Sourav Ganguly: ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಚುನಾವಣೆಯಿಂದಲೂ ಹಿಂದೆ ಸರಿದ ಗಂಗೂಲಿ! ಅಧ್ಯಕ್ಷ ಪಟ್ಟ ಯಾರಿಗೆ?

| Updated By: ಪೃಥ್ವಿಶಂಕರ

Updated on: Oct 24, 2022 | 5:23 PM

Sourav Ganguly: 2015 ರಿಂದ ಸಿಎಬಿ ಚುನಾವಣೆಯಲ್ಲಿ ವಿರೋಧ ಪಕ್ಷಗಳಿಂದ ನಾಮಪತ್ರ ಸಲ್ಲಿಸದಿರುವುದು ಸಂಪ್ರದಾಯವಾಗಿದೆ. ಹೀಗಾಗಿ ಗಂಗೂಲಿ ತಮ್ಮ ನಾಮಪತ್ರ ಸಲ್ಲಿಸಿಲ್ಲ ಎಂತಲೂ ಹೇಳಲಾಗುತ್ತಿದೆ.

Sourav Ganguly: ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಚುನಾವಣೆಯಿಂದಲೂ ಹಿಂದೆ ಸರಿದ ಗಂಗೂಲಿ! ಅಧ್ಯಕ್ಷ ಪಟ್ಟ ಯಾರಿಗೆ?
Sourav Ganguly
Follow us on

ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಕ್ರಿಕೆಟ್ ಲೋಕಕ್ಕೆ ಮತ್ತೊಂದು ಅನಿರೀಕ್ಷಿತ ಶಾಕ್ ನೀಡಿದ್ದಾರೆ. ಈ ಮುಂಚೆ ಬಿಸಿಸಿಐ (BCCI) ಅಧ್ಯಕ್ಷ ಸ್ಥಾನ ತೊರೆದ ಬಳಿಕ ಕ್ರಿಕೆಟ್ ಅಸೋಸಿಯೇಷನ್ ​​ಆಫ್ ಬೆಂಗಾಲ್ (CAB) ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ದಾದಾ ಘೋಷಿಸಿದಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ ಕೊನೆಯ ಕ್ಷಣದಲ್ಲಿ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ​​ಅಧ್ಯಕ್ಷೀಯ ಚುನಾವಣೆಯಿಂದಲೂ ದಾದಾ ಹಿಂದೆ ಸರಿದಿದ್ದಾರೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಭಾನುವಾರವೂ ಗಂಗೂಲಿ ನಾಮಪತ್ರ ಸಲ್ಲಿಸಿರಲಿಲ್ಲ. ಆದರೆ ಇದರ ಹಿಂದೆ ದೊಡ್ಡ ಕಾರಣವೇ ಇದೆ ಎನ್ನುತ್ತಿವೆ ಕ್ರಿಕೆಟ್ ಮೂಲಗಳು. ತಮ್ಮ ಸಹೋದರ ಸ್ನೇಹಾಶಿಶ್ ಗಂಗೂಲಿ ಅವರ ಸಲುವಾಗಿ ಸಿಎಬಿ ಅಧ್ಯಕ್ಷ ಸ್ಥಾನವನ್ನು ಗಂಗೂಲಿ ತ್ಯಾಗ ಮಾಡಿದ್ದಾರೆ ಎಂದು ಹೇಳಲಾಗಿದೆ, ಅದಕ್ಕಾಗಿಯೇ ದಾದಾ ನಾಮಪತ್ರ ಸಲ್ಲಿಸಿಲ್ಲ ಎಂದು ವರದಿಯಾಗಿದೆ.

2015 ರಿಂದ ಸಿಎಬಿ ಚುನಾವಣೆಯಲ್ಲಿ ವಿರೋಧ ಪಕ್ಷಗಳಿಂದ ನಾಮಪತ್ರ ಸಲ್ಲಿಸದಿರುವುದು ಸಂಪ್ರದಾಯವಾಗಿದೆ. ಹೀಗಾಗಿ ಗಂಗೂಲಿ ತಮ್ಮ ನಾಮಪತ್ರ ಸಲ್ಲಿಸಿಲ್ಲ ಎಂತಲೂ ಹೇಳಲಾಗುತ್ತಿದೆ.

ಐಸಿಸಿ ಅಧ್ಯಕ್ಷಗಿರಿಯೂ ಸಿಗಲಿಲ್ಲ

2015ರಿಂದ 2019 ರವರೆಗೆ ಗಂಗೂಲಿ ಸಿಎಬಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ನಂತರ ಬಿಸಿಸಿಐ ಅಧ್ಯಕ್ಷರಾಗಿ ಗಂಗೂಲಿ ಆಯ್ಕೆಯಾಗಿದ್ದರು. ಈಗ ಬಿಸಿಸಿಐ ಹುದ್ದೆಯಿಂದ ಕೆಳಗಿಳಿದ ಬಳಿಕ ದಾದಾ ಐಸಿಸಿ ಅಧ್ಯಕ್ಷ ಸ್ಥಾನವನ್ನು ಏರಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಆದರೆ ಗಂಗೂಲಿಗೆ ಆ ಸ್ಥಾನವೂ ಸಿಗಲಿಲ್ಲ. ಇತ್ತ ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿ ಉಳಿಯಲು ಬಯಸಿದ್ದ ಗಂಗೂಲಿ ಆಸೆಯೂ ಪೂರ್ಣಗೊಳಲಿಲ್ಲ. ಇದಕ್ಕೆ ಪ್ರಮುಖ ಕಾರಣವೂ ಇದ್ದು, ಬಿಸಿಸಿಐ ಅಧ್ಯಕ್ಷರಾಗಿ ದಾದಾ ಸಂಪೂರ್ಣ ವಿಫಲರಾಗಿದ್ದು, ಮಂಡಳಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಗಂಗೂಲಿಗೆ ಈ ಹುದ್ದೆಯಲ್ಲಿ ಮುಂದುವರೆಯುವ ಅವಕಾಶ ಸಿಗಲಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: BAN vs NED: ಗೆಲುವಿಗಾಗಿ ಕೊನೆಯವರೆಗೂ ಹೋರಾಡಿದ ನೆದರ್ಲೆಂಡ್ಸ್; 9 ರನ್​ಗಳಿಂದ ಗೆದ್ದ ಬಾಂಗ್ಲಾ

ಸಹೋದರನಿಗಾಗಿ ದಾದಾ ತ್ಯಾಗ

ಗಂಗೂಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ಅಲ್ಲದೆ ಸ್ಪರ್ಧೆಯಲ್ಲಿ ಯಾರೂ ಇಲ್ಲದಿರುವ ಕಾರಣ ಈಗ ದಾದಾ ಅವರ ಸಹೋದರ ಸ್ನೇಹಶಿಶ್ ಗಂಗೂಲಿ ಅವರು ಸಿಎಬಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಮತ್ತೊಂದೆಡೆ, ಸಿಎಬಿ ಉಪಾಧ್ಯಕ್ಷ ಸ್ಥಾನಕ್ಕೆ ಅಮಲೇಂದು ಬಿಸ್ವಾಸ್, ಕಾರ್ಯದರ್ಶಿ ಸ್ಥಾನಕ್ಕೆ ನರೇಶ್ ಓಜಾ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ದೇಬ್ರತಾ ದಾಸ್ ಮತ್ತು ಖಜಾಂಚಿ ಸ್ಥಾನಕ್ಕೆ ಪ್ರಬೀರ್ ಚಕ್ರವರ್ತಿ ಕೂಡ ಆಯ್ಕೆಯಾಗಲಿದ್ದಾರೆ. ಅಲ್ಲದೆ ಈ  ಸ್ಥಾನಗಳಿಗೆ ಯಾರೂ ಸಹ ನಾಮನಿರ್ದೇಶನ ಮಾಡದಿರುವುದರಿಂದ ಇವರು ಕೂಡ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

ಇದರೊಂದಿಗೆ ಈ ಎಲ್ಲಾ ಸ್ಥಾನಗಳು ಸರ್ವಾನುಮತದಿಂದ ಅವಿರೋಧವಾಗಿ ಭರ್ತಿಯಾಗಲಿವೆ. ಆದರೆ, ಭಾರತ ಕ್ರಿಕೆಟ್‌ನಲ್ಲಿ ನಾಯಕನಾಗಿ ಮತ್ತು ಬಿಸಿಸಿಐ ಅಧ್ಯಕ್ಷರಾಗಿ ಕ್ರಿಕೆಟ್ ಬೆಳೆಸಲು ಶ್ರಮಿಸಿದ ಗಂಗೂಲಿ ಅವರಿಗೆ ಬಿಸಿಸಿಐನಲ್ಲೂ ವಿರೋಧದ ಗುಂಪು ಇದೆಯಂತೆ. ಹೀಗಾಗಿಯೇ ಗಂಗೂಲಿ ಅವರನ್ನು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂಬ ವದಂತಿಗಳು ಕೇಳಿಬರುತ್ತಿವೆ. ಅಲ್ಲದೆ ರಾಜಕೀಯವಾಗಿಯೂ ದಾದಾರನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿಯುತ್ತಿದೆ ಎಂಬ ವರದಿಗಳು ಕೇಳಿಬರುತ್ತಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:13 pm, Mon, 24 October 22