IPL 2022: ಐಪಿಎಲ್​ನಲ್ಲಿರುವ ಸೌತ್ ಆಫ್ರಿಕಾ ಆಟಗಾರರಿಗೆ ದೇಶಭಕ್ತಿಯ ಪರೀಕ್ಷೆ..!

| Updated By: ಝಾಹಿರ್ ಯೂಸುಫ್

Updated on: Mar 05, 2022 | 3:39 PM

IPL 2022 South Africa Players: ಐಪಿಎಲ್ 2022 ಕ್ಕೆ 11 ದಕ್ಷಿಣ ಆಫ್ರಿಕಾದ ಆಟಗಾರರು ಆಯ್ಕೆಯಾಗಿದ್ದಾರೆ. ಇದರಲ್ಲಿ 6 ಮಂದಿ ಟೆಸ್ಟ್ ತಂಡದ ಖಾಯಂ ಸದಸ್ಯರಾಗಿದ್ದಾರೆ. ಏಕದಿನ ತಂಡದಲ್ಲಿ 3 ಆಟಗಾರರು ಆಡುತ್ತಿದ್ದಾರೆ.

IPL 2022: ಐಪಿಎಲ್​ನಲ್ಲಿರುವ ಸೌತ್ ಆಫ್ರಿಕಾ ಆಟಗಾರರಿಗೆ ದೇಶಭಕ್ತಿಯ ಪರೀಕ್ಷೆ..!
IPL 2022
Follow us on

IPL 2022 ಸೀಸನ್​ 15 ಮಾರ್ಚ್ 26 ರಿಂದ ಶುರುವಾಗಲಿದೆ. ಆದರೆ ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಆಟಗಾರರು ಸಂದಿಗ್ಧತೆ ಸಿಲುಕಿದ್ದಾರೆ. ಏಕೆಂದರೆ ದಕ್ಷಿಣ ಆಫ್ರಿಕಾ ಆಟಗಾರರ ಮುಂದೆ ದೇಶಭಕ್ತಿ ಹಾಗೂ ಐಪಿಎಲ್ ಎರಡು ಆಯ್ಕೆಗಳನ್ನು ನೀಡಲಾಗಿದೆ. ಸರಳವಾಗಿ ಹೇಳುವುದಾದರೆ, ಐಪಿಎಲ್ ಆಡ್ತೀರಾ ಅಥವಾ ದೇಶಕ್ಕಾಗಿ ಆಡ್ತೀರಾ ಎಂಬ ಆಯ್ಕೆಗಳನ್ನು ದಕ್ಷಿಣ ಆಫ್ರಿಕಾ ಆಟಗಾರರ ಮುಂದಿಡಲಾಗಿದೆ. ಏಕೆಂದರೆ ಸೌತ್ ಆಫ್ರಿಕಾ ತಂಡವು ಮಾರ್ಚ್ 18 ರಿಂದ ಬಾಂಗ್ಲಾದೇಶ ವಿರುದ್ದ ಸರಣಿ ಆಡಲಿದೆ. ಈ ಸರಣಿಯಲ್ಲಿ 3 ಏಕದಿನ ಹಾಗೂ 2 ಟೆಸ್ಟ್​ ಪಂದ್ಯಗಳನ್ನು ಆಡಲಾಗುತ್ತದೆ. ಮಾರ್ಚ್ 18, 20 ಮತ್ತು 23 ರಂದು ಏಕದಿನ ಪಂದ್ಯಗಳು ನಡೆಯಲಿದ್ದು, ಟೆಸ್ಟ್ ಸರಣಿಯು ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಇನ್ನು ಈ ಸರಣಿ ಮುಗಿಯುವುದು ಏಪ್ರಿಲ್ 12 ಕ್ಕೆ. ಆದರೆ ಇತ್ತ ಐಪಿಎಲ್​ ಶುರುವಾಗುವುದು ಮಾರ್ಚ್ 26 ರಿಂದ, ಹೀಗಾಗಿ ದಕ್ಷಿಣ ಆಫ್ರಿಕಾ ತಂಡದಲ್ಲಿ ಕಾಣಿಸಿಕೊಂಡರೆ ಐಪಿಎಲ್​ನ ಮೊದಲಾರ್ಧ ಮಿಸ್ ಆಗಲಿದೆ. ಹೀಗಾಗಿ ಸೌತ್ ಆಫ್ರಿಕಾ ಆಟಗಾರರಿಗೆ ದೇಶದ ಪರ ಆಡ್ತೀರಾ ಅಥವಾ ಐಪಿಎಲ್ ಆಡ್ತೀರಾ ಎಂಬ ಆಯ್ಕೆಗಳನ್ನು ಖುದ್ದು ಕ್ರಿಕೆಟ್ ಸೌತ್ ಆಫ್ರಿಕಾ ನೀಡಿದೆ.

ಆಟಗಾರರಿಗೆ ಆಯ್ಕೆ ನೀಡಿದ ಸಿಎಸ್​ಎ:
ಐಪಿಎಲ್ 2022 ಮತ್ತು ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಆಡುವ ನಿರ್ಧಾರವನ್ನು ಆಟಗಾರರಿಗೆ ಬಿಟ್ಟಿರುವುದಾಗಿ ಕ್ರಿಕೆಟ್ ದಕ್ಷಿಣ ಆಫ್ರಿಕಾ ದೃಢಪಡಿಸಿದೆ. ಅಷ್ಟೇ ಅಲ್ಲದೆ ಸಿಎಸ್​ಎನ ಈ ನಿರ್ಧಾರವನ್ನು ಸೌತ್ ಆಫ್ರಿಕಾ ಟೆಸ್ಟ್ ನಾಯಕ ಡೀನ್ ಎಲ್ಗರ್ ದೇಶಭಕ್ತಿಯ ಪರೀಕ್ಷೆ ಎಂದು ಬಣ್ಣಿಸಿದ್ದಾರೆ. ಆಟಗಾರರು ಐಪಿಎಲ್ 2022 ರಲ್ಲಿ ಆಡಲು ಬಯಸುತ್ತೀರಾ ಅಥವಾ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಭಾಗವಾಗಲು ಬಯಸುತ್ತೀರಾ ಎಂದು ಆಟಗಾರರು ಕ್ರಿಕೆಟ್ ದಕ್ಷಿಣ ಆಫ್ರಿಕಾಕ್ಕೆ ಹೇಳಬೇಕಾಗುತ್ತದೆ ಎಂದು ಎಲ್ಗರ್ ಹೇಳಿದ್ದಾರೆ. ಆಟಗಾರರ ಹಿತಾಸಕ್ತಿ ಯಾರೊಂದಿಗೆ ಎಂಬುದು ಇದರಿಂದ ತಿಳಿಯಲಿದೆ ಎಂದು ಎಲ್ಗರ್ ಹೇಳಿದ್ದಾರೆ. ಹೀಗಾಗಿ ಸೌತ್ ಆಫ್ರಿಕಾ ರಾಷ್ಟ್ರೀಯ ತಂಡದಲ್ಲಿರುವ ಆಟಗಾರರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.

ಐಪಿಎಲ್ 2022 ರಲ್ಲಿ ದಕ್ಷಿಣ ಆಫ್ರಿಕಾದ 11 ಆಟಗಾರರು:
ಐಪಿಎಲ್ 2022 ಕ್ಕೆ 11 ದಕ್ಷಿಣ ಆಫ್ರಿಕಾದ ಆಟಗಾರರು ಆಯ್ಕೆಯಾಗಿದ್ದಾರೆ. ಇದರಲ್ಲಿ 6 ಮಂದಿ ಟೆಸ್ಟ್ ತಂಡದ ಖಾಯಂ ಸದಸ್ಯರಾಗಿದ್ದಾರೆ. ಏಕದಿನ ತಂಡದಲ್ಲಿ 3 ಆಟಗಾರರು ಆಡುತ್ತಿದ್ದಾರೆ. ಅಂದರೆ 11 ರಲ್ಲಿ 9 ಆಟಗಾರರು ರಾಷ್ಟ್ರೀಯ ತಂಡದ ಭಾಗವಾಗಿದ್ದಾರೆ. ಅವರೆಂದರೆ ಕಗಿಸೊ ರಬಾಡ, ಅನ್ರಿಕ್ ನೋಕಿಯಾ, ಲುಂಗಿ ಎನ್‌ಗಿಡಿ, ಮಾರ್ಕೊ ಜಾನ್ಸನ್, ಐಡೆನ್ ಮಾರ್ಕ್ರಾಮ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಆಲ್-ರೌಂಡರ್ ಡ್ವೇನ್ ಪ್ರಿಟೋರಿಯಸ್ ಮತ್ತು ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಸೇರಿದ್ದಾರೆ. ಹೀಗಾಗಿ ಈ ಆಟಗಾರರು ಐಪಿಎಲ್ ಅಥವಾ ದೇಶ…ಇವರೆಡರಲ್ಲಿ ಯಾವುದನ್ನು ಆಯ್ಕೆ ಮಾಡಲಿದೆ ಕಾದು ನೋಡಬೇಕಿದೆ.

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(South Africa players face ‘litmus test of loyalty’ ahead of IPL 2022)