IND vs PAK Live Streaming: ಭಾರತ-ಪಾಕ್ ಪಂದ್ಯದ ಸಮಯ, ಯಾವ ಚಾನೆಲ್ನಲ್ಲಿ ನೇರ ಪ್ರಸಾರ? ಇಲ್ಲಿದೆ ಮಾಹಿತಿ
India vs Pakistan LIVE, T20 World Cup 2021: ಅಮೆರಿಕಾ ಸಂಯುಕ್ತ, ಕೆನಡಾದಲ್ಲಿ ವಿಲೋ ಟಿವಿ ಮೂಲಕ ಈ ಪಂದ್ಯವನ್ನು ವೀಕ್ಷಿಸಬಹುದು. ಹಾಗೆಯೇ ಆಸ್ಟ್ರೇಲಿಯಾದಲ್ಲಿ ಫಾಕ್ಸ್ ಸ್ಪೋರ್ಟ್ಸ್, ನ್ಯೂಜಿಲ್ಯಾಂಡ್ನಲ್ಲಿ ಸ್ಕೈ ಸ್ಪೋರ್ಟ್, ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಇತ್ತಿಸಲಾತ್ ಕ್ರಿಕ್ ಲೈಫ್ ಚಾನೆಲ್ ಮೂಲಕ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದು.
IND vs PAK Live Streaming: ಕ್ರಿಕೆಟ್ ಪ್ರೇಮಿಗಳ ಕಾತುರತೆಗೆ ತೆರೆಬೀಳಲು ಇನ್ನು ಒಂದು ದಿನ ಮಾತ್ರ ಉಳಿದಿದೆ. ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾನುವಾರ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ್ (India vs Pakistan) ಮುಖಾಮುಖಿಯಾಗಲಿದೆ. ಈ ರೋಚಕ ಪಂದ್ಯವನ್ನು ವೀಕ್ಷಿಸಲು ಇಡೀ ವಿಶ್ವದ ಕ್ರಿಕೆಟ್ ಪ್ರೇಮಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಐಸಿಸಿ ವಿಶ್ವಕಪ್ನಲ್ಲಿ ಇದುವರೆಗೆ ಭಾರತದ ವಿರುದ್ದ ಗೆದ್ದ ಇತಿಹಾಸ ಪಾಕಿಸ್ತಾನಕ್ಕಿಲ್ಲ. ಇದಾಗ್ಯೂ ಈ ಬಾರಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಪಾಕ್ ನಾಯಕ ಬಾಬರ್ ಆಜಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಲಿಷ್ಠ ಪಡೆಯೊಂದಿಗೆ ಪಾಕ್ಗೆ ಮತ್ತೊಂದು ಸೋಲುಣಿಸಲು ಸಜ್ಜಾಗಿ ನಿಂತಿದೆ. ಹೀಗಾಗಿಯೇ ಈ ಬಾರಿಯ ಪಂದ್ಯವು ಮತ್ತಷ್ಟು ರೋಚಕತೆಯಿಂದ ಕೂಡಿರಲಿದೆ.
ಹೀಗಾಗಿಯೇ ಈ ಪಂದ್ಯವನ್ನು ವೀಕ್ಷಿಸಲು ಹೆಚ್ಚಿನವರು ಕಾದು ಕುಳಿತಿದ್ದಾರೆ. ಈ ಪಂದ್ಯ ಆರಂಭವಾಗುವ ಸಮಯ ಹಾಗೂ ಯಾವ ಚಾನೆಲ್ನಲ್ಲಿ ವೀಕ್ಷಿಸಬಹುದು, ಮೊಬೈಲ್ನಲ್ಲಿ ಹೇಗೆ ನೋಡಬಹುದು ಎಂಬುದರ ಒಂದಷ್ಟು ಮಾಹಿತಿ ಇಲ್ಲಿ ನೀಡಲಾಗಿದೆ.
ಈ ಪಂದ್ಯ ಯಾವಾಗ ನಡೆಯಲಿದೆ? ಅಕ್ಟೋಬರ್ 24, 2021 ರಂದು ಈ ಪಂದ್ಯ ನಡೆಯಲಿದೆ.
ಪಂದ್ಯ ನಡೆಯುವ ಸ್ಥಳ ಯಾವುದು? ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.
ಪಂದ್ಯ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ? ಸಂಜೆ 7.30 ಕ್ಕೆ ಆರಂಭವಾಗಲಿದೆ. ಟಾಸ್ ಪ್ರಕ್ರಿಯೆ ಸಂಜೆ 7 ಗಂಟೆಗೆ ನಡೆಯಲಿದೆ.
ಯಾವ ಟಿವಿ ಚಾನೆಲ್ನಲ್ಲಿ ವೀಕ್ಷಿಸಬಹುದು? ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್ಗಳಲ್ಲಿ ಪಂದ್ಯ ಪ್ರಸಾರವಾಗಲಿದೆ.
ಆಫ್ರಿಕಾದಲ್ಲಿ ಸೂಪರ್‌ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ಪ್ರಸಾರವಾಗಲಿದೆ. ಹಾಗೆಯೇ ಯುನೈಟೆಡ್ ಕಿಂಗ್‌ಡಮ್‌ನಲ್ಲಿ (UK) ಸ್ಕೈ ಸ್ಪೋರ್ಟ್ಸ್, ಕೆರಿಬಿಯನ್ ದ್ವೀಪಗಳಲ್ಲಿ ESPN ಚಾನೆಲ್ಗಳಲ್ಲಿ ಹಾಗೂ ಫ್ಲೋ ಸ್ಪೋರ್ಟ್ಸ್ ಅಪ್ಲಿಕೇಶನ್ ಲೈವ್ ಸ್ಟ್ರೀಮ್ ಇರಲಿದೆ.
ಇನ್ನು ಅಮೆರಿಕಾ ಸಂಯುಕ್ತ, ಕೆನಡಾದಲ್ಲಿ ವಿಲೋ ಟಿವಿ ಮೂಲಕ ಈ ಪಂದ್ಯವನ್ನು ವೀಕ್ಷಿಸಬಹುದು. ಹಾಗೆಯೇ ಆಸ್ಟ್ರೇಲಿಯಾದಲ್ಲಿ ಫಾಕ್ಸ್ ಸ್ಪೋರ್ಟ್ಸ್, ನ್ಯೂಜಿಲ್ಯಾಂಡ್ನಲ್ಲಿ ಸ್ಕೈ ಸ್ಪೋರ್ಟ್, ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಇತ್ತಿಸಲಾತ್ ಕ್ರಿಕ್ ಲೈಫ್ ಚಾನೆಲ್ ಮೂಲಕ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದು.
ಮೊಬೈಲ್ ಸ್ಟ್ರೀಮಿಂಗ್ ಯಾವುದರಲ್ಲಿರಲಿದೆ? ಭಾರತದಲ್ಲಿ ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿಯೂ ಲಭ್ಯವಿರುತ್ತದೆ.
ಉಭಯ ತಂಡಗಳು ಹೀಗಿವೆ: ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಇಶಾನ್ ಕಿಶನ್ , ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ
ಪಾಕಿಸ್ತಾನ್: ಬಾಬರ್ ಆಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಮೊಹಮ್ಮದ್ ರಿಜ್ವಾನ್, ಆಸಿಫ್ ಅಲಿ, ಫಖರ್ ಝಮಾನ್, ಶೊಯೇಬ್ ಮಲಿಕ್, ಮೊಹಮ್ಮದ್ ಹಫೀಜ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಮ್ ಜೂನಿಯರ್, ಶಾಹೀನ್ ಅಫ್ರಿದಿ , ಹರಿಸ್ ರೌಫ್, ಹಸನ್ ಅಲಿ, ಇಮಾದ್ ವಾಸಿಂ, ಹೈದರ್ ಅಲಿ
ಇದನ್ನೂ ಓದಿ: India vs Pakistan, T20 World cup 2021: ಒಂದು ದಿನ ಮೊದಲೇ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ್
ಇದನ್ನೂ ಓದಿ: T20 World cup 2021: ಪಾಕ್ ವಿರುದ್ದದ ಪಂದ್ಯದೊಂದಿಗೆ ಹೊಸ ಸಾಧನೆ ಮಾಡಲಿದ್ದಾರೆ ಕೆಎಲ್ ರಾಹುಲ್, ಪಾಂಡ್ಯ
ಇದನ್ನೂ ಓದಿ: T20 World Cup 2021: ಟಿ20 ರ್ಯಾಂಕಿಂಗ್ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?
(India vs Pakistan, T20 World Cup 2021 Live Streaming: When and where to watch)
Published On - 5:06 pm, Sat, 23 October 21