Team India: 13 ಸೋಲು…ನಾಕೌಟ್​ನಲ್ಲಿ ಮುಗ್ಗರಿಸುವ ಟೀಮ್ ಇಂಡಿಯಾ

Team India: ಕಳೆದ 10 ವರ್ಷಗಳಲ್ಲಿ ಭಾರತ ತಂಡವು 13 ನಾಕೌಟ್ ಪಂದ್ಯಗಳನ್ನು ಸೋತಿದೆ ಎಂಬುದೇ ಅಚ್ಚರಿ. ಅಂದರೆ ಇಲ್ಲಿ ಟೀಮ್ ಇಂಡಿಯಾ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸುತ್ತಿರುವುದು ಸ್ಪಷ್ಟ.

Team India: 13 ಸೋಲು...ನಾಕೌಟ್​ನಲ್ಲಿ ಮುಗ್ಗರಿಸುವ ಟೀಮ್ ಇಂಡಿಯಾ
Team India
Follow us
TV9 Web
| Updated By: ಝಾಹಿರ್ ಯೂಸುಫ್

Updated on:Jul 24, 2023 | 2:50 PM

ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಎಮರ್ಜಿಂಗ್ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ಎ ತಂಡ ಸೋಲನುಭವಿಸಿದೆ. ಫೈನಲ್​ ಪಂದ್ಯದಲ್ಲಿ ಭಾರತ ಎ-ಪಾಕಿಸ್ತಾನ್ ಎ (India A vs Pakistan A) ತಂಡಗಳು ಮುಖಾಮುಖಿಯಾಗಿದ್ದರಿಂದ ಎಲ್ಲರಲ್ಲೂ ಸಹಜ ಕುತೂಹಲ ಮನೆಮಾಡಿತ್ತು. ಅದರಲ್ಲೂ ಈ ಬಾರಿ ಟೀಮ್ ಇಂಡಿಯಾ ಪ್ರಶಸ್ತಿಯೊಂದಿಗೆ ಹಿಂತಿರುಗಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಂತಿಮ ಹಣಾಹಣಿಯಲ್ಲಿ ಪಾಕ್ ತಂಡ ನೀಡಿದ 353 ರನ್​ಗಳ ಗುರಿ ಬೆನ್ನತ್ತಿದ ಭಾರತ ಎ ತಂಡವು 224 ರನ್​ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಟೀಮ್ ಇಂಡಿಯಾ ಮತ್ತೊಮ್ಮೆ ನಾಕೌಟ್ ಹಂತದಲ್ಲಿ ಮುಗ್ಗರಿಸಿದಂತಾಗಿದೆ.

ಅಂದರೆ ಕಳೆದ 10 ವರ್ಷಗಳಲ್ಲಿ ಟೀಮ್ ಇಂಡಿಯಾ ನಾಕೌಟ್ ಹಂತಗಳಲ್ಲಿ ಸೋಲುತ್ತಿದೆ. ಅದು ಸೆಮಿಫೈನಲ್ ಇರಲಿ ಅಥವಾ ಫೈನಲ್ ಪಂದ್ಯವಿರಲಿ…ಒತ್ತಡವನ್ನು ಮೀರಿ ಆಡುವಲ್ಲಿ ಭಾರತೀಯ ಆಟಗಾರರು ವಿಫಲರಾಗುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಭಾರತ ಎ ತಂಡ. ಲೀಗ್ ಹಂತದಲ್ಲಿ ಪಾಕಿಸ್ತಾನ್ ಎ ತಂಡವನ್ನು 8 ವಿಕೆಟ್​ಗಳಿಂದ ಬಗ್ಗು ಬಡಿದು ಭರ್ಜರಿ ಜಯ ಸಾಧಿಸಿದ್ದ ಟೀಮ್ ಇಂಡಿಯಾ ಫೈನಲ್​ನಲ್ಲಿ ಹೀನಾಯವಾಗಿ ಸೋತಿರುವುದೇ ಅಚ್ಚರಿ.

ಹೀಗೆ ನಾಕೌಟ್ ಹಂತದಲ್ಲಿ ಟೀಮ್ ಇಂಡಿಯಾ ವಿಫಲವಾಗಲು ಕಾರಣವೇನು? ಎಂಬ ಪ್ರಶ್ನೆಗೆ ಕಳೆದ 10 ವರ್ಷಗಳಿಂದ ಉತ್ತರ ಸಿಕ್ಕಿಲ್ಲ. ಏಕೆಂದರೆ ಕಳೆದ ಒಂದು ದಶಕದಲ್ಲಿ ಭಾರತ ತಂಡವು 13 ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ವಿಫಲಾಗಿದೆ. ಈ ಎಲ್ಲಾ ಟೂರ್ನಿಗಳಲ್ಲೂ ಟೀಮ್ ಇಂಡಿಯಾ ನಾಕೌಟ್ ಹಂತದಲ್ಲೇ ಮುಗ್ಗರಿಸಿತ್ತು. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು.

ಭಾರತ ಎ ತಂಡ:

2013ರ ಉದಯೋನ್ಮುಖ ತಂಡಗಳ ಏಷ್ಯಾಕಪ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಭಾರತ ಎ ತಂಡ ಆ ಬಳಿಕ ಪ್ರಶಸ್ತಿ ಗೆದ್ದಿಲ್ಲ ಎಂಬುದು ಅಚ್ಚರಿ. ಇದರ ನಡುವೆ 2 ಬಾರಿ ಫೈನಲ್ ಹಾಗೂ 1 ಬಾರಿ ಸೆಮಿಫೈನಲ್ ಪ್ರವೇಶಿಸಿತ್ತು ಎಂಬುದು ಉಲ್ಲೇಖಾರ್ಹ. ಇದಾಗ್ಯೂ ನಾಕೌಟ್ ಹಂತದಲ್ಲಿ ಗೆಲ್ಲಲು ಮಾತ್ರ ಸಾಧ್ಯವಾಗಲಿಲ್ಲ.

  • 2018 ರ ಫೈನಲ್​ನಲ್ಲಿ ಭಾರತ ಎ ತಂಡವನ್ನು ಶ್ರೀಲಂಕಾ ಸೋಲಿಸಿತ್ತು.
  • 2019ರ ಸೆಮಿಫೈನಲ್‌ನಲ್ಲಿ ಭಾರತ ಎ ವಿರುದ್ಧ ಪಾಕಿಸ್ತಾನ ಎ ತಂಡ ಜಯ ಸಾಧಿಸಿತ್ತು.
  • 2023ರ ಫೈನಲ್​ ಪಂದ್ಯದಲ್ಲೂ ಭಾರತಕ್ಕೆ ಸೋಲುಣಿಸಿ ಪಾಕಿಸ್ತಾನ್ ಎ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಟೀಮ್ ಇಂಡಿಯಾ:

ಟೀಮ್ ಇಂಡಿಯಾ ಐಸಿಸಿ ಟ್ರೋಫಿ ಗೆದ್ದು 10 ವರ್ಷಗಳೇ ಕಳೆದಿವೆ. 2013 ರಲ್ಲಿ ಕೊನೆಯ ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದ ಟೀಮ್ ಇಂಡಿಯಾ ಬಳಿಕ ಪ್ರಶಸ್ತಿಗೆ ಮುತ್ತಿಕ್ಕಿಲ್ಲ. ಇದರ ನಡುವೆ 9 ಬಾರಿ ನಾಕೌಟ್ ಸುತ್ತಿನಲ್ಲಿ ಕಣಕ್ಕಿಳಿದಿತ್ತು. ಆದರೆ ಫಲಿತಾಂಶ ಮಾತ್ರ ಶೂನ್ಯ. ಕಳೆದ 10 ವರ್ಷಗಳಲ್ಲಿ ಟೀಮ್ ಇಂಡಿಯಾದ ನಾಕೌಟ್ ಸುತ್ತಿನ ಪ್ರದರ್ಶನದ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ.

  • 2014 ಟಿ20 ವಿಶ್ವಕಪ್ ಫೈನಲ್​ನಲ್ಲಿ ಸೋಲು
  • 2015ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೋಲು
  • 2016ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೋಲು
  • 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಸೋಲು
  • 2019ರ ಏಕದಿನ ವಿಶ್ವಕಪ್​ ಸೆಮಿಫೈನಲ್​ನಲ್ಲಿ ಸೋಲು
  • 2021ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸೋಲು
  • 2022ರ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಸೋಲು
  • 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸೋಲು.

ಭಾರತ ಅಂಡರ್ 19 ತಂಡ:

19 ವರ್ಷದೊಳಗಿನವರ ಭಾರತ ತಂಡ ಕಳೆದ 10 ವರ್ಷಗಳಲ್ಲಿ 2 ಫೈನಲ್‌ನಲ್ಲಿ ಸೋತಿದೆ. 2016 ರಲ್ಲಿ ಮತ್ತು 2020 ರಲ್ಲಿ ಫೈನಲ್ಸ್​​ನಲ್ಲಿ ಅಂಡರ್ 19 ತಂಡವು ಮುಗ್ಗರಿಸಿತ್ತು. ಆದರೆ 2022 ರಲ್ಲಿ ಅಂಡರ್​19 ಏಕದಿನ ವಿಶ್ವಕಪ್​ ಗೆದ್ದಿರುವುದು ಸಮಾಧಾನಕರ.

ನಾಕೌಟ್ ಪಂದ್ಯಗಳ ಸೋಲಿಗೆ ಯಾರು ಹೊಣೆ?

ಈ ಮೇಲಿನ ಅಂಕಿ ಅಂಶಗಳ ಪ್ರಕಾರ ಭಾರತ ತಂಡವು ಕಳೆದ 10 ವರ್ಷಗಳಲ್ಲಿ 13 ನಾಕೌಟ್ ಪಂದ್ಯಗಳನ್ನು ಸೋತಿದೆ. ಅದರಲ್ಲಿ ಬಹುತೇಕ ಫೈನಲ್ ಪಂದ್ಯಗಳು. ಅಂದರೆ ಪ್ರಶಸ್ತಿ ಸುತ್ತಿನಲ್ಲಿ ಟೀಮ್ ಇಂಡಿಯಾ ಮುಗ್ಗರಿಸುತ್ತಿರುವುದು ಸ್ಪಷ್ಟ.

ಲೀಗ್ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರುವ ಭಾರತದ ಆಟಗಾರರು ಅಂತಿಮ ಪಂದ್ಯದಲ್ಲಿ ಏಕೆ ಎಡವುತ್ತಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆ. ಟೀಮ್ ಇಂಡಿಯಾದ ಈ ಸಮಸ್ಯೆಯನ್ನು ಬಿಸಿಸಿಐ ಒಂದು ಸಮಸ್ಯೆಯಾಗಿ ಪರಿಗಣಿಸುತ್ತಿಲ್ಲವೇ ಎಂಬುದು ಮತ್ತೊಂದು ಪ್ರಶ್ನೆ.

ಇದನ್ನೂ ಓದಿ: Team India: ಒಟ್ಟು 47 ಪ್ಲೇಯರ್ಸ್​: ಟೀಮ್ ಇಂಡಿಯಾದಿಂದ 32 ಆಟಗಾರರು ಔಟ್..!

ಏಕೆಂದರೆ ಇದನ್ನು ಟೀಮ್ ಇಂಡಿಯಾದ ಗಂಭೀರ ಸಮಸ್ಯೆ ಎಂದು ಪರಿಗಣಿಸಿದ್ದರೆ, ಕಳೆದ 10 ವರ್ಷಗಳಲ್ಲಿ ಭಾರತ ತಂಡವು 13 ನಾಕೌಟ್ ಪಂದ್ಯಗಳಲ್ಲಿ ಸೋಲುತ್ತಿರಲಿಲ್ಲ. ಇದೀಗ ಪಾಕಿಸ್ತಾನ್ ಎ ವಿರುದ್ಧ ಭಾರತ ಎ ತಂಡ ಸೋತಿದೆ. ಇನ್ನು ಕೆಲವೇ ದಿನಗಳಲ್ಲಿ ಏಕದಿನ ವಿಶ್ವಕಪ್ ಶುರುವಾಗಲಿದೆ. ಈ ಟೂರ್ನಿಯ ಮೂಲಕ ಟೀಮ್ ಇಂಡಿಯಾ ತನ್ನ ನಾಕೌಟ್ ಔಟ್​ಗೆ ಫುಲ್​ಸ್ಟಾಪ್ ಹಾಕಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.

Published On - 2:49 pm, Mon, 24 July 23

ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು
ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾಗಲು ಸೋಮಶೇಖರ್ ಬಂದಿರುವರೇ?
ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾಗಲು ಸೋಮಶೇಖರ್ ಬಂದಿರುವರೇ?
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು