ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಶ್ರೀಲಂಕಾ ತಂಡ (Sri Lanka Cricket Team) ಭರ್ಜರಿ ಆಗಿ ಆರಂಭಿಸಿದೆ. ಅಬುಧಾಬಿಯ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ‘ಎ’ ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ನಮೀಬಿಯಾ (Namibia) ವಿರುದ್ಧದ ಪಂದ್ಯದಲ್ಲಿ ಲಂಕಾನ್ನರು 7 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿ ಪರಾಕ್ರಮ ಮೆರೆದಿದೆ.
ಮೊದಲು ಲಂಕಾ ಬೌಲರ್‌ಗಳ ಪ್ರಭಾವಿ ದಾಳಿಗೆ ಕುಸಿತ ಕಂಡ ನಮೀಬಿಯಾ 19.3 ಓವರ್‌ಗಳಲ್ಲಿ ಕೇವಲ 96 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಕ್ರೇಗ್ ವಿಲಿಯಮ್ಸ್ 29, ನಾಯಕ ಗೆರಾರ್ಡ್ ಎರಾಸ್ಮಸ್ (20) ಹಾಗೂ ಜೆಜೆ ಸ್ಮಿಟ್ 12* ರನ್ ಗಳಿಸಿರುವುದನ್ನು ಹೊರತುಪಡಿಸಿದರೆ ಇತರೆ ಯಾವ ಬ್ಯಾಟರ್‌ಗಳಿಗೆ ಮಿಂಚಲು ಸಾಧ್ಯವಾಗಲಿಲ್ಲ. ಲಂಕಾ ಪರ ಮಹೀಶ್ ತೀಕ್ಷನ 3 ವಿಕೆಟ್ ಮತ್ತು ಲಹಿರು ಕುಮಾರ ಹಾಗೂ ವನಿಂದು ಹಸರಂಗ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.
ಬಳಿಕ ಗುರಿ ಬೆನ್ನತ್ತಿದ ಲಂಕಾ ಒಂದು ಹಂತದಲ್ಲಿ 5.1 ಓವರ್‌ಗಳಲ್ಲಿ 26 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಗೂಡಿದ ಆವಿಷ್ಕಾ ಫರ್ನಾಂಡೊ (30*) ಹಾಗೂ ಭಾನುಕಾ ರಾಜಪಕ್ಷ (42*) ಮುರಿಯದ ನಾಲ್ಕನೇ ವಿಕೆಟ್‌ಗೆ 74 ರನ್‌ಗಳ ಜೊತೆಯಾಟ ಕಟ್ಟಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಈ ಮೂಲಕ 13.3 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
A sizzling display of bowling from Sri Lanka helps them bowl out Namibia for 96 ?
Will they chase this one down?#T20WorldCup | #SLvNAM | https://t.co/hUHJBqiiI0 pic.twitter.com/vQy0NBVWfQ
— T20 World Cup (@T20WorldCup) October 18, 2021
ಪಾಯಿಂಟ್ ಪಟ್ಟಿ:
ಗ್ರೂಪ್ ಎ:
1) ಶ್ರೀಲಂಕಾ: 1 ಪಂದ್ಯ 2 ಅಂಕ
2) ಐರ್ಲೆಂಡ್: 1 ಪಂದ್ಯ 2 ಅಂಕ
3) ನೆದರ್ಲೆಂಡ್ಸ್: 1 ಪಂದ್ಯ 0 ಅಂಕ
4) ನಮೀಬಿಯಾ: 1 ಪಂದ್ಯ 0 ಅಂಕ
ಗ್ರೂಪ್ ಬಿ:
1) ಓಮನ್: 1 ಪಂದ್ಯ 2 ಅಂಕ
2) ಸ್ಕಾಟ್ಲೆಂಡ್: 1 ಪಂದ್ಯ 2 ಅಂಕ
3) ಬಾಂಗ್ಲಾದೇಶ: 1 ಪಂದ್ಯ 0 ಅಂಕ
4) ಪಪುವಾ ನ್ಯೂಗಿನಿಯಾ: 1 ಪಂದ್ಯ 0 ಅಂಕ
Curtis Campher: 4 ಬಾಲ್-4 ವಿಕೆಟ್: ಟಿ20 ವಿಶ್ವಕಪ್ನ ಎರಡನೇ ದಿನವೇ ಸೃಷ್ಟಿಯಾಯಿತು ಐತಿಹಾಸಿಕ ದಾಖಲೆ
(Sri Lankan bowlers dominated the inexperienced Namibia and won by seven wickets in T20 World Cup)