India vs Pakistan: ಭಾರತ-ಪಾಕಿಸ್ತಾನ ಪಂದ್ಯದ ಮೇಲೆ 1000 ಕೋಟಿ ಬೆಟ್ಟಿಂಗ್
India vs Pakistan, T20 World Cup 2021: ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ ಹಿರಿಯ ಅಧಿಕಾರಿಗಳು ಪ್ರಸ್ತುತ ದುಬೈ ಮತ್ತು ಅಬುಧಾಬಿಯಲ್ಲಿ ಉಪಸ್ಥಿತರಿದ್ದು, ಅವರು ಪ್ರತಿ ಪಂದ್ಯದ ಮೇಲೆ ಕಣ್ಣಿಟ್ಟಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ (T20 World Cup 2021) ಭಾರತ ತಂಡವು ಭಾನುವಾರದಿಂದ ತನ್ನ ಅಭಿಯಾನ ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು (India vs Pakistan) ಎದುರಿಸುತ್ತಿರುವುದು ವಿಶೇಷ. ಹೀಗಾಗಿ ಇಡೀ ವಿಶ್ವದ ಕಣ್ಣು ಈ ಪಂದ್ಯದ ಮೇಲೆ ನೆಟ್ಟಿದೆ. ಅದರಂತೆ ಅಕ್ಟೋಬರ್ 24 ರಂದು ದುಬೈನಲ್ಲಿ ನಡೆಯಲಿರುವ ಈ ಪಂದ್ಯವನ್ನೇ ಬೃಹತ್ ಬಂಡವಾಳ ಮಾಡಿಕೊಳ್ಳಲು ಬುಕ್ಕಿಂಗ್ ಸನ್ನದ್ದರಾಗಿದ್ದಾರೆ. ಹೌದು, ಭಾರತ-ಪಾಕ್ ನಡುವಣ ಪಂದ್ಯವು ಬೃಹತ್ ಬೆಟ್ಟಿಂಗ್ಗೆ ಸಾಕ್ಷಿಯಾಗಲಿದೆ. ಈಗಾಗಲೇ ಪಂದ್ಯದ ಮೇಲೆ 1000 ಸಾವಿರ ಕೋಟಿಗೂ ಅಧಿಕ ಮೊತ್ತದ ಬೆಟ್ಟಿಂಗ್ ನಡೆದಿದೆ ಎಂದು ವರದಿಯಾಗಿದೆ. ಇನ್ನು ಟಾಸ್ ಪ್ರಕ್ರಿಯೆ ಬೆನ್ನಲ್ಲೇ, ಈ ಅಂಕಿ ಅಂಶವು ಸುಮಾರು 1500 ರಿಂದ 2000 ಕೋಟಿಗಳಿಗೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ವಿಶೇಷವೆಂದರೆ ಬುಕ್ಕಿಗಳ ಮೊದಲ ಆಯ್ಕೆ ಟೀಮ್ ಇಂಡಿಯಾ.
ಮೂಲಗಳ ಪ್ರಕಾರ, ದೇಶದಾದ್ಯಂತ ಅನೇಕ ಬುಕ್ಕಿಗಳು ದುಬೈನಲ್ಲಿ ಇದ್ದಾರೆ. ದುಬೈನ ಅನಾಮಧೇಯ ಬುಕ್ಕಿಯೊಬ್ಬರು, ಬೆಟ್ಟಿಂಗ್ನ ದರಗಳು ಮತ್ತು ಅದರ ಏರಿಳಿತಗಳ ಬಗ್ಗೆ ಕೆಲ ಮಾಹಿತಿಗಳನ್ನು ನೀಡಿದ್ದಾರೆ. ಅದರಂತೆ ಭಾರತದ ಬೆಟ್ಟಿಂಗ್ ದರ ಶೇ. 57, 58 ರಷ್ಟಿದೆ. ಆನ್‌ಲೈನ್ ಬೆಟ್ಟಿಂಗ್ ಸೈಟ್ ಮೂಲಕ, ದೇಶದಾದ್ಯಂತ ಎಲ್ಲಾ ಸಣ್ಣ, ದೊಡ್ಡ ಮತ್ತು ಉನ್ನತ ಪ್ರೊಫೈಲ್ ಬುಕ್ಕಿಗಳು ಈ ದೊಡ್ಡ ಪಂದ್ಯದ ಮೇಲೆ ಕೋಟಿಗಳ ಬೆಟ್ಟಿಂಗ್ ಕಟ್ಟಿದ್ದಾರೆ.
ಭ್ರಷ್ಟಾಚಾರ ನಿಗ್ರಹ ಘಟಕದ ಕಣ್ಣು: ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ ಹಿರಿಯ ಅಧಿಕಾರಿಗಳು ಪ್ರಸ್ತುತ ದುಬೈ ಮತ್ತು ಅಬುಧಾಬಿಯಲ್ಲಿ ಉಪಸ್ಥಿತರಿದ್ದು, ಅವರು ಪ್ರತಿ ಪಂದ್ಯದ ಮೇಲೆ ಕಣ್ಣಿಟ್ಟಿದ್ದಾರೆ. ಈ ವಿಷಯದ ಕುರಿತು ಮಾತನಾಡಿದ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ ಹಿರಿಯ ಅಧಿಕಾರಿ, ‘ನಮ್ಮ ಅಧಿಕಾರಿಗಳು ಮತ್ತು ಸ್ಥಳೀಯ ಏಜೆನ್ಸಿಗಳು ಆಟಗಾರರ ಸುರಕ್ಷತೆ ಮತ್ತು ಎಲ್ಲಾ ಸಮಸ್ಯೆಗಳನ್ನು ಒಳಗೊಂಡಿರುವ ಪ್ರತಿಯೊಂದು ಚಲನವಲನದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, 1000 ಕೋಟಿ ರೂ. ಬೆಟ್ಟಿಂಗ್ ಬಗ್ಗೆ ಅವರು ಪ್ರತಿಕ್ರಿಯಿಸಲಿಲ್ಲ.
ಆನ್‌ಲೈನ್ ಬೆಟ್ಟಿಂಗ್ ದಂಧೆಗಳು ನಡೆಯುತ್ತಿರುವ ಎಲ್ಲಾ ಸೈಟ್‌ಗಳ ಮೇಲೆ ದೇಶಾದ್ಯಂತ ಪೊಲೀಸರು, ವಿಶೇಷವಾಗಿ ಅಪರಾಧ ವಿಭಾಗದ ಸೈಬರ್ ಘಟಕಗಳು ಸಹ ಕಣ್ಣಿಟ್ಟಿವೆ. ಇದಾಗ್ಯೂ ಭಾರತದ ಹೊರಗಿನಿಂದ ಕಾರ್ಯನಿರ್ವಹಿಸುತ್ತಿರುವ ಬೆಟ್ಟಿಂಗ್ ವೆಬ್ಸೈಟ್ಗಳು ಬೃಹತ್ ಮೊತ್ತದ ಬೆಟ್ಟಿಂಗ್ ನಡೆಸುತ್ತಿದೆ.
ಫಿಕ್ಸಿಂಗ್ ಭಯ: ಭಾರತ-ಪಾಕಿಸ್ತಾನ ಪಂದ್ಯ ದುಬೈನಲ್ಲಿ ನಡೆಯುತ್ತಿರುವುದರಿಂದ ಅಂಡರ್ವರ್ಲ್ಡ್ನ ಹಸ್ತಕ್ಷೇಪದ ಭಯ ಕೂಡ ಆವರಿಸಿದೆ. ಏಕೆಂದರೆ ವಿವಿಧ ರೀತಿಯಲ್ಲಿ ಬೆಟ್ಟಿಂಗ್ ನಡೆಯುತ್ತಿದ್ದು, ಹೀಗಾಗಿ ಬುಕ್ಕಿಗಳು ಆಟಗಾರರನ್ನು ಅಥವಾ ಪಂದ್ಯವನ್ನು ಫಿಕ್ಸ್ ಮಾಡುವ ಸಾಧ್ಯತೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಬಿಸಿಸಿಐ ಅಥವಾ ಐಸಿಸಿಯ ಭ್ರಷ್ಟಾಚಾರ ನಿಗ್ರಹ ಘಟಕವು ಆಟಗಾರರ ಮೇಲೆ ಕಣ್ಣಿಟ್ಟಿದೆ.
ಇದನ್ನೂ ಓದಿ: India vs Pakistan, T20 World cup 2021: ಒಂದು ದಿನ ಮೊದಲೇ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ್
ಇದನ್ನೂ ಓದಿ: T20 World cup 2021: ಪಾಕ್ ವಿರುದ್ದದ ಪಂದ್ಯದೊಂದಿಗೆ ಹೊಸ ಸಾಧನೆ ಮಾಡಲಿದ್ದಾರೆ ಕೆಎಲ್ ರಾಹುಲ್, ಪಾಂಡ್ಯ
ಇದನ್ನೂ ಓದಿ: T20 World Cup 2021: ಟಿ20 ರ್ಯಾಂಕಿಂಗ್ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?
(T20 World Cup 2021: India vs Pakistan match 1000 crore bet)