ಕೊನೆಯ ಓವರ್​ನಲ್ಲಿ ಮೂರು ಕ್ಯಾಚ್ ಡ್ರಾಪ್, ಎರಡು ರನ್​ಔಟ್ ಮಿಸ್; ಆದರೂ ಗೆದ್ದ ಹೈದರಾಬಾದ್

|

Updated on: Apr 10, 2024 | 8:48 AM

ನೆಯ ಓವರ್​ನಲ್ಲಿ ಮೂರು ಕ್ಯಾಚ್ ಡ್ರಾಪ್ ಮಾಡಿ, ಎರಡು ರನ್​ಔಟ್ ಮಿಸ್​ ಮಾಡಿತು ಹೈದರಾಬಾದ್ ತಂಡ. ಆದಾಗ್ಯೂ ಎಸ್​ಎಚ್​ಆರ್ ತಂಡ ಗೆಲುವಿನ ನಗು ಬೀರಿತು. ಜಯದೇವ್ ಉನಾದ್ಕಟ್ ಅವರು ಕೊನೆಯ ಓವರ್​ನಲ್ಲಿ ನೀಡಿದ್ದು ಬರೋಬ್ಬರಿ 26 ರನ್​ಗಳು.

ಕೊನೆಯ ಓವರ್​ನಲ್ಲಿ ಮೂರು ಕ್ಯಾಚ್ ಡ್ರಾಪ್, ಎರಡು ರನ್​ಔಟ್ ಮಿಸ್; ಆದರೂ ಗೆದ್ದ ಹೈದರಾಬಾದ್
ಎಸ್ಆರ್​ಎಚ್​
Follow us on

ಸನ್​ ರೈಸರ್ಸ್ ಹೈದರಾಬಾದ್ (SRH) ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಸಾಕಷ್ಟು ರೋಚಕವಾಗಿತ್ತು. ಕೊನೆಯ ಓವರ್​ನಲ್ಲಿ ಮೂರು ಕ್ಯಾಚ್ ಡ್ರಾಪ್ ಮಾಡಿ, ಎರಡು ರನ್​ಔಟ್ ಮಿಸ್​ ಮಾಡಿತು ಹೈದರಾಬಾದ್ ತಂಡ. ಆದಾಗ್ಯೂ ಎಸ್​ಎಚ್​ಆರ್ ತಂಡ ಗೆಲುವಿನ ನಗು ಬೀರಿತು. ಜಯದೇವ್ ಉನಾದ್ಕಟ್ ಅವರು ಕೊನೆಯ ಓವರ್​ನಲ್ಲಿ ನೀಡಿದ್ದು ಬರೋಬ್ಬರಿ 26 ರನ್​ಗಳು. ಕೊನೆಯ ಓವರ್​ನಲ್ಲಿ ಏನೆಲ್ಲ ಡ್ರಾಮಾ ನಡೆಯಿತು ಎನ್ನುವ ವಿವರ ಇಲ್ಲಿದೆ.

ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ ಆರಂಭದಲ್ಲಿ ಮುಗ್ಗರಿಸಿತು. ಹೆಡ್ 15 ಬಾಲ್​ಗೆ 21 ರನ್​ ಬಾರಿಸಿದರು. ಮಕ್ರಮ್ ಡಕ್​ಗೆ ಔಟ್ ಆದರು. ಅಭಿಷೇಕ್ ಶರ್ಮಾ 16 ರನ್ ಗಳಿಸಿದರು. ನಿತಿಶ್ ರೆಡ್ಡಿ ತಂಡಕ್ಕೆ ಆಸರೆ ಆದರು. 37 ಬಾಲ್​ಗೆ 64 ರನ್ ಗಳಿಸಿದರು. ಕೊನೆಗೆ 182 ರನ್​ ಗಳಿಸಿದ ಹೈದರಾಬಾದ್ ತಂಡ, 183 ರನ್​ಗಳ ಟಾರ್ಗೆಟ್ ನೀಡಿತು. ಬೃಹತ್ ಮೊತ್ತ ಬೆನ್ನು ಹತ್ತಿದ ಪಂಜಾಬ್ ಕೂಡ ಕಳಪೆ ಆರಂಭ ಕಂಡಿತತು. ಧವನ್ 14 ರನ್ ಗಳಿಸಿ ಔಟ್ ಆದರೆ, ಬ್ರೇಸ್ಟೋ ಸೊನ್ನೆ ಸುತ್ತಿದರು. ಸ್ಯಾಮ್ ಕರನ್, ರಾಜಾ ಕೂಡ ದೊಡ್ಡ ಮೊತ್ತ ಕಲೆ ಹಾಕಲಿಲ್ಲ. 19 ಓವರ್​ಗಳು ಪೂರ್ಣಗೊಳ್ಳುವಾಗ ಪಂಜಾಬ್​ ತಂಡ 154 ರನ್​ಗೆ 6 ವಿಕೆಟ್​ಗಳನ್ನು ಕಳೆದುಕೊಂಡಿತ್ತು.

ಇದನ್ನೂ ಓದಿ: IPL 2024: ರಣರೋಚಕ ಹೋರಾಟದಲ್ಲಿ ಸನ್​ರೈಸರ್ಸ್ ಹೈದರಾಬಾದ್​​ಗೆ ರೋಚಕ ಜಯ

ಕೊನೆಯ ಓವರ್​ನಲ್ಲಿ ಬೇಕಾಗಿದ್ದು 29 ರನ್​ಗಳು. ಉನಾದ್ಕಟ್ ಅವರು ಬೌಲಿಂಗ್​ ಇಳಿದರು. ಮೊದಲ ಬಾಲ್ ಕ್ಯಾಚ್ ಬಿಟ್ಟಿದ್ದರಿಂದ ಸಿಕ್ಸ್ ಹೋಯಿತು. ನಂತರ ಎರಡು ವೈಡ್​ಗಳನ್ನು ಹಾಕಿದರು ಉನಾದ್ಕಟ್. ಎರಡನೇ ಬಾಲ್​ಗೆ ಹೊಡೆದ ಶಾಟ್ ಕೂಡ ಸಿಕ್ಸ್​ ಗಡಿಯಲ್ಲಿ ಫೀಲ್ಡರ್​ನ ಕೈಗೆ ಸಿಗದೆ ಸಿಕ್ಸ್ ಹೋಯಿತು. ನಂತರ ಮೂರು ಹಾಗೂ ನಾಲ್ಕನೇ ಬಾಲ್​ಗೆ ತಲಾ ಎರಡು ರನ್​ಗಳು ಬಂದವು. ನಾಲ್ಕನೇ ಬಾಲ್​ನಲ್ಲಿ ಸುಲಭ ಕ್ಯಾಚ್​ನ ಕೈ ಚೆಲ್ಲಲಾಯಿತು. ಅಷ್ಟೇ ಅಲ್ಲ, ಮೂರು ಹಾಗೂ ನಾಲ್ಕನೇ ಬಾಲ್​ನಲ್ಲಿ ರನೌಟ್ ಅವಕಾಶ ಇತ್ತು. ಅದು ಕೂಡ ಕೈತಪ್ಪಿತು. ನಂತರ ಮತ್ತೊಂದು ವೈಡ್ ಬಾಲ್ ಆಯಿತು. ಐದನೇ ಬಾಲ್​ಗೆ ಒಂದು ರನ್ ಹಾಗೂ ಆರನೇ ಬಾಲ್​ಗೆ ಸಿಕ್ಸ್ ಬಂತು. ಈ ಮೂಲಕ ಹೈದರಾಬಾದ್ 2 ರನ್​ಗಳಿಂದ ಗೆಲುವು ಕಂಡಿತು. ಅಶುತೋಷ್ ಶರ್ಮಾ ಅವರು 15 ಬಾಲ್​ಗೆ 33 ರನ್ ಹೊಡೆದರೂ ಗೆಲುವಿನ ನಗೆ ಬೀರಲು ಸಾಧ್ಯವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ