SL vs AUS: ಲಂಕಾ ವಿರುದ್ಧದ ಮೊದಲ ಟಿ20ಗೆ ಆಸೀಸ್ ತಂಡ ಪ್ರಕಟ; ಐಪಿಎಲ್ ಫ್ಲಾಪ್ ಸ್ಟಾರ್​ಗಳಿಗೆ ತಂಡದಲ್ಲಿ ಸ್ಥಾನ

| Updated By: ಪೃಥ್ವಿಶಂಕರ

Updated on: Jun 06, 2022 | 2:46 PM

Sri Lanka v Australia 1st T20I: ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯ ಕೊಲಂಬೊದಲ್ಲಿ ನಡೆಯಲಿದೆ. 3 ಟಿ20 ಪಂದ್ಯಗಳ ಸರಣಿಯು ಜೂನ್ 11 ರವರೆಗೆ ನಡೆಯಲಿದೆ.

SL vs AUS: ಲಂಕಾ ವಿರುದ್ಧದ ಮೊದಲ ಟಿ20ಗೆ ಆಸೀಸ್ ತಂಡ ಪ್ರಕಟ; ಐಪಿಎಲ್ ಫ್ಲಾಪ್ ಸ್ಟಾರ್​ಗಳಿಗೆ ತಂಡದಲ್ಲಿ ಸ್ಥಾನ
sl vs aus
Follow us on

ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ಮತ್ತೊಮ್ಮೆ ಟಿ20 ಕ್ರಿಕೆಟ್‌ನಲ್ಲಿ ತನ್ನ ಶಕ್ತಿ ಪ್ರದರ್ಶನಕ್ಕೆ ಸಿದ್ಧವಾಗಿದೆ. ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ T20I ಸರಣಿಗಾಗಿ ಆಸ್ಟ್ರೇಲಿಯನ್ ಪ್ಲೇಯಿಂಗ್ XI ಅನ್ನು ಪ್ರಕಟಿಸಲಾಗಿದೆ. ಇದರಲ್ಲಿ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ (David Warner and Steve Smith) ತಂಡಕ್ಕೆ ಮರಳಿದ್ದಾರೆ. ಆಸ್ಟ್ರೇಲಿಯಾ ತಂಡವು ಶ್ರೀಲಂಕಾದಲ್ಲಿ ಟಿ20 ಸರಣಿ (T20 series in Sri Lanka)ಯನ್ನು ಆಡುತ್ತಿದ್ದು, ಆಡುವ XI ನಲ್ಲಿ ಮೂರು ವೇಗದ ಬೌಲರ್‌ಗಳಿಗೆ ಅವಕಾಶ ನೀಡಿದೆ. ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ಮೊದಲ T20 (Sri Lanka v Australia 1st T20I) ಜೂನ್ 7 ರಂದು ನಡೆಯಲಿದೆ. ಮೂರು ಪಂದ್ಯಗಳ ಈ ಟಿ20 ಸರಣಿಯ ಮೊದಲ ಎರಡು ಪಂದ್ಯಗಳು ಕೊಲಂಬೊದಲ್ಲಿ ಮತ್ತು ಕೊನೆಯ ಪಂದ್ಯ ಕ್ಯಾಂಡಿಯಲ್ಲಿ ನಡೆಯಲಿದೆ.

ಐಪಿಎಲ್ 2022 ರಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿದ ಮ್ಯಾಥ್ಯೂ ವೇಡ್ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಎಡಗೈ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಡೀ ಪಂದ್ಯಾವಳಿಯಲ್ಲಿ ವಿಫಲರಾಗಿದ್ದಾರೆ. ಇದಲ್ಲದೇ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ತಂಡದ ಭಾಗವಾಗಿದ್ದಾರೆ. ಪ್ಯಾಟ್ ಕಮಿನ್ಸ್ ಮತ್ತು ಆಡಮ್ ಝಂಪಾ ಅನುಪಸ್ಥಿತಿಯಲ್ಲಿ, ಕೇನ್ ರಿಚರ್ಡ್ಸನ್ ಮತ್ತು ಆಶ್ಟನ್ ಅಗರ್ ಆಡುವ XI ನಲ್ಲಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ:David Warner: ನೋ ಬಾಲ್ ಅಲ್ಲ: ವಿಕೆಟ್​ಗೆ ಚೆಂಡು ತಾಗಿದರೂ ನಾಟೌಟ್ ಆದ ಡೇವಿಡ್ ವಾರ್ನರ್: ವಿಡಿಯೋ

ಇದನ್ನೂ ಓದಿ
ಟ್ಯಾಟೂ ಪ್ರಿಯರ ಕಣ್ಣು ಕುಕ್ಕುತ್ತಿದೆ ಸೂರ್ಯಕುಮಾರ್ ಯಾದವ್ ಹೊಸ ಟ್ಯಾಟೂ; ಫೋಟೋ ನೋಡಿ
ENG vs NZ: ಶತಕ, 10000 ರನ್, ಕಿವೀಸ್ ವಿರುದ್ಧ 1000 ರನ್! ಮೊದಲ ಟೆಸ್ಟ್​ನಲ್ಲಿ ರೂಟ್ ಮಾಡಿದ ದಾಖಲೆಗಳಿವು
ENG vs NZ: ಜೋ ರೂಟ್ ದಾಖಲೆಯ ಶತಕ; ಮೊದಲ ಟೆಸ್ಟ್​ನಲ್ಲಿ ಕಿವೀಸ್​ಗೆ ಸೋಲಿನ ರುಚಿ ತೋರಿಸಿದ ಆಂಗ್ಲರು

ಮೊದಲ ಟಿ20ಗೆ ಆಸ್ಟ್ರೇಲಿಯಾ ತಂಡ

ಆರನ್ ಫಿಂಚ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಆಷ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್‌ಸನ್, ಜೋಶ್ ಹ್ಯಾಜಲ್‌ವುಡ್.

ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ T20I ಸರಣಿ ವೇಳಾಪಟ್ಟಿ

ಜೂನ್ 7 – 1ನೇ ಟಿ20, ಕೊಲಂಬೊ.

ಜೂನ್ 8 – 2ನೇ ಟಿ20, ಕೊಲಂಬೊ

ಜೂನ್ 11- ಮೂರನೇ ಟಿ20, ಕ್ಯಾಂಡಿ.

ಟಿ20 ಸರಣಿಯ ಬಳಿಕ ಐದು ಪಂದ್ಯಗಳ ಏಕದಿನ ಸರಣಿಯೂ ನಡೆಯಲಿದ್ದು, ಜೂನ್ 14ರಿಂದ ಆರಂಭಗೊಳ್ಳಲಿದೆ. ಮೊದಲೆರಡು ಏಕದಿನ ಪಂದ್ಯಗಳು ಕ್ಯಾಂಡಿಯಲ್ಲಿ ನಡೆಯಲಿವೆ. ಇದಾದ ನಂತರ ಮುಂದಿನ ಮೂರು ಏಕದಿನ ಪಂದ್ಯಗಳು ಜೂನ್ 19, 21 ಮತ್ತು 24 ರಂದು ಕೊಲಂಬೊದಲ್ಲಿ ನಡೆಯಲಿವೆ. ಟೆಸ್ಟ್ ಸರಣಿಯು ಜೂನ್ 29 ರಿಂದ ಗಾಲೆಯಲ್ಲಿ ನಡೆಯಲಿದೆ. ಕೊನೆಯ ಟೆಸ್ಟ್ ಜುಲೈ 8 ರಿಂದ ಪ್ರಾರಂಭವಾಗಲಿದೆ.

ತವರಿನಲ್ಲಿ ಶ್ರೀಲಂಕಾವನ್ನು ಸೋಲಿಸುವುದು ಸುಲಭವಲ್ಲ

ಆಸ್ಟ್ರೇಲಿಯಾ ತಂಡದ ಆಡುವ XI ತುಂಬಾ ಬಲಿಷ್ಠವಾಗಿದೆ ಆದರೆ ಶ್ರೀಲಂಕಾವನ್ನು ತವರಿನಲ್ಲಿ ಸೋಲಿಸುವುದು ಅಷ್ಟು ಸುಲಭವಲ್ಲ. ಉಭಯ ತಂಡಗಳ ನಡುವೆ 22 ಪಂದ್ಯಗಳು ನಡೆದಿದ್ದು, ಆಸ್ಟ್ರೇಲಿಯ 13ರಲ್ಲಿ ಗೆದ್ದಿದ್ದರೆ ಶ್ರೀಲಂಕಾ 9ರಲ್ಲಿ ಯಶಸ್ವಿಯಾಗಿದೆ. ಆದರೂ ಕುತೂಹಲಕಾರಿ ಸಂಗತಿಯೆಂದರೆ ಶ್ರೀಲಂಕಾ ತಮ್ಮ ನೆಲದಲ್ಲಿ 8 ಪಂದ್ಯಗಳಲ್ಲಿ 6ರಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ್ದು ಕಾಂಗರೂಗಳು 2ರಲ್ಲಿ ಮಾತ್ರ ಗೆದ್ದಿದ್ದಾರೆ.

Published On - 2:46 pm, Mon, 6 June 22