SRH vs GT Highlights, IPL 2024: ಬಲಿಷ್ಠ ಹೈದರಾಬಾದ್​​ಗೆ ಸೋಲುಣಿಸಿದ ಗುಜರಾತ್

ಪೃಥ್ವಿಶಂಕರ
|

Updated on:Mar 31, 2024 | 7:03 PM

Gujarat Titans vs Sunrisers Hyderabad Highlights in Kannada: ಇಂಡಿಯನ್ ಪ್ರೀಮಿಯರ್ ಲೀಗ್‌ನ 17 ನೇ ಸೀಸನ್‌ನ 12 ನೇ ಪಂದ್ಯದಲ್ಲಿ, ಗುಜರಾತ್ ಟೈಟಾನ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತನ್ನ ತವರು ಮೈದಾನದಲ್ಲಿ ನಡೆದ ಪಂದ್ಯದಲ್ಲಿ 7 ವಿಕೆಟ್‌ಗಳ ಜಯ ಸಾಧಿಸಿದೆ.

SRH vs GT Highlights, IPL 2024: ಬಲಿಷ್ಠ ಹೈದರಾಬಾದ್​​ಗೆ ಸೋಲುಣಿಸಿದ ಗುಜರಾತ್

ಇಂಡಿಯನ್ ಪ್ರೀಮಿಯರ್ ಲೀಗ್‌ನ 17 ನೇ ಸೀಸನ್‌ನ 12 ನೇ ಪಂದ್ಯದಲ್ಲಿ, ಗುಜರಾತ್ ಟೈಟಾನ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತನ್ನ ತವರು ಮೈದಾನದಲ್ಲಿ ನಡೆದ ಪಂದ್ಯದಲ್ಲಿ 7 ವಿಕೆಟ್‌ಗಳ ಜಯ ಸಾಧಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 162 ರನ್‌ ಕಲೆಹಾಕಿತು. ಗುಜರಾತ್ ಪರ ಮೋಹಿತ್ ಶರ್ಮಾ ಅದ್ಭುತ ಬೌಲಿಂಗ್ ಮಾಡಿ 3 ವಿಕೆಟ್ ಪಡೆದರು. ಇದಾದ ಬಳಿಕ ಗುರಿ ಬೆನ್ನಟ್ಟಿದ ಗುಜರಾತ್ ತಂಡ ಸಾಯಿ ಸುದರ್ಶನ್ (36 ಎಸೆತಗಳಲ್ಲಿ 45 ರನ್) ಹಾಗೂ ಡೇವಿಡ್ ಮಿಲ್ಲರ್ (27 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 44 ರನ್) ಅವರ ಜೊತೆಯಾಟದಿಂದಾಗಿ ಕೊನೆಯ ಓವರ್​ನಲ್ಲಿ ಗೆಲುವು ದಾಖಲಿಸಿತು.

LIVE NEWS & UPDATES

The liveblog has ended.
  • 31 Mar 2024 06:59 PM (IST)

    ವಿಜಯ ಪತಾಕೆ ಹಾರಿಸಿದ ಗುಜರಾತ್

    ಈ ಪಂದ್ಯವನ್ನು ಗುಜರಾತ್ 7 ವಿಕೆಟ್‌ಗಳಿಂದ ಗೆದ್ದಿದೆ. ಗುಜರಾತ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ಸಾಯಿ ಸುದರ್ಶನ್ 36 ಎಸೆತಗಳಲ್ಲಿ 45 ರನ್ ಗಳಿಸಿದರೆ, ಮಿಲ್ಲರ್ 27 ಎಸೆತಗಳಲ್ಲಿ 44 ರನ್ ಗಳಿಸಿದರು.

  • 31 Mar 2024 06:31 PM (IST)

    13 ಓವರ್‌ ಮುಕ್ತಾಯ

    ಗುಜರಾತ್ 13 ಓವರ್‌ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿದೆ. ಸುದರ್ಶನ್ 28 ಎಸೆತಗಳಲ್ಲಿ 30 ರನ್ ಹಾಗೂ ಮಿಲ್ಲರ್ 9 ಎಸೆತಗಳಲ್ಲಿ 6 ರನ್ ಗಳಿಸಿ ಆಡುತಿದ್ದಾರೆ. ಈ ಪಂದ್ಯ ಗೆಲ್ಲಲು 42 ಎಸೆತಗಳಲ್ಲಿ 65 ರನ್‌ಗಳ ಅಗತ್ಯವಿದೆ.

  • 31 Mar 2024 06:09 PM (IST)

    ಶುಭ್​ಮನ್ ಗಿಲ್ ವಿಕೆಟ್

    9ನೇ ಓವರ್​​ನಲ್ಲಿ ಗುಜರಾತ್ ಟೈಟಾನ್ಸ್ ಶುಭ್​ಮನ್ ಗಿಲ್ ವಿಕೆಟ್ ಕಳೆದುಕೊಂಡಿದೆ. ಗುಜರಾತ್​ಗೆ ಈಗ 89 ರನ್ ಅಗತ್ಯವಿದೆ. ಗಿಲ್ 28 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 36 ರನ್ ಗಳಿಸಿದರು. ಸದ್ಯ ಸುದರ್ಶನ್ ಮತ್ತು ಡೇವಿಡ್ ಮಿಲ್ಲರ್ ಕ್ರೀಸ್‌ನಲ್ಲಿದ್ದಾರೆ.

  • 31 Mar 2024 05:58 PM (IST)

    ಪವರ್‌ಪ್ಲೇ ಅಂತ್ಯ

    ಗುಜರಾತ್ ಪವರ್‌ಪ್ಲೇ ಅತ್ಯಂಗೊಂಡಿದ್ದು, 6 ಓವರ್​ಗಳಲ್ಲಿ ತಂಡ 50 ರನ್ ಕಲೆಹಾಕಿದೆ. ನಾಯಕ 15 ಎಸೆತಗಳಲ್ಲಿ 18 ರನ್ ಹಾಗೂ ಸುದರ್ಶನ್ 8 ಎಸೆತಗಳಲ್ಲಿ 9 ರನ್ ಗಳಿಸಿದ್ದಾರೆ.

  • 31 Mar 2024 05:57 PM (IST)

    ಸಹಾ ವಿಕೆಟ್

    5ನೇ ಓವರ್​ನ ಮೊದಲ ಎಸೆತದಲ್ಲಿ ಶಹಬಾಜ್ ಅಹ್ಮದ್, ಸಹಾ ವಿಕೆಟ್ ಉರುಳಿಸಿದರು. ಸಹಾ 25 ರನ್ ಗಳಿಸಿ ಔಟಾದರು.

  • 31 Mar 2024 05:41 PM (IST)

    4 ಓವರ್‌ ಮುಕ್ತಾಯ

    ಗುಜರಾತ್ 4 ಓವರ್‌ಗಳ ಅಂತ್ಯಕ್ಕೆ 36 ರನ್ ಗಳಿಸಿದೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ಎಚ್ಚರಿಕೆಯಿಂದ ಆಡುತ್ತಿರುವುದು ಕಂಡುಬಂದಿದೆ.

  • 31 Mar 2024 05:36 PM (IST)

    ಗುಜರಾತ್​ ಬ್ಯಾಟಿಂಗ್ ಆರಂಭ

    ಗುಜರಾತ್ ಬ್ಯಾಟಿಂಗ್ ಆರಂಭಿಸಿದೆ. ಆರಂಭಿಕರಾಗಿ ಗಿಲ್ ಹಾಗೂ ಸಹಾ ಕಣಕ್ಕಿಳಿದಿದ್ದಾರೆ. ಮೊದಲ ಓವರ್‌ನಲ್ಲಿ ಏಳು ರನ್ ಬಂದವು.

  • 31 Mar 2024 05:11 PM (IST)

    162 ರನ್ ಟಾರ್ಗೆಟ್

    ಐಪಿಎಲ್ 2024 ರ 12 ನೇ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿದೆ.

  • 31 Mar 2024 05:10 PM (IST)

    ಶಹಬಾಜ್ ಔಟ್

    ಹೈದರಾಬಾದ್ 19ನೇ ಓವರ್​ನಲ್ಲಿ 6ನೇ ವಿಕೆಟ್ ಕಳೆದುಕೊಂಡಿತು. ಶಹಬಾಜ್ 22 ರನ್ ಗಳಿಸಿ ಪೆವಿಲಿಯನ್​ಗೆ ಮರಳಿದ್ದಾರೆ.

  • 31 Mar 2024 05:09 PM (IST)

    18 ಓವರ್‌ಗಳ ಮುಕ್ತಾಯ

    ಹೈದರಾಬಾದ್ 18 ಓವರ್‌ಗಳಲ್ಲಿ 149 ರನ್ ಗಳಿಸಿದೆ. ಹೈದರಾಬಾದ್ ಪರ ಶಹಬಾಜ್ 15 ಎಸೆತಗಳಲ್ಲಿ 15 ರನ್ ಗಳಿಸಿದರೆ, ಮತ್ತೊಂದೆಡೆ ಸಮದ್ 12 ಎಸೆತಗಳಲ್ಲಿ 27 ರನ್ ಬಾರಿಸಿ ಆಡುತ್ತಿದ್ದಾರೆ.

  • 31 Mar 2024 04:51 PM (IST)

    ಏಡೆನ್ ಮಾರ್ಕ್ರಾಮ್ ಔಟ್

    ಸನ್‌ರೈಸರ್ಸ್ ಹೈದರಾಬಾದ್ ಐದನೇ ವಿಕೆಟ್ ಪತನವಾಗಿದೆ. ಉಮೇಶ್ ಯಾದವ್ ಬೌಲಿಂಗ್​ನಲ್ಲಿ ಏಡೆನ್ ಮಾರ್ಕ್ರಾಮ್, ರಶೀದ್ ಖಾನ್​ಗೆ ಕ್ಯಾಚ್​ ನೀಡಿದರು. ಸದ್ಯ ಅಬ್ದುಲ್ ಸಮದ್ ಮತ್ತು ಶಹಬಾಜ್ ಅಹ್ಮದ್ ಕ್ರೀಸ್‌ನಲ್ಲಿದ್ದಾರೆ.

    15 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ ಐದು ವಿಕೆಟ್‌ಗೆ 122 ರನ್ ಆಗಿದೆ.

  • 31 Mar 2024 04:42 PM (IST)

    ಕ್ಲಾಸೆನ್ ಔಟ್

    14ನೇ ಓವರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್​ನ ಬಿಗ್ ವಿಕೆಟ್ ಪತನವಾಗಿದೆ. ಅಪಾಯಕಾರಿಯಾಗಿ ಕಾಣುತ್ತಿದ್ದ ಹೆನ್ರಿಚ್ ಕ್ಲಾಸೆನ್ ಅವರನ್ನು ರಶೀದ್ ಖಾನ್ ಕ್ಲೀನ್ ಬೌಲ್ಡ್ ಮಾಡಿದರು. ಸದ್ಯ ಶಹಬಾಜ್ ಅಹ್ಮದ್ ಮತ್ತು ಮಾರ್ಕ್ರಾಮ್ ಕ್ರೀಸ್‌ನಲ್ಲಿದ್ದಾರೆ. 14 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ ನಾಲ್ಕು ವಿಕೆಟ್‌ಗೆ 109 ರನ್ ಆಗಿದೆ.

  • 31 Mar 2024 04:39 PM (IST)

    13 ಓವರ್‌ ಮುಕ್ತಾಯ

    13 ಓವರ್‌ಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮೂರು ವಿಕೆಟ್ ಕಳೆದುಕೊಂಡು 104 ರನ್ ಗಳಿಸಿದೆ. ಸದ್ಯ ಹೆನ್ರಿಚ್ ಕ್ಲಾಸೆನ್ 10 ಎಸೆತಗಳಲ್ಲಿ 21 ರನ್ ಹಾಗೂ ಏಡೆನ್ ಮಾರ್ಕ್ರಾಮ್ 17 ಎಸೆತಗಳಲ್ಲಿ 16 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಇವರಿಬ್ಬರ ನಡುವೆ ಇದುವರೆಗೆ 18 ಎಸೆತಗಳಲ್ಲಿ 30 ರನ್‌ಗಳ ಜೊತೆಯಾಟವಿದೆ.

  • 31 Mar 2024 04:26 PM (IST)

    ಅಭಿಷೇಕ್ ಶರ್ಮಾ ಔಟ್

    10 ಓವರ್‌ಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮೂರು ವಿಕೆಟ್ ಕಳೆದುಕೊಂಡು 74 ರನ್ ಗಳಿಸಿದೆ. ಈ ಓವರ್‌ನ ಕೊನೆಯ ಎಸೆತದಲ್ಲಿ ಮೋಹಿತ್ ಶರ್ಮಾ ಅವರು ಅಭಿಷೇಕ್ ಶರ್ಮಾ ಅವರನ್ನು ಪೆವಿಲಿಯನ್​ಗಟ್ಟಿದರು. ಸದ್ಯ ಹೆನ್ರಿಚ್ ಕ್ಲಾಸೆನ್ ಮತ್ತು ಏಡನ್ ಮಾರ್ಕ್ರಾಮ್ ಕ್ರೀಸ್‌ನಲ್ಲಿದ್ದಾರೆ.

  • 31 Mar 2024 04:09 PM (IST)

    ಟ್ರಾವಿಸ್ ಹೆಡ್ ಔಟ್

    ಏಳನೇ ಓವರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಎರಡನೇ ವಿಕೆಟ್ ಕಳೆದುಕೊಂಡಿದೆ. ಚೈನಾಮನ್ ಸ್ಪಿನ್ನರ್ ನೂರ್ ಅಹ್ಮದ್ ಐಪಿಎಲ್ 2024 ರಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡುತ್ತಿದ್ದು, ಟ್ರಾವಿಸ್ ಹೆಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಹೆಡ್ 14 ಎಸೆತಗಳಲ್ಲಿ ಮೂರು ಬೌಂಡರಿಗಳ ನೆರವಿನಿಂದ 19 ರನ್ ಗಳಿಸಿದರು. ಸದ್ಯ ಅಭಿಷೇಕ್ ಶರ್ಮಾ ಮತ್ತು ಏಡನ್ ಮಾರ್ಕ್ರಾಮ್ ಕ್ರೀಸ್‌ನಲ್ಲಿದ್ದಾರೆ. ಏಳು ಓವರ್‌ಗಳ ನಂತರ ಸನ್‌ರೈಸರ್ಸ್ ಸ್ಕೋರ್ ಎರಡು ವಿಕೆಟ್‌ಗೆ 60 ರನ್ ಆಗಿದೆ.

  • 31 Mar 2024 03:58 PM (IST)

    ಮಯಾಂಕ್ ಔಟ್

    ಐದನೇ ಓವರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಮೊದಲ ವಿಕೆಟ್ ಕಳೆದುಕೊಂಡಿದೆ. ಆರಂಭಿಕ ಮಯಾಂಕ್ ಅಗರ್ವಾಲ್ 17 ಎಸೆತಗಳಲ್ಲಿ 16 ರನ್ ಗಳಿಸಿ ಔಟಾಗಿದ್ದಾರೆ. ಸದ್ಯ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಕ್ರೀಸ್‌ನಲ್ಲಿದ್ದಾರೆ

  • 31 Mar 2024 03:43 PM (IST)

    ಕ್ರೀಸ್‌ನಲ್ಲಿ ಸನ್‌ರೈಸರ್ಸ್ ಆರಂಭಿಕರು

    ಸನ್‌ರೈಸರ್ಸ್ ಆರಂಭಿಕರಾದ ಮಯಾಂಕ್ ಅಗರ್ವಾಲ್ ಮತ್ತು ಟ್ರಾವಿಸ್ ಹೆಡ್ ಕ್ರೀಸ್‌ನಲ್ಲಿದ್ದಾರೆ. ಗುಜರಾತ್ ಪರ ಅಜ್ಮತುಲ್ಲಾ ಒಮರ್ಜಾಯ್ ಮೊದಲ ಓವರ್ ಬೌಲ್ ಮಾಡಿದರು. ಒಂದು ಓವರ್​ಗೆ ಹೈದರಾಬಾದ್ ಸ್ಕೋರ್ ಯಾವುದೇ ವಿಕೆಟ್ ನಷ್ಟವಿಲ್ಲದೆ 11 ರನ್ ಆಗಿದೆ. ಪ್ರಸ್ತುತ ಹೆಡ್ ನಾಲ್ಕು ಎಸೆತಗಳಲ್ಲಿ 10 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ ಮತ್ತು ಮಯಾಂಕ್ ಒಂದು ರನ್ ಗಳಿಸಿದ್ದಾರೆ.

  • 31 Mar 2024 03:18 PM (IST)

    ಸನ್‌ರೈಸರ್ಸ್ ಹೈದರಾಬಾದ್

    ಮಯಾಂಕ್ ಅಗರ್ವಾಲ್, ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಐಡೆನ್ ಮೆಕ್‌ಕ್ರೇಮ್, ಹೆನ್ರಿಚ್ ಕ್ಲಾಸೆನ್, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಜಯದೇವ್ ಉನದ್ಕಟ್.

  • 31 Mar 2024 03:17 PM (IST)

    ಗುಜರಾತ್ ಟೈಟಾನ್ಸ್

    ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭ್‌ಮನ್ ಗಿಲ್ (ನಾಯಕ), ಅಜ್ಮತುಲ್ಲಾ ಉಮರ್ಜಾಯ್, ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಉಮೇಶ್ ಯಾದವ್, ನೂರ್ ಅಹ್ಮದ್, ಮೋಹಿತ್ ಶರ್ಮಾ, ದರ್ಶನ್ ನಲ್ಕಂಡೆ.

  • 31 Mar 2024 03:17 PM (IST)

    ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್

    ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

  • Published On - Mar 31,2024 3:16 PM

    Follow us
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
    ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
    ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
    ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
    ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
    ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
    ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
    ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
    ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
    ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ