- TV9 Kannada Kannada News Photos Shane Warne Death: Shilpa Shetty shares some rare photos of Shane Warne
ಸ್ಪಿನ್ ದಿಗ್ಗಜ ಶೇನ್ ವಾರ್ನ್ ಜೊತೆ ಶಿಲ್ಪಾ ಶೆಟ್ಟಿಯ ಒಡನಾಟ ನೆನಪಿಸುವ ಅಪರೂಪದ ಫೋಟೋಗಳು
ಕ್ರಿಕೆಟಿಗ ಶೇನ್ ವಾರ್ನ್ ನಿಧನದಿಂದ ಅಭಿಮಾನಿಗಳಿಗೆ ತೀವ್ರ ನೋವಾಗಿದೆ. ಮಾ.4ರಂದು ಅವರು ಹೃದಯಾಘಾತದಿಂದ ಕೊನೆಯುಸಿರು ಎಳೆದರು. ಸ್ಪಿನ್ ದಿಗ್ಗಜನನ್ನು ನೆನೆದು ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ.
Updated on: Mar 05, 2022 | 4:04 PM

Laal Singh Chaddha actress Kareena Kapoor Khan latest photos

Laal Singh Chaddha actress Kareena Kapoor Khan latest photos

52ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಶೇನ್ ವಾರ್ನ್ ಮೃತಪಟ್ಟರು ಎಂಬ ಸುದ್ದಿ ಬರಸಿಡಿಲಿನಂತೆ ಬಂದು ಎರಗಿದೆ. ಮನರಂಜನಾ ಲೋಕದ ಘಟಾನುಘಟಿಗಳು ಕೂಡ ಶೇನ್ ವಾರ್ನ್ ಅವರಿಗೆ ಅಭಿಮಾನಿಗಳಾಗಿದ್ದರು. ಬಾಲಿವುಡ್ನ ಅನೇಕ ತಾರೆಯರಿಗೆ ಶೇನ್ ವಾರ್ನ್ ಎಂದರೆ ಅಚ್ಚುಮೆಚ್ಚು.

ಶೇನ್ ವಾರ್ನ್ ನಿಧನದಿಂದ ಹಿಂದಿ ಚಿತ್ರರಂಗದ ಅನೇಕರಿಗೆ ನೋವಾಗಿದೆ. ಅಕ್ಷಯ್ ಕುಮಾರ್, ಶಿಲ್ಪಾ ಶೆಟ್ಟಿ, ವರುಣ್ ಧವನ್, ರಣವೀರ್ ಸಿಂಗ್, ಶಿಬಾನಿ ದಂಡೇಕರ್, ಹುಮಾ ಖುರೇಶಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಶ್ರೇಷ್ಠ ಸ್ಪಿನ್ನರ್ ನಿಧನಕ್ಕೆ ಕಂಬನಿ ಮಿಡಿದ್ದಾರೆ.

‘ಲೆಜೆಂಡ್ಗಳು ಸದಾ ಜೀವಂತವಾಗಿರುತ್ತಾರೆ’ ಎಂದು ಹೇಳಿರುವ ಶಿಲ್ಪಾ ಶೆಟ್ಟಿ ಅವರು ಶೇನ್ ವಾರ್ನ್ ಜೊತೆಗಿನ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ‘ಶೇನ್ ವಾರ್ನ್ ಅವರ ಅಕಾಲಿಕ ಮರಣದ ಸುದ್ದಿ ತಿಳಿದು ಮಾತು ಬಾರದಂತೆ ಆಗಿದೆ. ಓಂ ಶಾಂತಿ’ ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

TV9 Kannada
Read More



