ಇಂದು ಇಂಡೋ- ಪಾಕ್ ನಡುವೆ ಕ್ರಿಕೆಟ್ ಕದನ! ದೇವರ ಮೊರೆ ಹೋದ ಅಭಿಮಾನಿಗಳು
ಎರಡು ವರ್ಷಗಳ ನಂತರ ಇಂಡಿಯಾ ಮತ್ತು ಪಾಕ್ ನಡುವೆ ಕ್ರಿಕೆಟ್ ಕದನ ನಡೆಯುತ್ತಿದೆ. ಹೀಗಾಗಿ ಕ್ರಿಕೆಟ್ ಪ್ರೇಮಿಗಳು ಮ್ಯಾಚ್ ಗುಂಗಿನಲ್ಲಿದ್ದಾರೆ. ಎಲ್ಲಿ ನೋಡಿದರೂ ಇಂಡಿಯಾ ಗೆಲುವಿನ ಕೂಗು ಕೇಳಿ ಬರುತ್ತಿವೆ.
ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು (ಅ.24) ರಾತ್ರಿ 7.30ಕ್ಕೆ ಇಂಡೋ ಪಾಕ್ ಮ್ಯಾಚ್ ನಡೆಯಲಿದ್ದು, ಇಡಿ ವಿಶ್ವವೇ ಕಾತುರದಲ್ಲಿದೆ. ಇನ್ನು ಕ್ರಿಕೆಟ್ ಅಭಿಮಾನಿಗಳಂತೂ ಮ್ಯಾಚ್ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ದೇವಸ್ಥಾನದಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ಪೂಜೆಗಳು ನಡೆಯುತ್ತಿವೆ. ಮೈಸೂರು ಅಗ್ರಹಾರದ ನೂರೊಂದು ಗಣಪತಿ ದೇಗುಲದಲ್ಲಿ ಅಭಿಮಾನಿಗಳು ಪೂಜೆ ಸಲ್ಲಿಸಿ, ಭಾರತದ ಬಾವುಟ ಹಿಡಿದು ಗೆದ್ದು ಬಾ ಭಾರತ ಅಂತ ಘೋಷಣೆ ಕೂಗಿದ್ದಾರೆ.
ಎರಡು ವರ್ಷಗಳ ನಂತರ ಇಂಡಿಯಾ ಮತ್ತು ಪಾಕ್ ನಡುವೆ ಕ್ರಿಕೆಟ್ ಕದನ ನಡೆಯುತ್ತಿದೆ. ಹೀಗಾಗಿ ಕ್ರಿಕೆಟ್ ಪ್ರೇಮಿಗಳು ಮ್ಯಾಚ್ ಗುಂಗಿನಲ್ಲಿದ್ದಾರೆ. ಎಲ್ಲಿ ನೋಡಿದರೂ ಇಂಡಿಯಾ ಗೆಲುವಿನ ಕೂಗು ಕೇಳಿ ಬರುತ್ತಿವೆ. ಇಂಡಿಯಾ ಗೆಲುವಿಗಾಗಿ ಕೊಪ್ಪಳದ ದೇವಸ್ಥಾನಗಳಲ್ಲಿ ಪೂಜೆ ನಡೆಯುತ್ತಿವೆ. ಗೆದ್ದು ಬಾ ಇಂಡಿಯಾ, ಚಕ್ ದೆ ಇಂಡಿಯಾ, ಆಲ್ ದಿ ಬೆಸ್ಟ್ ಇಂಡಿಯಾ ಅಂತಾ ಅಭಿಮಾನಿಗಳು ಘೋಷಣೆ ಕೂಗುತ್ತಿದ್ದಾರೆ. ಕೊಪ್ಪಳದ ಈಶ್ವರ ದೇವಸ್ಥಾನದಲ್ಲಿ ಮಹಿಳಾ, ಮಕ್ಕಳು, ಕ್ರಿಕೆಟ್ ಪ್ರೇಮಿಗಳಿಂದ ಪೂಜೆ ನೆರವೇರುತ್ತಿದೆ.
ಮಡಿಕೇರಿಯಲ್ಲೂ ಟೀಂ ಇಂಡಿಯಾಕ್ಕೆ ಅಭಿಮಾನಿಗಳು ಶುಭಹಾರೈಸಿದ್ದಾರೆ. ಪಾಕ್ ವಿರುದ್ಧ ಗೆದ್ದು ಬರುವಂತೆ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರು ಇಂಡಿಯಾ ಗೆಲ್ಲುತ್ತದೆ. ಆಲ್ ದಿ ಬೆಸ್ಟ್ ಅಂದಿದ್ದಾರೆ. ಶಾಂತಿನಗರದ ಮೈದಾನದಲ್ಲಿ ಅಭಿಮಾನಿಗಳು ಸೆಲೆಬ್ರೆಷನ್ ಮಾಡಿದ್ದಾರೆ. ಈ ಬಾರಿ ಕೂಡ ಟೀಂ ಇಂಡಿಯಾ ಗೆಲ್ಲೋದು ಪಕ್ಕಾ. ಒಳ್ಳೆಯ ಫಾರ್ಮ್ನಲ್ಲಿ ಟೀಂ ಇಂಡಿಯಾ ಕಾಣಿಸುತ್ತಿದೆ. ಐಪಿಎಲ್ನಲ್ಲೂ ಟೀಂ ಇಂಡಿಯಾ ಪ್ಲೇಯರ್ಸ್ ಚೆನ್ನಾಗಿ ಆಡಿದ್ದಾರೆ. ಎರಡು ಅಭ್ಯಾಸ ಪಂದ್ಯದಲ್ಲೂ ಗೆಲುವು ಸಾಧಿಸಿದ್ದಾರೆ. ಧೋನಿ ಟೀಂ ಇಂಡಿಯಾಗೆ ಮೆಂಟರ್ ಆಗಿ ಬಂದಿರೋದು ಪ್ಲಸ್ ಪಾಯಿಂಟ್. ಹೀಗಾಗಿ ಪಾಕಿಸ್ತಾನದ ವಿರುದ್ಧ ಗೆಲುವು ನಿಶ್ಚಿತ. ಟೀಂ ಇಂಡಿಯಾಗೆ ನಮ್ಮ ಸಪೋರ್ಟ್ ಯಾವಾಗಲೂ ಇರತ್ತದೆ. ಇವತ್ತಿನ ಪಂದ್ಯದಲ್ಲಿಯೂ ಗೆದ್ದೇ ಗೆಲ್ತಾರೆ ಅಂತ ಟಿವಿ9 ಜೊತೆ ಕ್ರಿಕೆಟ್ ಪ್ರೇಮಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟಿ20 ಕದನ ಹಿನ್ನೆಲೆ ಇಂಡಿಯಾ ಗೆಲುವಿಗಾಗಿ ಕ್ರಿಕೆಟ್ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ. ಮಂಡ್ಯದ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಭಾರತದ ಹೆಸರಲ್ಲಿ ಅರ್ಚನೆ ಮಾಡಿಸಿ ಗೆಲುವಿಗಾಗಿ ಪ್ರಾರ್ಥನೆ ಮಾಡಿದ್ದಾರೆ. ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್ ಮಾತನಾಡಿ ಇಂದು ಇಂಡಿಯಾ ಪಾಕಿಸ್ತಾನ್ ಹೈ ಓಲ್ಟೆಜ್ ಮ್ಯಾಚ್. ಇಂಡಿಯಾ ತಂಡ ಗೆದ್ದೆ ಗೆಲ್ಲುತ್ತದೆ. ಇಂತಹ ಮ್ಯಾಚ್ಗಳಲ್ಲಿ ಇಂಡಿಯಾ ಗೆಲ್ಲುತ್ತಾ ಬಂದಿದೆ. ಇಂದಿನ ಮ್ಯಾಚ್ ಕೂಡಾ ಗೆದ್ದೆ ಗೆಲ್ಲುತ್ತದೆ ಎಂದು ಶುಭ ಹಾರೈಸಿದ್ದಾರೆ.
ಇಂದು ನಡೆಯಲಿರುವ ಮ್ಯಾಚ್ ಬಗ್ಗೆ ಅಂತರಾಷ್ಟ್ರೀಯ ಅಥ್ಲೀಟ್ ಟಿ.ಅರ್ಜುನ್ ದೇವಯ್ಯ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ಧೋನಿ ಅವರು ಕೂಲ್ ಕ್ಯಾಪ್ಟನ್. ಭಾರತ ತಂಡಕ್ಕೆ ಧೋನಿ ಮೆಂಟರ್ ಆಗಿರೋದು ಒಳ್ಳೆಯ ವಿಚಾರ. ಪಾಕಿಸ್ತಾನದ ವಿರುದ್ಧ ಭಾರತ ಗೆಲುತ್ತದೆ. 200 ಮೀಟರ್ ಓಟದಲ್ಲಿ ಗಡದ್ದು ಪಾಕಿಸ್ತಾನದಲ್ಲಿ ಭಾರತದ ಧ್ವಜ ಹಾರಿಸುವಾಗ ಹೆಮ್ಮೆ ಆಗಿತ್ತು. ಇವತ್ತು ಅದೇ ಹೆಮ್ಮೆ ಇದೆ. ಭಾರತ ಗೆದ್ದು ಬರುತ್ತೆ ಎಂದಿದ್ದಾರೆ.
ಯುವ ಪೈಲ್ವಾನ್ಗಳು ಕೂಡಾ ಭಾರತಕ್ಕೆ ಶುಭಾಶಯ ಕೋರಿದ್ದಾರೆ ತಿಗಳರಪೇಟೆಯ ಕುಂಜಣ್ಣ ಗರಡಿ ಮನೆಯ ಪೈಲ್ವಾನ್ಗಳು ಭಾರತ ಪಾಕಿಸ್ತಾನ ನಡುವಿನ ಮ್ಯಾಚ್ಗೆ ಶುಭ ಹಾರೈಸಿದ್ದಾರೆ. ನಮ್ಮ ಕನ್ನಡಿಗ ಕೆ.ಎಲ್ ರಾಹುಲ್ ಇವತ್ತು ಕಮಾಲ್ ಮಾಡ್ತಾರೆ. ಧೋನಿ ಮೆಂಟರ್ ಆಗಿರೋದೆ ನಮಗೆ ಪ್ಲಸ್ ಪಾಯಿಂಟ್. ರವೀಂದ್ರ ಜಡೇಜಾ ಫಾರ್ಮ್ನಲ್ಲಿದ್ದಾರೆ. ಟಿ ಟ್ವೆಂಟಿ ಪಂದ್ಯದಲ್ಲಿ ನಮ್ಮ ವಿರುದ್ಧ ಪಾಕಿಸ್ತಾನ ಯಾವತ್ತು ಜಯಗಳಿಸಿಲ್ಲ. ನಾವೇ ಪ್ರತಿಬಾರಿ ಜಯ ಗಳಿಸಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ
India vs Pakistan: ಟಿ20 ವಿಶ್ವಕಪ್ನಲ್ಲಿಂದು ರೋಚಕ ಕದನ: ಪಾಕ್ಗೆ ಮತ್ತೆ ಮಣ್ಣು ಮುಕ್ಕಿಸುತ್ತಾ ಭಾರತ?
India vs Pakistan: ಭಾರತ-ಪಾಕಿಸ್ತಾನ ಪಂದ್ಯದ ಮೇಲೆ 1000 ಕೋಟಿ ಬೆಟ್ಟಿಂಗ್
Published On - 10:17 am, Sun, 24 October 21