SL vs BAN Highlights, T20 World Cup 2021: ಬಾಂಗ್ಲಾ ಎದುರು ಗೆದ್ದು ಬೀಗಿದ ಶ್ರೀಲಂಕಾ

TV9 Web
| Updated By: ಪೃಥ್ವಿಶಂಕರ

Updated on:Oct 24, 2021 | 7:14 PM

Sri Lanka vs Bangladesh Live Score In kannada: ಶಾರ್ಜಾದಲ್ಲಿ ನಡೆಯುತ್ತಿರುವ ಟಿ 20 ವಿಶ್ವಕಪ್ 2021 ರ ಸೂಪರ್ 12 ಪಂದ್ಯದಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಿವೆ. ಟಾಸ್ ಗೆದ್ದ ಲಂಕಾ ಬೌಲಿಂಗ್ ಆಯ್ದುಕೊಂಡಿದೆ.

SL vs BAN Highlights, T20 World Cup 2021: ಬಾಂಗ್ಲಾ ಎದುರು ಗೆದ್ದು ಬೀಗಿದ ಶ್ರೀಲಂಕಾ
ಶ್ರೀಲಂಕಾ ಕ್ರಿಕೆಟ್ ತಂಡ

ಭಾನುವಾರ ನಡೆದ ಐಸಿಸಿ ಟಿ20 ವಿಶ್ವಕಪ್-2021 ಸೂಪರ್-12 ರ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಐದು ವಿಕೆಟ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಮೊಹಮ್ಮದ್ ನಯೀಮ್ 62 ಮತ್ತು ಮುಶ್ಫಿಕರ್ ರಹೀಮ್ ಔಟಾಗದೆ 57 ರನ್ ಗಳಿಸಿದರು. ಈ ಗುರಿಯ ಮುಂದೆ ಶ್ರೀಲಂಕಾದ ಬ್ಯಾಟಿಂಗ್ ಅತ್ಯುತ್ತಮವಾಗಿದ್ದು, 18.5 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ ಗುರಿ ಸಾಧಿಸಿತು. ಶ್ರೀಲಂಕಾ ಪರ ಚರಿತ ಅಸಲಂಕಾ (ಔಟಾಗದೆ 80), ಭಾನುಕಾ ರಾಜಪಕ್ಸೆ (ಔಟಾಗದೆ 53) ಅದ್ಭುತ ಇನ್ನಿಂಗ್ಸ್ ಗಳಿಸಿ ಪಂದ್ಯವನ್ನು ಗೆದ್ದರು.

LIVE NEWS & UPDATES

The liveblog has ended.
  • 24 Oct 2021 07:12 PM (IST)

    ಶ್ರೀಲಂಕಾಗೆ ಐದು ವಿಕೆಟ್‌ ಜಯ

    ಭಾನುವಾರ ನಡೆದ ಐಸಿಸಿ ಟಿ20 ವಿಶ್ವಕಪ್-2021 ಸೂಪರ್-12 ರ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಐದು ವಿಕೆಟ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿತು.

  • 24 Oct 2021 06:42 PM (IST)

    100 ರನ್ ದಾಟಿದ ಶ್ರೀಲಂಕಾ

    ಶ್ರೀಲಂಕಾ 4 ವಿಕೆಟ್ ನಷ್ಟಕ್ಕೆ 100 ರ ಗಡಿ ದಾಟಿದೆ. ಅಸಲಂಕಾ 50 ಮತ್ತು ರಾಜಪಕ್ಸೆ 21 ರನ್‌ಗಳೊಂದಿಗೆ ಕ್ರೀಸ್‌ನಲ್ಲಿ ಆಡುತ್ತಿದ್ದಾರೆ. ಬಾಂಗ್ಲಾದೇಶದ ಬೌಲರ್‌ಗಳಲ್ಲಿ ಶಕೀಬ್ ಹಸನ್ 2, ಮೊಹಮ್ಮದ್ ಸೈಫುದ್ದೀನ್ 1 ಮತ್ತು ಅಹ್ಮದ್ 1 ವಿಕೆಟ್ ಪಡೆದರು. ಶ್ರೀಲಂಕಾ ಗೆಲುವಿಗೆ 41 ಎಸೆತಗಳಲ್ಲಿ 66 ರನ್ ಬೇಕಿದೆ.

  • 24 Oct 2021 06:20 PM (IST)

    ಲಂಕಾ 80/4

    ಶ್ರೀಲಂಕಾ 10 ಓವರ್ ಗಳಿಗೆ 4 ವಿಕೆಟ್ ಕಳೆದುಕೊಂಡು 80 ರನ್ ಗಳಿಸಿದೆ. ಅಸಲಂಕಾ 46 ಮತ್ತು ರಾಜಪಕ್ಸೆ ಕ್ರೀಸ್ ನಲ್ಲಿದ್ದಾರೆ. ಗೆಲುವಿಗೆ 60 ಎಸೆತಗಳಲ್ಲಿ 92 ಅಗತ್ಯವಿದೆ.

  • 24 Oct 2021 05:57 PM (IST)

    50 ರನ್ ದಾಟಿದ ಲಂಕಾ

    ಶ್ರೀಲಂಕಾ 50 ರನ್ ದಾಟಿದೆ. ಅಸಲಂಕಾ 31 ರನ್ ಮತ್ತು ನಿಸಂಕಾ 18 ರನ್ ಗಳೊಂದಿಗೆ ಆಡುತ್ತಿದ್ದಾರೆ. ಗೆಲುವಿಗೆ 86 ಎಸೆತಗಳಲ್ಲಿ 120 ರನ್ ಅಗತ್ಯವಿದೆ.

  • 24 Oct 2021 05:56 PM (IST)

    5 ಓವರ್ ಅಂತ್ಯ

    ಶ್ರೀಲಂಕಾ 5 ಓವರ್ ಗಳಿಗೆ 1 ವಿಕೆಟ್ ಕಳೆದುಕೊಂಡು 39 ರನ್ ಗಳಿಸಿತು. ಅಸಲಂಕಾ 30 ಹಾಗೂ ನಿಶಾಂಕ 7 ರನ್‌ಗಳೊಂದಿಗೆ ಕ್ರೀಸ್‌ನಲ್ಲಿ ಆಡುತ್ತಿದ್ದಾರೆ. ಗೆಲುವಿಗೆ 90 ಎಸೆತಗಳಲ್ಲಿ 133 ಅಗತ್ಯವಿದೆ.

  • 24 Oct 2021 05:36 PM (IST)

    ಲಂಕಾ ಮೊದಲ ವಿಕೆಟ್ ಪತನ

    ಶ್ರೀಲಂಕಾ ತಂಡ ಮೊದಲ ಓವರ್​ನಲ್ಲೇ ಹಿನ್ನೆಡೆ ಅನುಭವಿಸಿದೆ. ತಂಡದ ಆರಂಭಿಕ ಆಟಗಾರ ಕುಶಲ್ ಫೆರೆರಾ ಔಟಾಗಿದ್ದಾರೆ

  • 24 Oct 2021 05:07 PM (IST)

    ಬಾಂಗ್ಲಾ ಇನ್ನಿಂಗ್ಸ್ ಮುಕ್ತಾಯ

    ನಿಗಧಿತ 20 ಓವರ್​ಗಳಲ್ಲಿ ಬಾಂಗ್ಲಾ ತಂಡ 4 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿದೆ. ಬಾಂಗ್ಲಾ ಪರ ರಹೀಮ್ ಹಾಗೂ ಆರಂಭಿಕ ನಹೀಮ್ ಅರ್ಧಶತಕದ ಇನ್ನಿಂಗ್ಸ್ ಆಡಿದರು.

  • 24 Oct 2021 05:03 PM (IST)

    16ನೇ ಓವರ್ ಅಂತ್ಯ

    ಮೊದಲು ಬ್ಯಾಟಿಂಗ್ ಮಾಡುತ್ತಿರುವ ಬಾಂಗ್ಲಾದೇಶ 16 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 129 ರನ್ ಗಳಿಸಿದೆ. ನಯೀಮ್ 62 ಮತ್ತು ರಹೀಂ 37 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 24 Oct 2021 04:31 PM (IST)

    10 ಓವರ್ ಮುಕ್ತಾಯ

    ಬಾಂಗ್ಲಾದೇಶ ಬ್ಯಾಟಿಂಗ್​ನಲ್ಲಿ 10 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 72 ರನ್ ಗಳಿಸಿತು. ನಯೀಮ್ 40 ಮತ್ತು ರಹೀಂ 4. ಬಾಂಗ್ಲಾ ಇನಿಂಗ್ಸ್‌ನಲ್ಲಿ ಇದುವರೆಗೆ 7 ಬೌಂಡರಿ ಬಾರಿಸಿದ್ದಾರೆ. ಇಲ್ಲಿಯವರೆಗೆ ಒಂದೇ ಒಂದು ಸಿಕ್ಸ್ ಇರಲಿಲ್ಲ ಎಂಬುದು ಗಮನಾರ್ಹ

  • 24 Oct 2021 04:06 PM (IST)

    5ನೇ ಓವರ್ ಅಂತ್ಯ

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 5 ಓವರ್‌ಗಳ ಅಂತ್ಯಕ್ಕೆ ಔಟಾಗದೆ 38 ರನ್ ಗಳಿಸಿದೆ. ನಯೀಮ್ 21, ದಾಸ್ 15 ರೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಬಾಂಗ್ಲಾ ಇನ್ನಿಂಗ್ಸ್ ಇದುವರೆಗೆ 4 ಬೌಂಡರಿಗಳನ್ನು ಪಡೆದಿದೆ.

  • 24 Oct 2021 03:43 PM (IST)

    ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್

    ಕುಸಲ್ ಪೆರೇರಾ (ಕೀಪರ್), ಪಾತುಮ್ ನಿಸ್ಸಂಕ, ಚರಿತ್ ಅಸಲಂಕ, ಅವಿಷ್ಕಾ ಫೆರ್ನಾಂಡೊ, ಭಾನುಕಾ ರಾಜಪಕ್ಸೆ, ದಾಸುನ್ ಶನಕ (ನಾಯಕ), ವಾನಿಂದು ಹಸರಂಗ, ಚಾಮಿಕ ಕರುಣರತ್ನೆ, ದುಷ್ಮಂತ ಚಮೀರಾ, ಬಿನೂರ ಫೆರ್ನಾಂಡೊ,

  • 24 Oct 2021 03:42 PM (IST)

    ಬಾಂಗ್ಲಾದೇಶ ಪ್ಲೇಯಿಂಗ್ ಇಲೆವೆನ್

    ಮೊಹಮ್ಮದ್ ನಯೀಮ್, ಲಿಟನ್ ದಾಸ್, ಶಾಕಿಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಮಹ್ಮದುಲ್ಲಾ (ನಾಯಕ), ಅಫೀಫ್ ಹುಸೇನ್, ನೂರುಲ್ ಹಸನ್ (ಕೀಪರ್), ಮಹ್ದಿ ಹಸನ್, ಮೊಹಮ್ಮದ್ ಸೈಫುದ್ದೀನ್, ನಸುಮ್ ಅಹಮದ್, ಮುಸ್ತಫಾ

  • 24 Oct 2021 03:37 PM (IST)

    ಬಾಂಗ್ಲಾ ಇನ್ನಿಂಗ್ಸ್ ಆರಂಭ

    ಮೊದಲು ಬ್ಯಾಟಿಂಗ್ ಆರಂಭಿಸಿರುವ ಬಾಂಗ್ಲಾ ತಂಡ ಮೊದಲ ಓವರ್​ನಲ್ಲಿ ನಿದಾನಗತಿಯ ಆಟಕ್ಕೆ ಮುಂದಾಗಿದೆ. ತಂಡದ ಪರ ನಹೀಮ್ ಹಾಗೂ ಲಿಟನ್ ಬ್ಯಾಟಿಂಗ್ ಆರಂಭಿಸಿದ್ದಾರೆ.

  • 24 Oct 2021 03:20 PM (IST)

    ಟಾಸ್ ಗೆದ್ದ ಶ್ರೀಲಂಕಾ

    ಇಂದು ಟಿ 20 ವಿಶ್ವಕಪ್‌ನಲ್ಲಿ, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ತಂಡಗಳು ಸೂಪರ್ 12 ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಶ್ರೀಲಂಕಾ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಎರಡೂ ತಂಡಗಳು ಸೂಪರ್ 12 ರಲ್ಲಿ ನೇರ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿ ಅವರು ಪಂದ್ಯಾವಳಿಯ ಮೊದಲ ಸುತ್ತನ್ನು ಆಡಬೇಕಾಯಿತು.

  • Published On - Oct 24,2021 3:14 PM

    Follow us
    ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
    ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
    ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
    ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
    ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
    ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
    ‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
    ‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
    ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
    ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
    ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
    ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
    ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
    ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
    ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
    ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
    ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
    ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
    ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
    ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ