IND vs WI: ಕೇವಲ 12 ಓವರ್​ಗಳಲ್ಲಿ 98 ರನ್​: ಟೀಮ್ ಇಂಡಿಯಾ ತೂಫಾನ್ ಬ್ಯಾಟಿಂಗ್

India vs West Indies 2nd Test: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ 11.5 ಓವರ್​ಗಳಲ್ಲಿ 98 ರನ್​ ಕಲೆಹಾಕಿದ್ದಾರೆ.

IND vs WI: ಕೇವಲ 12 ಓವರ್​ಗಳಲ್ಲಿ 98 ರನ್​: ಟೀಮ್ ಇಂಡಿಯಾ ತೂಫಾನ್ ಬ್ಯಾಟಿಂಗ್
Rohit Sharma-Yashasvi Jaiswal
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 23, 2023 | 10:56 PM

India vs West Indies 2nd Test: ಪೋರ್ಟ್​ ಆಫ್ ಸ್ಪೇನ್​ನ ಕ್ವೀನ್ಸ್ ಪಾರ್ಕ್​ ಓವಲ್​ ಮೈದಾನದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 438 ರನ್​ ಕಲೆಹಾಕಿತು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ವೆಸ್ಟ್ ಇಂಡೀಸ್ ತಂಡವು 255 ರನ್​ಗಳಿಗೆ ಸರ್ವಪತನ ಕಂಡಿತು.

ಇತ್ತ 183 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಸ್ಪೋಟಕ ಆರಂಭ ಒದಗಿಸಿದ್ದರು. ಆರಂಭದಿಂದಲೇ ವಿಂಡೀಸ್ ಬೌಲರ್​ಗಳ ಬೆಂಡೆತ್ತಿದ ಈ ಜೋಡಿ ಮೊದಲ 6 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 53 ರನ್​ಗಳು.

ಇದಾದ ಬಳಿಕ ಆರ್ಭಟ ಮುಂದುವರೆಸಿದ ಹಿಟ್​ಮ್ಯಾನ್ ಕೇವಲ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ ಯಶಸ್ವಿ ಜೈಸ್ವಾಲ್ ಜೊತೆಗೂಡಿ ಮೊದಲ ವಿಕೆಟ್​ಗೆ 98 ರನ್​ಗಳ ಜೊತೆಯಾಟವಾಡಿದರು. ಅದು ಕೂಡ ಕೇವಲ 11.5 ಓವರ್​ಗಳಲ್ಲಿ ಎಂಬುದು ವಿಶೇಷ.

ಆದರೆ ಶತಕದ ಜೊತೆಯಾಟದ ಅಂಚಿನಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾದ ರೋಹಿತ್ ಶರ್ಮಾ ವಾರಿಕನ್​ಗೆ ವಿಕೆಟ್​ ಒಪ್ಪಿಸಿದರು. ಇದರೊಂದಿಗೆ 44 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳನ್ನು ಒಳಗೊಂಡ ಹಿಟ್​ಮ್ಯಾನ್​ರ 57 ರನ್​ಗಳ ಸ್ಪೋಟಕ ಇನಿಂಗ್ಸ್ ಅಂತ್ಯಗೊಂಡಿತು. ಇನ್ನು ರೋಹಿತ್ ಶರ್ಮಾ ಬೆನ್ನಲ್ಲೇ 30 ಎಸೆತಗಳಲ್ಲಿ 38 ರನ್ ಬಾರಿಸಿದ್ದ ಯಶಸ್ವಿ ಜೈಸ್ವಾಲ್ ಕೂಡ ವಿಕೆಟ್ ಒಪ್ಪಿಸಿದರು.

ಆದರೆ ಅಷ್ಟರಲ್ಲಾಗಲೇ ಟೀಮ್ ಇಂಡಿಯಾ ಸ್ಕೋರ್ 100 ರ ಗಡಿದಾಟಿತ್ತು. ಇನ್ನು 13 ಓವರ್​ಗಳ ಮುಕ್ತಾಯದ ವೇಳೆ ಟೀಮ್ ಇಂಡಿಯಾ 2 ವಿಕೆಟ್ ನಷ್ಟಕ್ಕೆ 102 ರನ್ ಕಲೆಹಾಕಿದ್ದು, ಕ್ರೀಸ್​ನಲ್ಲಿ ಇಶಾನ್ ಕಿಶನ್ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್ ಮುಂದುವರೆಸಿದ್ದಾರೆ.

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಕ್ರೈಗ್ ಬ್ರಾಥ್‌ವೈಟ್ (ನಾಯಕ) , ತೇಜ್​ನರೈನ್ ಚಂದ್ರಪಾಲ್ , ಕಿರ್ಕ್ ಮೆಕೆಂಜಿ , ಜೆರ್ಮೈನ್ ಬ್ಲಾಕ್‌ವುಡ್ , ಅಲಿಕ್ ಅಥಾನಾಝ್ , ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್) ಜೇಸನ್ ಹೋಲ್ಡರ್ , ಅಲ್ಜಾರಿ ಜೋಸೆಫ್ , ಕೆಮರ್ ರೋಚ್ , ಜೋಮೆಲ್ ವಾರಿಕನ್ , ಶಾನನ್ ಗೇಬ್ರಿಯಲ್.

ಇದನ್ನೂ ಓದಿ: Team India: ಒಟ್ಟು 47 ಪ್ಲೇಯರ್ಸ್​: ಟೀಮ್ ಇಂಡಿಯಾದಿಂದ 32 ಆಟಗಾರರು ಔಟ್..!

ಭಾರತ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ರೋಹಿತ್ ಶರ್ಮಾ (ನಾಯಕ) , ಶುಭಮನ್ ಗಿಲ್ , ವಿರಾಟ್ ಕೊಹ್ಲಿ , ಅಜಿಂಕ್ಯ ರಹಾನೆ , ರವೀಂದ್ರ ಜಡೇಜಾ , ಇಶಾನ್ ಕಿಶನ್ (ವಿಕೆಟ್ ಕೀಪರ್) , ರವಿಚಂದ್ರನ್ ಅಶ್ವಿನ್ , ಜಯದೇವ್ ಉನದ್ಕತ್ , ಮುಖೇಶ್ ಕುಮಾರ್ , ಮೊಹಮ್ಮದ್ ಸಿರಾಜ್.

ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ