Bhanuka Rajapaksa: ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ಶ್ರೀಲಂಕಾ ಕ್ರಿಕೆಟರ್ ಭಾನುಕಾ ರಾಜಪಕ್ಸೆ

| Updated By: ಪೃಥ್ವಿಶಂಕರ

Updated on: Jan 13, 2022 | 6:30 PM

Bhanuka Rajapaksa: ಶ್ರೀಲಂಕಾದ ಕ್ರಿಕೆಟಿಗ ಭಾನುಕಾ ರಾಜಪಕ್ಸೆ ತಮ್ಮ ನಿವೃತ್ತಿಯ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಈ ಕುರಿತು ಶ್ರೀಲಂಕಾ ಕ್ರಿಕೆಟ್‌ಗೆ ಬರೆದಿದ್ದ ಪತ್ರವನ್ನೂ ಹಿಂಪಡೆದಿದ್ದಾರೆ.

Bhanuka Rajapaksa: ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ಶ್ರೀಲಂಕಾ ಕ್ರಿಕೆಟರ್ ಭಾನುಕಾ ರಾಜಪಕ್ಸೆ
ಭಾನುಕಾ ರಾಜಪಕ್ಸೆ
Follow us on

ಶ್ರೀಲಂಕಾದ ಕ್ರಿಕೆಟಿಗ ಭಾನುಕಾ ರಾಜಪಕ್ಸೆ ತಮ್ಮ ನಿವೃತ್ತಿಯ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಈ ಕುರಿತು ಶ್ರೀಲಂಕಾ ಕ್ರಿಕೆಟ್‌ಗೆ ಬರೆದಿದ್ದ ಪತ್ರವನ್ನೂ ಹಿಂಪಡೆದಿದ್ದಾರೆ. ಅವರು ತಮ್ಮ ನಿವೃತ್ತಿಗೆ ಸಂಬಂಧಿಸಿದ ಈ ಪತ್ರವನ್ನು ಶ್ರೀಲಂಕಾ ಮಂಡಳಿಗೆ ಜನವರಿ 5 ರಂದು ಬರೆದು ಎಲ್ಲರನ್ನು ಅಚ್ಚರಿಗೊಳಿಸಿದರು. ಶ್ರೀಲಂಕಾದ ಮಾಜಿ ನಾಯಕ ಲಸಿತ್ ಮಾಲಿಂಗ ಕೂಡ ಅವರ ನಿರ್ಧಾರದಿಂದ ತುಂಬಾ ಆಶ್ಚರ್ಯಗೊಂಡಿದ್ದರು. ಅಲ್ಲದೆ ರಾಜಪಕ್ಸೆ ತಮ್ಮ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಕೇಳಿಕೊಂಡಿದ್ದರು. ತನ್ನ ನಿರ್ಧಾರವನ್ನು ಮರುಪರಿಶೀಲಿಸಿದ ಭಾನುಕಾ ಈಗ ಅದನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.

ಜನವರಿ 5 ರಂದು, 30 ವರ್ಷದ ಭಾನುಕಾ ರಾಜಪಕ್ಸೆ ಅವರು ಕೌಟುಂಬಿಕ ಕಾರಣಗಳಿಂದ ಬೇಗ ನಿವೃತ್ತರಾಗಲು ನಿರ್ಧರಿಸಿದ್ದರು. ಇದಲ್ಲದೆ, ಶ್ರೀಲಂಕಾ ಕ್ರಿಕೆಟ್ ತಂಡದ ಕಟ್ಟುನಿಟ್ಟಾದ ಫಿಟ್ನೆಸ್ ನಿಯಮಗಳನ್ನು ಸಹ ಅವರು ಉಲ್ಲೇಖಿಸಿದ್ದರು. ಶ್ರೀಲಂಕಾದ ಮಾಧ್ಯಮಗಳ ಪ್ರಕಾರ, ರಾಜಪಕ್ಸೆ ಅವರು ಈಗ ರೂಪಿಸಿರುವ ರೀತಿಯ ಫಿಟ್ನೆಸ್ ನಿಯಮಗಳು ತಮ್ಮ ಪವರ್ ಹಿಟ್ಟಿಂಗ್ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಹೇಳಿದ್ದಾರೆ.

ಕ್ರೀಡಾ ಸಚಿವರ ಉಪಕ್ರಮದ ನಂತರ ನಿರ್ಧಾರ ಬದಲಾಯಿತು
ಆದರೆ, ಭಾನುಕಾ ರಾಜಪಕ್ಸೆ ನಿವೃತ್ತಿ ವಿಚಾರವನ್ನು ಬಿಟ್ಟಿದ್ದಾರೆ ಎಂದು ಶ್ರೀಲಂಕಾದ ಮಾಧ್ಯಮಗಳು ಇದೀಗ ಸ್ಪಷ್ಟಪಡಿಸಿವೆ. ಮತ್ತು, ಈ ಬಗ್ಗೆ ಶ್ರೀಲಂಕಾ ಮಂಡಳಿಗೆ ಬರೆದ ಪತ್ರವನ್ನೂ ಹಿಂಪಡೆಯಲಾಗಿದೆ. ಶ್ರೀಲಂಕಾದ ಕ್ರೀಡಾ ಸಚಿವ ನಮಲ್ ರಾಜಪಕ್ಸೆ ಅವರ ಮನವೊಲಿಸಿದ ನಂತರ ಅವರು ಈ ಕ್ರಮ ಕೈಗೊಂಡಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ನಿರ್ಧಾರವನ್ನು ಹಿಂಪಡೆಯುವಂತೆ ಶ್ರೀಲಂಕಾದ ಕ್ರೀಡಾ ಸಚಿವರು ಎಡಗೈ ಬ್ಯಾಟ್ಸ್‌ಮನ್‌ಗೆ ಕೇಳಿದ್ದರು.

ಶ್ರೀಲಂಕಾದ ಬ್ಯಾಟ್ಸ್‌ಮನ್ ಭಾನುಕಾ ರಾಜಪಕ್ಸೆ ಅವರು ನಿವೃತ್ತಿಯ ಬಗ್ಗೆ ಪತ್ರದಲ್ಲಿ ಹೀಗೆ ಬರೆದಿದ್ದರು. “ನಾನು ಆಟಗಾರನಾಗಿ, ಪತಿಯಾಗಿ ನನ್ನ ಸ್ಥಾನವನ್ನು ಬಹಳ ಎಚ್ಚರಿಕೆಯಿಂದ ಪರಿಗಣಿಸಿದ್ದೇನೆ. ಪಿತೃತ್ವ ಮತ್ತು ಕುಟುಂಬ ಸಂಬಂಧಿತ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ನಾನು ನನ್ನ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದರು.

ಭಾನುಕಾ ರಾಜಪಕ್ಸೆ ಅವರ ಅಂತರರಾಷ್ಟ್ರೀಯ ವೃತ್ತಿಜೀವನ
30 ವರ್ಷದ ಎಡಗೈ ಬ್ಯಾಟ್ಸ್‌ಮನ್ ಭಾನುಕಾ ರಾಜಪಕ್ಸೆ ಶ್ರೀಲಂಕಾ ಪರ 5 ODIಗಳು ಮತ್ತು 18 T20I ಗಳು ಸೇರಿದಂತೆ ಒಟ್ಟು 23 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟಿ20ಯಲ್ಲಿ ಎರಡು ಅರ್ಧಶತಕಗಳ ನೆರವಿನಿಂದ 320 ರನ್ ಗಳಿಸಿದ್ದರು. ಅವರು 2021 ರ ಟಿ 20 ವಿಶ್ವಕಪ್‌ಗಾಗಿ ಶ್ರೀಲಂಕಾ ತಂಡದ ಭಾಗವಾಗಿದ್ದರು. ಈ ಟೂರ್ನಿಯಲ್ಲಿ ಶ್ರೀಲಂಕಾ ಪರ ರಾಜಪಕ್ಸೆ 8 ಪಂದ್ಯಗಳಲ್ಲಿ 155 ರನ್ ಗಳಿಸಿದ್ದರು. ಶ್ರೀಲಂಕಾ ಪರ ಆಡಿದ 5 ಏಕದಿನ ಪಂದ್ಯಗಳಲ್ಲಿ 1 ಅರ್ಧಶತಕದೊಂದಿಗೆ 89 ರನ್ ಗಳಿಸಿದ್ದಾರೆ.