಸರಣಿಯಲ್ಲಿ ಟೀಮ್ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಸಿತಾಂಶು ಕೊಟಕ್ ಅವರನ್ನು ಭಾರತ ತಂಡದೊಂದಿಗೆ ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ.

ಮುಂಬರುವ ಏಷ್ಯಾಕಪ್​ ಹಿನ್ನಲೆಯಲ್ಲಿ ಐರ್ಲೆಂಡ್ ವಿರುದ್ಧದ ಸರಣಿಯಿಂದ ಪ್ರಮುಖ ಆಟಗಾರರು ಹೊರಗುಳಿದಿದ್ದಾರೆ. ಹಾಗೆಯೇ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೂ ವಿಶ್ರಾಂತಿ ನೀಡಲಾಗಿದೆ. ಇತ್ತ ಹಂಗಾಮಿ ಕೋಚ್ ಆಗಿ ವಿವಿಎಸ್​ ಲಕ್ಷ್ಮಣ್ ಐರ್ಲೆಂಡ್ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಹೊಸ ಕೋಚ್ ಆಗಿ ಮಾಜಿ ಆಟಗಾರ ಸಿತಾಂಶು ಕೊಟಕ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ.

ಯಾರು ಈ ಸಿತಾಂಶು ಕೊಟಕ್?

ಸಿತಾಂಶು ಕೊಟಕ್ ಸೌರಾಷ್ಟ್ರ ಮೂಲದ ಮಾಜಿ ಕ್ರಿಕೆಟಿಗ. ಈ ಹಿಂದೆ ಭಾರತ ಎ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಅಷ್ಟೇ ಅಲ್ಲದೆ ಎನ್‌ಸಿಎನಲ್ಲಿ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ.

ಸಿತಾಂಶು ಕೊಟಕ್

ಸಿತಾಂಶು ಕೊಟಕ್

ಇನ್ನು ದೇಶೀಯ ಅಂಗಳದಲ್ಲಿ 130 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಸಿತಾಂಶು ಒಟ್ಟು 8061 ರನ್ ಕಲೆಹಾಕಿದ್ದಾರೆ. ಹಾಗೆಯೇ 89 ಲಿಸ್ಟ್ ಎ ಪಂದ್ಯಗಳಲ್ಲಿ 3083 ರನ್ ಮತ್ತು 9 ಟಿ20 ಪಂದ್ಯಗಳಲ್ಲಿ 133 ರನ್ ಗಳಿಸಿದ್ದಾರೆ. ಇದಲ್ಲದೆ 124 ವಿಕೆಟ್​ಗಳನ್ನು ಕಬಳಿಸಿದ್ದಾರೆ.

ಪೂಜಾರ-ಜಯದೇವ್ ಸಹ ಆಟಗಾರ:

ಸಿತಾಂಶು ಕೊಟಕ್ 2013 ರಲ್ಲಿ ಕೊನೆಯ ಬಾರಿ ಆಟಗಾರನಾಗಿ ಕಾಣಿಸಿಕೊಂಡಿದ್ದರು. ಮುಂಬೈ ವಿರುದ್ಧದ ರಣಜಿ ಟ್ರೋಫಿ ಫೈನಲ್​ ಪಂದ್ಯದಲ್ಲಿ ಸೌರಾಷ್ಟ್ರ ಪರ ಕಣಕ್ಕಿಳಿದಿದ್ದರು. ಅಂದು ತಂಡದಲ್ಲಿ ಚೇತೇಶ್ವರ ಪೂಜಾರಾ ಹಾಗೂ ಜಯದೇವ್ ಉನಾದ್ಕಟ್ ಕೂಡ ಇದ್ದರು ಎಂಬುದು ವಿಶೇಷ.

ಇದನ್ನೂ ಓದಿ: ಪೂರನ್ ಪವರ್​ಗೆ ಹಳೆಯ ದಾಖಲೆ ಉಡೀಸ್​: ಟೀಮ್ ಇಂಡಿಯಾ ವಿರುದ್ದ ಹೊಸ ರೆಕಾರ್ಡ್

ಹಾಗೆಯೇ ಆ ಫೈನಲ್ ಪಂದ್ಯದಲ್ಲಿ ಮುಂಬೈ ಪರ ಸಚಿನ್ ತೆಂಡೂಲ್ಕರ್ ಕೂಡ ಆಡಿದ್ದರು. ಇದೀಗ ಹೊಸ ಇನಿಂಗ್ಸ್ ಆರಂಭಿಸಿರುವ ಸಿತಾಂಶು ಕೊಟಕ್ ಐರ್ಲೆಂಡ್ ಸರಣಿಯಲ್ಲಿ ಟೀಮ್ ಇಂಡಿಯಾದ ಹಂಗಾಮಿ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಐರ್ಲೆಂಡ್ ಸರಣಿಗೆ ಟೀಮ್ ಇಂಡಿಯಾ ಹೀಗಿದೆ:

ಜಸ್​ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಝ್ ಅಹ್ಮದ್, ರವಿ ಬಿಷ್ಣೋಯ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್.

ಭಾರತ-ಐರ್ಲೆಂಡ್ ಟಿ20 ಸರಣಿ ವೇಳಾಪಟ್ಟಿ:

  1. ಆಗಸ್ಟ್ 18: ಮೊದಲ ಟಿ20 ಪಂದ್ಯ (ಮಲಾಹೈಡ್ ಕ್ರಿಕೆಟ್ ಸ್ಟೇಡಿಯಂ)
  2. ಆಗಸ್ಟ್ 20: ಎರಡನೇ ಟಿ20 ಪಂದ್ಯ (ಮಲಾಹೈಡ್ ಕ್ರಿಕೆಟ್ ಸ್ಟೇಡಿಯಂ)
  3. ಆಗಸ್ಟ್ 22: ಮೂರನೇ ಟಿ20 ಪಂದ್ಯ (ಮಲಾಹೈಡ್ ಕ್ರಿಕೆಟ್ ಸ್ಟೇಡಿಯಂ)
ಮುಂಬೈನಲ್ಲಿ ಆರ್ಭಟಿಸಿದ ಮಿಂಚು ಸಹಿತ ಭಾರೀ ಮಳೆ; ಭಯಾನಕ ದೃಶ್ಯ ಸೆರೆ
ಮುಂಬೈನಲ್ಲಿ ಆರ್ಭಟಿಸಿದ ಮಿಂಚು ಸಹಿತ ಭಾರೀ ಮಳೆ; ಭಯಾನಕ ದೃಶ್ಯ ಸೆರೆ
‘ದರ್ಶನ್ ಮಾತ್ರವಲ್ಲ, ಬೇರೆ ಖೈದಿಗಳಿಗೂ ಮೂಲಸೌಕರ್ಯ ನೀಡಬೇಕು’: ಲಾಯರ್​ ಗರಂ
‘ದರ್ಶನ್ ಮಾತ್ರವಲ್ಲ, ಬೇರೆ ಖೈದಿಗಳಿಗೂ ಮೂಲಸೌಕರ್ಯ ನೀಡಬೇಕು’: ಲಾಯರ್​ ಗರಂ
ಸಿಎಂ ಪ್ರಾಸಿಕ್ಯೂಷನ್​ಗೆ ಹೈಕೋರ್ಟ್ ಅನುಮತಿ: ಹೆಚ್​ಡಿಕೆ ಅಚ್ಚರಿಯ ಹೇಳಿಕೆ
ಸಿಎಂ ಪ್ರಾಸಿಕ್ಯೂಷನ್​ಗೆ ಹೈಕೋರ್ಟ್ ಅನುಮತಿ: ಹೆಚ್​ಡಿಕೆ ಅಚ್ಚರಿಯ ಹೇಳಿಕೆ
ಅಮೆರಿಕ ಪ್ರವಾಸ ಫಲಪ್ರದವಾಗಿದೆ; ಯುಎಸ್​ ಭೇಟಿಯ ನೆನಪುಗಳ ಹಂಚಿಕೊಂಡ ಮೋದಿ
ಅಮೆರಿಕ ಪ್ರವಾಸ ಫಲಪ್ರದವಾಗಿದೆ; ಯುಎಸ್​ ಭೇಟಿಯ ನೆನಪುಗಳ ಹಂಚಿಕೊಂಡ ಮೋದಿ
ಮುಡಾ ಪ್ರಾಸಿಕ್ಯೂಷನ್ ಕೇಸ್​: ಸಿದ್ದರಾಮಯ್ಯಗೆ ರಿಲೀಫ್​ ಸಿಗಲ್ಲ ಎಂದ ವಕೀಲರು
ಮುಡಾ ಪ್ರಾಸಿಕ್ಯೂಷನ್ ಕೇಸ್​: ಸಿದ್ದರಾಮಯ್ಯಗೆ ರಿಲೀಫ್​ ಸಿಗಲ್ಲ ಎಂದ ವಕೀಲರು
CM ಅರ್ಜಿ ಹೈಕೋರ್ಟ್‌ ವಜಾ; ಸತ್ಯಕ್ಕೆ ಜಯ ಸಿಕ್ಕಿದೆ ಎಂದ ದೂರುದಾರ
CM ಅರ್ಜಿ ಹೈಕೋರ್ಟ್‌ ವಜಾ; ಸತ್ಯಕ್ಕೆ ಜಯ ಸಿಕ್ಕಿದೆ ಎಂದ ದೂರುದಾರ
ಮುಡಾ ತೀರ್ಪು: ಸಿಎಂ ಮನೆ ಸೇರಿದಂತೆ ರಾಜ್ಯಾದ್ಯಂತ ಬಿಗಿ ಭದ್ರತೆ ಲೈವ್​
ಮುಡಾ ತೀರ್ಪು: ಸಿಎಂ ಮನೆ ಸೇರಿದಂತೆ ರಾಜ್ಯಾದ್ಯಂತ ಬಿಗಿ ಭದ್ರತೆ ಲೈವ್​
ಫ್ಲಿಪ್​ಕಾರ್ಟ್​ ಬಿಗ್ ಬಿಲಿಯನ್ ಡೇ ಸೇಲ್​ ₹49,999ಕ್ಕೆ ಆ್ಯಪಲ್ ಐಫೋನ್ 15
ಫ್ಲಿಪ್​ಕಾರ್ಟ್​ ಬಿಗ್ ಬಿಲಿಯನ್ ಡೇ ಸೇಲ್​ ₹49,999ಕ್ಕೆ ಆ್ಯಪಲ್ ಐಫೋನ್ 15
ಸ್ಪರ್ಧಿಗಳ ಪಟ್ಟಿ ಸುದೀಪ್​ಗೆ ಸಿಗೋದು ಯಾವಾಗ? ಉತ್ತರಿಸಿದ ಕಿಚ್ಚ
ಸ್ಪರ್ಧಿಗಳ ಪಟ್ಟಿ ಸುದೀಪ್​ಗೆ ಸಿಗೋದು ಯಾವಾಗ? ಉತ್ತರಿಸಿದ ಕಿಚ್ಚ
ಲೆಬನಾನ್​ ಮೇಲೆ ಇಸ್ರೇಲ್​ ರಾಕೆಟ್​ ದಾಳಿ ಹೇಗಿತ್ತು
ಲೆಬನಾನ್​ ಮೇಲೆ ಇಸ್ರೇಲ್​ ರಾಕೆಟ್​ ದಾಳಿ ಹೇಗಿತ್ತು