AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SRH vs PBKS Highlights IPL 2023: ಹೈದರಾಬಾದ್​ಗೆ ಟೂರ್ನಿಯ ಮೊದಲ ಜಯ

Sunrisers Hyderabad vs Punjab Kings IPL 2023 Highlights in Kannada: ಉಪ್ಪಲ್ ಕ್ರೀಡಾಂಗಣದಲ್ಲಿ ನಡೆದ ಪಂಜಾಜ್ ಕಿಂಗ್ಸ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ನಡುವಿನ ಮುಖಾಮುಖಿಯಲ್ಲಿ ಹೈದರಾಬಾದ್ ತಂಡ ಕೊನೆಗೂ ಟೂರ್ನಿಯ ಮೊದಲ ಗೆಲುವು ಸಾಧಿಸಿದೆ.

SRH vs PBKS Highlights IPL 2023: ಹೈದರಾಬಾದ್​ಗೆ ಟೂರ್ನಿಯ ಮೊದಲ ಜಯ
ಪೃಥ್ವಿಶಂಕರ
|

Updated on:Apr 09, 2023 | 11:05 PM

Share

ಉಪ್ಪಲ್ ಕ್ರೀಡಾಂಗಣದಲ್ಲಿ ನಡೆದ ಪಂಜಾಜ್ ಕಿಂಗ್ಸ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ನಡುವಿನ ಮುಖಾಮುಖಿಯಲ್ಲಿ ಹೈದರಾಬಾದ್ ತಂಡ ಕೊನೆಗೂ ಟೂರ್ನಿಯ ಮೊದಲ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತ ಪಂಜಾಬ್ ಕಿಂಗ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ ಕೇವಲ 143 ರನ್​ ಗಳಿಸಲಷ್ಟೇ ಶಕ್ತವಾಯಿತು. ಇದರಲ್ಲಿ ಪಂಜಾಬ್ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಶಿಖರ್ ಧವನ್ ಅಜೇಯ 99 ರನ್‌ ಬಾರಿಸಿದರು. ಈ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ 17.1 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಐಪಿಎಲ್ 2023 ರಲ್ಲಿ ಮೊದಲ ಗೆಲುವು ಸಾಧಿಸಿತು.

LIVE NEWS & UPDATES

The liveblog has ended.
  • 09 Apr 2023 11:02 PM (IST)

    ಕೊನೆಗೂ ಗೆದ್ದ ಹೈದರಾಬಾದ್

    ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಹೈದರಾಬಾದ್ ತಂಡಕ್ಕೆ ಕೊನೆಗೂ ಜಯ ದೊರೆತಿದೆ. 18ನೇ ಓವರ್​ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ತ್ರಿಪಾಠಿ ತಂಡಕ್ಕೆ ಗೆಲುವು ತಂದುಕೊಟ್ಟರು.

  • 09 Apr 2023 11:00 PM (IST)

    ಮಾರ್ಕ್ರಾಮ್ 4 ಬೌಂಡರಿ

    17ನೇ ಓವರ್​ನಲ್ಲಿ ಹೈದರಾಬಾದ್ ನಾಯಕ ಅಡೆನ್ ಮಾರ್ಕ್ರಾಮ್ ಬರೋಬ್ಬರಿ 4 ಬೌಂಡರಿ ಬಾರಿಸಿದರು.

  • 09 Apr 2023 10:58 PM (IST)

    16 ಓವರ್‌ಗಳ ನಂತರ 124/2

    ಹೈದರಾಬಾದ್ ಪರ ಏಡನ್ ಮಾರ್ಕ್ರಾಮ್ 21 ರನ್ ಮತ್ತು ರಾಹುಲ್ ತ್ರಿಪಾಠಿ 69 ರನ್ ಗಳಿಸಿ ಆಡುತ್ತಿದ್ದಾರೆ. ಗೆಲುವಿಗೆ 24 ಎಸೆತಗಳಲ್ಲಿ 20 ರನ್‌ಗಳ ಅಗತ್ಯವಿದೆ.

  • 09 Apr 2023 10:50 PM (IST)

    15 ಓವರ್‌ ಮುಕ್ತಾಯ

    15ನೇ ಓವರ್​ನಲ್ಲಿ ರಾಹುಲ್ ತ್ರಿಪಾಠಿ 1 ಸಿಕ್ಸರ್ ಮತ್ತು 3 ಬೌಂಡರಿ ಬಾರಿಸಿದರು. ಹೈದರಾಬಾದ್ ಪರ ಏಡನ್ ಮಾರ್ಕ್ರಾಮ್ 19 ರನ್ ಮತ್ತು ರಾಹುಲ್ ತ್ರಿಪಾಠಿ 65 ರನ್ ಗಳಿಸಿ ಆಡುತ್ತಿದ್ದಾರೆ. ಹೈದರಾಬಾದ್​ ಗೆಲುವಿಗೆ 30 ಎಸೆತಗಳಲ್ಲಿ 26 ರನ್‌ಗಳ ಅಗತ್ಯವಿದೆ.

  • 09 Apr 2023 10:49 PM (IST)

    ತ್ರಿಪಾಠಿ ಅರ್ಧಶತಕ

    13ನೇ ಓವರ್​ನಲ್ಲಿ ರಾಹುಲ್ ತ್ರಿಪಾಠಿ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು. ಹೈದರಾಬಾದ್ ಪರ ಏಡನ್ ಮಾರ್ಕ್ರಾಮ್ 10 ರನ್ ಮತ್ತು ರಾಹುಲ್ ತ್ರಿಪಾಠಿ 50 ರನ್ ಗಳಿಸಿ ಆಡುತ್ತಿದ್ದಾರೆ.

  • 09 Apr 2023 10:37 PM (IST)

    ಮಾರ್ಕ್ರಾಮ್ ಫೋರ್

    12ನೇ ಓವರ್​ನಲ್ಲಿ ಹೈದರಾಬಾದ್ ನಾಯಕ ಏಡನ್ ಮಾರ್ಕ್ರಾಮ್ ಬೌಂಡರಿ ಬಾರಿಸಿದರು. 12 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 86/2

  • 09 Apr 2023 10:31 PM (IST)

    ತ್ರಿಪಾಠಿ 2 ಬೌಂಡರಿ

    ರಾಹುಲ್ ಚಹಾರ್ ಎಸೆದ 11ನೇ ಓವರ್​ನಲ್ಲಿ ತ್ರಿಪಾಠಿ 2 ಬೌಂಡರಿ ಬಾರಿಸಿದರು. ಹೈದರಾಬಾದ್ ಪರ ಏಡನ್ ಮಾರ್ಕ್ರಾಮ್ 3 ರನ್ ಮತ್ತು ರಾಹುಲ್ ತ್ರಿಪಾಠಿ 41 ರನ್ ಗಳಿಸಿ ಆಡುತ್ತಿದ್ದಾರೆ. 11 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 78/2

  • 09 Apr 2023 10:26 PM (IST)

    ಅರ್ಧ ಇನ್ನಿಂಗ್ಸ್ ಮುಕ್ತಾಯ

    ಹೈದರಾಬಾದ್ ಪರ ಏಡನ್ ಮಾರ್ಕ್ರಾಮ್ 2 ರನ್ ಮತ್ತು ರಾಹುಲ್ ತ್ರಿಪಾಠಿ 31 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ತ್ರಿಪಾಠಿ 3 ಬೌಂಡರಿ ಬಾರಿಸಿದರು.

  • 09 Apr 2023 10:26 PM (IST)

    ಎರಡನೇ ವಿಕೆಟ್ ಪತನ

    ಹೈದರಾಬಾದ್‌ನ ಎರಡನೇ ವಿಕೆಟ್ ಪತನವಾಗಿದ್ದು, ಮಯಾಂಕ್ ಅಗರ್ವಾಲ್ 21 ರನ್ ಗಳಿಸಿ ಔಟಾದರು. ಹೈದರಾಬಾದ್ ಸ್ಕೋರ್ 8.3 ಓವರ್‌ಗಳಲ್ಲಿ 45/2

  • 09 Apr 2023 10:14 PM (IST)

    ತ್ರಿಪಾಠಿ ಸಿಕ್ಸರ್

    7ನೇ ಓವರ್​ನಲ್ಲಿ ರಾಹುಲ್ ತ್ರಿಪಾಠಿ ಸಿಕ್ಸರ್‌ ಬಾರಿಸಿದರು. ಹೈದರಾಬಾದ್ ಪರ ಮಯಾಂಕ್ ಅಗರ್ವಾಲ್ 18 ರನ್ ಹಾಗೂ ರಾಹುಲ್ ತ್ರಿಪಾಠಿ 9 ರನ್‌ಗಳೊಂದಿಗೆ ಆಡುತ್ತಿದ್ದಾರೆ. 7 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 40/1

  • 09 Apr 2023 10:13 PM (IST)

    ಪವರ್ ಪ್ಲೇ ಅಂತ್ಯ

    ಹೈದರಾಬಾದ್ ಪರ ಮಯಾಂಕ್ ಅಗರ್ವಾಲ್ 18 ರನ್ ಮತ್ತು ರಾಹುಲ್ ತ್ರಿಪಾಠಿ 3 ರನ್‌ಗಳೊಂದಿಗೆ ಆಡುತ್ತಿದ್ದಾರೆ. 6 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 34/1

  • 09 Apr 2023 10:05 PM (IST)

    5 ಓವರ್‌ ಮುಕ್ತಾಯ

    ಹೈದರಾಬಾದ್ ಪರ ಮಯಾಂಕ್ ಅಗರ್ವಾಲ್ 16 ರನ್ ಹಾಗೂ ರಾಹುಲ್ ತ್ರಿಪಾಠಿ 1 ರನ್ ಗಳಿಸಿ ಆಡುತ್ತಿದ್ದಾರೆ. 5 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 30/1

  • 09 Apr 2023 09:59 PM (IST)

    ಮೊದಲ ವಿಕೆಟ್ ಪತನ

    ಹೈದರಾಬಾದ್‌ನ ಮೊದಲ ವಿಕೆಟ್ ಪತನಗೊಂಡಿತು, ಅರ್ಷದೀಪ್ ಅವರ ಓವರ್‌ನಲ್ಲಿ ಹ್ಯಾರಿ ಬ್ರೂಕ್ 13 ರನ್ ಗಳಿಸಿ ಔಟಾದರು. ಹೈದರಾಬಾದ್ ಸ್ಕೋರ್ 3.5 ಓವರ್‌ಗಳಲ್ಲಿ 27/1

  • 09 Apr 2023 09:56 PM (IST)

    ಮಯಾಂಕ್ ಬೌಂಡರಿ

    2 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 13/0. ಈ ಓವರ್‌ನಲ್ಲಿ 2 ಬೌಂಡರಿ ಬಂದವು. ಮಯಾಂಕ್ ಅಗರ್ವಾಲ್ 9 ರನ್ ಮತ್ತು ಹ್ಯಾರಿ ಬ್ರೂಕ್ 4 ರನ್ ಗಳಿಸಿ ಆಡುತ್ತಿದ್ದಾರೆ.

  • 09 Apr 2023 09:46 PM (IST)

    ಹೈದರಾಬಾದ್ ಬ್ಯಾಟಿಂಗ್ ಆರಂಭ

    ಮಯಾಂಕ್ ಅಗರ್ವಾಲ್ ಮತ್ತು ಹ್ಯಾರಿ ಬ್ರೂಕ್ ಹೈದರಾಬಾದ್‌ ಪರ ಬ್ಯಾಟಿಂಗ್‌ಗೆ ಬಂದಿದ್ದಾರೆ. ಪಂಜಾಬ್ ಕಿಂಗ್ಸ್ 144 ರನ್ ಟಾರ್ಗೆಟ್ ನೀಡಿದೆ. 1 ಓವರ್ ನಂತರ ಹೈದರಾಬಾದ್ ಸ್ಕೋರ್ 4/0. ಬೌಂಡರಿಯೊಂದಿಗೆ ಇನ್ನಿಂಗ್ಸ್ ಆರಂಭವಾಯಿತು.

  • 09 Apr 2023 09:23 PM (IST)

    1 ರನ್ನಿಂದ ಶತಕ ಮಿಸ್

    ನಟರಾಜನ್ ಎಸೆದ 20ನೇ ಓವರ್​ನಲ್ಲಿ ಧವನ್ ಶತಕ ಬಾರಿಸುವ ಅವಕಾಶ ಹೊಂದಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಈ ಓವರ್​ನಲ್ಲಿ 1 ಸಿಕ್ಸರ್ ಸೇರಿದಂತೆ 8 ರನ್ ಕಲೆಹಾಕಿದ ಧವನ್ 1 ರನ್​ಗಳಿಂದ ಶತಕ ವಂಚಿತರಾದರು. ಅಂತಿಮವಾಗಿ ಪಂಜಾಬ್ ತಂಡ 9 ವಿಕೆಟ್ ಕಳೆದುಕೊಂಡು 143 ರನ್ ಕಲೆಹಾಕಿತು.

  • 09 Apr 2023 09:22 PM (IST)

    ಶತಕದ ಸನಿಹದಲ್ಲಿ ಧವನ್

    19ನೇ ಓವರ್​ನಲ್ಲಿ 2 ಬೌಂಡರಿ ಬಾರಿಸಿದ ಶಿಖರ್ ಧವನ್ 91 ರನ್ ಗಳಿಸಿ ಶತಕದಂಚಿನಲ್ಲಿ ಆಡುತ್ತಿದ್ದಾರೆ. ಅವರೊಂದಿಗೆ ಮೋಹಿತ್ ರಾಠಿ 2 ರನ್ ಗಳಿಸಿ ಆಡುತ್ತಿದ್ದಾರೆ. 19 ಓವರ್‌ಗಳಲ್ಲಿ ಪಂಜಾಬ್ ಸ್ಕೋರ್ 135/9

  • 09 Apr 2023 09:16 PM (IST)

    ಧವನ್ 2 ಸಿಕ್ಸರ್

    18ನೇ ಓವರ್​ನಲ್ಲಿ ಧವನ್ 2 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸಿದರು. ಶಿಖರ್ ಧವನ್ 82 ರನ್ ಹಾಗೂ ಮೋಹಿತ್ ರಾಠಿ 1 ರನ್ ಗಳಿಸಿ ಆಡುತ್ತಿದ್ದಾರೆ. 18 ಓವರ್‌ಗಳಲ್ಲಿ ಪಂಜಾಬ್ ಸ್ಕೋರ್ 126/9

  • 09 Apr 2023 09:13 PM (IST)

    17 ಓವರ್‌ ಮುಕ್ತಾಯ

    ಏಕಾಂಗಿಯಾಗಿ ಪಂಜಾಬ್ ಇನ್ನಿಂಗ್ಸ್ ಕಟ್ಟುತ್ತಿರುವ ಶಿಖರ್ ಧವನ್ 65 ರನ್ ಗಳಿಸಿ ಆಡುತ್ತಿದ್ದಾರೆ. ಶಿಖರ್ ಧವನ್ ಇಂದು ತಮ್ಮ ತಂಡದ ಎಲ್ಲಾ ಆಟಗಾರರೊಂದಿಗೆ ಬ್ಯಾಟಿಂಗ್ ಮಾಡಿರುವುದು ವಿಶೇಷ. 17 ಓವರ್‌ಗಳಲ್ಲಿ ಪಂಜಾಬ್ ಸ್ಕೋರ್ 109/9.

  • 09 Apr 2023 09:05 PM (IST)

    ಧವನ್ ಅರ್ಧಶತಕ

    16ನೇ ಓವರ್​ನಲ್ಲಿ 2 ಸಿಕ್ಸರ್ ಬಾರಿಸಿದ ಶಿಖರ್ ಧವನ್ ಐಪಿಎಲ್ ಇತಿಹಾಸದಲ್ಲಿ 49ನೇ ಅರ್ಧಶತಕ ಬಾರಿಸಿದರು. ಪಂಜಾಬ್ ಸ್ಕೋರ್ 16 ಓವರ್‌ಗಳ ನಂತರ 101/9.

  • 09 Apr 2023 09:01 PM (IST)

    15 ಓವರ್‌ ಅಂತ್ಯ

    ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್‌ನ 5 ಓವರ್‌ಗಳು ಮಾತ್ರ ಉಳಿದಿವೆ. 15 ಓವರ್‌ಗಳ ಅಂತ್ಯಕ್ಕೆ ಪಂಜಾಬ್ 9 ವಿಕೆಟ್ ಕಳೆದುಕೊಂಡು 88 ರನ್ ಗಳಿಸಿದೆ.

  • 09 Apr 2023 08:58 PM (IST)

    ಮಾರ್ಕಂಡೆಗೆ 4 ವಿಕೆಟ್

    ಮಾರ್ಕಂಡೆ ತಮ್ಮ ಕೋಟಾದ ಕೊನೆಯ ಓವರ್​ನ ಕೊನೆಯ ಎಸೆತದಲ್ಲೂ ವಿಕೆಟ್ ಪಡೆದರು. ಈ ಮೂಲಕ 4 ಓವರ್ ಮುಕ್ತಾಯಕ್ಕೆ ಮಾರ್ಕಂಡೆ 4 ವಿಕೆಟ್ ಉರುಳಿಸಿದರು.

  • 09 Apr 2023 08:48 PM (IST)

    ಎಂಟನೇ ವಿಕೆಟ್ ಪತನ

    ಪಂಜಾಬ್‌ನ ಎಂಟನೇ ವಿಕೆಟ್ ಪತನ, ಮಾರ್ಕಂಡೆ ಅವರ ಓವರ್‌ನಲ್ಲಿ ರಾಹುಲ್ ಚಹಾಲ್ 0 ರನ್‌ಗೆ ಔಟಾದರು. 13 ಓವರ್‌ಗಳ ನಂತರ ಪಂಜಾಬ್ ಸ್ಕೋರ್ 78/8

  • 09 Apr 2023 08:38 PM (IST)

    ಏಳನೇ ವಿಕೆಟ್ ಪತನ

    ಪಂಜಾಬ್​ನ ಏಳನೇ ವಿಕೆಟ್ ಪತನವಾಗಿದ್ದು, ಮಲಿಕ್ ಅವರ ಬೆಂಕಿ ಎಸೆತಕ್ಕೆ ಹರ್ಪೀತ್ ಬ್ರಾರ್ ಕ್ಲೀನ್ ಬೌಲ್ಡ್ ಆದರು.

  • 09 Apr 2023 08:37 PM (IST)

    ಶಾರುಖ್ ಖಾನ್ ಔಟ್

    ಪಂಜಾಬ್‌ನ ಆರನೇ ವಿಕೆಟ್ ಪತನವಾಗಿದ್ದು, ಮಯಾಂಕ್ ಮಾರ್ಕಂಡೆ ಶಾರುಖ್ ಖಾನ್ ಅವರನ್ನು ಎಲ್​ಬಿ ಬಲೆಗೆ ಬೀಳಿಸಿದರು. 11 ಓವರ್‌ಗಳ ನಂತರ ಪಂಜಾಬ್ ಸ್ಕೋರ್ 76/6

  • 09 Apr 2023 08:30 PM (IST)

    ಐದನೇ ವಿಕೆಟ್ ಪತನ

    ಪಂಜಾಬ್‌ನ ಐದನೇ ವಿಕೆಟ್ ಪತನವಾಗಿದೆ. ಉಮ್ರಾನ್ ಮಲಿಕ್ ಅವರ ಓವರ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ರಜಾ 5 ರನ್ ಗಳಿಸಿ ಔಟಾದರು. 10 ಓವರ್‌ಗಳ ನಂತರ ಪಂಜಾಬ್ ಸ್ಕೋರ್ 73/5.

  • 09 Apr 2023 08:24 PM (IST)

    ಪಂಜಾಬ್‌ನ ನಾಲ್ಕನೇ ವಿಕೆಟ್ ಪತನ

    ಮಾರ್ಕಾಂಡೆ ಎಸೆದ 9ನೇ ಓವರ್​ನಲ್ಲಿ ಸ್ಯಾಮ್ ಕರನ್ 22 ರನ್ ಗಳಿಸಿ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಪಂಜಾಬ್ ಸ್ಕೋರ್ 8.5 ಓವರ್‌ಗಳಲ್ಲಿ 63/4

  • 09 Apr 2023 08:17 PM (IST)

    8 ಓವರ್‌ ಅಂತ್ಯ

    ಪಂಜಾಬ್ ಪರ ಸ್ಯಾಮ್ ಕರನ್ 18 ರನ್ ಹಾಗೂ ಶಿಖರ್ ಧವನ್ 32 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ 2 ಬೌಂಡರಿ ಬಂದವು. 8 ಓವರ್‌ಗಳ ನಂತರ ಪಂಜಾಬ್ ಸ್ಕೋರ್ 53/3

  • 09 Apr 2023 08:12 PM (IST)

    ಧವನ್ ಫೋರ್

    ಸುಂದರ್ ಓವರ್​ನಲ್ಲಿ ಧವನ್ ಬೌಂಡರಿ ಬಾರಿಸಿದರು. ಪಂಜಾಬ್ ಪರ ಸ್ಯಾಮ್ ಕರನ್ 17 ರನ್ ಹಾಗೂ ಶಿಖರ್ ಧವನ್ 22 ರನ್ ಗಳಿಸಿ ಆಡುತ್ತಿದ್ದಾರೆ. 7 ಓವರ್‌ಗಳ ನಂತರ ಪಂಜಾಬ್ ಸ್ಕೋರ್ 47/3

  • 09 Apr 2023 08:05 PM (IST)

    ಕರನ್ ಸಿಕ್ಸರ್

    ಪಂಜಾಬ್ ಪರ ಸ್ಯಾಮ್ ಕರನ್ 12 ರನ್ ಹಾಗೂ ಶಿಖರ್ ಧವನ್ 21 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಕರನ್ 1 ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು.

  • 09 Apr 2023 07:58 PM (IST)

    ಜಿತೇಶ್ ಔಟ್

    ಮಾರ್ಕೊ ಯಾನ್ಸೆನ್ ಜಿತೇಶ್ ಶರ್ಮಾ ಅವರ ವಿಕೆಟ್ ಪಡೆದಿದ್ದಾರೆ. ಪವರ್ ಪ್ಲೇಗೂ ಮುನ್ನ ಪಂಜಾಬ್ ಮೂರನೇ ವಿಕೆಟ್ ಕಳೆದುಕೊಂಡಿದೆ. 5 ಓವರ್‌ಗಳ ನಂತರ ಪಂಜಾಬ್ ಸ್ಕೋರ್ 30/3

  • 09 Apr 2023 07:48 PM (IST)

    ಎರಡನೇ ವಿಕೆಟ್ ಪತನ

    ಪಂಜಾಬ್ ಕಿಂಗ್ಸ್‌ನ ಎರಡನೇ ವಿಕೆಟ್ ಪತನ, 2ನೇ ಓವರ್‌ನಲ್ಲಿ ಮಾರ್ಕೊ ಯಾನ್ಸೆನ್ ಎರಡನೇ ವಿಕೆಟ್ ಪತನ. 2 ಓವರ್‌ಗಳ ನಂತರ ಪಂಜಾಬ್ ಸ್ಕೋರ್ 14/2

  • 09 Apr 2023 07:40 PM (IST)

    ಶೂನ್ಯಕ್ಕೆ ಮೊದಲ ವಿಕೆಟ್

    ಪಂಜಾಬ್ ಕಿಂಗ್ಸ್‌ನ ಮೊದಲ ವಿಕೆಟ್ ಪತನವಾಯಿತು, ಭುವನೇಶ್ವರ್ ಅವರ ಓವರ್‌ನ ಮೊದಲ ಎಸೆತದಲ್ಲಿ ಪ್ರಭಾಸಿಮ್ರಾನ್ 0 ರನ್‌ಗೆ ಔಟಾದರು. 1 ಓವರ್ ನಂತರ ಗುಜರಾತ್ ಸ್ಕೋರ್ 9/1

  • 09 Apr 2023 07:21 PM (IST)

    ಸನ್ ರೈಸರ್ಸ್ ಹೈದರಾಬಾದ್

    ಮಯಾಂಕ್ ಅಗರ್ವಾಲ್ (ನಾಯಕ), ಹ್ಯಾರಿ ಬ್ರೂಕ್, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ವಾಷಿಂಗ್ಟನ್ ಸುಂದರ್, ಮಾರ್ಕೊ ಯಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೇ, ಉಮ್ರಾನ್ ಮಲಿಕ್ ಮತ್ತು ಟಿ ನಟರಾಜನ್

  • 09 Apr 2023 07:20 PM (IST)

    ಪಂಜಾಬ್ ಕಿಂಗ್ಸ್

    ಶಿಖರ್ ಧವನ್ (ನಾಯಕ), ಪ್ರಭ್‌ಸಿಮ್ರಾನ್ ಸಿಂಗ್, ಮ್ಯಾಥ್ಯೂ ಶಾರ್ಟ್, ಜಿತೇಶ್ ಶರ್ಮಾ, ಶಾರುಖ್ ಖಾನ್, ಸ್ಯಾಮ್ ಕರನ್, ನಾಥನ್ ಎಲ್ಲಿಸ್, ಮೋಹಿತ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್ ಮತ್ತು ಅರ್ಶ್‌ದೀಪ್ ಸಿಂಗ್.

  • 09 Apr 2023 07:14 PM (IST)

    ಟಾಸ್ ಗೆದ್ದ ಹೈದರಾಬಾದ್

    ಈ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ನಾಯಕ ಏಡೆನ್ ಮಾರ್ಕ್ರಾಮ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

  • 09 Apr 2023 07:08 PM (IST)

    ಸಂಕಷ್ಟದಲ್ಲಿ ಕೋಲ್ಕತ್ತಾ ತಂಡ

    17ನೇ ಓವರ್ ಎಸೆದ ರಶೀದ್ ಖಾನ್ 3 ವಿಕೆಟ್ ಉರುಳಿಸಿದರು. ಇದರೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ 7 ಮಂದಿ ಪೆವಿಲಿಯನ್ ಸೇರಿದ್ದು, ಇಲ್ಲಿಂದ ತಂಡಕ್ಕೆ ಗೆಲುವು ಕಷ್ಟವಾಗುತ್ತಿದೆ.

Published On - Apr 09,2023 7:04 PM

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್