T20 World Cup 2022: ‘ಬುಮ್ರಾ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿಲ್ಲ’! ಬಿಗ್ ಅಪ್​ಡೇಟ್ ನೀಡಿದ ಗಂಗೂಲಿ

| Updated By: ಪೃಥ್ವಿಶಂಕರ

Updated on: Sep 30, 2022 | 9:27 PM

T20 World Cup 2022: ಬುಮ್ರಾ ಇನ್ನೂ ಟಿ 20 ವಿಶ್ವಕಪ್‌ನಿಂದ ಹೊರಬಿದ್ದಿಲ್ಲ. ವಿಶ್ವಕಪ್ ಆರಂಭವಾಕ್ಕೆ ಇನ್ನು ಸಾಕಷ್ಟು ಸಮಯವಿದೆ. ಹೀಗಾಗಿ ನಾವು ಸ್ವಲ್ಪ ಸಮಯ ಕಾಯಬೇಕಿದೆ ಎಂದು ಗಂಗೂಲಿ ಹೇಳಿದ್ದಾರೆ.

T20 World Cup 2022: ‘ಬುಮ್ರಾ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿಲ್ಲ’! ಬಿಗ್ ಅಪ್​ಡೇಟ್ ನೀಡಿದ ಗಂಗೂಲಿ
Sourav Ganguly
Follow us on

ಕಳೆದೆರಡು ದಿನಗಳಿಂದ ಟೀಂ ಇಂಡಿಯಾದ ದಿಗ್ಗಜ ವೇಗದ ಬೌಲರ್ ಬುಮ್ರಾ (Jasprit Bumrah) ಬಗ್ಗೆ ಇಡೀ ಕ್ರಿಕೆಟ್ ಜಗತ್ತೇ ಮಾತನಾಡುತ್ತಿದೆ. ಅಲ್ಲದೆ ಸಾಕಷ್ಟು ಕ್ರಿಕೆಟ್ ಪಂಡಿತರು ಟಿ20 ವಿಶ್ವಕಪ್​ನಲ್ಲಿ ಬುಮ್ರಾ ಅಲಭ್ಯತೆಯೂ ರೋಹಿತ್ ಪಡೆಗೆ ಎಷ್ಟು ನಷ್ಟವನ್ನುಂಟು ಮಾಡಲಿದೆ ಎಂದು ಉದ್ದುದ್ದ ಭಾಷಣಗಳನ್ನು ಬಿಗಿಯುತ್ತಿದ್ದಾರೆ. ಆದರೆ ಇದೆಲ್ಲವನ್ನು ಮೌನವಾಗಿ ಕೇಳಿಸಿಕೊಳ್ಳುತ್ತಿರುವ ಬಿಸಿಸಿಐ (BCCI) ಮಾತ್ರ ಇದುವರೆಗೆ ಟಿ20 ವಿಶ್ವಕಪ್​ನಲ್ಲಿ (T20 World Cup) ಬುಮ್ರಾ ಆಡುತ್ತಾರೋ, ಇಲ್ಲವೋ ಎಂಬ ಪ್ರಶ್ನೆಗೆ ಯಾವುದೇ ರೀತಿಯ ಸ್ಪಷ್ಟನೇ ಮಾತ್ರ ನೀಡಿಲ್ಲ. ಆದರೆ ಉಳಿದಂತೆ ರಾಷ್ಟ್ರೀಯ ಮಾದ್ಯಮಗಳು ಮಾತ್ರ ಯಾರ್ಕರ್ ಕಿಂಗ್ ಟಿ20 ವಿಶ್ವಕಪ್ ಆಡುವುದಿಲ್ಲ ಎಂದು ರಾಜಾರೋಷವಾಗಿ ವರದಿಯನ್ನು ಬಿತ್ತರಿಸುತ್ತಿವೆ. ಈ ಬಗ್ಗೆ ಬಿಸಿಸಿಐನಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲವಾದರೂ, ಮೊದಲ ಬಾರಿಗೆ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಬೆನ್ನುನೋವಿನ ಸಮಸ್ಯೆಯಿಂದಾಗಿ ಬುಮ್ರಾ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಯಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ಶುಕ್ರವಾರ ಸೆಪ್ಟೆಂಬರ್ 30 ರಂದು ಈ ಮಾಹಿತಿಯನ್ನು ನೀಡಿತ್ತು. ಅಲ್ಲದೆ ಅವರ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂಬುದನ್ನು ಮಂಡಳಿ ಖಚಿತ ಪಡಿಸಿತ್ತು. ಆದರೆ ಇನ್ನುಳಿದಂತೆ ಬುಮ್ರಾ ಅವರ ಇಂಜುರಿ ಮತ್ತು ಅವರ ಲಭ್ಯತೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಮಂಡಳಿ ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ.

ಆತುರಪಡಬೇಡಿ

ಸುದ್ದಿ ಸಂಸ್ಥೆ ಪಿಟಿಐ ಒಂದು ದಿನದ ಹಿಂದೆ ತನ್ನ ವರದಿಯಲ್ಲಿ ಬುಮ್ರಾ ಅವರ ಗಾಯವು ತುಂಬಾ ಗಂಭೀರವಾಗಿದ್ದು, ಅದರಿಂದ ಚೇತರಿಸಿಕೊಳ್ಳಲು ಅವರಿಗೆ 4 ರಿಂದ 6 ತಿಂಗಳುಗಳು ಬೇಕಾಗಬಹುದು ಎಂದು ತಿಳಿಸಿತ್ತು. ಆದರೆ ಬಿಸಿಸಿಐ ಈ ರೀತಿಯ ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ. ಈಗ ಮಂಡಳಿಯ ಅಧ್ಯಕ್ಷ ಗಂಗೂಲಿ ಮೊದಲ ಬಾರಿಗೆ ಈ ವಿಷಯದ ಬಗ್ಗೆ ಮೌನಮುರಿದಿದ್ದು, ವಿಶ್ವಕಪ್‌ಗೆ ಇನ್ನೂ ಸಮಯವಿದೆ, ಆದ್ದರಿಂದ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಶುಕ್ರವಾರ ಕ್ರೀಡಾ ವೆಬ್‌ಸೈಟ್‌ನೊಂದಿಗೆ ಮಾತನಾಡಿದ ಬಿಸಿಸಿಐ ಬಾಸ್, ಬುಮ್ರಾ ಇನ್ನೂ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿಲ್ಲ. ವಿಶ್ವಕಪ್ ಆರಂಭವಾಕ್ಕೆ ಇನ್ನು ಸಾಕಷ್ಟು ಸಮಯವಿದೆ. ಹೀಗಾಗಿ ನಾವು ಸ್ವಲ್ಪ ಸಮಯ ಕಾಯಬೇಕಿದೆ. ಅಲ್ಲದೆ ಅವಸರದಲ್ಲಿ ಮಾಧ್ಯಮಗಳು ಏನೇನೋ ಹೇಳಬೇಡಿ ಎಂದು ಹೇಳಿಕೊಂಡಿದ್ದಾರೆ.

ದ್ರಾವಿಡ್ ಕೂಡ ಇದ್ದನ್ನೇ ಹೇಳಿದ್ದಾರೆ

ಅಂದಹಾಗೆ, ರವೀಂದ್ರ ಜಡೇಜಾ ಅವರ ಇಂಜುರಿಯ ಸಮಯದಲ್ಲಿಯೂ ಇದೇ ರೀತಿಯ ವರದಿಗಳು ಹೊರಬಿದ್ದಿದ್ದವು. ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಏಷ್ಯಾಕಪ್ ಸಮಯದಲ್ಲಿ ಬಲ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದರು. ಈ ಕಾರಣದಿಂದಾಗಿ ಅವರು ಪಂದ್ಯಾವಳಿಯಿಂದ ಹೊರಗುಳಿಯಬೇಕಾಯಿತು. ಇದಾದ ನಂತರ ಜಡೇಜಾ ವಿಶ್ವಕಪ್‌ನಲ್ಲೂ ಆಡುವುದಿಲ್ಲ ಎಂಬ ಸುದ್ದಿ ಬಂದಿತ್ತು. ಆದರೆ, ಆ ಸಮಯದಲ್ಲಿ ಕೋಚ್ ರಾಹುಲ್ ದ್ರಾವಿಡ್ ಕೂಡ ವಿಶ್ವಕಪ್ ಆರಂಭಕ್ಕೆ ಇನ್ನು ಸಾಕಷ್ಟು ಸಮಯವಿದೆ. ಹಾಗಾಗಿ ಈಗಲೇ ನಾವು ಜಡೇಜಾ ಅವರನ್ನು ತಂಡದಿಂದ ಹೊರಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಆದರೆ ಅಂತಿಮವಾಗಿ ಜಡೇಜಾ ಟೂರ್ನಿಯಿಂದ ಹೊರಬಿದ್ದರು. ಬುಮ್ರಾ ಅವರ ವಿಷಯದಲ್ಲಿ ಪರಿಸ್ಥಿತಿ ವಿಭಿನ್ನವಾಗಿದ್ದರೂ, ಅವರು ಫಿಟ್ ಆಗಿ ತಂಡಕ್ಕೆ ಮರಳುತ್ತಾರೆ ಎಂಬುದು ಭಾರತ ತಂಡ ಮತ್ತು ಅಭಿಮಾನಿಗಳ ಆಶಯವಾಗಿದೆ. ಬುಮ್ರಾ ಮತ್ತು ಜಡೇಜಾರ ವಿಷಯದಲ್ಲಿ ವ್ಯತ್ಯಾಸವೆಂದರೆ ಈ ಸಮಸ್ಯೆಯಿಂದ ಚೇತರಿಸಿಕೊಳ್ಳಲು ಬುಮ್ರಾಗೆ ವಿಶ್ರಾಂತಿಯ ಅಗತ್ಯವಿದೆ, ಆದರೆ ಜಡೇಜಾಗೆ ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು.

Published On - 9:27 pm, Fri, 30 September 22