Sri Lanka vs Bangladesh: 4 ವರ್ಷಗಳ ಹಿಂದಿನ ಅವಮಾನಕ್ಕೆ ಪ್ರತೀಕಾರ: ಬಾಂಗ್ಲಾ ಆಟಗಾರರ ಹೊಟ್ಟೆ ಉರಿಸಿದ ಲಂಕಾ ಪ್ಲೇಯರ್ಸ್

| Updated By: Vinay Bhat

Updated on: Sep 02, 2022 | 9:56 AM

Sri Lanka Players Nagin Dance: ಏಷ್ಯಾಕಪ್ 2022ರಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆ ಶ್ರೀಲಂಕಾ ಆಟಗಾರರು ಡಗೌಟ್​ನಲ್ಲಿ ನಾಗಿಣಿ ನೃತ್ಯ ಮಾಡುವ ಮೂಲಕ 4 ವರ್ಷಗಳ ಹಿಂದಿನ ಅವಮಾನಕ್ಕೆ ಸೇಡು ತೀರಿಸಿಕೊಂಡಿದ್ದಾರೆ.

Sri Lanka vs Bangladesh: 4 ವರ್ಷಗಳ ಹಿಂದಿನ ಅವಮಾನಕ್ಕೆ ಪ್ರತೀಕಾರ: ಬಾಂಗ್ಲಾ ಆಟಗಾರರ ಹೊಟ್ಟೆ ಉರಿಸಿದ ಲಂಕಾ ಪ್ಲೇಯರ್ಸ್
SL vs BAN Asia Cup 2022
Follow us on

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಏಷ್ಯಾಕಪ್​ನ (Asia Cup 2022) ಐದನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ (Sri Lanka vs Bangladesh) ತಂಡ 2 ವಿಕೆಟ್​ಗಳ ರೋಚಕ ಜಯ ಸಾಧಿಸಿತು. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸಿಂಹಳೀಯರು ಗೆದ್ದು ಸೂಪರ್ 4 ಹಂತಕ್ಕೆ ಲಗ್ಗೆಯಿಟ್ಟಿರು. ಕೊನೆಯ ಓವರ್ ವರೆಗೂ ನಡೆದ ರೋಚಕ ಕಾದಾಟದಲ್ಲಿ ಸೋತ ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದಿದೆ. ಗೆಲುವು ಸಾಧಿದುತ್ತಿದ್ದಂತೆ ಶ್ರೀಲಂಕಾ ತಂಡದ ಆಟಗಾರರು ವಿಶೇಷವಾಗಿ ಸಂಭ್ರಮಾಚರಣೆ ಮಾಡಿ ಬಾಂಗ್ಲಾಕ್ಕೆ ತಿರುಗೇಟು ನೀಡಿದರು. ಡಗೌಟ್​ನಲ್ಲಿ ನಾಗಿಣಿ ನೃತ್ಯ (Nagin Dance) ಮಾಡುವ ಮೂಲಕ 2018ರ ನಿದಾಸ್ ಕ್ರಿಕೆಟ್ ಟ್ರೋಫಿಯಲ್ಲಾದ ಅವಮಾನಕ್ಕೆ ಸೇಡು ತೀರಿಸಿಕೊಂಡಿದ್ದಾರೆ.

2018ರಲ್ಲಿ ನಡೆದ ನಿದಾಸ್ ಟ್ರೋಫಿಯ ಅಂತಿಮ ಲೀಗ್​​ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಶ್ರೀಲಂಕಾ ಸೋಲು ಕಂಡಿತ್ತು. ಈ ಸಂದರ್ಭದಲ್ಲಿ ಗೆಲುವಿನ ಅತಿರೇಕದಲ್ಲಿ ಬಾಂಗ್ಲಾದೇಶ ತಂಡದ ಆಟಗಾರರು​​​ ನಾಗಿಣಿ ಡ್ಯಾನ್ಸ್​ ಮಾಡುವ ಮೂಲಕ ಸಿಂಹಳೀಯರನ್ನು ಅವಮಾನಿಸುವ ರೀತಿಯಲ್ಲಿ ಸಂಭ್ರಮಿಸಿದ್ದರು. ಇದೀಗ ಅದಕ್ಕೆ ಲಂಕಾ ಆಟಗಾರರು ಸೇಡು ತೀರಿಸಿಕೊಂಡಿದ್ದಾರೆ. ಚಮಿಕಾ ಕರುಣರತ್ನೆ ಸರಿದಂತೆ ಇತರೆ ಕೆಲ ಆಟಗಾರರು ಡಗೌಟ್​ನಲ್ಲಿ ನಾಗಿಣಿ ಡ್ಯಾನ್ಸ್​ ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ
PAK vs HK: ಏಷ್ಯಾಕಪ್​ನಲ್ಲಿಂದು ಪಾಕಿಸ್ತಾನ- ಹಾಂಗ್​ ಕಾಂಗ್ ಮುಖಾಮುಖಿ: ಗೆದ್ದ ತಂಡ ಭಾರತ ವಿರುದ್ಧ ಸೆಣೆಸಾಟ
Asia Cup 2022: ಟೀಂ ಇಂಡಿಯಾ ನಾಯಕನಾಗಿ ರೋಹಿತ್​ಗೆ ಹೆಚ್ಚು ದಿನ ಉಳಿಗಾಲವಿಲ್ಲ; ಪಾಕ್ ಕ್ರಿಕೆಟಿಗನ ವಿಶ್ಲೇಷಣೆ
ಏಕಾಏಕಿ ಹೊಸ ಪ್ರಾಜೆಕ್ಟ್​ ಘೋಷಿಸಿ, ಸೆ.4ಕ್ಕೆ ಟ್ರೇಲರ್ ರಿಲೀಸ್ ಎಂದ ರಶ್ಮಿಕಾ; ರೋಹಿತ್, ಗಂಗೂಲಿಗೇನು ಕೆಲಸ?
SL vs BAN: ರಣ ರೋಚಕ ಪಂದ್ಯದಲ್ಲಿ ಬಾಂಗ್ಲಾ ಮಣಿಸಿ ಸೂಪರ್- 4 ಹಂತಕ್ಕೆ ಎಂಟ್ರಿಕೊಟ್ಟ ಶ್ರೀಲಂಕಾ

 

ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಬಾಂಗ್ಲಾದೇಶ ನಿಗದಿತ 20 ಓವರ್​​​ಗಳಲ್ಲಿ 7 ವಿಕೆಟ್ ​​ನಷ್ಟಕ್ಕೆ 183 ರನ್​​​​ಗಳಿಕೆ ಮಾಡಿತು. ತಂಡದ ಪರ ಬ್ಯಾಟಿಂಗ್​​​ನಲ್ಲಿ ಅಬ್ಬರಿಸಿದ ಆರಂಭಿಕ ಆಟಗಾರ ಮೆಹ್ದಿ ಹಸನ್ ಮಿರ್ಜಾ(38), ನಾಯಕ ಶಕೀಬ್​ ಅಲ್ ಹಸನ್(24), ಅಫಿಫ್ ಹುಸೈನ್​​​​(39), ಮೊಹಮ್ಮದುಲ್ಲಾ (27) ಹಾಗೂ ಮೊಸಡಕ್ ಹುಸೈ್​​ ​(24) ರನ್​ಗಳ ಕೊಡುಗೆ ನೀಡಿದರು.

184ರನ್​ಗಳ ಟಾರ್ಗೆಟ್ ಬೆನ್ನತ್ತಿದ ಶ್ರೀಲಂಕಾ ಉತ್ತಮ ಆರಂಭ ಪಡೆದುಕೊಂಡಿತು. ನಿಸಂಕಾ ಮತ್ತು ಕುಸಾಲ್ ಮೆಂಡಿಸ್ ತಂಡಕ್ಕೆ 45 ರನ್​ಗಳ ಕಾಣಿಕೆ ನೀಡಿದರು. 20 ರನ್​​​​ಗಳಿಸಿ ನಿಸಾಂಕ್ ಔಟಾದರರು. ಇದರ ಬೆನ್ನಲ್ಲೇ ದಿಢೀರ್ ಮತ್ತೆ 3 ವಿಕೆಟ್ ಉರುಳಿದವು. ಈ ಸಂದರ್ಭ ತಂಡಕ್ಕೆ ಮೆಂಡಿಸ್​ ಹಾಗೂ ನಾಯಕ ದಸನ್ ಶನಕ ಆಸರೆಯಾದರು.

ಮೆಂಡಿಸ್ 37 ಎಸೆತಗಳಲ್ಲಿ 4 ಫೋರ್, 3 ಸಿಕ್ಸರ್ ಸಿಡಿಸಿ 60 ರನ್ ಗಳಿಸಿದರೆ, 33 ಎಸೆತಗಳಲ್ಲಿ ಶನಕ 45ರನ್ ಚಚ್ಚಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿ ನಿರ್ಗಮಿಸಿದರು. ಶ್ರೀಲಂಕಾ ತಂಡಕ್ಕೆ ಗೆಲಲ್ಲು ಕೊನೆಯ 12 ಎಸೆತಗಳಲ್ಲಿ 25 ರನ್​​ಗಳ ಅವಶ್ಯಕತೆ ಇತ್ತು. ಈ ವೇಳೆ ಉತ್ತಮವಾಗಿ ಆಡ್ತಿದ್ದ ಕರುಣರತ್ನೆ (16) ರನೌಟ್​ ಬಲೆಗೆ ಬಿದ್ದರು. ಆದರೆ, ಅಸಿತಾ ಫೆರ್ನಾಂಡೋ ಕೊನೆಯ ಓವರ್​​ನಲ್ಲಿ ಎರಡು ಬೌಂಡರಿ ಸಿಡಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಈ ಮೂಲಕ ಶ್ರೀಲಂಕಾ ಸೂಪರ್ 4 ಹಂತಕ್ಕೆ ಪ್ರವೇಶ ಪಡೆದಿದೆ.