AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಕಾಏಕಿ ಹೊಸ ಪ್ರಾಜೆಕ್ಟ್​ ಘೋಷಿಸಿ, ಸೆ.4ಕ್ಕೆ ಟ್ರೇಲರ್ ರಿಲೀಸ್ ಎಂದ ರಶ್ಮಿಕಾ; ರೋಹಿತ್, ಗಂಗೂಲಿಗೇನು ಕೆಲಸ?

ರಶ್ಮಿಕಾ ಮಂದಣ್ಣ ಅವರು ಬಾಲಿವುಡ್​ನಲ್ಲಿ ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಇದ್ದಾರೆ. ‘ಗುಡ್​ಬೈ’, ‘ಮಿಷನ್​ ಮಜ್ನು’, ‘ಅನಿಮಲ್​’ ಸಿನಿಮಾಗಳು ಅಧಿಕೃತವಾಗಿ ಘೋಷಣೆ ಆಗಿವೆ. ಈ ಮಧ್ಯೆ ‘ಮೆಗಾ ಬ್ಲಾಕ್​ಬಸ್ಟರ್’ ಘೋಷಿಸಲಾಗಿದೆ.

ಏಕಾಏಕಿ ಹೊಸ ಪ್ರಾಜೆಕ್ಟ್​ ಘೋಷಿಸಿ, ಸೆ.4ಕ್ಕೆ ಟ್ರೇಲರ್ ರಿಲೀಸ್ ಎಂದ ರಶ್ಮಿಕಾ; ರೋಹಿತ್, ಗಂಗೂಲಿಗೇನು ಕೆಲಸ?
TV9 Web
| Edited By: |

Updated on:Sep 02, 2022 | 10:45 AM

Share

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಹೊಸಹೊಸ ಸಿನಿಮಾ ಘೋಷಿಸುವ ಮೂಲಕ ಫ್ಯಾನ್ಸ್​ಗೆ ಖುಷಿ ನೀಡುತ್ತಿದ್ದಾರೆ. ಈಗ ಅವರು ಏಕಾಏಕಿ ಹೊಸ ಪ್ರಾಜೆಕ್ಟ್ ಘೋಷಿಸಿದ್ದಾರೆ. ಅದರ ಹೆಸರು ‘ಮೆಗಾ ಬ್ಲಾಕ್​​ಬಸ್ಟರ್​’! (Mega Blockbuster). ಸೆಪ್ಟೆಂಬರ್ 4ರಂದು ಇದರ ಟ್ರೇಲರ್ ಕೂಡ ರಿಲೀಸ್ ಆಗಲಿದೆ. ರಶ್ಮಿಕಾ ಯಾವಾಗ ಈ ಹೊಸ ಸಿನಿಮಾ ಒಪ್ಪಿಕೊಂಡರು, ಯಾವಾಗ ಶೂಟಿಂಗ್ ಮುಗಿಸಿದರು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಆದರೆ, ಇದರ ಅಸಲಿಯತ್ತು ಬೇರೆಯದೇ ಇದೆ ಎಂಬ ಚರ್ಚೆ ನಡೆಯುತ್ತಿದೆ.

ರಶ್ಮಿಕಾ ಮಂದಣ್ಣ ಅವರು ಬಾಲಿವುಡ್​ನಲ್ಲಿ ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಇದ್ದಾರೆ. ‘ಗುಡ್​ಬೈ’, ‘ಮಿಷನ್​ ಮಜ್ನು’, ‘ಅನಿಮಲ್​’ ಸಿನಿಮಾಗಳು ಅಧಿಕೃತವಾಗಿ ಘೋಷಣೆ ಆಗಿವೆ. ಇದಲ್ಲದೆ, ಟೈಗರ್ ಶ್ರಾಫ್ ಹಾಗೂ ಕಾರ್ತಿಕ್ ಆರ್ಯನ್ ಮಾಡುತ್ತಿರುವ ಎರಡು ಪ್ರತ್ಯೇಕ ಸಿನಿಮಾಗಳಿಗೆ ರಶ್ಮಿಕಾ ನಾಯಕಿ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ. ಈ ಮಧ್ಯೆ ‘ಮೆಗಾ ಬ್ಲಾಕ್​ಬಸ್ಟರ್’ ಘೋಷಿಸಲಾಗಿದೆ. ಮೂಲಗಳ ಪ್ರಕಾರ ಇದು ಜಾಹೀರಾತಿಗೆ ಸಂಬಂಧಿಸಿದ್ದು ಎನ್ನಲಾಗಿದೆ. ಹಲವು ಸೆಲೆಬ್ರಿಟಿಗಳು ಇದೇ ಮಾದರಿಯ ಪೋಸ್ಟರ್​ ಶೇರ್ ಮಾಡಿಕೊಂಡಿರುವುದು ಈ ರೀತಿಯ ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.

ಇದನ್ನೂ ಓದಿ
Image
Pushpa 2: ರಶ್ಮಿಕಾ ಮಂದಣ್ಣ ಪಾತ್ರ ಸಾಯುತ್ತೆ ಅನ್ನೋದು ನಿಜವೇ? ‘ಪುಷ್ಪ 2’ ನಿರ್ಮಾಪಕರು​ ನೀಡಿದ ಪ್ರತಿಕ್ರಿಯೆ ಇಲ್ಲಿದೆ..
Image
Rashmika Mandanna: ರಶ್ಮಿಕಾ ಮಂದಣ್ಣ ಗುಟ್ಟಾಗಿ ‘777 ಚಾರ್ಲಿ’ ನೋಡಿದ್ರಾ? ಜನರ ಅನುಮಾನಕ್ಕೆ ಕಾರಣ ಆಗಿದೆ ಈ ವಿಡಿಯೋ
Image
ಅತಿ ಹೆಚ್ಚು ಸಂಬಳ ಪಡೆಯುವ ದಕ್ಷಿಣ ಭಾರತದ ಟಾಪ್​ 10 ನಟಿಯರು ಇವರು; ರಶ್ಮಿಕಾ, ಸಮಂತಾ ಸಂಭಾವನೆ ಎಷ್ಟು?
Image
ರಶ್ಮಿಕಾ ಮಂದಣ್ಣ ಹೊಸ ವಿಡಿಯೋ ವೈರಲ್​; ಎನರ್ಜಿ ಕಂಡು ವಾವ್​ ಎಂದ ಅಭಿಮಾನಿಗಳು

‘ಮೆಗಾ ಬ್ಲಾಕ್​​ಬಸ್ಟರ್’ ಎಂದು ಟೈಟಲ್ ಬರೆದುಕೊಂಡಿರುವ ಪೋಸ್ಟರ್​​ ಅನ್ನು ರಶ್ಮಿಕಾ ಮಾತ್ರವಲ್ಲ, ತ್ರಿಷಾ ಕೃಷ್ಣ, ತಮಿಳು ನಟ ಕಾರ್ತಿ, ಕಪಿಲ್ ಶರ್ಮಾ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಸೌರವ್​ ಗಂಗೂಲಿ ಮೊದಲಾದವರು ಹಂಚಿಕೊಂಡಿದ್ದಾರೆ. ಪೋಸ್ಟರ್​ನಲ್ಲಿ ಯಾವುದೇ ನಿರ್ದೇಶಕರು, ನಿರ್ಮಾಪಕರ ಹೆಸರು ಇಲ್ಲ. ಇದು ಸಾಕಷ್ಟು ಅನುಮಾನ ಮೂಡಿಸಿದೆ.

ಇದನ್ನೂ ಓದಿ: ಬಾಲಿವುಡ್​ನ ಮತ್ತೋರ್ವ ಸ್ಟಾರ್ ನಟನ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ?; ಕೊಡಗಿನ ಕುವರಿ ಓಟಕ್ಕಿಲ್ಲ ಬ್ರೇಕ್

ಆರಂಭದಲ್ಲಿ ರಶ್ಮಿಕಾ ಮಾಡಿದ ಪೋಸ್ಟ್ ಕಂಡು ಇದು ಸಿನಿಮಾ ಅನೌನ್ಸ್​ಮೆಂಟ್ ಎಂದೇ ಫ್ಯಾನ್ಸ್ ಭಾವಿಸಿದ್ದರು. ಎಲ್ಲರೂ ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದರು. ಕೆಲವರು ರಶ್ಮಿಕಾಗೆ ಆಲ್​ ದಿ ಬೆಸ್ಟ್ ಎಂದು ವಿಶ್ ಮಾಡಿದ್ದರು. ಆದರೆ, ಅನೇಕರು ಇದೇ ಮಾದರಿಯ ಪೋಸ್ಟರ್ ಹಂಚಿಕೊಂಡ ನಂತರದಲ್ಲಿ ಇದು ಯಾವುದೋ ಬ್ರ್ಯಾಂಡ್​ನ ಪ್ರಮೋಷನ್​ಗೆ ಮಾಡಿದ ಜಾಹೀರಾತು ಎಂಬುದು ಫ್ಯಾನ್ಸ್​ಗೆ ಮನವರಿಕೆ ಆಗಿದೆ.

Published On - 7:09 am, Fri, 2 September 22

Follow Us
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ