ಅಬ್ಬರ ಸಿಡಿಲಬ್ಬರ… ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿದ ಸ್ಮೃತಿ ಮಂಧಾನ!

Sunrisers Leeds Women vs Manchester Super Giants Women: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಲೀಡ್ಸ್ ತಂಡವು 100 ಎಸೆತಗಳಲ್ಲಿ 142 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡವು 96 ಎಸೆತಗಳಲ್ಲಿ 6 ವಿಕೆಟ್ ಕಳೆದುಕೊಂಡು 147 ರನ್​ಗಳಿಸಿ ಭರ್ಜರಿ ಜಯ ಸಾಧಿಸಿದೆ.

ಅಬ್ಬರ ಸಿಡಿಲಬ್ಬರ... ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿದ ಸ್ಮೃತಿ ಮಂಧಾನ!
Smriti Mandhana
Image Credit source: The Hundred

Updated on: Jul 29, 2026 | 8:29 AM

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಮಹಿಳಾ ದಿ ಹಂಡ್ರೆಡ್ ಕ್ರಿಕೆಟ್ ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ಸೂಪರ್‌ ಜೈಂಟ್ಸ್​ ತಂಡವು ಮತ್ತೊಂದು ಜಯ ಸಾಧಿಸಿದೆ. ಈ ಗೆಲುವು ತಂದುಕೊಟ್ಟಿದ್ದು ಭಾರತದ ಸ್ಟಾರ್ ಓಪನರ್ ಸ್ಮೃತಿ ಮಂಧಾನ ಎಂಬುದು ವಿಶೇಷ. ಅದು ಸಹ ಏಕಾಂಗಿ ಹೋರಾಟದೊಂದಿಗೆ ಎಂಬುದು ಮತ್ತೊಂದು ವಿಶೇಷ.

ಲೀಡ್ಸ್​ನ ಹೆಡಿಂಗ್ಲೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಹಾಗೂ ಸನ್​ರೈಸರ್ಸ್​ ಲೀಡ್ಸ್​ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಮ್ಯಾಂಚೆಸ್ಟರ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಬೌಲಿಂಗ್ ಆಯ್ದುಕೊಂಡಿದ್ದರು.

ಸನ್​ರೈಸರ್ಸ್​ ಲೀಡ್ಸ್​ ಬ್ಯಾಟಿಂಗ್:

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸನ್​ರೈಸರ್ಸ್​ ಲೀಡ್ಸ್​ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಫೀಬಿ ಲಿಚ್​ಫೀಲ್ಡ್​ 31 ರನ್ ಬಾರಿಸಿದರೆ, ಅನ್ನಾಬೆಲ್ ಸದರ್​ಲ್ಯಾಂಡ್ 35 ರನ್ ಗಳಿಸಿದರು. ಈ ಮೂಲಕ ಸನ್​ರೈಸರ್ಸ್​ ಲೀಡ್ಸ್​ ತಂಡವು 100 ಎಸೆತಗಳಲ್ಲಿ 4 ವಿಕೆಟ್ ನಷ್ಟಕ್ಕೆ 142 ರನ್ ಕಲೆಹಾಕಿತು.

ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಚೇಸಿಂಗ್:

143 ರನ್​ಗಳ ಗುರಿಯನ್ನು ಬೆನ್ನತ್ತಿದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡಕ್ಕೆ ಸ್ಮೃತಿ ಮಂಧಾನ ಹಾಗೂ ಮೆಗ್ ಲ್ಯಾನಿಂಗ್ ಉತ್ತಮ ಆರಂಭ ಒದಗಿಸಿದ್ದರು. ಈ ಜೋಡಿಯು ಮೊದಲ ವಿಕೆಟ್​ಗೆ 41 ರನ್ ಪೇರಿಸಿದ ಬಳಿಕ ಲ್ಯಾನಿಂಗ್ (24) ವಿಕೆಟ್ ಒಪ್ಪಿಸಿದರು.

ಆ ಬಳಿಕ ಬಂದ ಪೈಜ್ ಸ್ಕೋಲ್ಫೀಲ್ಡ್ (5), ರಿಚಾ ಘೋಷ್ (4) ಬಂದ ವೇಗದಲ್ಲೇ ಹಿಂತಿರುಗಿದರೆ, ಮೈಟ್ಲಾನ್ ಬ್ರೌನ್ (0), ಮ್ಯಾಡಿ ವಿಲಿಯರ್ಸ್ (0), ಗ್ರೇಸ್ ಸ್ಕ್ರಿವೆನ್ಸ್ (9) ಬ್ಯಾಕ್ ಟು ಬ್ಯಾಕ್ ವಿಕೆಟ್ ಕೈಚೆಲ್ಲಿದರು.

ಹೀಗೆ ದಿಢೀರ್ ಕುಸಿತಕ್ಕೊಳಗಾಗಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಸೋಲಿನತ್ತ ಮುಖ ಮಾಡಿದರೂ ಸ್ಮೃತಿ ಮಂಧಾನ ಮಾತ್ರ ಧೃತಿಗೆಡಲಿಲ್ಲ. ಅಲ್ಲದೆ ಏಕಾಂಗಿ ಹೋರಾಟ ಮುಂದುವರೆಸಿದರು.

ಸ್ಮೃತಿ ಏಕಾಂಗಿ ಹೋರಾಟ:

ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೂ ಧೃತಿಗೆಡದ ಸ್ಮೃತಿ ಮಂಧಾನ, ಸನ್​ರೈಸರ್ಸ್​ ಲೀಡ್ಸ್ ಬೌಲರ್‌ಗಳ ಬೆಂಡೆತ್ತಲಾರಂಭಿಸಿದರು. ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದ ಸ್ಮೃತಿ ಕೇವಲ 50 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 88 ರನ್ ಗಳಿಸಿದರು.

ಈ ಅಜೇಯ 88 ರನ್​ಗಳೊಂದಿಗೆ ಸ್ಮೃತಿ ಮಂಧಾನ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡವನ್ನು 96 ಎಸೆತಗಳಲ್ಲಿ ಗುರಿ ತಲುಪಿಸಿ 4 ವಿಕೆಟ್​ಗಳ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡವು ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ.

Loading...
Unable to load recommendations.
Follow Us