ಭಾನುವಾರ ನಡೆದ ಐಸಿಸಿ ಟಿ20 ವಿಶ್ವಕಪ್-2021 ಸೂಪರ್-12 ರ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಐದು ವಿಕೆಟ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಮೊಹಮ್ಮದ್ ನಯೀಮ್ 62 ಮತ್ತು ಮುಶ್ಫಿಕರ್ ರಹೀಮ್ ಔಟಾಗದೆ 57 ರನ್ ಗಳಿಸಿದರು. ಈ ಗುರಿಯ ಮುಂದೆ ಶ್ರೀಲಂಕಾದ ಬ್ಯಾಟಿಂಗ್ ಅತ್ಯುತ್ತಮವಾಗಿದ್ದು, 18.5 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ ಗುರಿ ಸಾಧಿಸಿತು. ಶ್ರೀಲಂಕಾ ಪರ ಚರಿತ ಅಸಲಂಕಾ (ಔಟಾಗದೆ 80), ಭಾನುಕಾ ರಾಜಪಕ್ಸೆ (ಔಟಾಗದೆ 53) ಅದ್ಭುತ ಇನ್ನಿಂಗ್ಸ್ ಗಳಿಸಿ ಪಂದ್ಯವನ್ನು ಗೆದ್ದರು.
ಭಾನುವಾರ ನಡೆದ ಐಸಿಸಿ ಟಿ20 ವಿಶ್ವಕಪ್-2021 ಸೂಪರ್-12 ರ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಐದು ವಿಕೆಟ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿತು.
ಶ್ರೀಲಂಕಾ 4 ವಿಕೆಟ್ ನಷ್ಟಕ್ಕೆ 100 ರ ಗಡಿ ದಾಟಿದೆ. ಅಸಲಂಕಾ 50 ಮತ್ತು ರಾಜಪಕ್ಸೆ 21 ರನ್‌ಗಳೊಂದಿಗೆ ಕ್ರೀಸ್‌ನಲ್ಲಿ ಆಡುತ್ತಿದ್ದಾರೆ. ಬಾಂಗ್ಲಾದೇಶದ ಬೌಲರ್‌ಗಳಲ್ಲಿ ಶಕೀಬ್ ಹಸನ್ 2, ಮೊಹಮ್ಮದ್ ಸೈಫುದ್ದೀನ್ 1 ಮತ್ತು ಅಹ್ಮದ್ 1 ವಿಕೆಟ್ ಪಡೆದರು. ಶ್ರೀಲಂಕಾ ಗೆಲುವಿಗೆ 41 ಎಸೆತಗಳಲ್ಲಿ 66 ರನ್ ಬೇಕಿದೆ.
ಶ್ರೀಲಂಕಾ 10 ಓವರ್ ಗಳಿಗೆ 4 ವಿಕೆಟ್ ಕಳೆದುಕೊಂಡು 80 ರನ್ ಗಳಿಸಿದೆ. ಅಸಲಂಕಾ 46 ಮತ್ತು ರಾಜಪಕ್ಸೆ ಕ್ರೀಸ್ ನಲ್ಲಿದ್ದಾರೆ. ಗೆಲುವಿಗೆ 60 ಎಸೆತಗಳಲ್ಲಿ 92 ಅಗತ್ಯವಿದೆ.
ಶ್ರೀಲಂಕಾ 50 ರನ್ ದಾಟಿದೆ. ಅಸಲಂಕಾ 31 ರನ್ ಮತ್ತು ನಿಸಂಕಾ 18 ರನ್ ಗಳೊಂದಿಗೆ ಆಡುತ್ತಿದ್ದಾರೆ. ಗೆಲುವಿಗೆ 86 ಎಸೆತಗಳಲ್ಲಿ 120 ರನ್ ಅಗತ್ಯವಿದೆ.
ಶ್ರೀಲಂಕಾ 5 ಓವರ್ ಗಳಿಗೆ 1 ವಿಕೆಟ್ ಕಳೆದುಕೊಂಡು 39 ರನ್ ಗಳಿಸಿತು. ಅಸಲಂಕಾ 30 ಹಾಗೂ ನಿಶಾಂಕ 7 ರನ್‌ಗಳೊಂದಿಗೆ ಕ್ರೀಸ್‌ನಲ್ಲಿ ಆಡುತ್ತಿದ್ದಾರೆ. ಗೆಲುವಿಗೆ 90 ಎಸೆತಗಳಲ್ಲಿ 133 ಅಗತ್ಯವಿದೆ.
ಶ್ರೀಲಂಕಾ ತಂಡ ಮೊದಲ ಓವರ್ನಲ್ಲೇ ಹಿನ್ನೆಡೆ ಅನುಭವಿಸಿದೆ. ತಂಡದ ಆರಂಭಿಕ ಆಟಗಾರ ಕುಶಲ್ ಫೆರೆರಾ ಔಟಾಗಿದ್ದಾರೆ
ನಿಗಧಿತ 20 ಓವರ್‌ಗಳಲ್ಲಿ ಬಾಂಗ್ಲಾ ತಂಡ 4 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿದೆ. ಬಾಂಗ್ಲಾ ಪರ ರಹೀಮ್ ಹಾಗೂ ಆರಂಭಿಕ ನಹೀಮ್ ಅರ್ಧಶತಕದ ಇನ್ನಿಂಗ್ಸ್ ಆಡಿದರು.
ಮೊದಲು ಬ್ಯಾಟಿಂಗ್ ಮಾಡುತ್ತಿರುವ ಬಾಂಗ್ಲಾದೇಶ 16 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 129 ರನ್ ಗಳಿಸಿದೆ. ನಯೀಮ್ 62 ಮತ್ತು ರಹೀಂ 37 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಬಾಂಗ್ಲಾದೇಶ ಬ್ಯಾಟಿಂಗ್ನಲ್ಲಿ 10 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 72 ರನ್ ಗಳಿಸಿತು. ನಯೀಮ್ 40 ಮತ್ತು ರಹೀಂ 4. ಬಾಂಗ್ಲಾ ಇನಿಂಗ್ಸ್‌ನಲ್ಲಿ ಇದುವರೆಗೆ 7 ಬೌಂಡರಿ ಬಾರಿಸಿದ್ದಾರೆ. ಇಲ್ಲಿಯವರೆಗೆ ಒಂದೇ ಒಂದು ಸಿಕ್ಸ್ ಇರಲಿಲ್ಲ ಎಂಬುದು ಗಮನಾರ್ಹ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 5 ಓವರ್‌ಗಳ ಅಂತ್ಯಕ್ಕೆ ಔಟಾಗದೆ 38 ರನ್ ಗಳಿಸಿದೆ. ನಯೀಮ್ 21, ದಾಸ್ 15 ರೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಬಾಂಗ್ಲಾ ಇನ್ನಿಂಗ್ಸ್ ಇದುವರೆಗೆ 4 ಬೌಂಡರಿಗಳನ್ನು ಪಡೆದಿದೆ.
ಕುಸಲ್ ಪೆರೇರಾ (ಕೀಪರ್), ಪಾತುಮ್ ನಿಸ್ಸಂಕ, ಚರಿತ್ ಅಸಲಂಕ, ಅವಿಷ್ಕಾ ಫೆರ್ನಾಂಡೊ, ಭಾನುಕಾ ರಾಜಪಕ್ಸೆ, ದಾಸುನ್ ಶನಕ (ನಾಯಕ), ವಾನಿಂದು ಹಸರಂಗ, ಚಾಮಿಕ ಕರುಣರತ್ನೆ, ದುಷ್ಮಂತ ಚಮೀರಾ, ಬಿನೂರ ಫೆರ್ನಾಂಡೊ,
ಮೊಹಮ್ಮದ್ ನಯೀಮ್, ಲಿಟನ್ ದಾಸ್, ಶಾಕಿಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಮಹ್ಮದುಲ್ಲಾ (ನಾಯಕ), ಅಫೀಫ್ ಹುಸೇನ್, ನೂರುಲ್ ಹಸನ್ (ಕೀಪರ್), ಮಹ್ದಿ ಹಸನ್, ಮೊಹಮ್ಮದ್ ಸೈಫುದ್ದೀನ್, ನಸುಮ್ ಅಹಮದ್, ಮುಸ್ತಫಾ
ಮೊದಲು ಬ್ಯಾಟಿಂಗ್ ಆರಂಭಿಸಿರುವ ಬಾಂಗ್ಲಾ ತಂಡ ಮೊದಲ ಓವರ್ನಲ್ಲಿ ನಿದಾನಗತಿಯ ಆಟಕ್ಕೆ ಮುಂದಾಗಿದೆ. ತಂಡದ ಪರ ನಹೀಮ್ ಹಾಗೂ ಲಿಟನ್ ಬ್ಯಾಟಿಂಗ್ ಆರಂಭಿಸಿದ್ದಾರೆ.
ಇಂದು ಟಿ 20 ವಿಶ್ವಕಪ್‌ನಲ್ಲಿ, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ತಂಡಗಳು ಸೂಪರ್ 12 ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಶ್ರೀಲಂಕಾ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಎರಡೂ ತಂಡಗಳು ಸೂಪರ್ 12 ರಲ್ಲಿ ನೇರ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿ ಅವರು ಪಂದ್ಯಾವಳಿಯ ಮೊದಲ ಸುತ್ತನ್ನು ಆಡಬೇಕಾಯಿತು.
Published On - 3:14 pm, Sun, 24 October 21