IND vs SL 1st T20 Highlights: ಲಂಕಾ ವಿರುದ್ಧ 43 ರನ್‌ಗಳಿಂದ ಗೆದ್ದ ಭಾರತ
Sri Lanka vs India 1st T20I Highlights in Kannada: ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು ಭಾರತ 43 ರನ್‌ಗಳಿಂದ ಸೋಲಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 213 ರನ್ ಗಳಿಸಿತು. ಉತ್ತರವಾಗಿ ಶ್ರೀಲಂಕಾ ತಂಡ 19.2 ಓವರ್‌ಗಳಲ್ಲಿ 170 ರನ್‌ಗಳಿಗೆ ಆಲೌಟ್ ಆಯಿತು.
ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು ಭಾರತ 43 ರನ್‌ಗಳಿಂದ ಸೋಲಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 213 ರನ್ ಗಳಿಸಿತು. ಉತ್ತರವಾಗಿ ಶ್ರೀಲಂಕಾ ತಂಡ 19.2 ಓವರ್‌ಗಳಲ್ಲಿ 170 ರನ್‌ಗಳಿಗೆ ಆಲೌಟ್ ಆಯಿತು. ಒಂದು ಹಂತದಲ್ಲಿ ಶ್ರೀಲಂಕಾದ ಸ್ಕೋರ್ ಒಂದು ವಿಕೆಟ್‌ಗೆ 140 ರನ್ ಆಗಿತ್ತು. ಆದರೆ, ಇದಾದ ಬಳಿಕ ಶ್ರೀಲಂಕಾ ತಂಡ 30 ರನ್ ಗಳಿಸುವಷ್ಟರಲ್ಲಿ ಮುಂದಿನ ಒಂಬತ್ತು ವಿಕೆಟ್ ಕಳೆದುಕೊಂಡಿತು. ಶ್ರೀಲಂಕಾ ಪರ ಪಾತುಮ್ ನಿಸ್ಸಾಂಕಾ ಗರಿಷ್ಠ 79 ರನ್ ಗಳಿಸಿದರು. ಅದೇ ಸಮಯದಲ್ಲಿ, ರಿಯಾನ್ ಪರಾಗ್ ಭಾರತದ ಪರ ಗರಿಷ್ಠ ಮೂರು ವಿಕೆಟ್ ಪಡೆದರು. 20ನೇ ಓವರ್‌ನಲ್ಲಿ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದರು. ಈ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ಮುಂದಿನ ಪಂದ್ಯ ಭಾನುವಾರ ನಡೆಯಲಿದೆ.
LIVE NEWS & UPDATES
-
IND vs SL 1st T20 Live Score: ಗೆದ್ದ ಭಾರತ
ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 43 ರನ್‌ಗಳಿಂದ ಜಯ ಸಾಧಿಸಿದೆ. 20ನೇ ಓವರ್‌ನಲ್ಲಿ ರಿಯಾನ್ ಪರಾಗ್ ಸತತ 2 ವಿಕೆಟ್ ಪಡೆಯುವ ಮೂಲಕ ಶ್ರೀಲಂಕಾವನ್ನು ಆಲೌಟ್ ಮಾಡಿದರು.
-
IND vs SL 1st T20 Live Score: ಗೆಲುವಿನ ಹಾದಿಯಲ್ಲಿ ಭಾರತ
ಅರ್ಷದೀಪ್ ಸಿಂಗ್ ಬಂದ ತಕ್ಷಣ 18ನೇ ಓವರ್‌ನ ಮೊದಲ ಎಸೆತದಲ್ಲಿ ವನಿಂದು ಹಸರಂಗ ಅವರನ್ನು ಔಟ್ ಮಾಡಿದರು. ಇದರೊಂದಿಗೆ ಶ್ರೀಲಂಕಾ 7ನೇ ವಿಕೆಟ್ ಕಳೆದುಕೊಂಡಿತು. ಈಗ ಭಾರತ ಗೆಲುವಿನತ್ತ ಸಾಗಿದೆ, ಏಕೆಂದರೆ ಶ್ರೀಲಂಕಾ ಈಗ 12 ಎಸೆತಗಳಲ್ಲಿ 50 ರನ್ ಗಳಿಸಬೇಕಾಗಿದೆ, ಅದು ಕಷ್ಟಕರವಾಗಿದೆ.
-
IND vs SL 1st T20 Live Score: ನಾಲ್ಕನೇ ವಿಕೆಟ್
ಶ್ರೀಲಂಕಾ ನಾಲ್ಕನೇ ವಿಕೆಟ್ ಕಳೆದುಕೊಂಡಿದೆ. ನಾಯಕ ಚರಿತ್ ಅಸಲಂಕಾ ಖಾತೆ ತೆರೆಯದೆ ಔಟಾಗಿದ್ದಾರೆ. ರವಿ ಬಿಷ್ಣೋಯ್ ಈ ವಿಕೆಟ್ ಪಡೆದರು.
IND vs SL 1st T20 Live Score: ಬಿಷ್ಣೋಯ್ಗೆ ಗಾಯ
ಭಾರತದ ಸ್ಪಿನ್ನರ್ ರವಿ ಬಿಷ್ಣೋಯ್ ಗಾಯಗೊಂಡಿದ್ದಾರೆ. 16ನೇ ಓವರ್‌ನ ಮೊದಲ ಎಸೆತದಲ್ಲಿ ಕಮಿಂದು ಮೆಂಡಿಸ್ ನೀಡಿದ ಕ್ಯಾಚ್ ಹಿಡಿಯಲು ಯತ್ನಿಸಿದರು. ಈ ವೇಳೆ ಚೆಂಡು ಅವರ ಮುಖಕ್ಕೆ ತಾಗಿತು.
IND vs SL 1st T20 Live Score: ಮೂರನೇ ವಿಕೆಟ್
ಶ್ರೀಲಂಕಾ ಮೂರನೇ ವಿಕೆಟ್ ಕಳೆದುಕೊಂಡಿದೆ. ಕುಸಾಲ್ ಪೆರೆರಾ ಅವರನ್ನು ಔಟ್ ಮಾಡುವ ಮೂಲಕ ಅಕ್ಷರ್ ಪಟೇಲ್ ಭಾರತಕ್ಕೆ ಮೂರನೇ ಯಶಸ್ಸು ನೀಡಿದರು.
IND vs SL 1st T20 Live Score: ನಿಸ್ಸಾಂಕಾ ಔಟ್
ಶ್ರೀಲಂಕಾ ತನ್ನ ಎರಡನೇ ವಿಕೆಟ್ ಕಳೆದುಕೊಂಡಿತು. ಅಕ್ಷರ್ ಪಟೇಲ್ ಅವರು ಪಾತುಮ್ ನಿಸ್ಸಾಂಕಾ ಅವರನ್ನು ಬೌಲ್ಡ್ ಮಾಡಿದರು.
IND vs SL 1st T20 Live Score: 100 ರನ್ ಪೂರ್ಣ
ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ವೇಗವಾಗಿ ಬ್ಯಾಟಿಂಗ್ ಮಾಡುತ್ತಿದ್ದು, ತಂಡ ಕೇವಲ 10.1 ಓವರ್‌ಗಳಲ್ಲಿ 100 ರನ್ ಪೂರೈಸಿದೆ. ಇನ್ನು ತಂಡ ಗೆಲ್ಲಲು 58 ಎಸೆತಗಳಲ್ಲಿ 114 ರನ್ ಗಳಿಸಬೇಕಿದೆ. ಪಾತುಮ್ ನಿಸ್ಸಾಂಕ 34 ಎಸೆತಗಳಲ್ಲಿ 51 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
IND vs SL 1st T20 Live Score: ಮೆಂಡಿಸ್ ಔಟ್
ಶ್ರೀಲಂಕಾದ ಮೊದಲ ವಿಕೆಟ್ ಪತನಗೊಂಡಿದೆ. ಅರ್ಷದೀಪ್ ಸಿಂಗ್ ಭಾರತಕ್ಕೆ ಮೊದಲ ಯಶಸ್ಸನ್ನು ನೀಡಿದ್ದಾರೆ. ಕುಸಾಲ್ ಮೆಂಡಿಸ್ 27 ಎಸೆತಗಳಲ್ಲಿ 45 ರನ್ ಗಳಿಸಿ ಔಟಾದರು.
IND vs SL 1st T20 Live Score: 50 ರನ್ ಪೂರ್ಣ
ಪವರ್‌ಪ್ಲೇಯಲ್ಲಿ ಶ್ರೀಲಂಕಾದ ಆರಂಭಿಕರು ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದಾರೆ. ಪವರ್‌ಪ್ಲೇ ಅಂತ್ಯದ ವೇಳೆಗೆ ಇಬ್ಬರೂ ಸೇರಿ 55 ರನ್ ಗಳಿಸಿದ್ದಾರೆ.
IND vs SL 1st T20 Live Score: ಲಂಕಾಗೆ ಉತ್ತಮ ಆರಂಭ
ಶ್ರೀಲಂಕಾ ತಂಡ ಮೊದಲ ಓವರ್‌ನಲ್ಲಿ 2 ಬೌಂಡರಿಗಳೊಂದಿಗೆ ಶುಭಾರಂಭ ಮಾಡಿತು. ಅರ್ಷದೀಪ್ ಸಿಂಗ್ ಅವರ ಓವರ್‌ನಲ್ಲಿ 9 ರನ್ ಬಂದವು
IND vs SL 1st T20 Live Score: 214 ರನ್ ಟಾರ್ಗೆಟ್
ಮೊದಲ ಇನಿಂಗ್ಸ್ ಮುಗಿದಿದೆ. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿದೆ. ಅಕ್ಷರ್ ಪಟೇಲ್ ಸಿಕ್ಸರ್ ಸಿಡಿಸುವ ಮೂಲಕ ಇನ್ನಿಂಗ್ಸ್ ಕೊನೆಗೊಳಿಸಿದರು. ಇನ್ನು ಶ್ರೀಲಂಕಾ 214 ರನ್ ಗಳಿಸಬೇಕಿದೆ.
IND vs SL 1st T20 Live Score: ರಿಂಕು ಸಿಂಗ್ ಕೂಡ ಔಟ್
ರಿಂಕು ಸಿಂಗ್ 1 ರನ್ ಗಳಿಸಿ ಔಟಾದರು. ಇದರೊಂದಿಗೆ ಭಾರತ 7ನೇ ವಿಕೆಟ್ ಕಳೆದುಕೊಂಡಿದೆ.
IND vs SL 1st T20 Live Score: ಆರನೇ ವಿಕೆಟ್
ಶ್ರೀಲಂಕಾದ ವೇಗದ ಬೌಲರ್ ಮತಿಶಾ ಪತಿರಾನ ಟೀಂ ಇಂಡಿಯಾ ಆರನೇ ವಿಕೆಟ್ ಉರುಳಿಸಿದ್ದಾರೆ. ಪಂತ್ 49 ರನ್ ಬಾರಿಸಿ ಬೌಲ್ಡ್ ಆದರು. ಇದು ಪತಿರಾನ ಅವರ 4 ವಿಕೆಟ್ ಆಯಿತು.
IND vs SL 1st T20 Live Score: 180 ರನ್ ಪೂರ್ಣ
17 ಓವರ್‌ಗಳ ಆಟ ಅಂತ್ಯಗೊಂಡಿದೆ. ಭಾರತ 4 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿದೆ. ರಿಷಬ್ ಪಂತ್ 28 ಎಸೆತಗಳಲ್ಲಿ 36 ರನ್ ಮತ್ತು ರಿಯಾನ್ ಪರಾಗ್ 1 ಎಸೆತದಲ್ಲಿ 1 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
IND vs SL 1st T20 Live Score: ಪಾಂಡ್ಯ ಔಟ್
ಭಾರತಕ್ಕೆ ನಾಲ್ಕನೇ ಹೊಡೆತ ಬಿದ್ದಿದೆ. ಮತಿಶ ಪತಿರಾನ ಹಾರ್ದಿಕ್ ಪಾಂಡ್ಯರನ್ನು ಬೌಲ್ಡ್ ಮಾಡಿದರು. ಪಾಂಡ್ಯ 10 ಎಸೆತಗಳಲ್ಲಿ 9 ರನ್ ಗಳಿಸಿ ಔಟಾದರು.
IND vs SL 1st T20 Live Score: 5000 ರನ್ ಪೂರೈಸಿದ ಪಂತ್
ರಿಷಬ್ ಪಂತ್ ಟಿ20ಯಲ್ಲಿ 5000 ರನ್ ಪೂರೈಸಿದ್ದಾರೆ. ಅವರು ಈ ಸಾಧನೆ ಮಾಡಿದ 100ನೇ ಬ್ಯಾಟ್ಸ್‌ಮನ್.
IND vs SL 1st T20 Live Score: ಸೂರ್ಯ ಔಟ್
ಸೂರ್ಯಕುಮಾರ್ ಯಾದವ್ 58 ರನ್ ಗಳಿಸಿ ಔಟಾದರು. ಪತಿರಾನ ಎಸೆತದಲ್ಲಿ ಎಲ್‌ಬಿಡಬ್ಲ್ಯು ಆದರು. ನಾಯಕನಾಗಿ ಸೂರ್ಯ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಇದೀಗ ತಂಡವನ್ನು ದೊಡ್ಡ ಮೊತ್ತದತ್ತ ಕೊಂಡೊಯ್ಯುವ ಜವಾಬ್ದಾರಿ ಹಾರ್ದಿಕ್ ಪಾಂಡ್ಯ ಮತ್ತು ಪಂತ್ ಮೇಲಿದೆ.
IND vs SL 1st T20 Live Score: 150 ರನ್ ಪೂರ್ಣ
14ನೇ ಓವರ್ನಲ್ಲಿಯೇ ಟೀಂ ಇಂಡಿಯಾ ಸ್ಕೋರ್ 150ರ ಗಡಿ ದಾಟಿದೆ. ಸೂರ್ಯಕುಮಾರ್ ಯಾದವ್ ಪತಿರಾನ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ತಂಡದ ಸ್ಕೋರನ್ನು 150ರ ಗಡಿ ದಾಟಿಸಿದರು.
IND vs SL 1st T20 Live Score: ಸೂರ್ಯ ಸಿಡಿಲಬ್ಬರದ ಅರ್ಧಶತಕ
13ನೇ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ 22 ಎಸೆತಗಳಲ್ಲಿ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದ 20ನೇ ಅರ್ಧಶತಕ ದಾಖಲಿಸಿದರು. ಟಿ20 ನಾಯಕನಾಗಿ ಭಾರತಕ್ಕೆ ಇದು ಮೂರನೇ ಅರ್ಧಶತಕವಾಗಿದೆ. ಅದೇ ಸಮಯದಲ್ಲಿ, ಇದು ಶ್ರೀಲಂಕಾ ವಿರುದ್ಧ ಸೂರ್ಯಕುಮಾರ್ ಅವರ ನಾಲ್ಕನೇ 50+ ಸ್ಕೋರ್ ಆಗಿದೆ. 13 ಓವರ್‌ಗಳ ನಂತರ ಭಾರತದ ಸ್ಕೋರ್ ಎರಡು ವಿಕೆಟ್‌ಗೆ 146 ರನ್ ಆಗಿದೆ. ಸೂರ್ಯಕುಮಾರ್ 24 ಎಸೆತಗಳಲ್ಲಿ 54 ರನ್ ಗಳಿಸಿ ಕ್ರೀಸ್‌ನಲ್ಲಿದ್ದರೆ, ರಿಷಬ್ ಪಂತ್ 17 ಎಸೆತಗಳಲ್ಲಿ 16 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
IND vs SL 1st T20 Live Score: 10 ಓವರ್ ಪೂರ್ಣ
ಕಮೆಂದು ಮೆಂಡಿಸ್ ಎಸೆದ 10ನೇ ಓವರ್‌ನಲ್ಲಿ 9 ರನ್‌ಗಳು ಬಂದವು. ಸೂರ್ಯಕುಮಾರ್ ಯಾದವ್ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರು.ಮೊದಲ 10 ಓವರ್‌ಗಳಲ್ಲಿ ಟೀಂ ಇಂಡಿಯಾ 111 ರನ್ ಗಳಿಸಿದೆ.
IND vs SL 1st T20 Live Score: ಶತಕ ಪೂರೈಸಿದ ಭಾರತ
ಟೀಂ ಇಂಡಿಯಾ ಕೇವಲ 8.4 ಓವರ್‌ಗಳಲ್ಲಿ ಶತಕದ ಗಡಿ ದಾಟಿದೆ. ಸೂರ್ಯ ಹಾಗೂ ಪಂತ್ ಕ್ರೀಸ್‌ನಲ್ಲಿದ್ದಾರೆ.
IND vs SL 1st T20 Live Score: ಜೈಸ್ವಾಲ್ ಕೂಡ ಔಟ್, ಭಾರತ 74/2
ಭಾರತಕ್ಕೆ ಬ್ಯಾಕ್ ಟು ಬ್ಯಾಕ್ ಆಘಾತ ಎದುರಾಗಿದೆ. ಗಿಲ್ ಬಳಿಕ ಜೈಸ್ವಾಲ್ ಕೂಡ ಮುಂದಿನ ಎಸೆತದಲ್ಲೇ ಔಟಾದರು. ಜೈಸ್ವಾಲ್ 20 ಎಸೆತಗಳಲ್ಲಿ 40 ರನ್ ಬಾರಿಸಿ ಸ್ಟಂಪ್ ಔಟ್ ಆದರು.
IND vs SL 1st T20 Live Score: ಗಿಲ್ ಔಟ್
ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮಾಡಿದ ಶುಭ್ಮನ್ ಗಿಲ್ 16 ಎಸೆತಗಳಲ್ಲಿ 34 ರನ್ ಬಾರಿಸಿ ಔಟಾದರು. ಇದರೊಂದಿಗೆ ಭಾರತದ ಪವರ್ ಪ್ಲೇ ಕೂಡ ಅಂತ್ಯಗೊಂಡಿತು.
IND vs SL 1st T20 Live Score: 50 ರನ್ ಪೂರ್ಣ
ನಾಲ್ಕನೇ ಓವರ್‌ನಲ್ಲಿ 15 ರನ್ ಬಂದವು. ಓವರ್‌ನಲ್ಲಿ ಶುಭಮನ್ ಗಿಲ್ ಎರಡು ಬೌಂಡರಿ ಹಾಗೂ ಜೈಸ್ವಾಲ್ ಸಿಕ್ಸರ್ ಬಾರಿಸಿದರು. 4 ಓವರ್‌ಗಳ ನಂತರ ಭಾರತ 50ರ ಗಡಿ ದಾಟಿತು.
IND vs SL 1st T20 Live Score: 3 ಓವರ್ ಮುಕ್ತಾಯ
ಶುಭಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಮೊದಲ 3 ಓವರ್‌ಗಳ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 36 ರನ್ ಗಳಿಸಿದ್ದಾರೆ. ಗಿಲ್ 9 ರನ್ ಗಳಿಸಿ ಆಡುತ್ತಿದ್ದರೆ ಜೈಸ್ವಾಲ್ 27 ರನ್ ಗಳಿಸಿ ಆಡುತ್ತಿದ್ದಾರೆ.
IND vs SL 1st T20 Live Score: ಜೈಸ್ವಾಲ್ ಎರಡು ಬೌಂಡರಿ
ಅಸಿತಾ ಫೆರ್ನಾಂಡೋ ಅವರ ಓವರ್‌ನಲ್ಲಿ ಟೀಂ ಇಂಡಿಯಾ 9 ರನ್ ಗಳಿಸಿತು. ಯಶಸ್ವಿ ಜೈಸ್ವಾಲ್ ಎರಡು ಬೌಂಡರಿ ಬಾರಿಸಿದರು.
IND vs SL 1st T20 Live Score: ಭಾರತದ ಬ್ಯಾಟಿಂಗ್ ಆರಂಭ
ಭಾರತದ ಬ್ಯಾಟಿಂಗ್ ಆರಂಭವಾಗಿದ್ದು, ಮೊದಲ ಓವರ್ನಲ್ಲೇ ತಂಡ ಮೂರು ಬೌಂಡರಿ ಕಲೆಹಾಕಿತು. ಮೊದಲ ಎಸೆತದಲ್ಲೇ ಜೈಸ್ವಾಲ್ ಬೌಂಡರಿ ಬಾರಿಸಿದರೆ, ಕೊನೆಯ ಎರಡು ಎಸೆತಗಳಲ್ಲಿ ಗಿಲ್ ಬೌಂಡರಿ ಬಾರಿಸಿದರು.
IND vs SL 1st T20 Live Score: ನಾಲ್ವರಿಗೆ ಅವಕಾಶವಿಲ್ಲ
ಸಂಜು ಸ್ಯಾಮ್ಸನ್, ಶಿವಂ ದುಬೆ, ಖಲೀಲ್ ಅಹ್ಮದ್ ಮತ್ತು ವಾಷಿಂಗ್ಟನ್ ಸುಂದರ್ ಟೀಮ್ ಇಂಡಿಯಾದ ಪ್ಲೇಯಿಂಗ್ ಹನ್ನೊಂದರಿಂದ ಹೊರಬಿದ್ದಿದ್ದಾರೆ.
IND vs SL 1st T20 Live Score: ಶ್ರೀಲಂಕಾ ತಂಡ
ಅವಿಷ್ಕಾ ಫೆರ್ನಾಂಡೊ, ಚರಿತ್ ಅಸಲಂಕಾ (ನಾಯಕ), ಪಾತುಮ್ ನಿಸ್ಸಾಂಕ, ವನಿಂದು ಹಸರಂಗ, ದಸುನ್ ಶನಕ, ಕುಸಾಲ್ ಮೆಂಡಿಸ್, ದಿನೇಶ್ ಚಾಂಡಿಮಲ್ (ವಿಕೆಟ್ ಕೀಪರ್), ಮತಿಶ ಪತಿರಾನ, ಮಹೇಶ್ ತಿಕ್ಷಣ, ದುನಿತ್ ವೆಲಾಲಗೆ, ಬಿನೂರ ಫೆರ್ನಾಂಡೊ.
IND vs SL 1st T20 Live Score: ಭಾರತ ತಂಡ
ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ರಿಯಾನ್ ಪರಾಗ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್.
IND vs SL 1st T20 Live Score: ಟಾಸ್ ಗೆದ್ದ ಲಂಕಾ
ಟಾಸ್ ಗೆದ್ದ ಲಂಕಾ ನಾಯಕ ಚರಿತ್ ಅಸಲಂಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - Jul 27,2024 6:33 PM