DC vs CSK Highlights, IPL 2024: ಡೆಲ್ಲಿಗೆ ಮೊದಲ ಜಯ; 20 ರನ್‌ಗಳಿಂದ ಸೋತ ಸಿಎಸ್‌ಕೆ
Delhi Capitals vs Chennai Super Kings Highlights in Kannada: ದೆಹಲಿ ತಂಡ ಚೆನ್ನೈ ತಂಡವನ್ನು 20 ರನ್‌ಗಳಿಂದ ಸೋಲಿಸಿ ಲೀಗ್ನಲ್ಲಿ ಮೊದಲ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ 16 ಎಸೆತಗಳನ್ನು ಎದುರಿಸಿ 37 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. ಈ ವೇಳೆ ಅವರ ಬ್ಯಾಟ್‌ನಿಂದ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸಿಡಿದವು. ಆದರೆ, ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಧೋನಿಗೆ ಸಾಧ್ಯವಾಗಲಿಲ್ಲ.
ಐಪಿಎಲ್ 2024ರ ಮೂರನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಜಯ ದಾಖಲಿಸಿದೆ. ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್ ಕಳೆದುಕೊಂಡು 191 ರನ್ ಗಳಿಸಿತು. ತಂಡದ ಪರ ನಾಯಕ ರಿಷಬ್ ಪಂತ್ ಮತ್ತು ಡೇವಿಡ್ ವಾರ್ನರ್ ಅರ್ಧಶತಕ ಬಾರಿಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು. ಚೆನ್ನೈ ಪರ ಮತಿಶಾ ಪತಿರಾನ 3 ವಿಕೆಟ್ ಪಡೆದರು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಚೆನ್ನೈ ಪರ ಅಜಿಂಕ್ಯ ರಹಾನೆ 45 ರನ್ ಮತ್ತು ಎಂಎಸ್ ಧೋನಿ ಕೊನೆಯ ಓವರ್‌ಗಳಲ್ಲಿ ಕೇವಲ 16 ಎಸೆತಗಳಲ್ಲಿ 37 ರನ್ ಗಳಿಸಿದರೂ ಅಂತಿಮವಾಗಿ ಚೆನ್ನೈ 171 ರನ್ ಗಳಿಸಿ 20 ರನ್‌ಗಳಿಂದ ಸೋಲನುಭವಿಸಿತು. ಡೆಲ್ಲಿ ಪರ ಮುಖೇಶ್ ಕುಮಾರ್ 3 ಹಾಗೂ ಖಲೀಲ್ ಅಹ್ಮದ್ 2 ವಿಕೆಟ್ ಪಡೆದರು.
LIVE NEWS & UPDATES
-
ಡೆಲ್ಲಿಗೆ 20 ರನ್ ಜಯ
ದೆಹಲಿ ತಂಡ ಚೆನ್ನೈ ತಂಡವನ್ನು 20 ರನ್‌ಗಳಿಂದ ಸೋಲಿಸಿ ಲೀಗ್ನಲ್ಲಿ ಮೊದಲ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ 16 ಎಸೆತಗಳನ್ನು ಎದುರಿಸಿ 37 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. ಈ ವೇಳೆ ಅವರ ಬ್ಯಾಟ್‌ನಿಂದ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸಿಡಿದವು. ಆದರೆ, ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಧೋನಿಗೆ ಸಾಧ್ಯವಾಗಲಿಲ್ಲ.
-
ಕ್ರೀಸ್‌ನಲ್ಲಿ ಧೋನಿ
ಚೆನ್ನೈನ ಆರನೇ ವಿಕೆಟ್ ಪತನಗೊಂಡಿದೆ. ಮುಖೇಶ್ ಕುಮಾರ್ ಅವರು ಶಿವಂ ದುಬೆ ವಿಕೆಟ್ ಉರುಳಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.
-
2 ಎಸೆತಗಳಲ್ಲಿ 2 ವಿಕೆಟ್
ಮುಖೇಶ್ ಕುಮಾರ್ 14ನೇ ಓವರ್‌ನ ಮೂರನೇ ಮತ್ತು ನಾಲ್ಕನೇ ಎಸೆತಗಳಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಬಲಿಪಶು ಮಾಡಿದರು. ಮೊದಲು ರಹಾನೆ (45) ಅವರನ್ನು ಔಟ್ ಮಾಡಿದ ಅವರು ನಂತರದ ಎಸೆತದಲ್ಲಿ ಸಮೀರ್ ರಿಜ್ವಿಯನ್ನು ಪೆವಿಲಿಯನ್ ಗೆ ಕಳುಹಿಸಿದರು. ರವೀಂದ್ರ ಜಡೇಜಾ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ತಂಡದ ಗೆಲುವಿಗೆ 34 ಎಸೆತಗಳಲ್ಲಿ 84 ರನ್‌ಗಳ ಅಗತ್ಯವಿದೆ.
ಅಜಿಂಕ್ಯ ರಹಾನೆ ಔಟ್
ಚೆನ್ನೈ ತಂಡವನ್ನು ಸಂಕಷ್ಟದಿಂದ ಪಾರು ಮಾಡುವಲ್ಲಿ ಪ್ರಮುಖ ಪಾತ್ರ ವಹಿದ್ದ ಅಜಿಂಕ್ಯ ರಹಾನೆ 14ನೇ ಓವರ್‌ನಲ್ಲಿ ಮುಖೇಶ್ ಕುಮಾರ್ಗೆ ಬಲಿಯಾದರು.
13 ಓವರ್ ಮುಕ್ತಾಯ
13 ಓವರ್‌ಗಳಲ್ಲಿ ಚೆನ್ನೈ ಮೂರು ವಿಕೆಟ್ ಕಳೆದುಕೊಂಡು 101 ರನ್ ಗಳಿಸಿದೆ. ಸದ್ಯ ಅಜಿಂಕ್ಯ ರಹಾನೆ 45 ರನ್ ಹಾಗೂ ಶಿವಂ ದುಬೆ 13 ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ.
ಮಿಚೆಲ್ ಔಟ್
ಚೆನ್ನೈ ತಂಡವನ್ನು ಸಂಕಷ್ಟದಿಂದ ಪಾರು ಮಾಡಲು ಯತ್ನಿಸುತ್ತಿದ್ದ ಡ್ಯಾರಿಲ್ ಮಿಚೆಲ್ ಅವರನ್ನು ಅಕ್ಷರ್ ಪಟೇಲ್ ಔಟ್ ಮಾಡಿದರು. ಮಿಚೆಲ್ ಮೂರನೇ ವಿಕೆಟ್‌ಗೆ ಅಜಿಂಕ್ಯ ರಹಾನೆ ಅವರೊಂದಿಗೆ 68 ರನ್‌ಗಳ ಜೊತೆಯಾಟ ನಡೆಸಿದರು. ಈ ಪಂದ್ಯದಲ್ಲಿ ಅವರು 34 ರನ್ ಗಳಿಸುವಲ್ಲಿ ಯಶಸ್ವಿಯಾದರು. ಶಿವಂ ದುಬೆ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. 11 ಓವರ್‌ಗಳ ನಂತರ ತಂಡದ ಸ್ಕೋರ್ 78/3.
ಎಂಟು ಓವರ್ ಅಂತ್ಯ
ಎಂಟು ಓವರ್‌ಗಳ ಆಟ ಪೂರ್ಣಗೊಂಡಿದ್ದು, ಚೆನ್ನೈ ಎರಡು ವಿಕೆಟ್ ಕಳೆದುಕೊಂಡು 47 ರನ್ ಗಳಿಸಿದೆ. ಅಜಿಂಕ್ಯ ರಹಾನೆ 25 ರನ್ ಹಾಗೂ ಡೆರಿಲ್ ಮಿಚೆಲ್ 14 ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ. ಇಬ್ಬರ ನಡುವೆ ಉತ್ತಮ ಜೊತೆಯಾಟ ಮೂಡಿಬರುತ್ತಿದೆ.
ಪವರ್‌ಪ್ಲೇ ಅಂತ್ಯ
ಪವರ್‌ಪ್ಲೇ ಮುಗಿದಿದೆ. ಮೊದಲ ಆರು ಓವರ್‌ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎರಡು ವಿಕೆಟ್ ಕಳೆದುಕೊಂಡು 32 ರನ್ ಗಳಿಸಿದೆ. ಸದ್ಯ ಅಜಿಂಕ್ಯ ರಹಾನಾ ಮತ್ತು ಡೆರಿಲ್ ಮಿಚೆಲ್ ಕ್ರೀಸ್‌ನಲ್ಲಿದ್ದಾರೆ.
ಚೆನ್ನೈ 2ನೇ ವಿಕೆಟ್ ಪತನ
ಖಲೀಲ್ ಅಹ್ಮದ್ ಚೆನ್ನೈ ವಿರುದ್ಧ ಮಾರಕವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಅವರು ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ರಚಿನ್ ರವೀಂದ್ರ ಅವರನ್ನು ಔಟ್ ಮಾಡಿದರು. ಇದಕ್ಕೂ ಮುನ್ನ ಖಲೀಲ್ ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದ್ದರು. ನಾಲ್ಕು ಓವರ್‌ಗಳ ನಂತರ ತಂಡದ ಸ್ಕೋರ್ 17/2.
ನಾಯಕ ಗಾಯಕ್ವಾಡ್ ಔಟ್
ಕೇವಲ ಮೂರು ರನ್‌ಗಳ ಅಂತರದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಮೊದಲ ವಿಕೆಟ್ ಕಳೆದುಕೊಂಡಿದೆ. ಖಲೀಲ್ ಅಹ್ಮದ್ ಅವರು ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನುವಜಾಗೊಳಿಸಿದ್ದಾರೆ. ಅಜಿಂಕ್ಯ ರಹಾನೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ಒಂದು ಓವರ್ ನಂತರ, ಟಾಮ್ ಸ್ಕೋರ್ 3/1.
ಚೆನ್ನೈ ಇನ್ನಿಂಗ್ಸ್ ಆರಂಭ
192 ರನ್‌ಗಳ ಗುರಿ ಬೆನ್ನತ್ತಲು ಚೆನ್ನೈ ಸೂಪರ್ ಕಿಂಗ್ಸ್ ಸಜ್ಜಾಗಿದೆ. ರಿತುರಾಜ್ ಗಾಯಕ್ವಾಡ್ ಮತ್ತು ರಚಿನ್ ರವೀಂದ್ರ ಆರಂಭಿಕ ಬ್ಯಾಟಿಂಗ್‌ಗೆ ಆಗಮಿಸಿದ್ದಾರೆ.
192 ರನ್ ಟಾರ್ಗೆಟ್
ಚೆನ್ನೈ ವಿರುದ್ಧ ಡೆಲ್ಲಿ 191 ರನ್ ಗಳಿಸಿದೆ. ಗೆಲ್ಲಲು ಚೆನ್ನೈ 120 ಎಸೆತಗಳಲ್ಲಿ 192 ರನ್ ಗಳಿಸಬೇಕಿದೆ. ಈ ಇನ್ನಿಂಗ್ಸ್‌ನಲ್ಲಿ ವಾರ್ನರ್ ಮತ್ತು ಪಂತ್ ಕೂಡ ಅರ್ಧಶತಕ ಪೂರೈಸಿದ್ದಾರೆ.
ಪಂತ್ ಔಟ್
ಮಿರಾಕಲ್ ಮ್ಯಾನ್ ಎಂದೇ ಖ್ಯಾತರಾಗಿರುವ ರಿಷಬ್ ಪಂತ್ ಚೆನ್ನೈ ವಿರುದ್ಧ ದಿಟ್ಟ ಪ್ರದರ್ಶನ ನೀಡಿ 31 ಎಸೆತಗಳಲ್ಲಿ ಪ್ರಬಲ ಅರ್ಧಶತಕ ಗಳಿಸಿದರು. ಮೈದಾನಕ್ಕೆ ಮರಳಿದ ನಂತರ ಇದು ಅವರ ಮೊದಲ ಅರ್ಧಶತಕವಾಗಿದ್ದು, 19ನೇ ಓವರ್ ನ ಐದನೇ ಎಸೆತದಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಪ್ರಸ್ತುತ ಕ್ರೀಸ್‌ನಲ್ಲಿ ಅಕ್ಷರ್ ಪಟೇಲ್ ಮತ್ತು ಅಭಿಷೇಕ್ ಪೊರೆಲ್ ಇದ್ದಾರೆ.
18 ಓವರ್ ಅಂತ್ಯ
18 ಓವರ್‌ಗಳ ಆಟ ಮುಗಿದಿದೆ. ದೆಹಲಿ ನಾಲ್ಕು ವಿಕೆಟ್ ಕಳೆದುಕೊಂಡು 162 ರನ್ ಗಳಿಸಿದೆ. ಸದ್ಯ ಕ್ರೀಸ್‌ನಲ್ಲಿರುವ ರಿಷಬ್ ಪಂತ್ 27 ಎಸೆತಗಳಲ್ಲಿ 35 ರನ್ ಮತ್ತು ಅಕ್ಷರ್ ಪಟೇಲ್ ಆರು ಎಸೆತಗಳಲ್ಲಿ 5 ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ.
ಒಂದೇ ಓವರ್‌ನಲ್ಲಿ 2 ವಿಕೆಟ್
ಡೆಲ್ಲಿ ಕ್ಯಾಪಿಟಲ್ಸ್ ಒಂದೇ ಓವರ್‌ನಲ್ಲಿ ಇಬ್ಬರು ದೊಡ್ಡ ಬ್ಯಾಟ್ಸ್‌ಮನ್‌ಗಳ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಪತಿರಾನ ಮಿಚೆಲ್ ಮಾರ್ಷ್ ಮತ್ತು ಸ್ಟಬ್ಸ್ ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು. 15ನೇ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 4 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿದೆ.
ಪೃಥ್ವಿ ಕೂಡ ಔಟ್
103 ರನ್ ಗಳಿಸಿದ್ದಾಗ ಡೆಲ್ಲಿ ಕ್ಯಾಪಿಟಲ್ಸ್‌ಗೆ ರವೀಂದ್ರ ಜಡೇಜಾ ಎರಡನೇ ಹೊಡೆತ ನೀಡಿದರು. ಆರಂಭಿಕ ಪೃಥ್ವಿ ಶಾ 27 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ 43 ರನ್ ಗಳಿಸಿ ಔಟಾದರು. ಮಿಚೆಲ್ ಮಾರ್ಷ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.
ವಾರ್ನರ್ ಔಟ್
ಡೆಲ್ಲಿ ಕ್ಯಾಪಿಟಲ್ಸ್ 93 ರನ್‌ಗಳಲ್ಲಿ ಮೊದಲ ವಿಕೆಟ್ ಕಳೆದುಕೊಂಡಿದೆ. ಮುಸ್ತಾಫಿಜುರ್ ರೆಹಮಾನ್ 10ನೇ ಓವರ್‌ನ ಮೂರನೇ ಎಸೆತದಲ್ಲಿ ಡೇವಿಡ್ ವಾರ್ನರ್ ವಿಕೆಟ್ ಉರುಳಿಸಿದರು. ವಾರ್ನರ್ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ನೆರವಿನಿಂದ 52 ರನ್ ಗಳಿಸುವಲ್ಲಿ ಯಶಸ್ವಿಯಾದರು. ರಿಷಬ್ ಪಂತ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.
ವಾರ್ನರ್ ಅರ್ಧಶತಕ
ಡೇವಿಡ್ ವಾರ್ನರ್ ಚೆನ್ನೈ ವಿರುದ್ಧ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಅವರ ಟಿ20 ವೃತ್ತಿ ಬದುಕಿನ 110ನೇ ಅರ್ಧಶತಕವಾಗಿದೆ. ಇದರೊಂದಿಗೆ ಅವರು ಕ್ರಿಸ್ ಗೇಲ್ ದಾಖಲೆನ್ನು ಸರಿಗಟ್ಟಿದ್ದಾರೆ. ಒಂಬತ್ತು ಓವರ್‌ಗಳ ನಂತರ ತಂಡದ ಸ್ಕೋರ್ 91/0.
ಪವರ್‌ಪ್ಲೇ ಅಂತ್ಯ
ಪವರ್‌ಪ್ಲೇ ಅಂತ್ಯಕ್ಕೆ ಡೆಲ್ಲಿ 62/0. ಈ ಓವರ್‌ನಲ್ಲಿ ಒಟ್ಟು 20 ರನ್‌ಗಳು ಬಂದವು.
ಡೆಲ್ಲಿ ಅರ್ಧಶತಕ
ಡೆಲ್ಲಿ ಕ್ಯಾಪಿಟಲ್ಸ್ 50 ರನ್ ಪೂರೈಸಿದೆ. ಡೇವಿಡ್ ವಾರ್ನರ್ 21 ಎಸೆತಗಳಲ್ಲಿ 34 ರನ್ ಮತ್ತು ಪೃಥ್ವಿ ಶಾ 14 ಎಸೆತಗಳಲ್ಲಿ 24 ರನ್ ಗಳಿಸಿ ಅಜೇಯರಾಗಿದ್ದಾರೆ. ಇಬ್ಬರ ನಡುವೆ ಉತ್ತಮ ಜೊತೆಯಾಟ ಕಾಣುತ್ತಿದೆ.
ವಾರ್ನರ್-ಶಾ ವೇಗದ ಆರಂಭ
ವಾರ್ನರ್ ಮತ್ತು ಶಾ ಡೆಲ್ಲಿ ಕ್ಯಾಪಿಟಲ್ಸ್‌ಗೆ ವೇಗದ ಆರಂಭ ನೀಡಿದ್ದಾರೆ. ಐದು ಓವರ್‌ಗಳ ನಂತರ ತಂಡದ ಸ್ಕೋರ್ 42/0.
ದೆಹಲಿಯ ಇನ್ನಿಂಗ್ಸ್ ಆರಂಭ
ದೆಹಲಿಯ ಬ್ಯಾಟಿಂಗ್ ಶುರುವಾಗಿದೆ. ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಬಂದಿದ್ದಾರೆ. ಚೆಂಡು ಚೆನ್ನೈನ ದೀಪಕ್ ಚಹಾರ್ ಕೈಯಲ್ಲಿದೆ.
ಚೆನ್ನೈ ಸೂಪರ್ ಕಿಂಗ್ಸ್
ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೆರಿಲ್ ಮಿಚೆಲ್, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮತಿಶಾ ಪತಿರಾನ, ಮುಸ್ತಾಫಿಜುರ್ ರಹಮಾನ್.
ಇಂಪ್ಯಾಕ್ಟ್ ಪ್ಲೇಯರ್: ಶಿವಂ ದುಬೆ, ಶಾರ್ದೂಲ್ ಠಾಕೂರ್, ಶೇಖ್ ರಶೀದ್, ಮೊಯಿನ್ ಅಲಿ, ಮಿಚೆಲ್ ಸ್ಯಾಂಟ್ನರ್.
ಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (ವಿಕೆಟ್ ಕೀಪರ್/ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಸುಮಿತ್ ಕುಮಾರ್, ಅನ್ರಿಚ್ ನೋಕಿಯಾ, ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.
ಇಂಪ್ಯಾಕ್ಟ್ ಪ್ಲೇಯರ್: ಸುಮಿತ್ ಕುಮಾರ್, ಕುಮಾರ್ ಕುಶಾಗ್ರಾ, ರಸಿಖ್ ದಾರ್ ಸಲಾಮ್, ಪ್ರವೀಣ್ ದುಬೆ, ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್.
ಟಾಸ್ ಗೆದ್ದ ಡೆಲ್ಲಿ
ಟಾಸ್ ಗೆದ್ದ ಡೆಲ್ಲಿ ನಾಯಕ ರಿಷಬ್ ಪಂತ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - Mar 31,2024 7:01 PM