ರಷ್ಯಾದ ಈ ನಾಯಿಯ ಬೆಲೆ 6 ಲಕ್ಷ ರೂ.; ಜಗತ್ತಿನ ವಿವಿಧ ಜಾತಿಯ ನಾಯಿಗಳ ಬಗ್ಗೆ ಇಲ್ಲಿದೆ ಮಾಹಿತಿ
ಜಗತ್ತಿನಲ್ಲಿ ಹಲವು ಜಾತಿಯ ನಾಯಿಗಳಿವೆ. ನೋಡಲು ಆಕರ್ಷಕವಾಗಿರುವ ನಾಯಿಗಳನ್ನು ನೋಡಿದಾಗ ಇವುಗಳ ಬೆಲೆ ಎಷ್ಉ ಎನ್ನುವ ಕುತೂಹಲ ಮೂಡತ್ತದೆ. ಇಲ್ಲಿದೆ ನೋಡಿ ಜಗತ್ತಿನ ಹಲವು ವಿಧದ ನಾಯಿಗಳ ಪರಿಚಯ
Updated on:Mar 05, 2022 | 6:13 PM

ಸಮೋಯ್ಡ್ ಹೆಸರಿನ ಈ ನಾಯಿ ಕಾಣಸಿಗುವುದು ರಷ್ಯಾ, ಸೈಬೀರಿಯಾಗಳಲ್ಲಾಗಿದೆ. ಇದರ ಬೆಲೆ 6,11,404 ರೂ ಆಗಿದೆ.

ಕ್ಯಾವಲಿಯರ್ ಕಿಂಗ್ ಚಾರ್ಲ್ಸ್ ಸ್ಪೈನಿಯೆಲ್ ( Cavalier King Charles Spaniel) - ಈ ನಾಯಿಯು ಯುಕೆ ಮೂಲದ್ದಾಗಿದೆ. ಮನುಷ್ಯರ ಸ್ನೇಹವನ್ನು ಹೆಚ್ಚು ಬಯಸುವ ಈ ನಾಯಿ ಅಂದದ ಕಿವಿಗಳನ್ನು ಹೊಂದಿರುತ್ತವೆ. ಈ ನಾಯಿಯ ಬೆಲೆ ಸುಮಾರು 76,425 ರೂ.ಆಗಿದೆ.

ಜೆಕೊಸ್ಲೊವಾಕಿಯನ್ ವುಲ್ಫ್ ಡಾಗ್: ಬಿಳಿ ಮತ್ತು ಹಳದಿ ಬಣ್ಣಗಳ ರೋಮವನ್ನು ಹೊಂದಿರುವ ಈ ನಾಯಿ 1955ರಲ್ಲಿ ಮೊದಲು ಗುರುತಿಸಲ್ಪಟ್ಟಿತು. ಇದರ ಬೆಲೆ 1,14,638 ರೂ ಆಗಿದೆ.

ಬೆಡ್ಲಿಂಗ್ಟನ್ ಟೆರಿಯರ್ ಎನ್ನುವ ಹೆಸರಿನ ಈ ನಾಯಿಈಶಾನ್ಯ ಇಂಗ್ಲೆಂಡ್ನಲ್ಲಿ ಕಂಡುಬರುತ್ತದೆ. ರೋತ್ಬರಿಸ್ ಲ್ಯಾಂಬ್" ಎನ್ನುವುದು ಇದರ ನಿಕ್ ನೇಮ್ ಆಗಿದೆ. ಇದರ ಬೆಲೆ 1,37,565ರೂ ಆಗಿದೆ.

ಡಬಲ್ ಡೂಡಲ್ ಎನ್ನುವ ಈ ನಾಯಿ ಯುಎಸ್ನಲ್ಲಿ ಕಂಡುಬರುತ್ತದೆ. ಇವುಗಳು ಲಾಬ್ರಡಾರ್ ಮತ್ತು ಗೋಲ್ಡ್ನನ್ ರಿಟ್ರೀವರ್ನ ಮಿಶ್ರ ತಳಿ ಆಗಿದೆ. ಇದರ ಬೆಲೆ 1,45,208ರೂ ಆಗಿದೆ.

ಉತ್ತರ ಬೆಲ್ಚಿಯಂನಲ್ಲಿ ಕಂಡುಬರುವ ಈ ನಾಯಿಯ ಹೆಸರು ಬೌವಿಯರ್ ಡೆಸ್ ಫ್ಲಾಂಡ್ರೆಸ್. ಕೃಷಿ ಕೆಲಸಗಳಿಗೆ ಈ ನಾಯಿಗಳನ್ನು ತೊಡಗಿಸಿಕೊಳ್ಳಲಾಗುತ್ತದೆ. ಇದರ ಬೆಲೆ 1,52,851 ರೂ. ಆಗಿದೆ.

ಮಾಸ್ಕೋ ವಾಟರ್ ಡಾಗ್ ಎನ್ನುವ ನಿಕ್ ನೇಮ್ ಹೊಂದಿರುವ ಕೆನಡಾ ಮೂಲದ ಈ ನಾಯಿಯ ಹೆಸರು ನ್ಯೂಪೌಂಡ್ಲ್ಯಾಂಡ್ ಎಂದಾಗಿದೆ ಇದರ ಬೆಲೆ 1,52,851 ಆಗಿದೆ.

ಲೋಚೆನ್ ಹೆಸರಿನ ಈ ನಾಯಿ ಜರ್ಮನಿ ಮತ್ತು ಫ್ರಾನ್ಸ್ನಲ್ಲಿ ಕಂಡುಬರುತ್ತವೆ. ಇದರ ಬೆಲೆ 3,82,127 ರೂ ಆಗಿದೆ. ಕ್ಯೂಟ್ ಆಗಿ ಕಾಣುವ ಈ ನಾಯಿಗಳು ಸಾಕಲು ಯೋಗ್ಯವಾಗಿವೆ.

ಇಂಗ್ಲೆಂಡ್ನಲ್ಲಿ ಕಂಡುಬರುವ ಈ ನಾಯಿಯನ್ನು ಬುಲ್ಡಾಗ್ ಎಂದು ಕರೆಯುತ್ತಾರೆ. ಇಇದರ ಬೆಲೆ 1,52,851 ಆಗಿದೆ.

ಚೀನಾದಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಈ ನಾಯಿಯನ್ನುಚೌ ಚೌ ಎಂದು ಕರೆಯಲಾಗುತ್ತದೆ. ಇದರ ಬೆಲೆ 2,21,633 ರೂ. ಆಗಿದೆ. ಈ ನಾಯಿಯನ್ನು ಎಲ್ಲಾ ಕೆಲಸಗಳಲ್ಲೂ ತೊಡಗಿಸಿಕೊಳ್ಲಲಾಗುತ್ತದೆ.

ಕಣ್ಣಿನ ಸೂಕ್ಷ್ಮತೆಯಿಂದಲೇ ಬೇಟೆಯನ್ನು ಹಿಡಿಯುವ ಈ ನಾಯಿಗಳು ಈಜಿಪ್ಟ್ನಲ್ಲಿ ಕಂಡುಬರುತ್ತವೆ. ಇದರ ಬೆಲೆ 1,91,063 ರೂ. ಆಗಿದೆ.

ಪೆರುವಿನಲ್ಲಿ ಕಂಡುಬರುವ ಪೆರುವಿಯನ್ ಹೇರ್ಲೆಸ್ ನಾಯಿಗಳು ನೋಡಲು ಸಣ್ಣದಾಗಿ ಕಾಣಿಸಿದರೂ ಹೆಚ್ಚು ಬಲಶಾಲಿಯಾಗಿರುತ್ತವೆ. ಇದರ ಬೆಲೆ 2,29,276 ರೂ. ಆಗಿದೆ.

ಟಿಬೆಟಿಯನ್ ಮಾಸ್ಟಿಫ್ ಎನ್ನುವ ಈ ನಾಯಿ ಹೆಚ್ಚುನೇಪಾಳ, ಟಿಬೇಟ್, ಚೀನಾದಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಜಗತ್ತಿನ ಅತ್ಯಂತ ದುಬಾರಿ ನಾಯಿಯಾಗಿದೆ. ಇದರ ಬೆಲೆ 5,34,978. ರೂ ಆಗಿದೆ.

ಕ್ಯಾನರಿ ಐಸ್ಲ್ಯಾಂಡ್ನಲ್ಲಿ ಕಂಡುಬರುವ ಈ ನಾಯಿಯ ಹೆಸರು ಪೆರೋ ಡಿ ಪ್ರೆಸಾ ಕೆನಾರಿಯೊ ಎಂದಾಗಿದೆ. ಇದು ಅಪರೂಪದ ತಳಿಯ ನಾಯಿಯಾಗಿದೆ. ಇದರ ಬೆಲೆ 2,29,276 ರೂ. ಆಗಿದೆ.

ಓಲ್ಡೇ ಇಂಗ್ಲಿಷ್ ಡಾಗ್ ಎನ್ನುವ ಈ ನಾಯಿ ಇಂಗ್ಲಂಡ್ನಲ್ಲಿ ಕಂಡುಬರುತ್ತದೆ. ಬಲಶಾಲಿ ನಾಯಿಗಳಲ್ಲಿ ಇದು ಕೂಡ ಒಂದಾಗಿದೆ. ಇದರ ಬೆಲೆ 2,52,204 ರೂ.ಆಗಿದೆ.
Published On - 6:10 pm, Sat, 5 March 22



















