Sri Lanka vs Pakistan, 2nd Test: ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಶ್ರೀಲಂಕಾ ತಂಡವು ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ತಂಡದ ನಾಯಕ ದಿಮುತ್ ಕರುಣರತ್ನೆ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ನಿಶಾಂತ್ ಮದುಷ್ಕಾ (4) ರನೌಟ್ ಆಗುವ ಮೂಲಕ ನಿರ್ಗಮಿಸಿದರು. ಈ ಆಘಾತದಿಂದ ಪಾರಾಗುವ ಮುನ್ನವೇ ದಿಮುತ್ ಕರುಣರತ್ನೆ (17) ನಸೀಮ್ ಶಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಆ ಬಳಿಕ ಬಂದ ಕುಸಾಲ್ ಮೆಂಡಿಸ್ (4), ಏಂಜೆಲೊ ಮ್ಯಾಥ್ಯೂಸ್ (9) ಗೆ ಶಾಹೀನ್ ಅಫ್ರಿದಿ ಹಾಗೂ ನಸೀಮ್ ಶಾ ಪೆವಿಲಿಯನ್ ಹಾದಿ ತೋರಿಸಿದರು. ಈ ಹಂತದಲ್ಲಿ ಜೊತೆಯಾದ ದಿನೇಶ್ ಚಂಡಿಮಲ್ ಹಾಗೂ ಧನಂಜಯ ಡಿಸಿಲ್ವಾ ತಂಡಕ್ಕೆ ಆಸರೆಯಾದರು.
5ನೇ ವಿಕೆಟ್ಗೆ 85 ರನ್ಗಳ ಜೊತೆಯಾಟವಾಡಿದ ಈ ಜೋಡಿಯು ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಈ ಹಂತದಲ್ಲಿ ನಸೀಮ್ ಶಾ ಎಸೆತವನ್ನು ಗುರುತಿಸುವಲ್ಲಿ ಎಡವಿದ ದಿನೇಶ್ ಚಂಡಿಮಲ್ (34) ಕ್ಯಾಚ್ ನೀಡಿ ನಿರ್ಗಮಿಸಿದರು. ಮತ್ತೊಂದೆಡೆ ಅರ್ಧಶತಕ ಪೂರೈಸಿದ ಧನಂಜಯ ಡಿಸಿಲ್ವಾ ತಂಡಕ್ಕೆ ಆಸರೆಯಾಗಿ ನಿಂತರು.
ಆದರೆ 37ನೇ ಓವರ್ನಲ್ಲಿ ಅಬ್ರಾರ್ ಅಹ್ಮದ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಧನಂಜಯ್ ಡಿಸಿಲ್ವಾ (57) ಕೂಡ ವಿಕೆಟ್ ಒಪ್ಪಿಸಿದರು. ಈ ವಿಕೆಟ್ ಸಿಗುವುದರೊಂದಿಗೆ ಮತ್ತೆ ಮೇಲುಗೈ ಸಾಧಿಸಿದ ಪಾಕ್ ಬೌಲರ್ಗಳು ಶ್ರೀಲಂಕಾ ತಂಡವನ್ನು ಪ್ರಥಮ ಇನಿಂಗ್ಸ್ನಲ್ಲಿ ಕೇವಲ 166 ರನ್ಗಳಿಗೆ ಆಲೌಟ್ ಮಾಡಿದರು. ಪಾಕಿಸ್ತಾನ್ ಪರ ಅಬ್ರಾರ್ ಅಹ್ಮದ್ 4 ವಿಕೆಟ್ ಕಬಳಿಸಿದರೆ, ನಸೀಮ್ ಶಾ 3 ವಿಕೆಟ್ ಪಡೆದು ಮಿಂಚಿದರು.
ಶ್ರೀಲಂಕಾ ಪ್ಲೇಯಿಂಗ್ 11: ನಿಶಾನ್ ಮದುಷ್ಕ , ದಿಮುತ್ ಕರುಣರತ್ನೆ (ನಾಯಕ) , ಕುಸಾಲ್ ಮೆಂಡಿಸ್ , ಏಂಜೆಲೊ ಮ್ಯಾಥ್ಯೂಸ್ , ದಿನೇಶ್ ಚಾಂಡಿಮಲ್ , ಧನಂಜಯ ಡಿ ಸಿಲ್ವಾ , ಸದೀರ ಸಮರವಿಕ್ರಮ (ವಿಕೆಟ್ ಕೀಪರ್) , ರಮೇಶ್ ಮೆಂಡಿಸ್ , ಪ್ರಭಾತ್ ಜಯಸೂರ್ಯ , ಅಸಿತ ಫೆರ್ನಾಂಡೋ , ದಿಲ್ಶನ್ ಮಧುಶಂಕ.
ಇದನ್ನೂ ಓದಿ: Team India: 13 ಸೋಲು…ನಾಕೌಟ್ನಲ್ಲಿ ಮುಗ್ಗರಿಸುವ ಟೀಮ್ ಇಂಡಿಯಾ
ಪಾಕಿಸ್ತಾನ್ ಪ್ಲೇಯಿಂಗ್ 11: ಅಬ್ದುಲ್ಲಾ ಶಫೀಕ್ , ಇಮಾಮ್-ಉಲ್-ಹಕ್ , ಶಾನ್ ಮಸೂದ್ , ಬಾಬರ್ ಆಝಂ (ನಾಯಕ) ಸೌದ್ ಶಕೀಲ್ , ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್) , ಅಘಾ ಸಲ್ಮಾನ್ , ನೋಮನ್ ಅಲಿ , ಶಾಹೀನ್ ಅಫ್ರಿದಿ , ನಸೀಮ್ ಶಾ , ಅಬ್ರಾರ್ ಅಹ್ಮದ್.