AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2022: ಟೀಂ ಇಂಡಿಯಾ ನಾಯಕನಾಗಿ ರೋಹಿತ್​ಗೆ ಹೆಚ್ಚು ದಿನ ಉಳಿಗಾಲವಿಲ್ಲ; ಪಾಕ್ ಕ್ರಿಕೆಟಿಗನ ವಿಶ್ಲೇಷಣೆ

Asia Cup 2022: ನಾಯಕತ್ವದ ಒತ್ತಡದಲ್ಲಿರುವ ರೋಹಿತ್​ಗೆ ಉತ್ತಮವಾಗಿ ಆಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಭವಿಷ್ಯದಲ್ಲಿ ಟೀಮ್ ಇಂಡಿಯಾದ ನಾಯಕನಾಗಿರುವುದಿಲ್ಲ ಎಂದು ಹೇಳಿದ್ದಾರೆ.

Asia Cup 2022: ಟೀಂ ಇಂಡಿಯಾ ನಾಯಕನಾಗಿ ರೋಹಿತ್​ಗೆ ಹೆಚ್ಚು ದಿನ ಉಳಿಗಾಲವಿಲ್ಲ; ಪಾಕ್ ಕ್ರಿಕೆಟಿಗನ ವಿಶ್ಲೇಷಣೆ
Mohammad Hafeez, Rohit Sharma
TV9 Web
| Updated By: ಪೃಥ್ವಿಶಂಕರ|

Updated on: Sep 02, 2022 | 7:10 AM

Share

ಭಾರತೀಯ ಕ್ರಿಕೆಟ್ ತಂಡ 2022 ರ ಏಷ್ಯಾಕಪ್‌ನ (Asia Cup 2022) ಸೂಪರ್ ಫೋರ್ ಸುತ್ತಿಗೆ ಯಾವುದೇ ತೊಂದರೆಯಿಲ್ಲದೆ ಪ್ರವೇಶಿಸಿದೆ. ಭಾರತ ತಂಡ ಮೊದಲು ಪಾಕಿಸ್ತಾನವನ್ನು ಸೋಲಿಸಿ ನಂತರ ಹಾಂಕಾಂಗ್ ಅನ್ನು 40 ರನ್‌ಗಳಿಂದ ಸೋಲಿಸಿ ಎರಡನೇ ಸುತ್ತಿಗೆ ಟಿಕೆಟ್ ಕಾಯ್ದಿರಿಸಿತು. ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾದಿಂದ ಎಲ್ಲರೂ ಪ್ರಭಾವಿತರಾಗಿದ್ದಾರೆ. ಆದರೆ ಪಾಕಿಸ್ತಾನದ ಮಾಜಿ ಆಟಗಾರರು ಈ ಯಶಸ್ಸನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ರೋಹಿತ್ ಶರ್ಮಾ ನಾಯಕತ್ವವನ್ನು ಪಾಕಿಸ್ತಾನದ ಮಾಜಿ ನಾಯಕ ಮೊಹಮ್ಮದ್ ಹಫೀಜ್ (Mohammad Hafeez) ಪ್ರಶ್ನಿಸಿದ್ದಾರೆ.

ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಮೊಹಮ್ಮದ್ ಹಫೀಜ್ ಇತ್ತೀಚಿನ ದಿನಗಳಲ್ಲಿ ಏಷ್ಯಾಕಪ್ ಪಂದ್ಯಗಳ ಕುರಿತು ತಮ್ಮ ಕಾಮೆಂಟ್‌ಗಳಿಂದ ಸುದ್ದಿಯಲ್ಲಿದ್ದಾರೆ. ಭಾರತದ ವಿರುದ್ಧದ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಸೋಲಿನ ನಂತರ, ಹಫೀಜ್ 19 ವರ್ಷದ ಯುವ ವೇಗದ ಬೌಲರ್ ನಸೀಮ್ ಶಾ ಅವರನ್ನು ಗುರಿಯಾಗಿಸಿ, ಅವರ ಫಿಟ್ನೆಸ್ ಅನ್ನು ಪ್ರಶ್ನಿಸಿದ್ದರು. ಇದರಿಂದಾಗಿ ಹಲವು ಪಾಕಿಸ್ತಾನಿ ಅಭಿಮಾನಿಗಳು ಅವರನ್ನು ಟೀಕಿಸಿದ್ದರು. ಇದೀಗ ಹಫೀಜ್ ಭಾರತದ ನಾಯಕ ರೋಹಿತ್ ಮೇಲೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ಇದನ್ನೂ ಓದಿ
Image
ಬದಲಾಗದಿದ್ದರೆ ಟಿ20 ವಿಶ್ವಕಪ್ ಗೆಲ್ಲಲಾಗುವುದಿಲ್ಲ; ಬಿಸಿಸಿಐಗೆ ತಲೆನೋವಾದ ಕೊಹ್ಲಿ, ರೋಹಿತ್, ರಾಹುಲ್..!
Image
Asia Cup 2022: 2 ಬೌಂಡರಿ, 1 ಸಿಕ್ಸರ್‌ ಸಿಡಿಸಿ ಟಿ20 ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ ಬರೆದ ಹಿಟ್​ಮ್ಯಾನ್..!
Image
IND Vs AUS: ಆಸೀಸ್ ವಿರುದ್ಧದ ಟಿ20 ಸರಣಿಗೆ ಸದ್ಯದಲ್ಲೇ ಟೀಂ ಇಂಡಿಯಾ ಪ್ರಕಟ; 18 ಆಟಗಾರರಿಗೆ ಅವಕಾಶ?

ರೋಹಿತ್ ಆತಂಕ ಮತ್ತು ಗೊಂದಲದಲ್ಲಿದ್ದಾರೆ

ಬುಧವಾರ, ಆಗಸ್ಟ್ 31 ರಂದು ನಡೆದ ಎರಡನೇ ಪಂದ್ಯದಲ್ಲಿ ಭಾರತವು ಹಾಂಕಾಂಗ್ ಅನ್ನು 40 ರನ್‌ಗಳಿಂದ ಸೋಲಿಸಿತು. ಈ ಪಂದ್ಯದ ನಂತರ ರೋಹಿತ್ ಶರ್ಮಾ ಅವರ ವೀಡಿಯೊವನ್ನು ಉಲ್ಲೇಖಿಸಿ ಮಾತನಾಡಿದ ಹಫೀಜ್, ಟೀಂ ಇಂಡಿಯಾ ನಾಯಕನ ದೇಹ ಭಾಷೆ ತುಂಬಾ ದುರ್ಬಲವಾಗಿದೆ ಎಂದಿದ್ದಾರೆ. ಪಿಟಿವಿಯಲ್ಲಿ ನಡೆದ ಚರ್ಚೆಯಲ್ಲಿ ಹಫೀಜ್ ಈ ಹೇಳಿಕೆ ನೀಡಿದ್ದು, ಬಳಿಕ ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಟಾಸ್ ಸಮಯದಲ್ಲಿ ರೋಹಿತ್ ಶರ್ಮಾ ಅವರ ದೇಹ ಭಾಷೆ ದುರ್ಬಲವಾಗಿದೆ ಎಂದು ನಾನು ಹೇಳಿದ್ದೆ. ಅವರು ಭಯಭೀತರಾಗಿರುವಂತೆ ಜೊತೆಗೆ ಗೊಂದಲದಲ್ಲಿರುವಂತೆ ಕಾಣುತ್ತಿದ್ದರು. ಅಲ್ಲದೆ ಹಳೆಯ ರೋಹಿತ್ ಶರ್ಮಾ ಕಾಣಿಸುತ್ತಿಲ್ಲ ಎಂದಿದ್ದಾರೆ.

ಹೆಚ್ಚು ಕಾಲ ನಾಯಕರಾಗಿರಲು ಸಾಧ್ಯವಿಲ್ಲ

ಇಲ್ಲಿಗೇ ನಿಲ್ಲಿಸದ ಹಫೀಜ್, ನಾಯಕತ್ವದ ಒತ್ತಡದಲ್ಲಿರುವ ರೋಹಿತ್​ಗೆ ಉತ್ತಮವಾಗಿ ಆಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಭವಿಷ್ಯದಲ್ಲಿ ಟೀಮ್ ಇಂಡಿಯಾದ ನಾಯಕನಾಗಿರುವುದಿಲ್ಲ ಎಂದು ಹೇಳಿದ್ದಾರೆ. ರೋಹಿತ್ ಶರ್ಮಾ ಮೇಲೆ ನಾಯಕತ್ವದ ಒತ್ತಡವಿದೆ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಜೊತೆಗೆ ಐಪಿಎಲ್​ನಲ್ಲೂ ಅಬ್ಬರಿಸಲಿಲ್ಲ. ಅವರ ಲಯ ಮರಳಿ ಬರುತ್ತಿಲ್ಲ. ಅವರು ಪಾಸಿಟಿವ್ ಕ್ರಿಕೆಟ್ ಆಡುತ್ತಾರೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ.ಆದರೆ ತಂಡದಲ್ಲಿ ಮತ್ತು ಸ್ವತಃ ರೋಹಿತ್​ ಅವರಲ್ಲಿ ಆ ರೀತಿಯ ಮನೋಭಾವ ಕಾಣುತ್ತಿಲ್ಲ. ಭವಿಷ್ಯದಲ್ಲಿ ರೋಹಿತ್ ನಾಯಕನಾಗುವುದು ಕಷ್ಟ. ಅವರು ಹೆಚ್ಚು ಕಾಲ ನಾಯಕರಾಗಿರಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಆದರೆ ಹಫೀಜ್ ಏನೇ ಹೇಳಲಿ, ಸತ್ಯವೆಂದರೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ. ರೋಹಿತ್ ಸ್ವತಃ ಬ್ಯಾಟ್‌ನೊಂದಿಗೆ ದೊಡ್ಡ ಇನ್ನಿಂಗ್ಸ್‌ಗಳನ್ನು ಆಡಲು ಸಾಧ್ಯವಾಗದಿರಬಹುದು, ಆದರೆ ಹೆಚ್ಚಿನ ಸಂದರ್ಭಗಳಲ್ಲಿ ತಂಡಕ್ಕೆ ತ್ವರಿತ ಆರಂಭ ನೀಡುವ ಸಾಮಥ್ಯ್ರ ಹೊಂದಿದ್ದಾರೆ. ಇದು ದೊಡ್ಡ ಸ್ಕೋರ್‌ಗಳಿಗೆ ಅಡಿಪಾಯ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.