
ಇಂಡಿಯನ್ ಪ್ರೀಮಿಯರ್ ಲೀಗ್‌ನ 17 ನೇ ಸೀಸನ್‌ನ 12 ನೇ ಪಂದ್ಯದಲ್ಲಿ, ಗುಜರಾತ್ ಟೈಟಾನ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತನ್ನ ತವರು ಮೈದಾನದಲ್ಲಿ ನಡೆದ ಪಂದ್ಯದಲ್ಲಿ 7 ವಿಕೆಟ್‌ಗಳ ಜಯ ಸಾಧಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 162 ರನ್ ಕಲೆಹಾಕಿತು. ಗುಜರಾತ್ ಪರ ಮೋಹಿತ್ ಶರ್ಮಾ ಅದ್ಭುತ ಬೌಲಿಂಗ್ ಮಾಡಿ 3 ವಿಕೆಟ್ ಪಡೆದರು. ಇದಾದ ಬಳಿಕ ಗುರಿ ಬೆನ್ನಟ್ಟಿದ ಗುಜರಾತ್ ತಂಡ ಸಾಯಿ ಸುದರ್ಶನ್ (36 ಎಸೆತಗಳಲ್ಲಿ 45 ರನ್) ಹಾಗೂ ಡೇವಿಡ್ ಮಿಲ್ಲರ್ (27 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 44 ರನ್) ಅವರ ಜೊತೆಯಾಟದಿಂದಾಗಿ ಕೊನೆಯ ಓವರ್‌ನಲ್ಲಿ ಗೆಲುವು ದಾಖಲಿಸಿತು.
ಈ ಪಂದ್ಯವನ್ನು ಗುಜರಾತ್ 7 ವಿಕೆಟ್‌ಗಳಿಂದ ಗೆದ್ದಿದೆ. ಗುಜರಾತ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ಸಾಯಿ ಸುದರ್ಶನ್ 36 ಎಸೆತಗಳಲ್ಲಿ 45 ರನ್ ಗಳಿಸಿದರೆ, ಮಿಲ್ಲರ್ 27 ಎಸೆತಗಳಲ್ಲಿ 44 ರನ್ ಗಳಿಸಿದರು.
ಗುಜರಾತ್ 13 ಓವರ್ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿದೆ. ಸುದರ್ಶನ್ 28 ಎಸೆತಗಳಲ್ಲಿ 30 ರನ್ ಹಾಗೂ ಮಿಲ್ಲರ್ 9 ಎಸೆತಗಳಲ್ಲಿ 6 ರನ್ ಗಳಿಸಿ ಆಡುತಿದ್ದಾರೆ. ಈ ಪಂದ್ಯ ಗೆಲ್ಲಲು 42 ಎಸೆತಗಳಲ್ಲಿ 65 ರನ್‌ಗಳ ಅಗತ್ಯವಿದೆ.
9ನೇ ಓವರ್‌ನಲ್ಲಿ ಗುಜರಾತ್ ಟೈಟಾನ್ಸ್ ಶುಭ್‌ಮನ್ ಗಿಲ್ ವಿಕೆಟ್ ಕಳೆದುಕೊಂಡಿದೆ. ಗುಜರಾತ್ಗೆ ಈಗ 89 ರನ್ ಅಗತ್ಯವಿದೆ. ಗಿಲ್ 28 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 36 ರನ್ ಗಳಿಸಿದರು. ಸದ್ಯ ಸುದರ್ಶನ್ ಮತ್ತು ಡೇವಿಡ್ ಮಿಲ್ಲರ್ ಕ್ರೀಸ್‌ನಲ್ಲಿದ್ದಾರೆ.
ಗುಜರಾತ್ ಪವರ್‌ಪ್ಲೇ ಅತ್ಯಂಗೊಂಡಿದ್ದು, 6 ಓವರ್‌ಗಳಲ್ಲಿ ತಂಡ 50 ರನ್ ಕಲೆಹಾಕಿದೆ. ನಾಯಕ 15 ಎಸೆತಗಳಲ್ಲಿ 18 ರನ್ ಹಾಗೂ ಸುದರ್ಶನ್ 8 ಎಸೆತಗಳಲ್ಲಿ 9 ರನ್ ಗಳಿಸಿದ್ದಾರೆ.
5ನೇ ಓವರ್‌ನ ಮೊದಲ ಎಸೆತದಲ್ಲಿ ಶಹಬಾಜ್ ಅಹ್ಮದ್, ಸಹಾ ವಿಕೆಟ್ ಉರುಳಿಸಿದರು. ಸಹಾ 25 ರನ್ ಗಳಿಸಿ ಔಟಾದರು.
ಗುಜರಾತ್ 4 ಓವರ್‌ಗಳ ಅಂತ್ಯಕ್ಕೆ 36 ರನ್ ಗಳಿಸಿದೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ಎಚ್ಚರಿಕೆಯಿಂದ ಆಡುತ್ತಿರುವುದು ಕಂಡುಬಂದಿದೆ.
ಗುಜರಾತ್ ಬ್ಯಾಟಿಂಗ್ ಆರಂಭಿಸಿದೆ. ಆರಂಭಿಕರಾಗಿ ಗಿಲ್ ಹಾಗೂ ಸಹಾ ಕಣಕ್ಕಿಳಿದಿದ್ದಾರೆ. ಮೊದಲ ಓವರ್‌ನಲ್ಲಿ ಏಳು ರನ್ ಬಂದವು.
ಐಪಿಎಲ್ 2024 ರ 12 ನೇ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿದೆ.
ಹೈದರಾಬಾದ್ 19ನೇ ಓವರ್‌ನಲ್ಲಿ 6ನೇ ವಿಕೆಟ್ ಕಳೆದುಕೊಂಡಿತು. ಶಹಬಾಜ್ 22 ರನ್ ಗಳಿಸಿ ಪೆವಿಲಿಯನ್ಗೆ ಮರಳಿದ್ದಾರೆ.
ಹೈದರಾಬಾದ್ 18 ಓವರ್‌ಗಳಲ್ಲಿ 149 ರನ್ ಗಳಿಸಿದೆ. ಹೈದರಾಬಾದ್ ಪರ ಶಹಬಾಜ್ 15 ಎಸೆತಗಳಲ್ಲಿ 15 ರನ್ ಗಳಿಸಿದರೆ, ಮತ್ತೊಂದೆಡೆ ಸಮದ್ 12 ಎಸೆತಗಳಲ್ಲಿ 27 ರನ್ ಬಾರಿಸಿ ಆಡುತ್ತಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ಐದನೇ ವಿಕೆಟ್ ಪತನವಾಗಿದೆ. ಉಮೇಶ್ ಯಾದವ್ ಬೌಲಿಂಗ್ನಲ್ಲಿ ಏಡೆನ್ ಮಾರ್ಕ್ರಾಮ್, ರಶೀದ್ ಖಾನ್ಗೆ ಕ್ಯಾಚ್ ನೀಡಿದರು. ಸದ್ಯ ಅಬ್ದುಲ್ ಸಮದ್ ಮತ್ತು ಶಹಬಾಜ್ ಅಹ್ಮದ್ ಕ್ರೀಸ್‌ನಲ್ಲಿದ್ದಾರೆ.
15 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ ಐದು ವಿಕೆಟ್‌ಗೆ 122 ರನ್ ಆಗಿದೆ.
14ನೇ ಓವರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ನ ಬಿಗ್ ವಿಕೆಟ್ ಪತನವಾಗಿದೆ. ಅಪಾಯಕಾರಿಯಾಗಿ ಕಾಣುತ್ತಿದ್ದ ಹೆನ್ರಿಚ್ ಕ್ಲಾಸೆನ್ ಅವರನ್ನು ರಶೀದ್ ಖಾನ್ ಕ್ಲೀನ್ ಬೌಲ್ಡ್ ಮಾಡಿದರು. ಸದ್ಯ ಶಹಬಾಜ್ ಅಹ್ಮದ್ ಮತ್ತು ಮಾರ್ಕ್ರಾಮ್ ಕ್ರೀಸ್‌ನಲ್ಲಿದ್ದಾರೆ. 14 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ ನಾಲ್ಕು ವಿಕೆಟ್‌ಗೆ 109 ರನ್ ಆಗಿದೆ.
13 ಓವರ್‌ಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮೂರು ವಿಕೆಟ್ ಕಳೆದುಕೊಂಡು 104 ರನ್ ಗಳಿಸಿದೆ. ಸದ್ಯ ಹೆನ್ರಿಚ್ ಕ್ಲಾಸೆನ್ 10 ಎಸೆತಗಳಲ್ಲಿ 21 ರನ್ ಹಾಗೂ ಏಡೆನ್ ಮಾರ್ಕ್ರಾಮ್ 17 ಎಸೆತಗಳಲ್ಲಿ 16 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಇವರಿಬ್ಬರ ನಡುವೆ ಇದುವರೆಗೆ 18 ಎಸೆತಗಳಲ್ಲಿ 30 ರನ್‌ಗಳ ಜೊತೆಯಾಟವಿದೆ.
10 ಓವರ್‌ಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮೂರು ವಿಕೆಟ್ ಕಳೆದುಕೊಂಡು 74 ರನ್ ಗಳಿಸಿದೆ. ಈ ಓವರ್‌ನ ಕೊನೆಯ ಎಸೆತದಲ್ಲಿ ಮೋಹಿತ್ ಶರ್ಮಾ ಅವರು ಅಭಿಷೇಕ್ ಶರ್ಮಾ ಅವರನ್ನು ಪೆವಿಲಿಯನ್ಗಟ್ಟಿದರು. ಸದ್ಯ ಹೆನ್ರಿಚ್ ಕ್ಲಾಸೆನ್ ಮತ್ತು ಏಡನ್ ಮಾರ್ಕ್ರಾಮ್ ಕ್ರೀಸ್‌ನಲ್ಲಿದ್ದಾರೆ.
ಏಳನೇ ಓವರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎರಡನೇ ವಿಕೆಟ್ ಕಳೆದುಕೊಂಡಿದೆ. ಚೈನಾಮನ್ ಸ್ಪಿನ್ನರ್ ನೂರ್ ಅಹ್ಮದ್ ಐಪಿಎಲ್ 2024 ರಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡುತ್ತಿದ್ದು, ಟ್ರಾವಿಸ್ ಹೆಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಹೆಡ್ 14 ಎಸೆತಗಳಲ್ಲಿ ಮೂರು ಬೌಂಡರಿಗಳ ನೆರವಿನಿಂದ 19 ರನ್ ಗಳಿಸಿದರು. ಸದ್ಯ ಅಭಿಷೇಕ್ ಶರ್ಮಾ ಮತ್ತು ಏಡನ್ ಮಾರ್ಕ್ರಾಮ್ ಕ್ರೀಸ್‌ನಲ್ಲಿದ್ದಾರೆ. ಏಳು ಓವರ್‌ಗಳ ನಂತರ ಸನ್‌ರೈಸರ್ಸ್ ಸ್ಕೋರ್ ಎರಡು ವಿಕೆಟ್‌ಗೆ 60 ರನ್ ಆಗಿದೆ.
ಐದನೇ ಓವರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮೊದಲ ವಿಕೆಟ್ ಕಳೆದುಕೊಂಡಿದೆ. ಆರಂಭಿಕ ಮಯಾಂಕ್ ಅಗರ್ವಾಲ್ 17 ಎಸೆತಗಳಲ್ಲಿ 16 ರನ್ ಗಳಿಸಿ ಔಟಾಗಿದ್ದಾರೆ. ಸದ್ಯ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಕ್ರೀಸ್‌ನಲ್ಲಿದ್ದಾರೆ
ಸನ್‌ರೈಸರ್ಸ್ ಆರಂಭಿಕರಾದ ಮಯಾಂಕ್ ಅಗರ್ವಾಲ್ ಮತ್ತು ಟ್ರಾವಿಸ್ ಹೆಡ್ ಕ್ರೀಸ್‌ನಲ್ಲಿದ್ದಾರೆ. ಗುಜರಾತ್ ಪರ ಅಜ್ಮತುಲ್ಲಾ ಒಮರ್ಜಾಯ್ ಮೊದಲ ಓವರ್ ಬೌಲ್ ಮಾಡಿದರು. ಒಂದು ಓವರ್ಗೆ ಹೈದರಾಬಾದ್ ಸ್ಕೋರ್ ಯಾವುದೇ ವಿಕೆಟ್ ನಷ್ಟವಿಲ್ಲದೆ 11 ರನ್ ಆಗಿದೆ. ಪ್ರಸ್ತುತ ಹೆಡ್ ನಾಲ್ಕು ಎಸೆತಗಳಲ್ಲಿ 10 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ ಮತ್ತು ಮಯಾಂಕ್ ಒಂದು ರನ್ ಗಳಿಸಿದ್ದಾರೆ.
ಮಯಾಂಕ್ ಅಗರ್ವಾಲ್, ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಐಡೆನ್ ಮೆಕ್‌ಕ್ರೇಮ್, ಹೆನ್ರಿಚ್ ಕ್ಲಾಸೆನ್, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಜಯದೇವ್ ಉನದ್ಕಟ್.
ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭ್‌ಮನ್ ಗಿಲ್ (ನಾಯಕ), ಅಜ್ಮತುಲ್ಲಾ ಉಮರ್ಜಾಯ್, ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಉಮೇಶ್ ಯಾದವ್, ನೂರ್ ಅಹ್ಮದ್, ಮೋಹಿತ್ ಶರ್ಮಾ, ದರ್ಶನ್ ನಲ್ಕಂಡೆ.
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 3:16 pm, Sun, 31 March 24