ಏಕದಿನ ವಿಶ್ವಕಪ್ನ 15ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ನೆದರ್ಲೆಂಡ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಧರ್ಮಶಾಲಾದ ಹೆಚ್ಪಿಸಿಎ ಸ್ಟೇಡಿಯಂನಲ್ಲಿ ನಡೆದ 43 ಓವರ್ಗಳ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ಸ್ ತಂಡವು 8 ವಿಕೆಟ್ ಕಳೆದುಕೊಂಡು 245 ರನ್ ಕಲೆಹಾಕಿತು. ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 42.5 ಓವರ್ಗಳಲ್ಲಿ 207 ರನ್ಗಳಿಗೆ ಆಲೌಟ್ ಆಗುವ ಮೂಲಕ 38 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಜೆರಾಲ್ಡ್ ಕೋಟ್ಝಿ.
ನೆದರ್ಲೆಂಡ್ಸ್ (ಪ್ಲೇಯಿಂಗ್ XI): ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಬಾಸ್ ಡಿ ಲೀಡೆ, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಸೈಬ್ರಾಂಡ್ ಎಂಗಲ್ಬ್ರೆಕ್ಟ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್ತ್, ಪಾಲ್ ವ್ಯಾನ್ ಮೀಕೆರೆನ್
ನೆದರ್ಲೆಂಡ್ಸ್ ಪರ ಲೋಗನ್ ವ್ಯಾನ್ ಬೀಕ್ 3 ವಿಕೆಟ್ ಪಡೆದರೆ, ರೊಲೋಫ್ ಹಾಗೂ ಪೌಲ್ ವ್ಯಾನ್ ತಲಾ 2 ವಿಕೆಟ್ ಪಡೆದು ಮಿಂಚಿದರು.
40 ಓವರ್ಗಳಲ್ಲಿ 184 ರನ್ ಕಲೆಹಾಕಿದ ಸೌತ್ ಆಫ್ರಿಕಾ ತಂಡ.
9 ವಿಕೆಟ್ ಕಬಳಿಸಿ ಗೆಲುವಿನತ್ತ ಮುಖ ಮಾಡಿರುವ ನೆದರ್ಲೆಂಡ್ಸ್.
ಸೌತ್ ಆಫ್ರಿಕಾಗೆ ಗೆಲ್ಲಲು 18 ಎಸೆತಗಳಲ್ಲಿ 62 ರನ್ಗಳ ಅವಶ್ಯಕತೆ.
ನೆದರ್ಲೆಂಡ್ಸ್ನ ಗೆಲುವಿಗೆ ಒಂದು ವಿಕೆಟ್ನ ಅಗತ್ಯತೆ
ಮಳೆಯಿಂದಾಗಿ 43 ಓವರ್ಗಳ ಪಂದ್ಯ
ಬಾಸ್ ಡಿ ಲೀಡೆ ಎಸೆದ 36ನೇ ಓವರ್ನ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿ ನಿರ್ಗಮಿಸಿದ ಕಗಿಸೊ ರಬಾಡ (9).
ನೆದರ್ಲೆಂಡ್ಸ್ ತಂಡಕ್ಕೆ 9ನೇ ಯಶಸ್ಸು.
ಸೌತ್ ಆಫ್ರಿಕಾ ತಂಡಕ್ಕೆ ಗೆಲ್ಲಲು 42 ಎಸೆತಗಳಲ್ಲಿ 77 ರನ್ಗಳ ಅವಶ್ಯಕತೆ.
ಮಳೆಯಿಂದಾಗಿ 43 ಓವರ್ಗಳ ಪಂದ್ಯ.
35 ಓವರ್ಗಳಲ್ಲಿ 166 ರನ್ ಕಲೆಹಾಕಿದ ಸೌತ್ ಆಫ್ರಿಕಾ ತಂಡ.
8 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ನೆದರ್ಲೆಂಡ್ಸ್.
ಇನ್ನೆರಡು ವಿಕೆಟ್ ಕಬಳಿಸಿದರೆ ನೆದರ್ಲೆಂಡ್ ತಂಡಕ್ಕೆ ಜಯ.
ಸೌತ್ ಆಫ್ರಿಕಾ ತಂಡಕ್ಕೆ ಇನ್ನೂ 78 ರನ್ಗಳ ಅವಶ್ಯಕತೆ.
ಬಾಸ್ ಲೀಡೆ ಎಸೆದ 34ನೇ ಓವರ್ನ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಜೆರಾಲ್ಡೆ ಕೋಟ್ಝಿ.
ಗೆಲುವಿನತ್ತ ದಾಪುಗಾಲಿಡುತ್ತಿರುವ ನೆದರ್ಲೆಂಡ್ಸ್ ತಂಡ.
(ಮಳೆಯಿಂದಾಗಿ 43 ಓವರ್ಗಳ ಪಂದ್ಯ)
ಲೋಗನ್ ವ್ಯಾನ್ ಬೀಕ್ ಎಸೆದ 31ನೇ ಓವರ್ನ ಕೊನೆಯ ಎಸೆತದಲ್ಲಿ ಡೇವಿಡ್ ಮಿಲ್ಲರ್ ಕ್ಲೀನ್ ಬೌಲ್ಡ್.
52 ಎಸೆತಗಳಲ್ಲಿ 43 ರನ್ ಬಾರಿಸಿ ಔಟಾದ ಡೇವಿಡ್ ಮಿಲ್ಲರ್.
ಸೋಲಿನ ಸುಳಿಯಲ್ಲಿ ಸೌತ್ ಆಫ್ರಿಕಾ ತಂಡ.
(ಮಳೆಯಿಂದಾಗಿ 43 ಓವರ್ಗಳ ಪಂದ್ಯ)
30 ಓವರ್ಗಳ ಮುಕ್ತಾಯದ ವೇಳೆಗೆ 141 ರನ್ ಕಲೆಹಾಕಿದ ಸೌತ್ ಆಫ್ರಿಕಾ.
ಕ್ರೀಸ್ನಲ್ಲಿ ಜೆರಾಲ್ಡ್ ಕೊಯಟ್ಝಿ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್.
ಇನ್ನು 78 ಎಸೆತಗಳಲ್ಲಿ 105 ರನ್ಗಳ ಅವಶ್ಯಕತೆ.
(ಮಳೆಯಿಂದಾಗಿ 43 ಓವರ್ಗಳ ಪಂದ್ಯ)
ಪಾಲ್ ವ್ಯಾನ್ ಮೀಕೆರೆನ್ ಎಸೆದ 25ನೇ ಓವರ್ನ ಕೊನೆಯ ಎಸೆತದಲ್ಲಿ ಮಾರ್ಕೊ ಯಾನ್ಸನ್ ಕ್ಲೀನ್ ಬೌಲ್ಡ್.
25 ಓವರ್ಗಳ ಮುಕ್ತಾಯದ ವೇಳೆಗೆ 109 ರನ್ ಕಲೆಹಾಕಿದ ಸೌತ್ ಆಫ್ರಿಕಾ.
ಭರ್ಜರಿ ಬೌಲಿಂಗ್ ಮೂಲಕ 6 ವಿಕೆಟ್ ಕಬಳಿಸಿದ ನೆದರ್ಲೆಂಡ್ಸ್ ತಂಡ.
(ಮಳೆಯಿಂದಾಗಿ 43 ಓವರ್ಗಳ ಪಂದ್ಯ)
20 ಓವರ್ಗಳ ಮುಕ್ತಾಯದ ವೇಳೆಗೆ 93 ರನ್ ಕಲೆಹಾಕಿದ ಸೌತ್ ಆಫ್ರಿಕಾ.
5 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ನೆದರ್ಲೆಂಡ್ಸ್ ಬೌಲರ್ಗಳು.
ಕ್ರೀಸ್ನಲ್ಲಿ ಮಾರ್ಕೊ ಯಾನ್ಸನ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್.
(ಮಳೆಯಿಂದಾಗಿ 43 ಓವರ್ಗಳ ಪಂದ್ಯ)
ಲೋಗನ್ ವ್ಯಾನ್ ಬೀಕ್ ಎಸೆದ 19ನೇ ಓವರ್ನ 5ನೇ ಎಸೆತದಲ್ಲಿ ಲೆಗ್ ಸೈಡ್ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಹೆನ್ರಿಕ್ ಕ್ಲಾಸೆನ್.
28 ಎಸೆತಗಳಲ್ಲಿ 28 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಹೆನ್ರಿಕ್ ಕ್ಲಾಸೆನ್.
18 ಓವರ್ಗಳ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 82 ರನ್ ಕಲೆಹಾಕಿದ ಸೌತ್ ಆಫ್ರಿಕಾ.
ಕ್ರೀಸ್ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್.
5ನೇ ವಿಕೆಟ್ಗೆ 38 ರನ್ಗಳ ಜೊತೆಯಾಟವಾಡಿರುವ ಕ್ಲಾಸೆನ್-ಮಿಲ್ಲರ್.
(ಮಳೆಯಿಂದಾಗಿ 43 ಓವರ್ಗಳ ಪಂದ್ಯ)
15 ಓವರ್ಗಳ ಮುಕ್ತಾಯದ ವೇಳೆಗೆ 63 ರನ್ ಕಲೆಹಾಕಿದ ಸೌತ್ ಆಫ್ರಿಕಾ.
4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ನೆದರ್ಲೆಂಡ್ಸ್ ಬೌಲರ್ಗಳು.
ಕ್ರೀಸ್ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್.
(ಮಳೆಯಿಂದಾಗಿ 43 ಓವರ್ಗಳ ಪಂದ್ಯ)
ರೋಲೋಫ್ ವ್ಯಾನ್ ಡೆರ್ ಮೆರ್ವೆ 12ನೇ ಓವರ್ನ 2ನೇ ಎಸೆತದಲ್ಲಿ ರಿವರ್ಸ್ ಶಾಟ್ಗೆ ಯತ್ನಿಸಿ ಕ್ಯಾಚ್ ನೀಡಿದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್.
ಕ್ರೀಸ್ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್.
ಪಾಲ್ ವ್ಯಾನ್ ಮೀಕೆರೆನ್ ಎಸೆದ 11ನೇ ಓವರ್ನ 2ನೇ ಎಸೆತದಲ್ಲಿ ಐಡೆನ್ ಮಾರ್ಕ್ರಾಮ್ ಕ್ಲೀನ್ ಬೌಲ್ಡ್.
ನೆದರ್ಲೆಂಡ್ಸ್ ತಂಡಕ್ಕೆ ಮೂರನೇ ಯಶಸ್ಸು…ಸೌತ್ ಆಫ್ರಿಕಾಗೆ ಆರಂಭಿಕ ಆಘಾತ
ಕ್ರೀಸ್ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಬ್ಯಾಟಿಂಗ್.
ರೋಲೋಫ್ ವ್ಯಾನ್ ಡೆರ್ ಮೆರ್ವೆ ಎಸೆದ 10ನೇ ಓವರ್ನ ಮೊದಲ ಎಸೆತದಲ್ಲೇ ಟೆಂಬಾ ಬವುಮಾ ಕ್ಲೀನ್ ಬೌಲ್ಡ್.
10 ಓವರ್ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡದ ಸ್ಕೋರ್ 41 ರನ್ಗಳು.
(ಮಳೆಯಿಂದಾಗಿ 43 ಓವರ್ಗಳ ಪಂದ್ಯ)
ಕಾಲಿನ ಅಕರ್ಮನ್ ಎಸೆದ 8ನೇ ಓವರ್ನ ಕೊನೆಯ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಕ್ವಿಂಟನ್ ಡಿಕಾಕ್.
22 ಎಸೆತಗಳಲ್ಲಿ 20 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ಕ್ವಿಂಟನ್ ಡಿಕಾಕ್.
(ಮಳೆಯಿಂದಾಗಿ 43 ಓವರ್ಗಳ ಪಂದ್ಯ)
ಕಾಲಿನ್ ಅಕರ್ಮನ್ ಎಸೆದ 6ನೇ ಓವರ್ನ 2ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಟೆಂಬಾ ಬವುಮಾ.
ಕೊನೆಯ ಎಸೆತದಲ್ಲಿ ಬವುಮಾ ಬ್ಯಾಟ್ನಿಂದ ಡೀಪ್ ಎಕ್ಸ್ಟ್ರಾ ಕವರ್ನತ್ತ ಮತ್ತೊಂದು ಫೋರ್.
ಆರ್ಯನ್ ದತ್ ಎಸೆದ 5ನೇ ಓವರ್ನ 2ನೇ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಕ್ವಿಂಟನ್ ಡಿಕಾಕ್.
5 ಓವರ್ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡದ ಸ್ಕೋರ್ 21 ರನ್ಗಳು.
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ಟೆಂಬಾ ಬವುಮಾ ಬ್ಯಾಟಿಂಗ್.
(ಮಳೆಯಿಂದಾಗಿ 43 ಓವರ್ಗಳ ಪಂದ್ಯ)
ಲೋಗನ್ ವ್ಯಾನ್ ಬೀಕ್ ಎಸೆದ 2ನೇ ಓವರ್ನ 5ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಕ್ವಿಂಟನ್ ಡಿಕಾಕ್.
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ಟೆಂಬಾ ಬವುಮಾ ಬ್ಯಾಟಿಂಗ್.
(ಮಳೆಯಿಂದಾಗಿ 43 ಓವರ್ಗಳ ಪಂದ್ಯ)
ಮೊದಲ ಓವರ್ ಮೇಡನ್ ಮಾಡಿದ ಸ್ಪಿನ್ನರ್ ಆರ್ಯನ್ ದತ್.
ಕ್ರೀಸ್ನಲ್ಲಿ ಟೆಂಬಾ ಬವುಮಾ ಮತ್ತು ಕ್ವಿಂಟನ್ ಡಿಕಾಕ್ ಬ್ಯಾಟಿಂಗ್.
(ಮಳೆಯಿಂದಾಗಿ 43 ಓವರ್ಗಳ ಪಂದ್ಯ)
ಜೆರಾಲ್ಡ್ ಕೊಯಟ್ಝಿ ಎಸೆದ 43ನೇ ಓವರ್ನ 4ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಸಿಕ್ಸ್ ಸಿಡಿಸಿದ ಆರ್ಯನ್ ದತ್.
43 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 245 ರನ್ ಕಲೆಹಾಕಿದ ನೆದರ್ಲೆಂಡ್ಸ್ ತಂಡ.
ಸೌತ್ ಆಫ್ರಿಕಾಗೆ 246 ರನ್ಗಳ ಗುರಿ.
(ಮಳೆಯಿಂದಾಗಿ 43 ಓವರ್ಗಳ ಪಂದ್ಯ)
ಕಗಿಸೊ ರಬಾಡ ಎಸೆದ 41ನೇ ಓವರ್ನ 5ನೇ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಆರ್ಯನ್ ದತ್.
41 ಓವರ್ಗಳ ಮುಕ್ತಾಯದ ವೇಳೆಗೆ ನೆದರ್ಲೆಂಡ್ಸ್ ಸ್ಕೋರ್ 220 ರನ್ಗಳು.
(ಮಳೆಯಿಂದಾಗಿ 43 ಓವರ್ಗಳ ಪಂದ್ಯ)
ಲುಂಗಿ ಎನ್ಗಿಡಿ ಎಸೆದ 40ನೇ ಓವರ್ನ 5ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ರೋಲೋಫ್ ವ್ಯಾನ್ ಡೆರ್ ಮೆರ್ವೆ.
40 ಓವರ್ಗಳ ಮುಕ್ತಾಯದ ವೇಳೆಗೆ 204 ರನ್ ಕಲೆಹಾಕಿದ ನೆದರ್ಲೆಂಡ್ಸ್.
ಕ್ರೀಸ್ನಲ್ಲಿ ಸ್ಕಾಟ್ ಎಡ್ವರ್ಡ್ಸ್ ಹಾಗೂ ಆರ್ಯನ್ ದತ್ ಬ್ಯಾಟಿಂಗ್.
39 ಓವರ್ಗಳ ಮುಕ್ತಾಯದ ವೇಳೆಗೆ 192 ರನ್ ಕಲೆಹಾಕಿದ ನೆದರ್ಲೆಂಡ್ಸ್.
ಕ್ರೀಸ್ನಲ್ಲಿ ಸ್ಕಾಟ್ ಎಡ್ವರ್ಡ್ಸ್ ಹಾಗೂ ಲೋಗನ್ ವ್ಯಾನ್ ಬೀಕ್ ಬ್ಯಾಟಿಂಗ್.
(ಮಳೆಯಿಂದಾಗಿ 43 ಓವರ್ಗಳ ಪಂದ್ಯ)
ಜೆರಾಲ್ಡ್ ಕೋಟ್ಝಿ ಎಸೆದ 35ನೇ ಓವರ್ನ 2ನೇ ಮತ್ತು 3ನೇ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ವಂಡರ್ ಮ ಮೆರ್ವೆ.
5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಲೋಫ್ ವ್ಯಾನ್ ಡೆರ್ ಮೆರ್ವೆ.
35 ಓವರ್ಗಳ ಮುಕ್ತಾಯದ ವೇಳೆಗೆ 156 ರನ್ ಕಲೆಹಾಕಿದ ನೆದರ್ಲೆಂಡ್ಸ್.
ಕಗಿಸೊ ರಬಾಡ ಎಸೆದ 33ನೇ ಓವರ್ನ ಮೂರನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸ್ಕಾಟ್ ಎಡ್ವರ್ಡ್ಸ್.
ಕ್ರೀಸ್ನಲ್ಲಿ ಸ್ಕಾಟ್ ಎಡ್ವರ್ಡ್ಸ್ ಹಾಗೂ ಲೋಗನ್ ವ್ಯಾನ್ ಬೀಕ್ ಬ್ಯಾಟಿಂಗ್.
32 ಓವರ್ಗಳ ಮುಕ್ತಾಯದ ವೇಳೆಗೆ 132 ರನ್ ಕಲೆಹಾಕಿದ ನೆದರ್ಲೆಂಡ್ಸ್.
6 ವಿಕೆಟ್ಗಳನ್ನು ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಸೌತ್ ಆಫ್ರಿಕಾ.
ಕ್ರೀಸ್ನಲ್ಲಿ ಸ್ಕಾಟ್ ಎಡ್ವರ್ಡ್ಸ್ ಹಾಗೂ ಲೋಗನ್ ವ್ಯಾನ್ ಬೀಕ್ ಬ್ಯಾಟಿಂಗ್.
(ಮಳೆಯಿಂದಾಗಿ 43 ಓವರ್ಗಳ ಪಂದ್ಯ)
20 ಓವರ್ಗಳ ಮುಕ್ತಾಯದ ವೇಳೆಗೆ 81 ರನ್ ಕಲೆಹಾಕಿದ ನೆದರ್ಲೆಂಡ್ಸ್.
ಕ್ರೀಸ್ನಲ್ಲಿ ಸ್ಕಾಟ್ ಎಡ್ವರ್ಡ್ಸ್ ಹಾಗೂ ತೇಜ ನಿಡಮನೂರು ಬ್ಯಾಟಿಂಗ್.
5 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಸೌತ್ ಆಫ್ರಿಕಾ.
ಜೆರಾಲ್ಡ್ ಕೋಟ್ಝಿ ಎಸೆದ 16ನೇ ಓವರ್ನ ಮೊದಲ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಕಾಲಿನ್ ಅಕರ್ಮನ್.
25 ಎಸೆತಗಳಲ್ಲಿ 13 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಕಾಲಿನ್ ಅಕರ್ಮನ್.
16 ಓವರ್ಗಳ ಮುಕ್ತಾಯದ ವೇಳೆಗೆ 58 ರನ್ಗಳಿಗೆ 4 ವಿಕೆಟ್ ಕಳೆದುಕೊಂಡ ನೆದರ್ಲೆಂಡ್ಸ್.
ಕಗಿಸೊ ರಬಾಡ ಎಸೆದ 11ನೇ ಓವರ್ನ 2ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಕಾಲಿನ್ ಅಕರ್ಮನ್.
5ನೇ ಎಸೆತದಲ್ಲಿ ಬಾಸ್ ಡಿ ಲೀಡೆ ಎಲ್ಬಿಡಬ್ಲ್ಯೂ…ಸೌತ್ ಆಫ್ರಿಕಾ ತಂಡಕ್ಕೆ 3ನೇ ಯಶಸ್ಸು.
10 ಓವರ್ಗಳಲ್ಲಿ 32 ರನ್ ಕಲೆಹಾಕಿದ ನೆದರ್ಲೆಂಡ್ಸ್.
2 ವಿಕೆಟ್ ಪಡೆಯುವ ಮೂಲಕ ಉತ್ತಮ ಆರಂಭ ಪಡೆದಿರುವ ಸೌತ್ ಆಫ್ರಿಕಾ.
ಕ್ರೀಸ್ನಲ್ಲಿ ಕಾಲಿನ್ ಅಕರ್ಮನ್ ಹಾಗೂ ಬಾಸ್ ಡಿ ಲೀಡೆ ಬ್ಯಾಟಿಂಗ್.
(ಮಳೆಯಿಂದಾಗಿ 43 ಓವರ್ಗಳ ಪಂದ್ಯ)
ಸೌತ್ ಆಫ್ರಿಕಾ ತಂಡದಿಂದ ಉತ್ತಮ ಬೌಲಿಂಗ್.
9 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಕೇವಲ 28 ರನ್ ಕಲೆಹಾಕಿದ ನೆದರ್ಲೆಂಡ್ಸ್.
ಕ್ರೀಸ್ನಲ್ಲಿ ಕಾಲಿನ್ ಅಕರ್ಮನ್ ಹಾಗೂ ಬಾಸ್ ಡಿ ಲೀಡೆ ಬ್ಯಾಟಿಂಗ್.
ಕಗಿಸೊ ರಬಾಡ ಎಸೆದ 7ನೇ ಓವರ್ನ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ ವಿಕ್ರಮಜಿತ್ ಸಿಂಗ್.
ಮಾರ್ಕೊ ಯಾನ್ಸನ್ ಎಸೆದ 8ನೇ ಓವರ್ನ ಮೊದಲ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಮ್ಯಾಕ್ಸ್ ಒಡೌಡ್.
(43 ಓವರ್ಗಳ ಪಂದ್ಯ)
ಲುಂಗಿ ಎನ್ಗಿಡಿ ಎಸೆದ 5ನೇ ಓವರ್ನ 5ನೇ ಎಸೆತದಲ್ಲಿ ಡೀಪ್ ಬ್ಯಾಕ್ವರ್ಡ್ ಪಾಯಿಂಟ್ನತ್ತ ಆಕರ್ಷಕ ಫೋರ್ ಬಾರಿಸಿದ ಬಲಗೈ ದಾಂಡಿಗ ಮ್ಯಾಕ್ಸ್ ಒಡೌಡ್.
5 ಓವರ್ಗಳ ಮುಕ್ತಾಯಕ್ಕೆ ನೆದರ್ಲೆಂಡ್ ತಂಡದ ಸ್ಕೋರ್ 21 ರನ್ಗಳು.
ಕ್ರೀಸ್ನಲ್ಲಿ ವಿಕ್ರಮಜಿತ್ ಸಿಂಗ್ ಹಾಗೂ ಮ್ಯಾಕ್ಸ್ ಒಡೌಡ್ ಬ್ಯಾಟಿಂಗ್.
(43 ಓವರ್ಗಳ ಪಂದ್ಯ)
ಲುಂಗಿ ಎನ್ಗಿಡಿ ಎಸೆದ 3ನೇ ಓವರ್ನ 3ನೇ ಹಾಗೂ 4ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಮ್ಯಾಕ್ಸ್ ಒಡೌಡ್.
ನೆದರ್ಲೆಂಡ್ಸ್ ತಂಡದಿಂದ ಉತ್ತಮ ಆರಂಭ.
ಕ್ರೀಸ್ನಲ್ಲಿ ವಿಕ್ರಮಜಿತ್ ಸಿಂಗ್ ಹಾಗೂ ಮ್ಯಾಕ್ಸ್ ಒಡೌಡ್ ಬ್ಯಾಟಿಂಗ್.
(43 ಓವರ್ಗಳ ಪಂದ್ಯ)
ಮಾರ್ಕೊ ಯಾನ್ಸನ್ ಎಸೆದ 2ನೇ ಓವರ್ನ 3ನೇ ಎಸೆತದಲ್ಲಿ ಡೀಪ್ ಬ್ಯಾಕ್ವರ್ಡ್ ಪಾಯಿಂಟ್ನತ್ತ ಫೋರ್ ಬಾರಿಸಿದ ಮ್ಯಾಕ್ಸ್ ಒಡೌಡ್.
ಇದು ನೆದರ್ಲೆಂಡ್ಸ್ ಇನಿಂಗ್ಸ್ನ ಮೊದಲ ಬೌಂಡರಿ.
ಕ್ರೀಸ್ನಲ್ಲಿ ವಿಕ್ರಮಜಿತ್ ಸಿಂಗ್ ಹಾಗೂ ಮ್ಯಾಕ್ಸ್ ಒಡೌಡ್ ಬ್ಯಾಟಿಂಗ್.
ಮೊದಲ ಓವರ್ ಮೇಡನ್ ಮಾಡಿದ ಲುಂಗಿ ಎನ್ಗಿಡಿ.
ಕ್ರೀಸ್ನಲ್ಲಿ ವಿಕ್ರಮಜಿತ್ ಸಿಂಗ್ ಹಾಗೂ ಮ್ಯಾಕ್ಸ್ ಒಡೌಡ್ ಬ್ಯಾಟಿಂಗ್.
(43 ಓವರ್ಗಳ ಪಂದ್ಯ)
ಮಳೆಯಿಂದಾಗಿ ತಡವಾಗಿ ಆರಂಭವಾಗಿರುವ ಈ ಪಂದ್ಯದಲ್ಲಿ ಓವರ್ಗಳನ್ನು ಕಡಿತ ಮಾಡಲಾಗಿದೆ. ಅದರಂತೆ ಉಭಯ ತಂಡಗಳು ತಲಾ 43 ಓವರ್ಗಳ ಇನಿಂಗ್ಸ್ ಆಡಲಿದೆ.
ಧರ್ಮಶಾಲಾದ ಹೆಚ್ಪಿಸಿಎ ಸ್ಟೇಡಿಯಂನ ಸುತ್ತ ಮುತ್ತ ಮಳೆಯಾಗುತ್ತಿದ್ದು, ಹೀಗಾಗಿ ಸೌತ್ ಆಫ್ರಿಕಾ ಮತ್ತು ನೆದರ್ಲೆಂಡ್ಸ್ ನಡುವಣ ಪಂದ್ಯ ಆರಂಭ ಮತ್ತಷ್ಟು ವಿಳಂಬವಾಗಿದೆ.
ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಜೆರಾಲ್ಡ್ ಕೋಟ್ಝಿ.
ನೆದರ್ಲೆಂಡ್ಸ್ (ಪ್ಲೇಯಿಂಗ್ XI): ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಬಾಸ್ ಡಿ ಲೀಡೆ, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಸೈಬ್ರಾಂಡ್ ಎಂಗಲ್ಬ್ರೆಕ್ಟ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್ತ್, ಪಾಲ್ ವ್ಯಾನ್ ಮೀಕೆರೆನ್
ಧರ್ಮಶಾಲಾದ ಹೆಚ್ಪಿಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ಟಾಸ್ ಗೆದ್ದಿರುವ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಬೌಲಿಂಗ್ ಆಯ್ದುಕೊಂಡಿದ್ದಾರೆ.
ಸೌತ್ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಜೆರಾಲ್ಡ್ ಕೊಯೆಟ್ಝಿ, ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಯಾನ್ಸೆನ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ರಾಸ್ಸೀ ವ್ಯಾನ್ ಡೆರ್ ಡಸ್ಸೆನ್, ತಬ್ರೇಝ್ ಶಂಸಿ, ಕಗಿಸೊ ರಬಾಡ, ಆಂಡಿಲೆ ಫೆಹ್ಲುಕ್ವಾಯೊ ಮತ್ತು ಲಿಝಾಡ್ ವಿಲಿಯಮ್ಸ್.
ನೆದರ್ಲೆಂಡ್ಸ್ ತಂಡ: ಸ್ಕಾಟ್ ಎಡ್ವರ್ಡ್ಸ್ (ನಾಯಕ), ಮ್ಯಾಕ್ಸ್ ಒ’ಡೌಡ್, ಬಾಸ್ ಡಿ ಲೀಡೆ, ವಿಕ್ರಮ್ ಸಿಂಗ್, ತೇಜ ನಿಡಮನೂರು, ಪಾಲ್ ವ್ಯಾನ್ ಮೀಕೆರೆನ್, ಕಾಲಿನ್ ಅಕರ್ಮನ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ರಿಯಾನ್ ಕ್ಲೈನ್, ವೆಸ್ಲಿ ಬ್ಯಾರೆಸಿ, ಸಕ್ವಿಬ್ ಬ್ಯಾರೆಸಿ ಜುಲ್ಫಿಕರ್, ಶರೀಜ್ ಅಹ್ಮದ್, ಸೈಬ್ರಾಂಡ್ ಎಂಗಲ್ಬ್ರೆಕ್ಟ್.
ಏಕದಿನ ವಿಶ್ವಕಪ್ನ 15ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ನೆದರ್ಲೆಂಡ್ಸ್ ತಂಡಗಳು ಮುಖಾಮುಖಿಯಾಗಲಿವೆ. ಧರ್ಮಶಾಲಾದ ಹೆಚ್ಪಿಸಿಎ ಸ್ಟೇಡಿಯಂನಲ್ಲಿ ನಡೆಯಬೇಕಿರುವ ಈ ಪಂದ್ಯವು ಮಳೆಯ ಕಾರಣ ವಿಳಂಬವಾಗಿದೆ.
Published On - 1:55 pm, Tue, 17 October 23