ಶ್ರೀಲಂಕಾ ಮತ್ತು ಬಾಂಗ್ಲಾದೇಶ (Sri Lanka and Bangladesh) ತಂಡಗಳು ಇಂದು ಏಷ್ಯಾಕಪ್‌ನಲ್ಲಿ (Asia Cup 2022) ಮುಖಾಮುಖಿಯಾಗಲಿವೆ. ಉಭಯ ತಂಡಗಳಿಗೂ ಇಂದು ನಡೆಯಲಿರುವ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಏಕೆಂದರೆ ಈಗಾಗಲೇ ಆಡಿರುವ ಒಂದೊಂದು ಪಮದ್ಯದಲ್ಲಿ ಉಭಯ ತಂಡಗಳು ಸೋಲುಂಡಿವೆ. ಹೀಗಾಘಿ ಇಂದು ಸೋತ ತಂಡದ ಪಯಣ ಇಲ್ಲಿಗೇ ಕೊನೆಗೊಳ್ಳಲಿದೆ. ಈ ಪಂದ್ಯದಲ್ಲಿ ಗೆದ್ದವರು ಪಂದ್ಯಾವಳಿಯ ಮುಂದಿನ ಸುತ್ತು ಅಂದರೆ ಸೂಪರ್ ಫೋರ್ ತಲುಪುತ್ತಾರೆ. ಆದರೆ ಈ ಪಂದ್ಯಕ್ಕೂ ಮುನ್ನ ಉಭಯ ತಂಡಗಳು ಪರಸ್ಪರ ಕಾಲೆಳೆದುಕೊಂಡಿವೆ.
ಅಖಾಡಕ್ಕಿಳಿಯುವ ಮುನ್ನವೇ ಎರಡು ತಂಡಗಳ ನಡುವಿನ ವಾಕ್ಸಮರ ಪತ್ರಿಕಾಗೋಷ್ಠಿಯಲ್ಲಿ ನಡೆದುಹೋಗಿದೆ. ಮೊದಲು ಪತ್ರಿಕಾಗೋಷ್ಠಿಯಲ್ಲಿ ಶ್ರೀಲಂಕಾ ನಾಯಕ ದಸುನ್ ಶನಕಾ ಬಾಂಗ್ಲಾದೇಶ ತಂಡವನ್ನು ಕಡೆಗಣಿಸಿ ಮಾತನಾಡಿದ್ದಾರೆ. ಬಳಿಕ ಲಂಕಾ ತಂಡದ ನಾಯಕನ ಈ ಮಾತುಗಳನ್ನು ಕೇಳಿದ ಬಾಂಗ್ಲಾದೇಶ ತಂಡದ ನಿರ್ದೇಶಕ ಪ್ರತ್ಯುತ್ತರ ನೀಡಿ ಸೇಡು ತೀರಿಸಿಕೊಂಡಿದ್ದಾರೆ. ಆದರೆ ಈ ವಾಕ್ಸಮರ ಇಷ್ಟಕ್ಕೆ ನಿಂತಿಲ್ಲ ಈ ಇಬ್ಬರ ಹೇಳಿಕೆಗಳ ನಡುವೆ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಮತ್ತೊಂದು ಹೇಳಿಕೆ ನೀಡಿ, ವಾಕ್ಸಮರಕ್ಕೆ ಟ್ವಿಸ್ಟ್ ನೀಡಿದ್ದಾರೆ.
ಶ್ರೀಲಂಕಾ ದಾಳಿ, ಬಾಂಗ್ಲಾದೇಶ ಪ್ರತಿದಾಳಿ
ಅಷ್ಟಕ್ಕೂ ಈ ಯುದ್ಧ ಆರಂಭವಾಗಿದ್ದು, ಶ್ರೀಲಂಕಾ ತಂಡದ ನಾಯಕರಾಗಿರುವ ದಸುನ್ ಶನಕಾ ಅವರ ಪತ್ರಿಕಾಗೋಷ್ಠಿಯಿಂದ. ಪಂದ್ಯಕ್ಕೂ ಮುಂಚಿನ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶನಕಾ, ಅಫ್ಘಾನಿಸ್ತಾನ ತಂಡಕ್ಕೆ ಹೋಲಿಸಿದರೆ ಬಾಂಗ್ಲಾದೇಶ ತಂಡ ದುರ್ಬಲವಾಗಿದೆ. ಬಾಂಗ್ಲಾ ಬೌಲಿಂಗ್ ವಿಭಾಗದಲ್ಲಿ ಮುಸ್ತಾಫಿಜುರ್ ಮತ್ತು ಶಕೀಬ್ ಅಲ್ ಹಸನ್ ಮಾತ್ರ ವಿಶ್ವ ದರ್ಜೆಯ ಬೌಲರ್‌ಗಳಾಗಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ.
ಲಂಕಾ ನಾಯಕನ ಉದ್ದಟತನದ ಹೇಳಿಕೆಯನ್ನು ಆಲಿಸಿದ ಬಾಂಗ್ಲಾದೇಶ ತಂಡದ ನಿರ್ದೇಶಕರು, ದಸುನ್ ಶನಕಾ ಅವರ ಈ ಹೇಳಿಕೆಗೆ ಪ್ರತೀಕಾರ ತೀರಿಸಿಕೊಂಡಿದ್ದಾರೆ. ಬಾಂಗ್ಲಾ ತಂಡದ ತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತಂಡದ ನಿರ್ದೇಶಕರು, ನಮ್ಮಲ್ಲಿ ಇಬ್ಬರು ವಿಶ್ವ ದರ್ಜೆಯ ಬೌಲರ್‌ಗಳು ಇದ್ದಾರೆ ಎಂದು ಅವರು ಅರ್ಥಮಾಡಿಕೊಳ್ಳುತ್ತಿದ್ದಾರೆ. ಆದರೆ ಶ್ರೀಲಂಕಾ ತಂಡದಲ್ಲಿ ಒಬ್ಬನೇ ಒಬ್ಬ ಬೌಲರ್ ಕೂಡ ವಿಶ್ವ ದರ್ಜೆಯವನಲ್ಲ ಎಂದು ಹೇಳುವ ಮೂಲಕ ಟಾಂಗ್ ಕೊಟ್ಟಿದ್ದಾರೆ.
Looks like it’s time for @OfficialSLC bowlers to show the class and batters to show who they are on the field..??#AsiaCup2022 https://t.co/txWm7wH4nC
— Mahela Jayawardena (@MahelaJay) August 31, 2022
ಕಿಡಿಯನ್ನು ಮತ್ತಷ್ಟು ಹೊತ್ತಿಸಿದ ಜಯವರ್ಧನೆ
ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಕಂಡು ಬಂದ ಈ ಉದ್ವಿಗ್ನತೆಯ ನಡುವೆ ಶ್ರೀಲಂಕಾದ ಮಹೇಲಾ ಜಯವರ್ಧನೆ ಹೇಳಿಕೆ ನೀಡಿ, ಬೌಲರ್‌ಗಳು ತಮ್ಮ ಕ್ಲಾಸ್ ತೋರಿಸಬೇಕಾದ ಸಮಯ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಉಭಯ ತಂಡಗಳ ನಡುವೆ ಹೊತ್ತಿದ್ದ ಬೆಂಕಿಗೆ ತುಪ್ಪ ಸುರಿದಿದ್ದಾರೆ.
Published On - 4:19 pm, Thu, 1 September 22