Virat Kohli vs Babar: ಮಾಸ್ಟರ್ ಆಫ್ ಕವರ್ ಡ್ರೈವ್: ಇಬ್ಬರಲ್ಲಿ ಯಾರು ಬಲಿಷ್ಠ?
T20 World Cup 2021: ಟಿ20 ಪಂದ್ಯಗಳ ವಿಷಯಕ್ಕೆ ಬಂದರೆ ರ್ಯಾಂಕಿಂಗ್ನಲ್ಲಿ ಬಾಬರ್ ಆಜಂ 2ನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ವಿರಾಟ್ ಕೊಹ್ಲಿ 4ನೇ ಸ್ಥಾನ ಅಲಂಕರಿಸಿದ್ದಾರೆ. ಅಂದರೆ ಇಬ್ಬರೂ ಕೂಡ ಟಿ20 ಕ್ರಿಕೆಟ್ನ ಬಲಿಷ್ಠ ದಾಂಡಿಗರು ಎಂಬುದು ಸ್ಪಷ್ಟ.
ಮಾಸ್ಟರ್ ಆಫ್ ಕವರ್ ಡ್ರೈವ್ ಎಂದಾಗ ಪ್ರಸ್ತುತ ಕ್ರಿಕೆಟ್ನಲ್ಲಿ ಕಣ್ಮುಂದೆ ಬರುವ ಹೆಸರುಗಳೆಂದರೆ ವಿರಾಟ್ ಕೊಹ್ಲಿ (Virat kohli) ಹಾಗೂ ಬಾಬರ್ ಆಜಂ (Babar azam). ವಿಶೇಷ ಎಂದರೆ ಒಬ್ಬರು ಭಾರತ ತಂಡದ ನಾಯಕರಾದರೆ, ಮತ್ತೊಬ್ಬರು ಪಾಕಿಸ್ತಾನ್ ತಂಡದ ನಾಯಕ. ಇದೀಗ ಈ ಇಬ್ಬರೂ ಟಿ20 ವಿಶ್ವಕಪ್ನಲ್ಲಿ (T20 World Cup 2021) ಮುಖಾಮುಖಿಯಾಗುತ್ತಿದ್ದಾರೆ. ಭಾನುವಾರ ದುಬೈನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಇಬ್ಬರು ತಮ್ಮ ತಂಡವನ್ನು ಮುನ್ನಡೆಸಲಿದ್ದು, ಇಬ್ಬರು ಕೂಡ ತಮ್ಮ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ. ಹೀಗಾಗಿಯೇ ಇಬ್ಬರ ನಡುವಣ ಹೋಲಿಕೆಗಳು ಶುರುವಾಗಿದೆ. ಇಬ್ಬರೂ ಸಹ ಕವರ್ ಡ್ರೈವ್ ಶಾಟ್ನಲ್ಲಿ ಮಾಸ್ಟರ್ಸ್ ಎನಿಸಿಕೊಂಡರೂ, ವಿರಾಟ್ ಕೊಹ್ಲಿಯ ಹೊಡೆತಕ್ಕೆ ಹೆಚ್ಚಿನ ಅಭಿಮಾನಿಗಳಿದ್ದಾರೆ. ಇದಾಗ್ಯೂ ವಯಸ್ಸಿನ ಅಂತರವನ್ನು ಗಮನಿಸಿದರೆ ಕೊಹ್ಲಿಗಿಂತ ಬಾಬರ್ 5 ವರ್ಷ ಚಿಕ್ಕವರು. ಹೀಗಾಗಿ ಅವರು ಕೂಡ ಕೊಹ್ಲಿಯಂತೆ ಬೆಳೆಯಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತದೆ.
ಇನ್ನು ಟಿ20 ಪಂದ್ಯಗಳ ವಿಷಯಕ್ಕೆ ಬಂದರೆ ರ್ಯಾಂಕಿಂಗ್ನಲ್ಲಿ ಬಾಬರ್ ಆಜಂ 2ನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ವಿರಾಟ್ ಕೊಹ್ಲಿ 4ನೇ ಸ್ಥಾನ ಅಲಂಕರಿಸಿದ್ದಾರೆ. ಅಂದರೆ ಇಬ್ಬರೂ ಕೂಡ ಟಿ20 ಕ್ರಿಕೆಟ್ನ ಬಲಿಷ್ಠ ದಾಂಡಿಗರು ಎಂಬುದು ಸ್ಪಷ್ಟ. ಅದೇ ರೀತಿ ಬಾಬರ್ ಇದುವರೆಗೆ 61 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 46.89 ಸರಾಸರಿಯಲ್ಲಿ 2204 ರನ್ ಗಳಿಸಿರುವುದು ವಿಶೇಷ. ಇದೇ ವೇಳೆ ಬಾಬರ್ ಬ್ಯಾಟ್ನಿಂದ ಮೂಡಿ ಬಂದಿರುವುದು 20 ಅರ್ಧಶತಕಗಳು ಹಾಗೂ 1 ಶತಕ.
ಹಾಗೆಯೇ ವಿರಾಟ್ ಕೊಹ್ಲಿ ಇದುವರೆಗೆ 89 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 28 ಅರ್ಧಶತಕದೊಂದಿಗೆ 3159 ರನ್ ಗಳಿಸಿದ್ದಾರೆ. ಇಲ್ಲಿ ಕೊಹ್ಲಿಯ ರನ್ ಸರಾಸರಿ 52.65 ರಷ್ಟಿದೆ. ಅಂದರೆ ಬಾಬರ್ ಆಜಂ (46.89) ಕೊಹ್ಲಿಗಿಂತ ಹಿಂದಿದ್ದಾರೆ. ಇದಾಗ್ಯೂ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ ಶತಕ ಬಾರಿಸಿಲ್ಲ ಎಂಬುದು ವಿಶೇಷ. 94 ರನ್ಗಳಿಸಿದ್ದು ಕೊಹ್ಲಿ ಗರಿಷ್ಠ ಸ್ಕೋರ್. ಹೀಗಾಗಿ ಮೊದಲ ಪಂದ್ಯದಲ್ಲಿ ಕೊಹ್ಲಿಯ ಬ್ಯಾಟ್ನಿಂದ ಅಭಿಮಾನಿಗಳು ಶತಕವನ್ನು ನಿರೀಕ್ಷಿಸುತ್ತಿದ್ದಾರೆ.
ವಿರಾಟ್ ಕೊಹ್ಲಿಯನ್ನು ಮಾಸ್ಟರ್ ಆಫ್ ಚೇಸರ್ ಕರೆಯಲಾಗುತ್ತದೆ. ಇದಕ್ಕೆ ಸಾಕ್ಷಿಯಾಗಿ ಅಂಕಿಅಂಶಗಳು ಕೂಡ ಸಿಗುತ್ತವೆ. ಟಿ20 ಯಲ್ಲಿ ಕೊಹ್ಲಿಯ 84 ಇನ್ನಿಂಗ್ಸ್‌ಗಳಲ್ಲಿ. 42 ಪಂದ್ಯಗಳು ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿರುವ ಕೊಹ್ಲಿಯ ಬ್ಯಾಟಿಂಗ್ ಸರಾಸರಿ 34.25. ಆದರೆ ಚೇಸಿಂಗ್ನಲ್ಲಿ 38 ಪಂದ್ಯಗಳ ಇನ್ನಿಂಗ್ಸ್‌ನಲ್ಲಿ 82.15 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಹೀಗಾಗಿಯೇ ಕೊಹ್ಲಿ ಟಿ20ಯಲ್ಲೂ ಚೇಸ್ ಮಾಸ್ಟರ್ ಎನ್ನಬಹುದು.
ಮತ್ತೊಂದೆಡೆ ಬಾಬರ್ ಆಜಮ್ 56 ಟಿ20 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದಾರೆ. ಈ ವೇಳೆ 57.47 ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. ಆದರೆ ಚೇಸಿಂಗ್ ವೇಳೆ ಬಾಬರ್ 41.16 ಸರಾಸರಿಯಲ್ಲಿ ರನ್ ಕಲೆಹಾಕಿದ್ದರು. ಅಂದರೆ ಇಲ್ಲಿ ಮೊದಲು ಬ್ಯಾಟಿಂಗ್ನಲ್ಲಿ ಬಾಬರ್ ಉತ್ತಮವಾಗಿ ಆಡಿದ್ರೆ, ಚೇಸಿಂಗ್ನಲ್ಲಿ ವಿರಾಟ್ ಕೊಹ್ಲಿ ಅಧ್ಭುತವಾಗಿ ಬ್ಯಾಟ್ ಬೀಸಿದ್ದಾರೆ. ಅಂದರೆ ಒತ್ತಡದ ಸನ್ನಿವೇಶದಲ್ಲಿ ಕೊಹ್ಲಿ ಅತ್ಯುತ್ತಮವಾಗಿ ಆಡಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಇಬ್ಬರ ಸ್ಟ್ರೈಕ್ ರೇಟ್ ನೋಡುವುದಾದರೆ, ವಿರಾಟ್ ಕೊಹ್ಲಿ 139.04 ಸ್ಟ್ರೈಕ್ ರೇಟ್ನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಹಾಗೆಯೇ ಬಾಬರ್ 130.65 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಒಟ್ಟಾರೆ ಅಂಕಿ ಅಂಶಗಳ ಪ್ರಕಾರ ಬಾಬರ್ಗಿಂತ ಕೊಹ್ಲಿಯೇ ಮೇಲುಗೈ ಹೊಂದಿದ್ದಾರೆ. ಇದಾಗ್ಯೂ ಬಾಬರ್ 2019 ಏಕದಿನ ವಿಶ್ವಕಪ್ನಲ್ಲಿ ಭಾರತದ ವಿರುದ್ದ 48 ರನ್ ಬಾರಿಸಿದ್ದರು. ಹೀಗಾಗಿ ಈ ಬಾರಿ ಕೂಡ ಟೀಮ್ ಇಂಡಿಯಾ ವಿರುದ್ದ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ಇತ್ತ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಇದಾಗ್ಯೂ ಪಾಕ್ ವಿರುದ್ದ ಟಿ20 ವಿಶ್ವಕಪ್ನಲ್ಲಿ ಭಾರತದ ಪರ ಅತೀ ಹೆಚ್ಚು ರನ್ಗಳಿಸಿದ ಆಟಗಾರ ಎಂಬ ದಾಖಲೆ ಕೊಹ್ಲಿ ಹೆಸರಿನಲ್ಲಿದೆ. ಹೀಗಾಗಿ ಪಾಕಿಸ್ತಾನ್ ವಿರುದ್ದ ಅಬ್ಬರಿಸುವ ಮೂಲಕ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್ಗೆ ಮರಳಲಿದ್ದಾರಾ ಕಾದು ನೋಡಬೇಕಿದೆ.
ಇದನ್ನೂ ಓದಿ: India vs Pakistan, T20 World cup 2021: ಒಂದು ದಿನ ಮೊದಲೇ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ್
ಇದನ್ನೂ ಓದಿ: T20 World cup 2021: ಪಾಕ್ ವಿರುದ್ದದ ಪಂದ್ಯದೊಂದಿಗೆ ಹೊಸ ಸಾಧನೆ ಮಾಡಲಿದ್ದಾರೆ ಕೆಎಲ್ ರಾಹುಲ್, ಪಾಂಡ್ಯ
ಇದನ್ನೂ ಓದಿ: T20 World Cup 2021: ಟಿ20 ರ್ಯಾಂಕಿಂಗ್ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?
(Virat Kohli vs Babar Azam Stats Comparison)
Published On - 6:31 pm, Sat, 23 October 21